ಗದಗ : ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ವತಿಯಿಂದ ಗದಗ, ಮುಂಡರಗಿ ಹಾಗು ಗಜೇಂದ್ರಗಡ ಪಟ್ಟಣದಲ್ಲಿ ನಡೆಯುತ್ತಿರುವ ಸಿ.ಬಿ.ಎಸ್.ಸಿ. ಮೂರು ಶಾಲೆಗಳಲ್ಲಿ ಈ ಬಾರಿಯೂ ವಾಷಿ೯ಕ ಪರೀಕ್ಷಾ ಫಲಿತಾಂಶ ಅತ್ಯುತ್ತಮ ಬಂದಿವೆ.
ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾ ಪೀಠದ ಗುರುಬಸವ ಸಿಬಿಎಸ್ ಸಿ,ಶಾಲೆ ಗದಗ ಹಾಗು ಮುಂಡರಗಿ ಮತ್ತು ಗಜೇಂದ್ರಗಡದ ಜಗದ್ಗುರು ತೋಂಟದಾರ್ಯ ಸಿ.ಬಿ.ಎಸ್.ಇ. ಶಾಲೆಗಳು ೨೦೨೧-೨೨ನೇ ಸಾಲಿನ ಸಿ.ಬಿ.ಎಸ್.ಇ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದಿವೆ. ಈ ಮೂರು ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಗಮನಾರ್ಹ ಸಾಧನೆಯೊಂದಿಗೆ ಶೈಕ್ಷಣಿಕ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿ ಗಮನ ಸೆಳೆದಿವೆ.


ಈಗ ಫಲಿತಾಂಶ ಪ್ರಕಟಗೊಂಡಿದ್ದು, ಗದುಗಿನ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು ೬೯ ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶಾಲೆಯ,ಸಂಸ್ಥೆಯ ಕೀತಿ೯ ಹೆಚ್ಚಿಸಿದ್ದಾರೆ. ಈ ವರ್ಷವೂ ಇಲ್ಲಿ ಶೇಕಡ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡಿದ್ದು ವಿಶೇಷವಾಗಿದೆ. ಇಲ್ಲಿನ ವಿದ್ಯಾರ್ಥಿಗಳಾದ ಕುಮಾರ ಚಿನ್ಮಯಸ್ವಾಮಿ ಆರ್ ಹಿರೇಮಠ್ (ಶೇ ೯೧.೪)ಪ್ರಥಮ ಸ್ಥಾನ, ಕುಮಾರ ಸುಜಲ್ ಆರ್ ಖಟವಟೆ (ಶೇ ೯೦.೦೦) ದ್ವಿತೀಯ ಸ್ಥಾನ, ಕುಮಾರಿ ಸಹನಾ ಡಿ ಯಾದವ (ಶೇ ೮೭.೦೨) ಕುಮಾರಿ ಸುಪ್ರಿತಾ ಆರ್ ಪಾನಗಂಟಿ(ಶೇ ೮೭.೦೨) ತೃತೀಯ ಸ್ಥಾನ ಗಳಿಸಿದ್ದಾರೆ. ಜೊತೆಗೆ ದಿಯಾ ಬಾಕಳೆ(ಶೇ ೮೬.೮), ಶಾಹಿನ್ ನದಾಫ್(ಶೇ ೮೬.೪), ರಾಹುಲ್ ಹೊಸಮನಿ(ಶೇ ೮೫.೮), ನಿಖೀಲ್ ಮಾನ್ವಿ(೮೫.೪), ಅಮೋಘ ವಾಲಿ (ಶೇ ೮೪.೬), ಪಲ್ಲವಿ ಧರ್ಮಾಯತ್ (ಶೇ ೮೪.೬) , ಪ್ರೀತಿ ಗೊರೋಜಿ (ಶೇ ೮೪.೪) ಈ ವಿದ್ಯಾರ್ಥಿಗಳು ಪ್ರಥಮ ಸ್ಥಾನದ ಜೊತೆಗೆ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಗದುಗಿನ ಸಿಬಿಎಸ್ ಸಿ ಶಾಲೆಯಲ್ಲಿ ವಾರ್ಷಿಕ ಪರೀಕ್ಷೆಗೆ ಹಾಜರಾದ ಒಟ್ಟು ೬೯ ವಿದ್ಯಾರ್ಥಿಗಳಲ್ಲಿ ೨೬ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೪೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ , ೦೧ ವಿದ್ಯಾರ್ಥಿ ದ್ವಿತೀಯ ಶ್ರೇಣಿಯೊಂದಿಗೆ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳಿಗೆ ಹಾಗು ಈ ರೀತಿಯ ಉತ್ತಮ ಫಲಿತಾಂಶ ತಂದುಕೊಡುವಲ್ಲಿ ಗುಣಮಟ್ಟದ ಪಾಠಪ್ರವಚನ ಗೈದು ಶ್ರಮಿಸಿದ ಶಿಕ್ಷಕ ಸಿಬ್ಬಂದಿಗಳಿಗೆಲ್ಲ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಪಟ್ಟಣಶೆಟ್ಟಿ, ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಾಲೆಯ ಶೈಕ್ಷಣಿಕ ಸಲಹಾ ಆಡಳಿತಾಧಿಕಾರಿಗಳಾದ ಶ್ರೀ ಮಂಜುನಾಥ್ ಕಂಡಕಿ, ಪ್ರಾಚಾರ್ಯರಾದ ಶ್ರೀಮತಿ ಜ್ಯೋತಿ ನಾಯಕ್, ಉಪ ಪ್ರಾಚಾರ್ಯರಾದ ಶ್ರೀಮತಿ ಶುಭಾಂಗಿನಿ ಹಿರೇಮಠ, ಶಾಲೆಯ ಸರ್ವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಂಕ್ರಾಂತಿಯ ಪುಣ್ಯಸ್ನಾನ : ಇಬ್ಬರು ಯುವಕರು ನದಿ ಪಾಲು.

ರಾಯಚೂರು:ಮಕರ ಸಂಕ್ರಾಂತಿಯ ಪುಣ್ಯಸ್ನಾನ ಮಾಡುವುದಕ್ಕಾಗಿ ತೆರಳಿದ ರಾಯಚೂರಿನ ಇಬ್ಬರು ಯುವಕರು ಕೃಷ್ಣಾ ನದಿಯ ಪಾಲಾಗಿದ್ದಾರೆ.ಸಂಕ್ರಾಂತಿ ಪೀಡೆ…

11 ಎಕರೆ ಹೊಲದಾನ್ ಗೋವಿನ ಜೋಳ ಬೆಂಕಿಗೆ ಆಹುತಿ!

ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳ ಸುಟ್ಟು ಭಸ್ಮಗೊಂಡ ಘಟನೆ ಗದಗ ಜಿಲ್ಲೆಯ ನಾಗಾವಿ ತಾಂಡಾದಲ್ಲಿ ನಡೆದಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ನಾಶವಾಗಿದೆ. ಲಕ್ಷ್ಮಣ್ ಪವಾರ್ ಎಂಬುವರಿಗೆ ಸೇರಿದ 11 ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಂದಾಜು 2.5 ಲಕ್ಷ ರೂ. ಮೌಲ್ಯದ ಬೆಳೆ ನಾಶವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದಿಸಲು ಪ್ರಯತ್ನಿಸಿದರು.

ರಾಜ್ಯದಲ್ಲಿಂದು 1272 ಕೊರೊನಾ ಪಾಸಿಟಿವ್! : ಒಟ್ಟು ಸೋಂಕಿತರ ಸಂಖ್ಯೆ 16514ಕ್ಕೆ ಏರಿಕೆ!

ರಾಜ್ಯದಲ್ಲಿಂದು 1272 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 16514 ಕ್ಕೆ ಏರಿಕೆಯಾದಂತಾಗಿದೆ.

ಶಾರ್ಟ್ ಸರ್ಕ್ಯೂಟ್: ಭಾರತ್ ಗ್ಯಾಸ್ ವಿತರಣಾ ಕಚೇರಿಯಲ್ಲಿ ಬೆಂಕಿ!

ಶಾರ್ಟ್ ಸರ್ಕ್ಯೂಟ್ ನಿಂದ ಗ್ಯಾಸ್ ಕಚೇರಿಗೆ ಬೆಂಕಿ ಬಿದ್ದ ಘಟನೆ ಗದಗ ನಗರದಲ್ಲಿ ನಡೆದಿದೆ. ಇಲ್ಲಿನ ಭಾರತ್ ಗ್ಯಾಸ್ ಆಫೀಸಿಗೆ ಬೆಂಕಿ ಬಿದ್ದಿದ್ದು,ಯಾವುದೇ ಪ್ರಾಣ ಹಾನಿ ಸಂಭವಿಸದೇ ಭಾರಿ ಅನಾಹುತ ತಪ್ಪಿದಂತಾಗಿದೆ.