ಉತ್ತರಪ್ರಭ
ಆಲಮಟ್ಟಿ: ಸರ್ವಜನರ ಪ್ರಜಾಪ್ರಭುತ್ವದ ಹಕ್ಕು, ಸಂವಿಧಾನ ಜಾಗೃತಿಗಾಗಿ ಜಿಲ್ಲಾ ಮಟ್ಟದ ವಿಚಾರ ಸಂಕಿರ್ಣ ಕಾರ್ಯಕ್ರಮವೊಂದು ಇಲ್ಲಿನ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ದಿ,13 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಸೈನ್ಯ ವಿಜಯಪುರ ಜಿಲ್ಲಾ ಸಮಿತಿ ಆಶ್ರಯದಲ್ಲಿ ಆಯೋಜನೆಗೊಂಡಿರುವ ಈ ವಿಚಾರ ಸಂಕಿರ್ಣ ಕಾರ್ಯಕ್ರಮವನ್ನು ಸಂಸದ ರಮೇಶ ಜಿಗಜಿಣಗಿ ಹಾಗು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಜಂಟಿಯಾಗಿ ಉದ್ಘಾಟಿಸಲಿದ್ದಾರೆ.
ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕ ಡಾ. ವೀರೇಶ್ವರ ಕುಂಬಾರ ಸಾನಿಧ್ಯ, ರಾಜ್ಯ ಸಂಚಾಲಕ ರಾಮದಾಸ ಎಚ್.ಎಮ್ ಅಧ್ಯಕ್ಷತೆ ವಹಿಸುವರು. ರಾಜ್ಯ ಕಾಯಾ೯ಧ್ಯಕ್ಷ ಪ್ರಕಾಶ ದೊಡಮನಿ ಸಂವಿಧಾನ ಶಿಲ್ಪಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವರು. ಕವಿ,ಸಂಸ್ಕೃತಿ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ, ಮಹಿಳಾ ರಾಜ್ಯಾಧ್ಯಕ್ಷೆ ರಾಧಾ ಶಿ.ವಾಯ್ ಗೌರಿ ವಿಶೇಷ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹೆಬ್ಬಾಳ, ಮಲ್ಲು ತಳವಾರ,ಶ್ರೀಶೈಲ ದೊಡಮನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಆಲಕಪುರ, ರಾಜ್ಯ ಕಾರ್ಯಕಾರ ಸಮಿತಿ ಸದಸ್ಯ ಮೌನೇಶ ನಾಗಬೇನಾಳ,ಸಮಿತಿ ಸದಸ್ಯ ಯಲ್ಲಪ್ಪ ಚಲವಾದಿ, ಆಲಮಟ್ಟಿ ಕೆಬಿಜೆಎನ್ ಎಲ್ ಮುಖ್ಯ ಇಂಜನೀಯರ ಎಚ್.ಸುರೇಶ, ಅಧೀಕ್ಷಕ ಇಂಜನಿಯರ ಬಸವರಾಜ ಡಿ, ಜೆ.ಜಿ.ರಾಠೋಡ, ವಲಯ ಅರಣ್ಯಾಧಿಕಾರಿ ಮಹೇಶ್ ಪಾಟೀಲ, ಪುನರ್ ವಸತಿ ಪುನರ್ ನಿಮಾ೯ಣ ಉಪ ವಿಭಾಗದ ರವಿ ಸೋಲಾಪೂರ, ಕಾರ್ಯನಿರ್ವಾಹಕ ಇಂಜನಿಯರ್ ಕಚೇರಿಯ ಎಮ್.ಆರ್.ಹಲಗತ್ತಿ,ಬಿಜೆಪಿ ಮುಖಂಡ ಸಂಗಮೇಶ ಚಿಕ್ಕೊಂಡ,ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ಮಾಲಾಶ್ರೀ ಸಳ್ಳೆನವರ, ಜಿಲ್ಲಾ ಮಹಿಳಾ ಸಂಘಟನಾ ಸಂಚಾಲಕಿ ಸುಲೋಚನಾ ಹಳ್ಳದಮನಿ ಇತರರು ಆಗಮಿಸಲಿದ್ದಾರೆ.
ಅತಿಥಿಗಳಾಗಿ ಬಾಗಲಕೋಟೆ ಹಾಗು ವಿಜಯಪುರ ಜಿಲ್ಲೆಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಸೈನ್ಯದ ವಿವಿಧ ಸ್ತರದ ಕಾರ್ಯಕರ್ತ ಮುಖಂಡರಾದ ಯಲ್ಲಪ್ಪ ದೊಡಮನಿ, ಗ್ಯಾನಪ್ಪ ಚಲವಾದಿ, ರಾಜು ಅಡಿವ್ಯಾಳ, ಹನಮಂತ ಮಳಗಾಂವಿ, ಚಂದ್ರಪ್ಪ ಅಂಗಡಗೇರಿ, ಪ್ರಿಯಾಂಕಾ ಚಲವಾದಿ, ಭೀಮಣ್ಣ ಘಂಟಿ, ಬಸವರಾಜ ಮಾದರ, ಆನಂದ ಚಲವಾದಿ, ಅಶೋಕ ಚಲವಾದಿ,ರಾಮಣ್ಣ ಬಾಗೇವಾಡಿ, ಹನಮವ್ವ ಘಂಟಿ, ಬಸವರಾಜ ಮಳಗಾಂವಿ, ಸುರೇಶ ಗಂಗೂರ, ತಿಮ್ಮಣ್ಣ ಹುಲ್ಲೂರ, ಹನಮಂತ ಮುದ್ದಾಪೂರ, ಬಸವರಾಜ ಚಲವಾದಿ, ಬಸಲಿಂಗಪ್ಪ ಹೆಬ್ಬಾಳ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಆಧುನಿಕ ಭಾರತೀಯ ಸಂವಿಧಾನ ಜಾರಿಯಾದ 1950 ಕ್ಕೂ ಮುನ್ನ ಭಾರತದ ಮಹಿಳೆ, ಓಬಿಸಿ, ಎಸ್.ಸಿ, ಎಸ್.ಟಿ ಮತ್ತು ಧಾಮಿ೯ಕ ಅಲ್ಪಸಂಖ್ಯಾತ ಸಮುದಾಯಗಳ ಬದುಕು ಮತ್ತು ಸಂವಿಧಾನ ಜಾರಿಯಾದ ನಂತರದ ಬದುಕು ಬವಣೆ ಹಾಗು ಮುಂದಿನ ಸವಾಲುಗಳು ಕುರಿತು ಈ ವಿಚಾರ ಸಂಕಿರ್ಣ ಬೆಳಕು ಚೆಲ್ಲಲಿದೆ ಎಂದು ಪ್ರಕಟಣೆ ತಿಳಿಸಿದೆ.