ಬೆಂಗಳೂರು: ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಇಂದು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಕೂಡ ಭಾಗವಹಿಸಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ಗ್ರೀನ್ ಝೋನ್‌ಗಳಲ್ಲಿಯೂ ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದು, ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ವಿಧಿಸಲಾಗಿರುವ ನಿಯಮಗಳೇ ಮೇ 17ರ ನಂತರವೂ ಮುಂದುವರಿಯಲಿ ಎಂದು ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಈಗಲೇ ಲಾಕ್‌ಡೌನ್ ಸಡಿಲಿಕೆ ಮಾಡುವುದು ಬೇಡ. ರಾಜ್ಯಕ್ಕೆ ಮತ್ತಷ್ಟು ವಿನಾಯಿತಿ ಅಗತ್ಯ ಇಲ್ಲ. ನಿರ್ಬಂಧಗಳು ಮುಂದುವರಿಯಲಿ. ಸದ್ಯಕ್ಕೆ ಬೆಂಗಳೂರಿಗೆ ವಿಮಾನ ಸೇವೆ ಬೇಡ. ಮಾಲ್, ಸಿನಿಮಾ ಹಾಲ್, ಹೋಟೆಲ್‌ಗಳನ್ನು ಇನ್ನೂ ಕೆಲವು ದಿನ ಬಂದ್ ಮಾಡಬೇಕು. ಪ್ರತಿಯೊಬ್ಬರನ್ನು ಚಿಕಿತ್ಸೆಗೆ ಒಳಪಡಿಸಲು ಖಾಸಗಿ ಆಸ್ಪತ್ರೆಗಳನ್ನು ತೆರೆಯಬೇಕು. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 60 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷ ಕೆಳಗಿನ ವಯಸ್ಸಿನವರು ಮನೆಯಿಂದ ಹೊರಬರಬಾರದು ಎಂದು ಪ್ರಧಾನಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಯಡಿಯೂರಪ್ಪ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಜಿಲ್ಲಾವಾರು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ಗುರುತಿಸಬಾರದು. ಕಂಟೈನ್ಮೆಂಟ್ ವಲಯಗಳನ್ನು ಮಾತ್ರ ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಕ್ಲಸ್ಟರುಗಳ ಸುತ್ತಲಿನ 50 ರಿಂದ 100 ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಬೇಕು. ಇತರ ಸ್ಥಳಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಹಾಗೂ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಬೇಕು. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರತಂತಾಗುತ್ತದೆ. ಅಲ್ಲದೇ ರಾಜ್ಯಗಳು ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ರೋಗಲಕ್ಷಣಗಳಿಲ್ಲದ ಅಥವಾ ತೀವ್ರವಲ್ಲದ ಪ್ರಕರಣಗಳಲ್ಲಿ ಮನೆಯಲ್ಲಿಯೇ ಕಟ್ಟು ನಿಟ್ಟಿನ ಐಸೋಲೇಷನ್ನಲ್ಲಿ ಇರುವ ಮೂಲಕ ಹಾಗೂ ಟೆಲಿ ಮೆಡಿಸಿನ್ ಮೂಲಕ ಚಿಕಿತ್ಸೆ ಪಡೆಯಬಹುದು ಎಂದು ಪ್ರಧಾನಿ ಮೋದಿ ಅವರಿಗೆ ಸಿಎಂ ಯಡಿಯೂರಪ್ಪ ಅವರು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ

ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಡಿಪಿಇಪಿ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮವನ್ನು ಶಾಲೆಯ ಪ್ರಧಾನ ಶಿಕ್ಷಕ ಎಂ.ಟಿ.ಕಟ್ಟಿಮನಿ ಸಸಿಗಳಿಗೆ ನೀರು ಹಾಕುವ ಮೂಲಕ ಆಚರಿಸಲಾಯಿತು.

ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು!

ಬೀದರ್: ಕ್ವಾರಂಟೈನ್ ನಲ್ಲಿದ್ದ ಯುವಕನೊಬ್ಬ ಇಂದು ಬೆಳಗ್ಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಔರಾದ್…

24 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಯಾವ ಶಾಸಕರಿಗೆ ಯಾವ ನಿಗಮ?

ರಾಜ್ಯ ಬಿಜೆಪಿ ಸರ್ಕಾರಕ್ಕೆ ಈಗ ಒಂದು ವರ್ಷ. ವರ್ಷ ತುಂಬಿದ ಈ ಸಂದರ್ಭದಲ್ಲಿ ಸರ್ಕಾರ ವಿವಿಧ 24 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿ ಆದೇಶಿಸಿದೆ.

ಅಪ್ಪಾ ಹೇಳಿದ ಹೊಡಿ ಒಂಭತ್ತಿನ ಕಥಿ ಏನು ಗೊತ್ತಾ…?

ಹಿಗ್ಗಿನಿಂದ ಕುಣಿದಾಡಿದ ಅಪ್ಪನ ಮಾತು ನಂಬಿ ಪಾಪ ಗುಂಡ ಮುಗಿಲು ನೋಡಿಕೊಂಡ ಮಲಗಿದ. ಗುಂಡನ ಅಪ್ಪನ ಹಿಗ್ಗಿಗೆ ಕಾರಣ ಏನು ಗೊತ್ತಾ..? ಹಾಗಾದ್ರೆ ಈ ಕಥೆ ಓದಿ