ನಿಡಗುಂದಿ : ಲೋಕಮಾನ್ಯ ತಿಲಕರು ತೀರಿದ ನಂತರ ಸ್ವಾತಂತ್ರ್ಯ ಸಂಗ್ರಾಮದ ಬಾನಂಗಳದಲ್ಲಿ ಕವಿದಿದ್ದ ಕತ್ತಲನ್ನು ಸತ್ಯ, ಅಹಿಂಸೆ ಗಳೆನ್ನುವ ಅಸ್ತ್ರಗಳನ್ನು ಹಿಡಿದು ಆ ಕತ್ತಲೆಯ ಬಾನಂಗಳನ್ನು ಸೀಳಿ ಸ್ವಾತಂತ್ರ್ಯ ಎನ್ನುವ ಬೆಳಕಿನ ಆಶಾಕಿರಣವನ್ನು ಮೂಡಿಸಿದ ಸ್ವರಾಜ್ಯ ಸೂರ್ಯ ಮಹಾತ್ಮ ಗಾಂಧೀಜಿಯವರು ಎಂದು ಜಿವಿವಿಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಸವಿತಾ ದೇಸಾಯಿ ಅಭಿಪ್ರಾಯಪಟ್ಟರು.
ಪಟ್ಟಣದ ಕಮದಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಬೇನಾಳ ಆರ್.ಎಸ್. ಗ್ರಾಮದ ರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ” ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರ ” ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.


ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ಹಾಗೂ ನಿಡಗುಂದಿ ಪಿಎಸ್ ಐ ಕಾಜೂ ವಾಲೀಕಾರ ಬಾಪೂಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರ್.ಎಂ.ಜಿ.ಫೌಂಡೇಶನ್. ಸಂಸ್ಥಾಪಕ ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ಪ್ರತಿದಿನ, ಪ್ರತಿಕ್ಷಣ ಬದಲಾಗುತ್ತಾ ಜಗತ್ತಿಗೆ ತೆರೆದುಕೊಳ್ಳುತ್ತಾ ಬದುಕನ್ನೇ ಪ್ರಯೋಗ ಶಾಲೆ ಮಾಡಿಕೊಂಡ ಮಹಾತ್ಮ ಇತಿಹಾಸದ ವಿಸ್ಮಯ ಜಗತ್ತಿನ ಅಚ್ಚರಿ ಎಂದರು.
ಮುಖ್ಯ ಶಿಕ್ಷಕ ಎಸ್.ಎಸ್. ಹೊಸಮನಿ ಮಾತನಾಡಿದರು. ಎಸ್ ಡಿಎಂಸಿ ಅಧ್ಯಕ್ಷ ಪ್ರಭು ಸಿಂದಗಿ ಅಧ್ಯಕ್ಷತೆ ವಹಿಸಿದ್ದರು. ಅಲಿ ಚಪ್ಪರಬಂದ್, ಬಿ.ಬಿ.ಪಾಟೀಲ್,
ಜಿ.ವೈ.ಕೆಂಪವಾಡ, ಪಿ.ಎಸ್.ಗುರಡ್ಡಿ,.ಆರ್. ಬೆಕಿನಾಳ , ಸುರೇಶ ಕುರಗೋಡಿ, ಪ್ರಕಾಶ ಕೂಚಬಾಳ, ರಮೇಶ ವಡ್ಡರ ಇದ್ದರು.
ಗಾಂಧಿ ಕ್ವಿಜ್ ನಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಾಪೂಜಿ ಪುಸ್ತಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಬಾಪೂಜಿಯ ಬಾಲ್ಯ ಜೀವನ, ಸ್ವಾತಂತ್ರ್ಯ ಹೋರಾಟ ಹಾಗೂ ಸಾಧನೆಗಳ ಕುರಿತಾದ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *

You May Also Like

ಹಳಕಟ್ಟಿ ಶಾಲೆಯಲ್ಲಿ ಗಣತಂತ್ರ ಸಡಗರ

ಉತ್ತರಪ್ರಭದೇಶದ ಸರ್ವಶ್ರೇಷ್ಠ ಸಂವಿಧಾನಕ್ಕೆ ವಿಶ್ವವೇ ಬೆರಗು – ಕೋಟ್ಯಾಳಆಲಮಟ್ಟಿ: ನಮ್ಮ ದೇಶದ ಪವಿತ್ರ ಕಣದಲ್ಲಿ ರಚಿತಗೊಂಡ…

ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆದ ಚಡಚಣ್ಣವರ

ಸ್ಥಳೀಯ ಜ್ಞಾನ ಜ್ಯೋತಿ ಕೊಚಿಂಗ್ ಸೆಂಟರ್ ವಿದ್ಯಾರ್ಥಿ ಮಂಜುನಾಥ ಚಡಚಣ್ಣವರ ಮೊರಾರ್ಜಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ 2ನೇ ಪಡೆದುಕೊಂಡಿದ್ದಾರೆ.

ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಮಣ್ಣ ಕಮಾಜಿ ಆಯ್ಕೆ

ಮುಳಗುಂದ : ಇಲ್ಲಿನ ವೀರರಾಣಿ ಕಿತ್ತೂರ ಚನ್ನ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಮಣ್ಣ ಕಮಾಜಿ,…

ಆಗಷ್ಟ 5 ರಿಂದ 8 ದಿನಗಳಕಾಲ ಆಲಮಟ್ಟಿ ಟೂ ತಾಳಿಕೋಟಿ ಯುವಜನ ಸಂಕಲ್ಪ ನಡಿಗೆ ಯಾತ್ರೆ

20 ಸಾವಿರ ಯುವಕ-ಯುವತಿಯರಿಗೆ ಸಮವಸ್ತ್ರ ವಿತರಣೆ- ಆಲಮಟ್ಟಿಯಲ್ಲಿ ಶಾಸಕ ನಡಹಳ್ಳಿ ಚಾಲನೆಉತ್ತರಪ್ರಭಆಲಮಟ್ಟಿ: 75 ನೇ ಸ್ವಾತಂತ್ರ್ಯ…