ನಿಡಗುಂದಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಹಾಗೂ ಬಿಜೆಪಿ ಬಸವನಬಾಗೇವಾಡಿ ಮಂಡಲ ವತಿಯಿಂದ ಉಚಿತ ಆರೋಗ್ಯ ಶಿಬಿರ,ಉಚಿತ ಔಷಧ ವಿತರಣೆ ಹಾಗೂ ರಕ್ತದಾನ ಶಿಬಿರ ನಿಡಗುಂದಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಕುರಿತು ಬುಧವಾರ ಪತ್ರಕರ್ತರಿಗೆ ಮಾಹಿತಿ ನೀಡಿದ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸದಸ್ಯ, ಪಟ್ಟಣ ಪಂಚಾಯ್ತಿ ನಾಮನಿರ್ದೇಶನ ಸದಸ್ಯ ಡಾ ಸಂಗಮೇಶ ಗೂಗಿಹಾಳ, ಇದೇ 23 ಶುಕ್ರವಾರ, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಆರೋಗ್ಯ ಶಿಬಿರ ನಡೆಯಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಸೆ 17 ರಿಂದ ಅ 2 ರವರೆಗೆ ಬಿಜೆಪಿ ವತಿಯಿಂದ ಜಿಲ್ಲೆಯ ನಾನಾ ಕಡೆ ಸೇವಾ ಪಾಕ್ಷಿಕ ಅಂಗವಾಗಿ ವಿವಿಧ ಆರೋಗ್ಯ ಶಿಬಿರಗಳು ನಡೆಯುತ್ತಿವೆ. ಅದರ ಅಂಗವಾಗಿ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಆರೋಗ್ಯ ಶಿಬಿರದಲ್ಲಿ ಮಧುಮೇಹ ತಜ್ಞರು, ನೇತ್ರ ತಜ್ಞರು, ಮೆಡಿಸಿನ್ ತಜ್ಞರು, ಸರ್ಜನ್, ಶ್ವಾಸಕೋಶ ತಜ್ಞರು, ಮೂಲವ್ಯಾಧಿ ತಜ್ಞರು, ಉದರ ರೋಗ ಶಸ್ತ್ರಚಿಕಿತ್ಸಕರು, ಮೂಳೆರೋಗ ತಜ್ಞರು, ದಂತ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ವಿಜಯಪುರ, ಬಾಗಲಕೋಟೆ ತಜ್ಞರ ಜತೆಗೆ ನಿಡಗುಂದಿಯ ಎಲ್ಲಾ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ತಜ್ಞ ವೈದ್ಯರು ಬರೆದಿರುವ ಔಷಧಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದರು.

Leave a Reply

Your email address will not be published.

You May Also Like

ಬಿಜೆಪಿಯ ಉಷಾ ದಾಸರಗೆ ಅಧ್ಯಕ್ಷ ಗದ್ದುಗೆ ಪಕ್ಕಾ ! ಕಾಂಗ್ರೆಸ್ ಪಟ್ಟಕ್ಕೆರಲು ಕೊನೆಯ ಕಸರತ್ತು

ಉತ್ತರಪ್ರಭಗದಗ: ಗದಗ ಬೆಟಗೇರಿ ನಗರ ಸಭೆಯ 35 ವಾರ್ಡಗಳಲ್ಲಿ 18 ವಾರ್ಡಗಳಲ್ಲಿ ಬಿಜೆಪಿ, 15 ವಾರ್ಡಗಳಲ್ಲಿ…

ಪುಟಾಣಿಗಳ ಬಿಂದಾಸ್ ಸ್ಟೇಪ್ಸ್…ಬೊಂಬಾಟ್ ಪ್ರಫಾರ್ಮನ್ಸ್ ಗೆ ಜನ ಫಿದಾ…!

ವಿಶೇಷ ವರದಿ: ಗುಲಾಬಚಂದ ಆರ್. ಜಾಧವಆಲಮಟ್ಟಿ : ಪುಟ್ಟ ಪುಟ್ಟ ಪುಟಾಣಿ ಮಕ್ಕಳು ಫೂಲ್ ಜೋಶ್…

ಪ್ಯಾಕೇಜ್ ಹಾಗೂ ಅಲ್ಪಾವಧಿ ಟೆಂಡರ್ ಕ್ಕೆ ಭಾರೀ ವಿರೋಧ: ಟೆಂಡರ್ ನಿಯಮ ಗಾಳಿಗೆ ತೂರಿದ ಆರೋಪ- ಕೃಷ್ಣಾ ತೀರ ಗುತ್ತಿಗೆದಾರರ ಪ್ರತಿಭಟನೆ

ಉತ್ತರಪ್ರಭ ಸುದ್ದಿಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಹಲವಾರು ಕಾಮಗಾರಿಗಳನ್ನು ಏಕತ್ರಗೊಳಿಸಿ ಪ್ಯಾಕೇಜ್ ಟೆಂಡರ್…

ಖಾಸಗಿ ಶಾಲಾ ಶಿಕ್ಷಕ ಆತ್ಮಹತ್ಯಗೆ ಯತ್ನ

ತಾಲೂಕಿನ ಡಿ ಪೌಲ್ ಅಕ್ಯಾಡಮಿ ಶಾಲೆಯ ಶಿಕ್ಷಕನರ‍್ವ ಕೆಲಸದಿಂದ ವಜಾಗೊಳಿಸಿದ ಕಾರಣ ಮನನೊಂದು ಆತ್ಮ ಹತ್ಯೆಕ್ಕೆ ಯತ್ನಿಸಿದ ಘಟನೆ ನಡೆದಿದೆ.