ಆಲಮಟ್ಟಿ : ಇಲ್ಲಿನ ರಾವಬಹದ್ದೂರ ಫ.ಗು.ಹಳಕಟ್ಟಿ ಪ್ರೌಢಶಾಲೆಯ ಕರಣಿಕ ಫಕೀರಪ್ಪ ತಡಸಿ (ಶಾಂತೂ ತಡಸಿ) 42 ವರ್ಷಗಳ ಕಾಲ ದೀಘಾ೯ವಧಿ ಅಮೋಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಬುಧವಾರ ಹೃದಯಸ್ಪರ್ಶಿ ಸನ್ಮಾನ ಏರ್ಪಡಿಸಿ ಬಿಳ್ಕೋಡಲಾಯಿತು.
ಸಮಾರಂಭದ ಮುಖ್ಯ ಅತಿಥಿ ಎಂ.ಎಚ್.ಎಂ.ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ಮಾತನಾಡಿ, ಎಸ್.ವಿ.ವಿ.ಶಿಕ್ಷಣ ಸಂಸ್ಥೆಯ ನೌಕರರಾಗಿ,ಹಳಕಟ್ಟಿ ಶಾಲೆಯ ದ್ವೀತಿಯ ದಜೆ೯ಯ ಗುಮಾಸ್ತರಾಗಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಒಂದು ಶಾಲೆ,ಶಿಕ್ಷಣ ಸಂಸ್ಥೆ ಸುಲಲಿತವಾಗಿ ನಡೆಯಬೇಕಾದರೆ ಶೈಕ್ಷಣಿಕ ರಂಗದಲ್ಲಿ ಅಪಾರ ಅನುಭವ ಹೊಂದಿರುವಂಥ ನೌಕರರು ಬೇಕು. ಅಂಥ ಸಾಮಥ್ರ್ಯ ಶಾಂತೂ ತಡಸಿ ಹೊಂದಿದ್ದಾರೆ. ಕೇವಲ ತಮ್ಮ ಕೆಲಸ,ಕಾಯಾ೯ಲಯದ ಒಡನಾಟ ಇರಿಸದೆ ಎಲ್ಲ ಗುರು ಬಳಗದೊಂದಿಗೆ ಅನ್ಯೋನ್ಯತೆ ಸಂಬಂಧ ಹೊಂದಿ ಪ್ರೀತಿ ಪಾತ್ರಕ್ಕೆ ಒಳಗಾಗಿರುವ ಶಾಂತೂ ವಿಶೇಷ ವ್ಯಕ್ತಿತ್ವದ ಹೂರಣರಾಗಿದ್ದಾರೆ. ಒಂದೊಂದು ಬಾರಿ ರಕ್ತ ಸಂಬಂಧಿಕರು ಸಂಬಂಧದ ಬೇಸುಗೆಯಿಂದ ಹೊರಬರಬಲ್ಲರು. ಆದರೆ ಆತ್ಮೀಯರೇ ಸಂಬಂಧಿಕರಾಗಿ ಮಿನುಗ ಬಲ್ಲರು. ಎಲ್ಲರೂ ನಮ್ಮವರೆಂಬ ಭಾವ ಬಂಧನದ ಆತ್ಮೀಯತೆ ಹಂಚಿಕೊಳ್ಳುವ ಆದರ್ಶ ಗುಣ ಶಾಂತೂ ತಡಸಿಯವರಲ್ಲಿತ್ತೆಂದು ಪ್ರಾಚಾರ್ಯ ಹೇಮಗಿರಿಮಠ ಬಣ್ಣಿಸಿದರು.

ಬಸವಣ್ಣನವರ ತತ್ವಾದರ್ಶದಂತೆ ಕಾಯಕದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು ಮೈಮುರಿದು ಶಾಂತೂ ದುಡಿದು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ವೈಚಾರಿಕತೆಯಲ್ಲಿ ಭಿನ್ನಾಭಿಪ್ರಾಯಗಳಿದ್ದರು ಸಹ ವಿನಮೃತೆಯ ಗೌರವಭಾವ ಸಾಮರಸ್ಯದ ಸಂಪ್ರೀತಿಯಿಂದ ಸೆಳೆದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಯಾರ ಮನಸ್ಸಿಗೂ ಎಂದಿಗೂ ನೋವಾಗದ ರೀತಿಯಲ್ಲಿ ಶಾಂತೂ ತಡಸಿ ನಡೆದುಕೊಂಡಿದ್ದಾರೆ. ಯಾವುದೇ ಕೆಲಸಗಳಿರಲಿ ಅಲ್ಲಿ ತರ್ಕಬದ್ಧ, ಸಮಯೋಚಿತ,ಚಿತ್ತಬದ್ದರಾಗಿ ಕಾಯಕ ನಿಭಾಯಿಸಿದ್ದಾರೆ.ಅವರ ವ್ಯಕ್ತಿತ್ವ, ವರ್ಚಸ್ಸು ಮಿಗಿಲಾದದ್ದು.ಬದುಕು,ಬವಣೆ ಅವಣೀ೯ಯ. ನಡೆ,ನುಡಿ ಅತ್ಯಂತ ಸರಳತನ. ಶಾಂತೂ ಪ್ರಸನ್ನ ಭಾವದಿಂದ ಗೈದ ಸೇವೆ ನಿಜಕ್ಕೂ ಅನುಪಮ,ಆದರ್ಶನೀಯ. ಅವರಲ್ಲಿನ ವಿಚಾರಶಕ್ತಿ,ಬರವಣಿಗೆ ಸಾಹಿತ್ಯ ಅದ್ಬುತ. ಹೆಸರಿಗೆ ಹೊಲುವಂತೆ ಶಾಂತಚಿತ್ತರಾಗಿ ನಿಷ್ಕಾಮ ಮೌಲ್ಯಯುತ ಸೇವೆ ಮಾಡಿದ್ದಾರೆ. ಸೇವಾ ಮನೋಭಾವನೆಯಿಂದಲೇ ಗುರುತಿಸಿಕೊಂಡಿದ್ದಾರೆ. ಗಟ್ಡಿತನದ ಹೆಜ್ಜೆ ಗುರುತುಗಳು ಅವರತ್ತ ನೋಡುವಂತೆ ಮಾಡಿವೆ.ಗುಣವತ್ತತೆಗೆ ವಿಶೇಷತೆ ಕಲ್ಪಿಸಿವೆ ಎಂದು ವಣಿ೯ಸಿದರು.
ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ ಮಾತನಾಡಿ, ಸೇವೆಯೇ ನನ್ನ ಜನ್ಮಸಿದ್ದ ಹಕ್ಕು ಎಂಬ ಉದಾತ ಭಾವನೆಯಿಂದ ಶಾಂತೂ ತಡಸಿ ಅವರು ನಿರಂತರ 42 ವರ್ಷಗಳ ಕಾಲ ಯಾವುದೇ ಕಲ್ಮಶಗಳಿಲ್ಲದೇ ವೃತ್ತಿಗೆ ಚುತಿ ಬಾರದಂತೆ ಸೇವೆ ಪೂರ್ಣಗೊಳಿಸಿರುವುದು ಇಂದಿನ ದಿನಮಾನದಲ್ಲಿ ವಿಶೇಷ . ಇಚ್ಚಾಶಕ್ತಿ, ಜ್ಞಾನ ಶಕ್ತಿ, ಕ್ರಿಯಾಶಕ್ತಿ,ಆಲೋಚನಾ ಶಕ್ತಿ ಇವುಗಳಿಂದ ಶಾಂತೂ ಅವರ ಸೇವಾ ದಿನಮಾನಗಳು ಯಶಸ್ವಿ ಯಾಗಿ ಸಾಗಿವೆ. ವಿನಯಶೀಲ ವ್ಯಕ್ತಿತ್ವ, ಶಿಸ್ತು ಹಾಗು ಸಂಯಮತೆಗೆ ಹೆಸರಾದ ಅವರು ಎಸ್.ವಿ.ವಿ.ಸಂಸ್ಥೆಯ ಆಧಾರಸ್ತಂಭವಾಗಿ ಕೆಲಸ ಕಾರ್ಯ ನಿರ್ವಹಿಸಿದ್ದಾರೆ. ಶಾಂತೂ ಅವರಲ್ಲಿ ಜ್ಞಾನ ಕೋಶ ಮನೆ ಮಾಡಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ.ಪ್ರಯತ್ನ ಶೀಲ,ಕ್ರಿಯಾಶೀಲತೆಯಿಂದ ವೃತ್ತಿ ಕಾಯಕದಲ್ಲಿ ತೃಪ್ತಿ ಕಂಡುಕೊಂಡಿದ್ದಾರೆ. ಈಗ ವಿಶ್ರಾಂತ ಬದುಕಿಗೆ ಪಾದಾರ್ಪಣೆ ಮಾಡುತ್ತಿದ್ದು ಅವರಿಗೆ ದೇವರು ಅಯುರಾರೋಗ್ಯ ಭಾಗ್ಯ ದಯಪಾಲಿಸಲಿ ಎಂದು ಶುಭ ಹಾರೈಸಿದರು.

ಎಸ್.ಎಚ್.ನಾಗಣಿ, ಜಿ.ಆರ್.ಜಾಧವ ಮಾತನಾಡಿ, ಸಜ್ಜನಿಕೆಯ ಬದುಕಿನೊಂದಿಗೆ ಧೀಘಾ೯ವಧಿ ಸೇವೆಯ ಮಜಲುಗಳು ಅತ್ಯಮೋಘವಾಗಿವೆ. ಸಂಸ್ಥೆಗೆ ನೀಡಿರುವ ಸೇವಾ ಕೊಡುಗೆ ಅನುಪಮ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಂತೂ ತಡಸಿ, ಗುರು ಬಳಗದ ಸಂಪರ್ಕದಿಂದ ತಮ್ಮೆಲ್ಲರ ಸಹಕಾರದಿಂದ ಕೈಲಾದ ಮಟ್ಟಿಗೆ ಸೇವೆ ಸಲ್ಲಿಸಿರುವೆ. ಗದುಗಿನ ಲಿಂ,ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ ಕೃಪೆ ಹಾಗು ಸಂಸ್ಥೆಯ ಕಾರ್ಯದರ್ಶಿಗಳಾದ ಪಟ್ಟಣಶೆಟ್ಟರ ಗುರುಗಳು ತೋರಿದ ಆಶೀರ್ವಾದದಿಂದ ಆಲಮಟ್ಟಿಯಲ್ಲಿ ಸೇವೆ ಮಾಡುವ ಸೌಭಾಗ್ಯ ಒದಗಿ ಬಂದು ಈಗ ಗಣೇಶೋತ್ಸವದ ಶುಭ ಸಂದರ್ಭದಲ್ಲಿ ನಿವೃತ್ತಿಗೊಳ್ಳುತ್ತಿರುವುದು ಯಾವುದೋ ಜನ್ಮದ ಪುಣ್ಯವಾಗಿದೆ ಎಂದರು. ಅದರದಿಂದ ಕಂಡ ಎಲ್ಲರಿಗೂ ಚಿರಋಣಿ,ಸಹೃಯಿಗಳಿಗೆಲ್ಲ ತುಂಬ ಹೃದಯದ ಕೃತಜ್ಞತೆ ಎಂದು ಭಾವಪರಶರಾಗಿ ನುಡಿದರು.

ರಾಜಕುಮಾರ ರಾಠೋಡ, ರವಿಕಿರಣ ತಡಸಿ, ಡಿ.ಟಿ.ಸಿಂಗಾರಿ,ಟಿ.ಎಫ್. ದಾಸರ, ಗೋಪಾಲ ಬಸಪ್ಪ ಬಂಡಿವಡ್ಡರ, ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ ಇತರರಿದ್ದರು.
ಶಾಲೆಯ ಪರವಾಗಿ ಶಾಂತೂ ತಡಸಿ ಹಾಗು ಅವರ ಧರ್ಮಪತ್ನಿ ಗಿರಿಜಾ ತಡಸಿ ದಂಪತಿಗಳಿಗೆ ಶಾಲೂ ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಗುರುಮಾತೆ ಪಲ್ಲವಿ ಸಜ್ಜನ ಸ್ವಾಗತಿಸಿದರು. ಕವಿತಾ ಮಠದ ನಿರೂಪಿಸಿದರು. ಅನಿತಾ ರಾಠೋಡ ವಂದಿಸಿದರು.