ಆಲಮಟ್ಟಿ : ಸನಿಹದ ಸುತಗುಂಡಾರ ಶ್ರೀ ಕರವೀರೇಶ್ವರ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆ ವಿಜಯಪುರ, ಆಲಮಟ್ಟಿ ಡ್ಯಾಂ ಸೈಟ್ ಶಾಖಾ ಗ್ರಂಥಾಲಯದ ಆಶ್ರಯದಲ್ಲಿ ಸಂಯೋಜಿಸಿದ್ದ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.
ರಕ್ಷಿತಾ ಎಳ್ಳಿಗುತ್ತಿ ಪ್ರಥಮ,ಬಸವರಾಜ ಮನಗೂಳಿ ದ್ವೀತಿಯ, ಪೃಥ್ವಿ ವಾಲಿಕಾರ ತೃತೀಯ ಸ್ಥಾನ ಪಡೆದರು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಗ್ರಂಥಪಾಲಕ ಪರುಶುರಾಮ ಮೂಲಂಗಿ, ಮಕ್ಕಳ ಜ್ಞಾನ ವಿಕಾಸಕ್ಕೆ, ತೀಕ್ಷ್ಣ ಭಾಷಾ ನುಡಿ ಬರಹಗಳಿಗೆ ರಸಪ್ರಶ್ನೆ ಕಾರ್ಯಕ್ರಮಗಳು ಪೂರಕವಾಗಿವೆ. ಜೊತೆಗೆ ಗ್ರಂಥಾಲಯಗಳು ಓದುವ ಅಭಿರುಚಿ,ಕೌಶಲ್ಯ ಬೆಳೆಸಿ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂದರು.
ಎಂ.ಜಿ.ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಅಂಗಡಿ,ಎ.ಎಲ್.ಬಡಿಗೇರ, ಎಸ್.ಬಿ.ದಳವಾಯಿ, ಆರ್.ಡಿ.ತಹಶೀಲ್ದಾರ,ವಿಶ್ವನಾಥ ನುಗ್ಲಿ ಇತರರಿದ್ದರು.