ಉತ್ತರಪ್ರಭ ಸುದ್ದಿ

ಕೊರಟಗೆರೆ: ತಾಲೂಕಿನ ಕಸಬಾ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು-ಮಧುಗಿರಿ ರಾಜ್ಯ ಹೆದ್ದಾರಿಯ ಜಿ.ನಾಗೇನಹಳ್ಳಿ ಬಳಿಯಲ್ಲಿಎರಡು ಕಾರುಗಳು ಪರಸ್ಪರ ಢಿಕ್ಕಿ ಹೊಡೆದು ಒಂದು ಕಾರು ಬೆಂಕಿಗಾಹುತಿಯಾಗಿದೆ.

ವಿಶಾಲ್ ನ್ಯಾಚುರಲ್ ಪುಡ್ ಪ್ರಾಡಕ್ಟ್ ಪ್ಯಾಕ್ಟರಿಯ ಬಳಿ ಎರಡು ವಾಹನಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಒಬ್ಬ ಮಹಿಳೆ ಮೃತಪಟ್ಟು ಮತ್ತು 9 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಘಟನೆ ನಡೆದ ಬಳಿಕ ಕೊರಟಗೆರೆ ಪೋಲೀಸ್ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ದಾವಿಸಿ ಗಾಯಾಳುಗಳನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಸೂಕ್ತ ಪ್ರಥಮ ಚಿಕಿತ್ಸಾ ನೀಡಿ ಬಳಿಕ ಗಂಭೀರ ಸ್ವರೂಪದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಕೊರಟಗೆರೆ ಠಾಣಾ ಪಿಎಸ್ಐ ಚೇತನ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಕುರಿಗಾಹಿ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ ಖಂಡಿಸಿ: ವಿಧಾನಸೌಧ ಚಲೋ

ಉತ್ತರಪ್ರಭ ಸುದ್ದಿಗದಗ: ರಾಜ್ಯದಲ್ಲಿ ನಡೆಯುತ್ತಿರುವ ಕುರಿಗಾಹಿಗಳ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಹಾಗೂ ಅವರಿಗೆ ಭದ್ರತೆಯನ್ನು ಕಲ್ಪಿಸಬೆಕೇಂದು…

ಗೋರ ಸೇನಾ ಸಂಘಟನೇ ವತಿಯಿಂದ ಪ್ರತಿಭಟನೆ- ಸಂಗೂರ ಸಕ್ಕರೆ ಕಾರ್ಖಾನೆ:ಲಾರಿ ಹಾಯ್ದು ಒರ್ವ ಕಾರ್ಮೀಕ ಸಾವೂ, ಇಬ್ಬರಿಗೆ ಗಂಭೀರ ಗಾಯ

ಉತ್ತರಪ್ರಭ ಸುದ್ದಿ ಹಾವೇರಿ: ಹಾವೇರಿ ಜಿಲ್ಲೆಯ ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿ ದಿನಾಂಕ:09.01.2022 ರಾತ್ರಿ 2.00 ಗಂಟೆ…

ಯಾದಗಿರಿ ಜಿಲ್ಲೆಯ ಜನರ ನಿದ್ದೆ ಕದ್ದ ಕೊರೊನಾ!

ಜಿಲ್ಲೆಯಲ್ಲಿ ಇಂದು ಕೂಡ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ.

ನಿಡಗುಂದಿ: 23 ರಂದು ಉಚಿತ ಆರೋಗ್ಯ, ರಕ್ತದಾನ ಶಿಬಿರ

ನಿಡಗುಂದಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಹಾಗೂ…