ಆಲಮಟ್ಟಿ : ಹೊಸ ಭರವಸೆಯ ಆಶಾ ಕಿರಣದೊಂದಿಗೆ ನೂತನವಾಗಿ ತೆಲೆಯತ್ತಿದ್ದ ರಾಜ್ಯದ 52 ನವ ತಾಲೂಕುಗಳು ಆಸ್ತಿತ್ವಕ್ಕೆ ಬಂದು ನಾಲ್ಕು ವರ್ಷಗಳೇ ಗತಿಸಿವೆ. ಹೆಸರಿಗಷ್ಟೆ ಅವುಗಳಿಗೆ ಹೊಸ ತಾಲೂಕುಗಳು ಎಂಬ ಅಧಿಕೃತ ಹಣೆಪಟ್ಟಿಯ ಮುದ್ರೆ ಬಿದ್ದಿದೆ ಹೊರತು ಯಾವುದೇ ರೀತಿಯ ಅಭಿವೃದ್ಧಿ ಪರ್ವಗಳು ಸಾಗಿದ್ದು ಕಾಣ ಸಿಗುತ್ತಿಲ್ಲ. ಭಾಗಶಃ ಇಲ್ಲಿ “ಇಲ್ಲ”ಗಳ ಸರಮಾಲೆಯಲ್ಲಿ ದಿನಗಳು ಸಾಗುತ್ತಲ್ಲಿವೆ ! ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ಮನೋಬಲದ ಪ್ರಗತಿಗೆ ಅವಶ್ಯಕವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳು ಇನ್ನೂವರೆಗು ಪ್ರಾರಂಭವಾಗದೇ ಇರುವುದು ಶೈಕ್ಷಣಿಕ ತಳಮಳಕ್ಕೆ ಕಾರಣವಾಗುತ್ತಲ್ಲಿದೆ !


ಅಂದಹಾಗೆ ಬಲು ಹುರುಪು,ಹುಮ್ಮಸ್ಸಿನಿಂದ ಅಂದು ನೂತನವಾಗಿ ರಚನೆಯಾಗಿರು ರಾಜ್ಯದ ಹೊಸ ತಾಲೂಕುಗಳು ಇಂದು ನಾಮಕಾ ವಾಸ್ತೆ ಎನ್ನುವಂತೆ ಜೋತಾಡುತ್ತಿವೆ. ರಚನೆಗೆ ತೋರಿದ ಆರಂಭ ಶೂರದ ಆಸಕ್ತಿ ಬೆಳವಣಿಗೆ ರಂಗದಲ್ಲಿ ಮಾಯವಾಗಿವೆ. ಭರವಸೆಗಳೆಲ್ಲ ಗಾಳಿ ಗೋಪುರವಾಗಿವೆ. ಪೋಳ್ಳು ಗೋಳ್ಳು ನುಡಿಮುತ್ತುಗಳೇ ಆಗಾಗ ಶ್ರವಣಗಳಿಗೆ ತಾಗಿ ಹೋಗುತ್ತಲ್ಲಿವೆ. ಗಟ್ಟಿಮುಟ್ಟಾದ ದೃಢ ಭರವಸೆಯ ವರಸೆಯಲ್ಲಿ ನವ ತಾಲೂಕುಗಳು ಈಗ ಕಣ್ತೆರೆದು ಕುಳಿತಿವೆ. ಆದರೆ ಬರೀ ಧೂಳಿನ ಅಭಿಷೇಕದಲ್ಲೇ ನುಲುಗಿ ಅಭಿವೃದ್ಧಿ ಇಲ್ಲದ ಮುಸುಕಿನಲ್ಲಿ ನರಳಿ ಶಪಿಸುತ್ತಿವೆ !


ಬಿಇಓ ಕಚೇರಿ ಕೂಗು : ರಾಜ್ಯದಲ್ಲಿನ 52 ನೂತನ ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯಾ೯ಲಯ ತೆರೆಯುವುದು ಇಂದಿನ ಅತ್ಯಗತ್ಯ ಎಂಬ ಕೂಗು ಕೇಳಿಬರುತ್ತಲ್ಲಿದೆ ! ಬಿಇಒ ಕಚೇರಿಗಳನ್ನು ಕೂಡಲೇ ಪ್ರಾರಂಭಿಸಿ ಅಗತ್ಯ ಸಿಬ್ಬಂದಿ ಪೂರೈಸಲು ಸರಕಾರ ಮುಂದಾಗಬೇಕು ಎಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಒತ್ತಾಯಿಸಿದ್ದಾರೆ.
ಈ ಕುರಿತು ಆಲಮಟ್ಟಿಯಲ್ಲಿ ಜಂಟಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು,
ರಾಜ್ಯಾದ್ಯಂತ ನೂತನ ತಾಲೂಕುಗಳು ಘೋಷಣೆಯಾಗಿ ಹಲವಾರು ವರ್ಷಗಳು ಗತಿಸಿವೆ. ತಾಲೂಕು ಆಡಳಿತಕ್ಕೆ ಒಳಪಟ್ಟ ನಾನಾ ಕಚೇರಿಗಳು ವಿವಿಧೆಡೆ ಕಾಯಾ೯ರಂಭ ಮಾಡಿವೆ. ಆದರೆ ಅತೀ ಅವಶ್ಯಕತೆವಾಗಿರುವ “ಕ್ಷೇತ್ರ ಶಿಕ್ಷಣಾಧಿಕಾರಿ”ಗಳ ಕಚೇರಿಗಳು ಇನ್ನೂವರೆಗು ಆರಂಭಗೊಳ್ಳದಿರುವುದು ತೀವ್ರ ನೋವಿನ ಸಂಗತಿಯಾಗಿದೆ ಎಂದು ವಿಷಾಧಿಸಿದ್ದಾರೆ.
ವಿದ್ಯಾರ್ಥಿಗಳು, ಪಾಲಕರು, ಪೋಷಕರು, ಜನ ಸಾಮಾನ್ಯರು ಶೈಕ್ಷಣಿಕ ದಾಖಲಾತಿಯ ಕೆಲಸ ಕಾರ್ಯಗಳಿಗಾಗಿ ದೂರದ ಹಳೆಯ ತಾಲೂಕು ಕೇಂದ್ರಗಳಿಗೆ ಓಡಾಡುತ್ತಲ್ಲಿದ್ದಾರೆ. ಕಾರಣ ಶೈಕ್ಷಣಿಕ, ಸಾಮಾಜಿಕ ಹಾಗು ಆಡಳಿತಾತ್ಮಕ ಹಿತದೃಷ್ಟಿಯಿಂದ ಮತ್ತು ಅಧಿಕಾರ ವಿಕೇಂದ್ರೀಕರಣ ಹಿನ್ನೆಲೆಯಲ್ಲಿ ರಚನೆಯಾಗಿರುವ ನೂತನ 52 ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳನ್ನು ಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸುವಂತೆ ಹಾಗು ಅಗತ್ಯ ಪ್ರಮಾಣದ ಸಿಬ್ಬಂದಿಗಳನ್ನು ಮಂಜೂರಾತಿ ಮಾಡಲು ಸೂಕ್ತ ಅನುದಾನವನ್ನು ಬರುವ ಬಜೆಟ್ ಅಧಿವೇಶನದಲ್ಲಿ ಘೋಷಿಸುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಬರೆದಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಿ ಅವರುಗಳು ಸರಕಾರಕ್ಕೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಜಾನಪದ ಸಾಹಿತ್ಯ ವಿಶ್ವದಲ್ಲೇ ಶ್ರೇಷ್ಠ ಸಾಹಿತ್ಯ -ಡಾ.ಎಸ್ ಬಾಲಾಜಿ

ಗದಗ: ವಿಶ್ವವಿದ್ಯಾಲಯಗಳು ಜಾನಪದಕ್ಕೆ ಸಂಬಂಧಿಸಿದ ಕ್ಷೇತ್ರಕಾರ್ಯ ಹಾಗೂ ದಾಖಲೀಕರಣದ ಕಾರ್ಯಗಳನ್ನು ನಿಲ್ಲಿಸಿರುವುದು ವಿಷಾದನೀಯ ಎಂದು ರಾಜ್ಯಾಧ್ಯಕ್ಷ…

ಕೆರೆಗೆ ಮರುಜೀವ ನೀಡಿದ ಧರ್ಮಸ್ಥಳ ಯೋಜನೆ

ಪಟ್ಟಣದ ಕಲ್ಲೂರ ರಸ್ತೆಗೆ ಹೊಂದಿಕೊAಡ ಪಟ್ಟಣಶೆಟ್ಟಿ ಕೆರೆ ಈಗ ಅಭಿವೃದ್ದಿಗೊಂಡಿದ್ದು ಕಡಿಮೆ ವೆಚ್ಚದಲ್ಲಿ ಬೃಹತ್ ಕೆರೆ ನಿರ್ಮಿಸಿದ ಅಭಿವೃದ್ದಿ ಸಮಿತಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈತ ವಿರೋಧಿ ಕಾಯ್ದೆಗಳು ತಕ್ಷಣವೇ ರದ್ದು ಮಾಡಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಗುರುವಾರ ರೈಲ್ ರೋಕೋ ಚಳುವಳಿಯನ್ನು ಮಾಡುವ ಮೂಲಕ ರೈತರು ಪ್ರತಿಭಟನೆ ನಡೆಸಿದರು.

ಸರ್ಕಾರ ಗಂಭೀರ ನಿರ್ಧಾರ ತೆಗೆದುಕೊಳ್ಳದಿದ್ರೆ ಜನ ಆಸ್ಪತ್ರೆಗಳಲ್ಲಿ ಸಾವೀಗೀಡಾಗಬೇಕಾದೀತು : ಶಾಸಕ ಎಚ್.ಕೆ.ಪಾಟೀಲ್

ರಾಜ್ಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ನ ಅಭಾವಿದೆ. ಆಕ್ಸಿಜನ್ ಕುರಿತಂತೆ ಗಂಭೀರವಾದ, ದೃಢವಾದ ತಕ್ಷಣದ ಹೆಜ್ಜೆಗಳನ್ನಿಡದೇ ಹೋದರೆ ಜನ ಆಸ್ಪತ್ರೆಗಳಲ್ಲಿ ಬಾರೀ ಸಂಖ್ಯೆಯಲ್ಲಿ ಸಾವೀಗೀಡಾಗಬೇಕಾದ ಪ್ರಸಂಗ ಬಂದೀತು ಎಂದು ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸರ್ಕಾರವನ್ನು ಎಚ್ಚರಿಸಿದ್ದಾರೆ.