ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗಾಗಿ ಇನ್ನೂ ಲಾಕ್ ಡೌನ್ ಮುಂದುವರೆದಿದೆ. ಲಾಕ್ ಡೌನ್ ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಬರೋಬ್ಬರಿ ರೂ. 10,675 ಕೋಟಿ ನಷ್ಟವಾಗಿದೆ.

2020-21ನೇ ಆರ್ಥಿಕ ವರ್ಷದಲ್ಲಿ ತೆರಿಗೆ, ಅಬಕಾರಿ, ಅಂಚೆ ಚೀಟಿ, ನೋಂದಾವಣಿ, ಸಾರಿಗೆ (ಮೋಟಾರು ವಾಹನ) ಗಳಿಂದ ಬರಬೇಕಿದ್ದ ಆದಾಯ ಲಾಕ್’ಡೌನ್ ಪರಿಣಾಮ ಕಳೆದ ಏಪ್ರಿಲ್ ತಿಂಗಳಿನಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಹೀಗಾಗಿ ಎಲ್ಲ ರಂಗದಲ್ಲಿಯೂ ಸರ್ಕಾರಕ್ಕೆ ನಷ್ಟವಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2020-2021ರ ಬಜೆಟ್ ಭಾಷಣದಲ್ಲಿ ಜಿಎಸ್ಟಿ ಪರಿಹಾರ ಸೇರಿದಂತೆ ರಾಜ್ಯದ ಸ್ವ ತೆರಿಗೆ ಆದಾಯವನ್ನು 1,28,107 ಕೋಟಿ ರೂ.ಬರಲಿದೆ ಎಂದು ಅಂದಾಜಿಸಿದ್ದರು. ಆದರೆ, ಬಜೆಟ್ ನಲ್ಲಿ ಅಂದಾಜಿಸಿದಂತೆ ಸಂಗ್ರಹವಾಗಿಲ್ಲ.

ಏಪ್ರಿಲ್ ತಿಂಗಳಿನಲ್ಲಿ ವಾಣಿಜ್ಯ ತೆರಿಗೆ ರೂ.6,870.25 ಕೋಟಿ, ಅಬಕಾರಿ ರೂ.1,891.6, ಅಂಚೆ ಮತ್ತು ನೋಂದಾವಣಿ ರೂ.1,054 ಕೋಟಿ ಹಾಗೂ ಸಾರಿಗೆ ರೂ.592…

Leave a Reply

Your email address will not be published. Required fields are marked *

You May Also Like

ಕರುನಾಡಲ್ಲಿ ದಾಖಲೆಯ 1502 ಕೊರೊನಾ ಸೋಂಕಿತರು ಪತ್ತೆ!: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 1502 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ದೃಢಪಟ್ಟ ಸೋಂಕಿತರಲ್ಲಿ…

ಸೂರ್ಯಕಾಂತಿ ಕ್ಷೇತ್ರಕ್ಕೆ ಕೃಷಿ ಅಧಿಕಾರಿಗಳ ಭೇಟಿ ಕೀಟ ರೋಗ ನಿಯಂತ್ರಣಕ್ಕೆ ಸಲಹೆ

ಉತ್ತರಪ್ರಭ ಸುದ್ದಿನಿಡಗುಂದಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬೆಳೆಗಳಿಗೆ ಕೀಟ ಹಾಗೂ ರೋಗಗಳ…

ಗದಗ ಜಿಪಂ ಅಧ್ಯಕ್ಷರಾಗಿ ರಾಜೂಗೌಡ ಪಾಟೀಲ್ ಅವಿರೋಧ ಆಯ್ಕೆ

ಗದಗ: ಜಿಲ್ಲಾ ಪಂಚಾಯತಿಯ ಅಧ್ಯಕ್ಷರಾಗಿ ರಾಜೂಗೌಡ ಕೆಂಚನಗೌಡ್ರ (ಪಾಟೀಲ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿ.ಪಂ.…

ಲಕ್ಷ್ಮೇಶ್ವರ: ಅಗಸ್ತ್ಯ ತೀರ್ಥ ಸ್ಥಳ ಅಭಿವೃದ್ಧಿಗೆ ಒತ್ತಾಯ

ಪಟ್ಟಣದ ಪುರಾತನ ಪುಣ್ಯ ಕ್ಷೇತ್ರವಾದ ಅಗಸ್ತ್ಯ ತೀರ್ಥದಲ್ಲಿ ಸಪ್ತಮುನಿಗಳಲ್ಲಿ ಒಬ್ಬರಾದ ಅಗಸ್ತ್ಯ ಮುನಿಗಳು ತಪಸ್ಸು ಮಾಡಿರುವ ಪವಿತ್ರ ಸ್ಥಳವನ್ನು ಮುಜುರಾಯಿ ಮತ್ತು ಪ್ರಾಚ್ಛವಸ್ತು ಇಲಾಖೆಗೆ ಸೆರಿಸಬೇಕೆಂದು ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗದಳ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.