ಉತ್ತರಪ್ರಭ ಸುದ್ದಿ
ಗದಗ: ಮೆಣಿಸಗಿ ಗ್ರಾಮದಲ್ಲಿ ಹರಿಜನ ಗಿರಿಜನ ಅಭಿವೃದ್ಧಿ ವಿವಿಧ ಕಾಮಗಾರಿ ಚಾಲನೆ ನೀಡಿ ದಲಿತರ ಬದಲು ಹರಿಜನ ಎಂಬ ಅವಮಾನಕಾರಿ ಹೇಳಿಕೆ ನೀಡಿರುವ ಸಚಿವ ಸಿ ಸಿ ಪಾಟೀಲ್ ತಕ್ಷಣ ದಲಿತ ಜನತೆಯ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಾಲರಾಜ್ ಅರಬರ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿ ಸಿ ಪಾಟೀಲ್ ರು ಗದಗ ಜಿಲ್ಲೆಯ ಮೆಣಸಗಿ ಗ್ರಾಮದಲ್ಲಿ ಸುಮಾರು 22 ಕೋಟಿ ಕಾಮಗಾರಿಗೆ ಚಾಲನೆ ನೀಡಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಹರಿಜನ ಗಿರಿಜನ ಕಾಲೋನಿಗೆ ನಾನೇ 22ಕೋಟಿ ಅನುದಾನ ಬಿಡುಗಡೆ ಮಾಡಿದ್ದೇನೆ ಎಂದವರು ಹರಿಜನ ಪದ ಬಳಕೆ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲದೆ ಅಸ್ಪೃಶ್ಯತೆ ನಿಷೇಧ ಕಾಯ್ದೆ ಪ್ರಕಾರ ಹರಿ ಜನರನ್ನು “ದಲಿತ ಸಮುದಾಯದ” ಎಂದು ಕರೆಯಬಹುದಿತ್ತು ಆದರೆ ಹರಿಜನ, ಗಿರಿಜನ ಅಂದಿದ್ದು ದಲಿತ ಸಮುದಾಯಕ್ಕೆ ಕೀಳಾಗಿ ನೋಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಹಣ ಮತ್ತು ಸಾರ್ವಜನಿಕರ ಮಂದಿಯ ಹಣವನ್ನು ಸಂಗ್ರಹಿಸಿದ ಹಣದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಆದ್ರೆ ಸಚಿವರು ನಾನೇ 22 ಕೋಟಿ ರೂಗಳ ಬಿಡುಗಡೆ ಮಾಡಿದ್ದೇನೆ ಎಂಬುದು ಎಷ್ಟರಮಟ್ಟಿಗೆ ಸರಿ ಸರ್ಕಾರ ಹಾಗೂ ಸಾರ್ವಜನಿಕರ ಹಣವನ್ನು ಸ್ವಂತ ಪ್ರಚಾರಕ್ಕೆ ಬಳಿಸಿಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾಗರಾಜ್ ಗೋಕಾವಿ, ಮಾರುತಿ ಅಂಗಡಿ, ಅರುಣ್ ಹಿರೇಮಠ, ಪೂಜಾ ಬೇವೂರು, ಮಂಜುಳಾ ಕಲಕೇರಿ ಉಪಸ್ಥಿತರಿದ್ದರು.