ಆಲಮಟ್ಟಿ : ಜೀವಸತ್ವವುಳ್ಳ ಪೋಷಕಾಂಶಗಳ ಆಹಾರ ಸೇವನೆಯಿಂದ ನಮ್ಮ ಶರೀರವನ್ನು ಸ್ವಸ್ಥವಾಗಿ,ಆರೋಗ್ಯಯುತವಾಗಿ ಕಾಪಾಡಿಕೊಳ್ಳಬಹುದು. ಇದುವೇ ಆರೋಗ್ಯ ರಕ್ಷಣೆ ಗುಟ್ಟಾಗಿದೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಅಭಿಪ್ರಾಯಿಸಿದರು.




ಇಲ್ಲಿನ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಪೋಷಣ ಅಭಿಯಾನ ಅಂಗವಾಗಿ ಶಾಲಾ ಮಕ್ಕಳಿಂದ ಹಮ್ಮಿಕೊಂಡಿದ್ದ ಪೋಷಣ ಮಹತ್ವ ಸಾರುವ ಚಿತ್ರ ರಚನಾ ವಿಶೇಷ ಅರಿವಿನ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜ್ಞಾನದ ಜೊತೆಗೆ ಆರೋಗ್ಯ ರಕ್ಷಣೆಯ ಹೊಣೆಗಾರಿಕೆ ಯುವಜನತೆ ಅರಿತುಕೊಳ್ಳಬೇಕೆಂದರು.
ಆರೋಗ್ಯದ ಸಂರಕ್ಷಣೆಗೆ ಪೋಷಣವೇ ಮದ್ದು. ಅಲ್ಲದೇ ಸುಭದ್ರ ಕವಚ ಕೂಡಾ. ಬೌದ್ಧಿಕ ಸ್ವತ್ತು ಉಳಿಸಿಕೊಳ್ಳಲು ಹಾಗು ಲವಲವಿಕೆಯ ಶಕ್ತಿ ವೃದ್ಧಿಗೆ ಸಾಕಷ್ಟು ಶೋಭಿತವೂ ಅಗಿದೆ. ಕಾರಣ ಶಾರೀರಿಕ, ಮಾನಸಿಕ ಆರೋಗ್ಯ ಬಲರ‍್ಧನೆಗೆ ಪೌಷ್ಟಿಕಾಂಶ ಆಹಾರ ಸೇವನೆ ಅಗತ್ಯ.ಅದರಲ್ಲೂ ಇಂದಿನ ಯುವಮಕ್ಕಳು ಭವಿಷ್ಯತ್ತಿನಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೊಪ್ಪು ತರಕಾರಿ, ಹಣ್ಣು ಹಂಪಲ,ಸಿರಿಧಾನ್ಯ ಕಾಳು ಕಡಿಗಳ ಸೇವನೆಗೆ ಮುಂದಾಗಬೇಕು. ಯಥ್ಚೇಚ್ಚವಾಗಿ ಸೇವಿಸಬೇಕು. ಸೇವಿಸುವ ಆಹಾರ ಶುಚಿತ್ವ ಹಾಗು ಪೋಷಕಾಂಶಗಳಿಂದ ಕೂಡಿರಬೇಕು. ಜೊತೆಗೆ ಸದೃಢ ಆರೋಗ್ಯ ಒಲಿಯಲು ದೈನಂದಿನ ಜೀವನ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು. ಯೋಗ,ಧ್ಯಾನ,ವಾಯುವಿಹಾರ ಶೈಲಿ ಅಳವಡಿಸಿಕೊಂಡು ಸಂಪತ್ತ ಭರಿತ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಪ್ರಾಚರ‍್ಯ ಪಿ.ಎ.ಹೇಮಗಿರಿಮಠ, ಬಾಲ್ಯಾವಸ್ಥೆಯಲ್ಲಿ ಅಪೌಷ್ಟಿಕತೆ ಕಾಡಿದಲ್ಲಿ ಮುಂದೆ ದುಷ್ಪರಿಣಾಮ ಬೀರುತ್ತದೆ. ನೈರ‍್ಗಿಕವಾಗಿ ದೊರೆಯುವ ಹಣ್ಣುಗಳನ್ನು ತಿನ್ನಿ. ರಕ್ತ ಹೀನತೆಯಿಂದ ಪಾರಾಗಿ. ಈಗ ಸತ್ವಯುತ ಆಹಾರ ಸೇವಿಸದಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾದೀತು. ರೆಡಿಮೇಡ್ ಫುಡ್ ಸೇವನೆಯಿಂದ ಆರೋಗ್ಯದ ಅಡ್ಡಪರಿಣಾಮದಲ್ಲಿ ನರಳಬೇಕಾದೀತು. ದುಶ್ಚಟಗಳಿಂದ ಬಲು ದೂರ ಇದ್ದಷ್ಟು ಒಳ್ಳೆಯದು. ಸ್ವಸ್ಥ ಸಮಾಜಕ್ಕೆ ಪೂರಕವಾಗಿ ಮಕ್ಕಳು,ಯುವಜನತೆ ನಡೆದುಕೊಳ್ಳಬೇಕು ಎಂದರು.
ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ, ಸಕಾ೯ರ ಪೋಷಣ ಮಾಸಾಚರಣೆ ಮೂಲಕ ಜಾಗೃತಿ ಮೂಡಿಸುತ್ತಿದೆ. ಕಲಿಕೆಗೂ ಪೋಷಣ ಪೂರಕ.ಇದು ಅಭಿಯಾನದ ಉದ್ದೇಶ. ಆರೋಗ್ಯ ಪೋಷಣೆಯೊಂದಿಗೆ ಉತ್ತಮ ಮಟ್ಟದ ಕಲಿಕೆ ಇಂದಿನ ಅಗತ್ಯ. ಪೋಷಣದ ಬಗ್ಗೆ ಮಕ್ಕಳು ಹಾಗು ಪೋಷಕರು ಅರಿವಿನಿಂದ ಕಾಳಜಿ ವಹಿಸಬೇಕು ಎಂದರು.
ವಿಜ್ಞಾನ, ಸಮಾಜ ವಿಜ್ಞಾನ,ಗಣಿತ, ಕನ್ನಡ ಪಠ್ಯದಲ್ಲಿನ ಭಾರತ ನಕ್ಷೆ,ಕನಾ೯ಟಕ ನಕ್ಷೆ,ಹೃದಯ,ನರಕೋಶ, ಇತ್ಯಾದಿ ಚಿತ್ತಾರ‍್ಷಕ ರಂಗೋಲಿ ಚಿತ್ತಾರದಲ್ಲಿ ಪೋಷಣಾಂಶ ಮಹತ್ವ ಸಾರುವ ವೈವಿಧ್ಯ ಚಿತ್ರಗಳನ್ನು ಮಕ್ಕಳು ರಚಿಸಿ ಗಮನ ಸೆಳೆದರು.
ಶಾಲೆಯ ಗುರು ಹಾಗು ಗುರುಮಾತೆಯರು ಮತ್ತು ಮಕ್ಕಳ ಸಮೂಹ ಚಿತ್ರಗಳ ವೈವಿಧ್ಯಮಯ ನೋಟ ಕಣ್ತುಂಬಿಸಿಕೊಂಡು ಸಂತಸ ಹಂಚಿಕೊಂಡರು.