ನೀವು ಯಾವ ಭಂಗಿ ಅಥವಾ ಪೊಸಿಷನ್ನಿನಲ್ಲಿ ಮಲಗುತ್ತೀರಿ ಎನ್ನುವುದು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಿಷಯ.

ಮಲಗುವ ಸ್ಥಿತಿಗಳಲ್ಲಿ ಹಲವಾರು ವಿಧ. ಕೆಲವರು ಹೊಟ್ಟೆ ಹಚ್ಚಿ ಡಬ್ ಮಲಗಿದರೆ, ಇನ್ನು ಕೆಲವರು ಹೋಳ್ ಮಗ್ಗುಲಾಗಿ ಅಂದರೆ ದೇಹದ ಒಂದು ಭಾಗದ ಮೇಲೆ ಮಲಗುತ್ತಾರೆ. ಕೆಲವರು ಬೆನ್ನು ಹಚ್ಚಿ ಮಲಗುತ್ತಾರೆ. ಈ ಮೂರರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಸುರಕ್ಷಿತ? ಯಾವುದರಿಂದ  ಏನು ಸಮಸ್ಯೆ ಆಗುತ್ತವೆ?

ನಿದ್ದೆ ಮತ್ತು ಆರೋಗ್ಯ

ನಿದ್ದೆ ಮನುಷ್ಯನಿಗೆ ತುಂಬ ಮುಖ್ಯ. ಆರೋಗ್ಯವಂತರಾಗಿರಲು ಕನಿಷ್ಠ 6 ತಾಸಾದರೂ ಮಲಗಬೇಕು ಎನ್ನುತ್ತಾರೆ ವೈದ್ಯರು. 8-10 ತಾಸು ಮಲಗಿದರೆ ಇನ್ನೂ ಒಳ್ಳೆಯದೇ. ನಮ್ಮ ಬದುಕಿನ ಮೂರನೆ ಒಂದು ಭಾಗವನ್ನು ನಿದ್ದೆಯಲ್ಲೇ ಕಳೆಯುವದರಿಂದ, ಯಾವ ಭಂಗಿಯಲ್ಲಿ ಮಲಗುತ್ತೀರಿ ಎನ್ನುವುದು ಮುಖ್ಯವಾಗುತ್ತದೆ.

  ಆರೋಗ್ಯಕ್ಕೆ ನಿದ್ದೆ ಅತ್ಯಗತ್ಯ. ನಿದ್ದೆಗೆಟ್ಟರೆ ದೇಹದ ಚಟುವಟಿಕೆ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತವೆ. ದೈಹಿಕವಷ್ಟೇ ಅಲ್ಲ ಮಾನಸಿಕವಾಗಿಯೂ ನೀವು ಕಿರಿಕಿರಿ ಅನುಭವಿಸುತ್ತೀರಿ. ನಿದ್ದೆಗೆಡುವುದು ನಿಮ್ಮ ನೆನಪಿನ ಶಕ್ತಿ, ಏಕಾಗ್ರತೆ, ನಿಮ್ಮ ಪ್ರತಿಕ್ರಿಯೆಯ ಅವಧಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಗುಣದ ಮೇಲೆ ಅಡ್ಡ ಪರಿಣಾಮಗಳಾಗುತ್ತವೆ. ಸರಿಯಾಗಿ ನಿದ್ದಿ ಹೊಡ್ದವರ ಬುದ್ಧಿಯೂ ಸ್ತಿಮಿತದಲ್ಲಿರುತ್ತದೆ.

 ಮಲಗುವ ಭಂಗಿಗಳು

1.   ಬೆನ್ ಹಚ್ಚಿ ಮಲಗುವುದು: ಮೂರು ಭಂಗಿಗಳ ಪೈಕಿ ಆರೋಗ್ಯ ದೃಷ್ಟಿಯಿಂದ ಬೆನ್ನು ಹಚ್ಚಿ ಅಂದರೆ ಬೆನ್ನನ್ನು ಕೆಳಗೆ ಮಾಡಿ ಮಲಗುವುದು ಸುರಕ್ಷಿತ. ಇದು ನಿಮ್ಮ ಬೆನ್ನುಮೂಳೆ ನಿರ್ವಹಣೆಗೆ ಸಹಕಾರಿ. ಈ ಭಂಗಿಯು ನಿಮ್ಮ ಬೆನ್ನು ಸ್ನಾಯು ಮತ್ತು ಕುತ್ತಿಗೆ ಸ್ನಾಯುಗಳ ಮೇಲೆ ಒತ್ತಡ ಹಾಕುವುದಿಲ್ಲ. ಚರ್ಮದ ಆರೋಗ್ಯ ದೃಷ್ಟಿಯಿಂದಲೂ ಈ ಭಂಗಿ ಉಪಯೋಗಕಾರಿ. ಮುಖದಲ್ಲಿ ಸುಕ್ಕುಗಳಾಗುವುದನ್ನು ಇದು ಕಡಿಮೆ ಮಾಡುತ್ತದೆ. ಮಹಿಳೆಯರಲ್ಲಿ ಎದೆ ಭಾಗದ ನೇರಿಗೆ ಅಥವಾ ಸುಕ್ಕನ್ನು ಕಡಿಮೆ ಮಾಡುತ್ತದೆ. ಮೊಲೆಗಳ ಕುಗ್ಗುವಿಕೆಯನ್ನು ತಡೆಯುತ್ತದೆ. ಈ ಭಂಗಿಯ ಒಂದು ಅನಾನುಕೂಲವೆಂದರೆ, ಗೊರಕೆ ಹೊಡೆಯುವವರ ಗೊರಕೆ ಪ್ರಮಾಣವನ್ನು ಇದು ಹೆಚ್ಚಿಸುತ್ತದೆ.

2.  ಹೋಳ್ ಮಗ್ಗಲು ಅಥವಾ ಅಡ್ಡಲಾಗಿ ಮಲಗುವುದು: ಬಹಳಷ್ಟು ಜನರು ಈ ಭಂಗಿಯಲ್ಲೇ ನಿದ್ದೆ ಮಾಡುತ್ತಾರೆ. ಒಂದೇ ಮಗ್ಗಲಿನ ಮೇಲೆ ಮಲಗುವುದರಿಂದ  ಆಭಾಗದ ಮೇಲೆ ಭಾರ ಹೆಚ್ಚಾಗಿ, ತೋಳು ಮತ್ತು ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಬಲಭಾಗದ ಮೇಲೆ ಮಲಗಿದರೆ ಅದು ನಿಮ್ಮ ಪಚನ ಶಕ್ತಿಯನ್ನು ಕುಂದಿಸುತ್ತದೆ ಮತ್ತು ಎದೆಯುರಿಯನ್ನು ಹೆಚ್ಚಿಸುತ್ತದೆ.

3. ಹೊಟ್ಟೆ ಹಚ್ಚಿ ಮಲಗುವುದು ಅಥವಾ ಡಬ್ ಬಿದ್ದುಕೊಳ್ಳುವುದು: ಆರೋಗ್ಯ ದೃಷ್ಟಿಯಿಂದ ಈ ಭಂಗಿ ಸುರಕ್ಷಿತವಲ್ಲ. ನಿಮ್ಮತಲೆ ಸಂಪೂರ್ಣವಾಗಿ ಕೆಳಮುಖದಲ್ಲಿ ಇರುವುದರಿಂದ ಕುತ್ತಿಗೆಯಲ್ಲಿ ಸಮಸ್ಯೆಯಾಗುತ್ತದೆ. ಬೆನ್ನುಮೂಳೆಗೂ ಹಾನಿಯಾಗುತ್ತದೆ.

Leave a Reply

Your email address will not be published. Required fields are marked *

You May Also Like

ಗದಗನಲ್ಲಿ ಎಸಿಬಿ ದಾಳಿ ಬಿಜೆಪಿ ಯುವ ಮುಖಂಡ ಬಂಧನ

ಗದಗ: ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಹುದ್ದೆ ಕೊಡೆಸುತ್ತೇನೆಂದು ಮಹಿಳೆಯೊಬ್ಬರಿಂದ ಹಣ…

ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಕೇಂದ್ರ ಸರ್ಕಾರದ ಅನುಮತಿ : ಸಚಿವ ಎಸ್.ಸುರೇಶ್ ಕುಮಾರ್

ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಪ್ಲಾಸ್ಮಾಥೆರಪಿ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ಕೇಂದ್ರ…

ಆಶ್ರಯ ನಿವಾಸಿಗಳು ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದ ನಡುವೆ ಪರಸ್ಫರ ವಾಗ್ವಾದ

ಉತ್ತರಪ್ರಭ ಸುದ್ದಿ ಲಕ್ಷ್ಮೇಶ್ವರ: ಪಟ್ಟಣದ ಆಶ್ರಯ ಪ್ಲಾಟ್‌ವೊಂದರಲ್ಲಿ ಕಚ್ಚಾ ರಸ್ತೆ, ಚರಂಡಿ ನಿರ್ಮಾಣದ ಸಂಬಂಧ ಮಂಗಳವಾರ…