ಆಲಮಟ್ಟಿ (ವಿಜಯಪುರ ಜಿಲ್ಲೆ) : 7 ನೇ ವೇತನ ಆಯೋಗದಿಂದ ನಿಗದಿಗೊಳಿಸಿದ ಪ್ರಶ್ನಾವಳಿಗಳಿಗೆ ಸಂಬಂಧಿಸಿದಂತೆ ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಹಲವಾರು ಅಂಶಗಳನ್ನೊಳಗೊಂಡ ಮಹತ್ವವುಳ್ಳ 135 ಕ್ಕೂ ಹೆಚ್ಚು ಪುಟಗಳ ಸಮಗ್ರ ವರದಿಯೊಂದನ್ನು ವೇತನ ಆಯೋಗದ ರಾಜ್ಯ ಅಧ್ಯಕ್ಷ ಸುಧಾಕರರಾವ ಅವರಿಗೆ ಬೆಂಗಳೂರಿನಲ್ಲಿಂದು ಸಲ್ಲಿಸಲಾಯಿತು.

ಮುಖ್ಯವಾಗಿ ವೇತನ ಆಯೋಗಕ್ಕೆ ಶಿಕ್ಷಕರ ವೇತನದಲ್ಲಾಗಿರುವ ವ್ಯತ್ಯಾಸ, ತಾರತಮ್ಯ ಬಗ್ಗೆ ಉಲ್ಲೇಖಿಸಿದೆ. ಭತ್ಯೆಗಳು ಹಾಗೂ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 51800-102800 ರೂ. ಶ್ರೇಣಿ ಹಾಗೂ ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸುವಂತೆ ಕೇಳಿಕೊಂಡಿದೆ. ಗುಣಾತ್ಮಕ ಶಿಕ್ಷಣಕ್ಕಾಗಿ ಸಕಾ೯ರಿ ಶಾಲೆಗಳಲ್ಲಿ ತರಗತಿಗೊಬ್ಬ ಶಿಕ್ಷಕರೊಂದಿಗೆ ಎಲ್.ಕೆ.ಜಿ, ಯು.ಕೆ.ಜಿ ಪ್ರಾರಂಭಿಸಬೇಕೆಂಬ ಬೇಡಿಕೆ ಇಟ್ಟಿದೆ. ದೇಶದಾದ್ಯಂತ ಒಂದೇ ರೂಪದ ಸೇವಾ ತೆರಿಗೆ ವ್ಯವಸ್ಥೆ ಇದೆ. ಶ್ರೇಣಿಯಲ್ಲೂ ಸಹ ಒಂದೇ ರೀತಿ ಇರುವಂತೆ ಗಮನ ಹರಿಸಬೇಕೆಂಬ ಬೇಡಿಕೆಯ ಒತ್ತಾಯದೊಂದಿಗೆ 25 ಪ್ರಮುಖ ಅಂಶಗಳ ಕುರಿತು ವೇತನ ಆಯೋಗಕ್ಕೆ ತಮ್ಮ ಸಂಘದಿಂದ ಇಂದು ವರದಿ ಸಲ್ಲಿಸಲಾಗಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗೂ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರದಿ ಸಲ್ಲಿಕೆ ವೇಳೆ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ಕಾಯಾ೯ಧ್ಯಕ್ಷ ಬಸವರಾಜ ಗುರಿಕಾರ, ರಾಜ್ಯಸಂಘದ ಮಹಾಪೋಷಕ ವ್ಹಿ. ಎಂ.ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ಉಪಾಧ್ಯಕ್ಷ ಕೆ.ನಾಗೇಶ್, ಸಹ ಕಾರ್ಯದರ್ಶಿ ಚೇತನ ಹೆಚ್.ಎಸ್, ಶ್ರೀಮತಿ ಸುಮತಿ ಜಿ, ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾಧ್ಯಕ್ಷರಾದ ಬಸನರಾಜ ಬಾಗೇನವರ್(ಬಾಗಲಕೋಟೆ), ವಾಯ್.ಎಫ್.ಚುಳಕಿ(ದಾರವಾಡ), ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ,ಬಣವಿ,ಜಂಗಳಿ, ಬಸವರಾಜ ಸಂಗಪ್ಪನವರ( ವಿಜಯನಗರ), ಮಾರುತೇಶ ಆರ್, (ಚಿತ್ರದುರ್ಗ), ರಮೇಶ್ (ರಾಮನಗರ), ನಾರಾಯಣಸ್ವಾಮಿ(ಚಿಕ್ಕಬಳ್ಳಾಪುರ), ಕಾರ್ಯದರ್ಶಿ ಅಶೋಕಕುಮಾರ, ಪರಶಿವಮೂತಿ೯(ತುಮಕೂರ), ಕಾರ್ಯದರ್ಶಿ ಚಿಕ್ಕಣ್ಣ ತಿಮ್ಮೇಗೌಡ, ಮಂಜುನಾಥ ರಮೇಶ್ (ಮಂಡ್ಯ), ಎಂ.ಶ್ರೀನಿವಾಸಪ್ಪ(ಬೆಂಗಳೂರು ಗ್ರಾಮಾಂತರ), ನಾಗರಾಜ(ಕಲಬುಗಿ೯), ಶ್ಯಾಗೋಟಿ(ಕೊಪ್ಪಳ) ಮತ್ತಿತರರು ಉಪಸ್ಥಿತರಿದ್ದರು ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.