ವರದಿ: ಗುಲಾಬಚಂದ ಜಾಧವ
ಆಲಮಟ್ಟಿ : ಇಲ್ಲಿನ ಎಸ್.ವ್ಹಿ. ವ್ಹಿ ಸಂಸ್ಥೆಯಡಿಯಲ್ಲಿನ ವಿವಿಧ ಶಾಲಾ,ಕಾಲೇಜುಗಳ ವಾಷಿ೯ಕ ಸ್ನೇಹ ಸಮ್ಮೇಳನ ವಿಜೃಂಭಣೆಯಿಂದ ಜರುಗಿತು. ರಾವಬಹದ್ದೂರ ಫ.ಗು.ಹಳಕಟ್ಟಿ ಪ್ರೌಢಶಾಲೆ, ಎಂ.ಎಚ್.ಎಂ.ಹೈಸ್ಕೂಲ್, ಪದವಿಪೂರ್ವ ಹಾಗೂ ಪದವಿ ಕಾಲೇಜು ಮತ್ತು ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಗಳ ವಾಷಿ೯ಕ ಸ್ನೇಹ ಸಮ್ಮೇಳನ ಒಂದೇ ವೇದಿಕೆಯಲ್ಲಿ ಆಯೋಜನೆಗೊಂಡಿದ್ದು ವಿಶೇಷವಾಗಿತ್ತು. ಪ್ರೊ.ಶಿವಾನಂದ ಪಟ್ಟಣಶೆಟ್ಟರ ಸಭಾ ವೇದಿಕೆಯಲ್ಲಿ ಮಕ್ಕಳ ಸಾಂಸ್ಕೃತಿಕ ಮನರಂಜನಾ ಲೋಕ ಅನಾವರಣಗೊಂಡಿತ್ತು.

ಆಲಮಟ್ಟಿಯ ಎಂ.ಎಚ್.ಎಂ.ಆಂಗ್ಲ ಪ್ರಾಥಮಿಕ ಶಾಲೆ ಮಕ್ಕಳು ವಾಷಿ೯ಕ ಸ್ನೇಹ ಸಮ್ಮೇಳನದಲ್ಲಿ ಪ್ರಚುರಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.


ಜನಪ್ರಿಯ ಹಾಡುಗಳ ಸಂಗೀತ ನಾದಕ್ಕೆ ಮಕ್ಕಳು ಜೋಷ್ ಭರಿತವಾಗಿ ಕುಣಿದು ಕುಪ್ಪಳಿಸಿದರು.ಜನಪದ ಸೊಗಡಿನ ಗೀತೆಗಳು ರಂಜಿಸಿದವು. ಹೈಸ್ಕೂಲ್, ಪ.ಪೂ,ಪದವಿ ಕಾಲೇಜುಗಳ ವಿದ್ಯಾರ್ಥಿಗಳು ನೃತ್ಯದ ಭಿನ್ನ ವಿಭಿನ್ನ ಮಜಲು ಲೋಕದಲ್ಲಿ ತೇಲಿ ಕುಣಿದಾಡಿದರೆ ಇತ್ತ ಎಂ.ಎಚ್.ಎಂ.ಆಂಗ್ಲ ಮಾದ್ಯಮದ ಪುಟಾಣಿ ಚಿಣ್ಣರು ತಾವು ಕೂಡಾ ಕಮ್ಮಿಯಿಲ್ಲ ಎಂಬಂತೆ ಹಾಡು ರಾಗಗಳ ಮಾದಕದಲ್ಲಿ ಮೊದಕವಾಗಿ ಕಂಗೊಳಿಸಿದರು. ಸಂಗೀತದ ಹೆಜ್ಜೆ ತಾಳಕ್ಕೆ ಸಖತ್ ಹೆಜ್ಜೆ ಹಾಕಿ ಬಿಂದಾಸ್ ನಲಿದರು. ಈ ಕಲರ್ಫೂಲ್ ನೋಟಕ್ಕೆ ಮಕ್ಕಳ ಪಾಲಕ,ಪೋಷಕರ ಮೊಗದಲ್ಲಿ ಸಂತಸ, ಖುಷಿಯ ಅಲೆ ಪರಿಮಳ ಬೀರಿತ್ತು. ನೃತ್ಯದ ಝಲಕ್ ಗಳು ಸಭಿಕರ ಗಮನ ಸೆಳೆದವು. ಮಂಜಪ್ಪ ಹಡೇ೯ಕರ ಪ್ರಾಥಮಿಕ ಆಂಗ್ಲ ಶಾಲೆಯ ಪುಟ್ಟ ಮಕ್ಕಳ ಡ್ಯಾನ್ಸ್ ಗಳಂತೂ ವೈವಿಧ್ಯಮಯವಾಗಿ ಮೂಡಿಬಂದವು.

ಮಹಾನ ನಾಯಕ, ದೇಶಭಕ್ತರ ವೇಷಭೂಷಣದಲ್ಲಿ ಪುಟಾಣಿಗಳು ಮಸ್ತ್ ಮಿಂಚಿಂಗದಲ್ಲಿ ಮಿನುಗಿದರು. ಅವರುಗಳು ಪ್ರಚುರಪಡಿಸಿದ ನೃತ್ಯದ ಹಾವಭಾವದ ವಿಶಿಷ್ಟ ಭಂಗಿಗಳು ಮೈಮನ ನವರೇಳಿಸಿದವು.ಸಂಗೀತ ಪ್ರಿಯ ಮನಸ್ಸುಗಳಿಗೆ ಅವು ಮುದ ನೀಡಿದವು.‌ ಸಾಂಸ್ಕೃತಿಕ ಸಮ್ಮಿಲನ ಭಾವ ಅರಿವಿಲ್ಲದಂತೆ ಹೃದಯ ಹೃದಯಗಳಲ್ಲಿ ಸಮಾಗಮವಾಗಿತ್ತು. ಈ ವರ್ಣರಂಜಿತ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಸೇರಿದಂತೆ ಹಲ ಗಣ್ಯರು ಕಣ್ತುಂಬಿಸಿಕೊಂಡರು.

ಚಿಕ್ಕ ಮಕ್ಕಳು,ವಿದ್ಯಾರ್ಥಿಗಳು,ಶಿಕ್ಷಕರು,ಗುರುಮಾತೆಯರು,ಕಾಲೇಜುಗಳ ಉಪನ್ಯಾಸ ಬಳಗದವರು ಕಾರ್ಯಕ್ರಮದ ಮಧ್ಯೆಯೇ ಶಿಕ್ಷಣ ತಜ್ಞ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಅವರೊಂದಿಗೆ ಭಾವಚಿತ್ರ ತಗೆಸಿಕೊಳ್ಳಲು ಅಗಾಗ ಮುಗಿಬಿದ್ದರು.ಅನೇಕರು ಸೆಲ್ಫಿ ಕ್ಲಿಕಿಸಿಕೊಂಡು ಖುಷಿಪಟ್ಟರು. ಪ್ರಸನ್ನ ಭಾವದಿಂದ ಸಂಸ್ಥೆ ಕಾರ್ಯದರ್ಶಿಗಳು ಎಲ್ಲ ಶಾಲಾ,ಕಾಲೇಜು ಮಕ್ಕಳು,ಗುರುಬಳಗದೊಂದಿಗೆ ಪೋಟೋ ಪ್ರೇಮಭಾವ ಬೀರಿ ಎಲ್ಲರಿಗೂ ಹರುಷಗೊಳಿಸಿದರು. ಸಮಾಧಾನ, ತಾಳ್ಮೆಯೊಂದಿಗೆ ಸಂತಸ ಅರಳಿಸಿದರು. ಇದರಿಂದ ಗುರುದೇವೋಭವರ,ಮಕ್ಕಳ ಮುಖದರ್ಪಣದಲ್ಲಿ ಸಂತೋಷದ ಸುಕ್ಷಣಗಳು ಇಮ್ಮಡಿವಾಗಿತ್ತು.ಉಲ್ಲಾಸದ ಅವಿಸ್ಮರಣೀಯ ದೃಶ್ಯ ನೋಟಕ್ಕೆ ವೇದಿಕೆ ಸಾಕ್ಷಿಯಾಗಿತ್ತು.


ಎಂ.ಎಚ್.ಎಂ.ಆಂಗ್ಲ ಪ್ರಾಥಮಿಕ ಶಾಲೆಯ ಚಿಣ್ಣರು ಮಹಾನ ನಾಯಕರ ವೇಷ ಭೂಷಣದಲ್ಲಿ ಆಕರ್ಷಣೀಯವಾಗಿ ಮಿಂಚಿದರು. ಸಮರ್ಥ ಪತ್ತಾರ (ಸಿದ್ದೇಶ್ವರ ಸ್ವಾಮೀಜಿ), ಮಂಜುನಾಥ ಪಟ್ಟಣಶೆಟ್ಟಿ ( ಬಸವಣ್ಣ), ರೀತ್ವಿಕ ಆನೆಮಾಡು(ಡಾಕ್ಟರ್),ರೀಶಿಕ ಆನೆಮಾಡು( ಶಿವ), ಶ್ರೇಯಸ್ಸ ಗುಳೇದಗುಡ್ಡ ( ತೋಂಟದ ಸಿದ್ದಲಿಂಗ ಶ್ರೀ), ಆರ್ಯನ್ ತುಪ್ಪದ(ಫ.ಗು.ಹಳಕಟ್ಟಿ), ತೋನಸಿಹಾಳ( ಅಕ್ಕಮಹಾದೇವಿ), ಆರಾಧ್ಯ ತುಪ್ಪದ(ಮದರ್ ಥೇರಿಸಾ), ಡಾ.ಅಂಬೇಡ್ಕರ್ ಮೊದಲಾದ ದೇಶಭಕ್ತರ ವೇಷ ಭೂಷಣದಲ್ಲಿ ಮಕ್ಕಳು ಮಸ್ತ್ ಕಂಗೊಳಿಸಿ ಗಮನ ಸೆಳೆದರು. ಶಾಲಾ,ಕಾಲೇಜು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಪ್ರದಶಿ೯ಸಿದ ನೃತ್ಯಗಳು ಜನಮನ ಸೂರೆಗೊಂಡವು.


ಆಯಾ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು,ಉಪನ್ಯಾಸರು,ಗುರುಮಾತೆಯರ ಮಾರ್ಗದರ್ಶನದಲ್ಲಿ ಸ್ನೇಹ ಸಮ್ಮೇಳನದ ಸಾಂಸ್ಕೃತಿಕ ಚಟುವಟಿಕೆಗಳು ಯಶಸ್ವಿಯಾಗಿ ನೆರವೇರಿದವು. ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಅವರ ಮಾರ್ಗದರ್ಶನದಲ್ಲಿ ಶಾಲೆಯ ಮುಖ್ಯ ಗುರುಮಾತೆ ತನುಜಾ ಪೂಜಾರಿ ತಮ್ಮ ಗುರುಮಾತೆಯರ ಬಳಗದೊಂದಿಗೆ ತಯಾರಿ ನಡೆಸಿದರು. ಕವಿತಾ ಮರಡಿ, ಸರೋಜಾ ಕಬ್ಬೂರ,ಕಾಂಚನಾ ಕುಂದರಗಿ,ಶಾಹೀನ ಬಾಗಲಕೋಟ,ಶಂಕ್ರಮ್ಮ ಗುಳೇದಗುಡ್ಡ,ಮಂಜುಳಾ ಸಂಗಾಪೂರ ಗುರುಮಾತೆಯರು ಸಾಂಘಿಕ ಪ್ರಯತ್ನದ ಫಲವಾಗಿ ಮಕ್ಕಳಿಂದ ಆಕರ್ಷಕವಾಗಿ ಸಾಂಸ್ಕೃತಿಕ ಕಾರ್ಯಕ್ರಮದ ಚಟುವಟಿಕೆ ಝಲಕ್ ಮೂಡಿಬಂದವು.

Leave a Reply

Your email address will not be published. Required fields are marked *

You May Also Like

ಮನುಕುಲದ ಸೂರ್ಯ ಲಿಂ.ತೋಂಟದ ಸಿದ್ದಲಿಂಗ ಶ್ರೀ

ಆಲಮಟ್ಟಿ : ಲಿಂ, ತೋಂಟದ ಡಾ.ಸಿದ್ದಲಿಂಗ ಶ್ರೀ ಕರುನಾಡು,ದೇಶ ಕಂಡ ಅಪರೂಪದ ಜೀವ ದೈವ. ನಿಭೀ೯ಡೆ…

ಸಮಾಜ ಸಂಘಟನೆಗೆ ಕೈ ಜೋಡಿಸಿ: ಬಸವರಾಜ

ಉತ್ತರಪ್ರಭ ಸುದ್ದಿಶಿರಹಟ್ಟಿ: ರಾಜ್ಯ ವೀರಶೈವ ಲಿಂಗಾಯಿತ ಪಂಚಮಸಾಲಿ ಸಂಘ ತಾಲೂಕು ಘಟಕ ಆಶ್ರಯದಲ್ಲಿ ತಾಲೂಕಿನ ಕಡಕೋಳ…

ಪ್ರತಿಭಾ ಕಾರಂಜಿಯಲ್ಲಿ ಮಿಂಚಿದ ಎಂ.ಎಚ್.ಎಂ. ಚಿಣ್ಣರು…!

ಉತ್ತರಪ್ರಭ ಸುದ್ದಿಆಲಮಟ್ಟಿ: ಆಲಮಟ್ಟಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯ ವಿವಿಧ ಸ್ಪಧೆ೯ಗಳಲ್ಲಿ ಸ್ಥಳೀಯ…

ಪದವಿವೊಂದೇ ಸಾಲದು ಎಲ್ಲ ಜ್ಞಾನವೂ ಬೇಕು-ಡಾ.ಸಿ.ಎಂ.ಜೋಶಿ

ಉತ್ತರಪ್ರಭ ಸುದ್ದಿನಿಡಗುಂದಿ: ಅಧ್ಯಯನ ಕೇವಲ ಪದವಿ ಸಂಪಾದನೆಗೆ ಮಾತ್ರ ಸೀಮಿತವಾಗದೇ ಅದು ಸಮಗ್ರ ಜ್ಞಾನ ಪಡೆಯುವಂತಾಗಬೇಕು.…