ಚಿತ್ರ ವರದಿ: ಗುಲಾಬಚಂದ ಜಾಧವ
ಗದಗ : ಪ್ರೇರಕ ಶಕ್ತಿ, ತ್ರಿವಿಧ ದಾಸೋಹಿ,ಕರುಣಾ ಮೂತಿ೯ ಲಿಂಗೈಕ್ಯ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ ಅಮೃತ ಹಸ್ತ ಹಾಗು ಕೃಪಾಶೀರ್ವಾದ ದಿಂದ ಆರಂಭಗೊಂಡು ಯಶಸ್ವಿಯಾಗಿ ಈಗ 21 ವಸಂತ ಪೂರೈಸಿರುವ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘ ಬೆಳ್ಳಿ ಹಬ್ಬದತ್ತ ದಾಪುಗಾಲು ಇರಿಸುತ್ತ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶಿವಾನಂದ ಪಟ್ಟಣಶೆಟ್ಟರ ನುಡಿದರು.
ನಗರದ ಬಸವೇಶ್ವರ ಪ್ರಥಮ ದಜೆ೯ ಕಾಲೇಜಿನಲ್ಲಿ ಭಾನುವಾರ ನಡೆದ ಜ.ತೋ.ಶಿ.ಸಂಸ್ಥೆಗಳ ನೌಕರರ ಪತ್ತಿನ ಸಹಕಾರ ಸಂಘದ 21 ನೇ ವಾಷಿ೯ಕ ಸಭೆಯಲ್ಲಿ ಲಿಂ,ತೋಂಟದ ಸಿದ್ದಲಿಂಗ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಪೀಠಾಧಿಪತಿ ತೋಂಟದ ಡಾ.ಸಿದ್ದರಾಮ ಪೂಜ್ಯರ ಮಾರ್ಗದರ್ಶನದಲ್ಲಿ ಸಂಘ ಉನ್ನತಿ ಕಾಣುತ್ತಲ್ಲಿದೆ ಎಂದರು.
2021-22 ನೇ ಸಾಲಿನಲ್ಲಿ ಒಟ್ಟು ಸಂಘದ ಲಾಭಾಂಶ 50 ಲಕ್ಷ ಇದೆ. ಕಳೆದ ಸಲ 3 ಕೋಟಿ 85 ಲಕ್ಷ ರೂ,ಸಂಘದ ಸದಸ್ಯ ನೌಕರರಿಗೆ ಸಾಲ ನೀಡಲಾಗಿದ್ದು ಈ ಬಾರಿ ಅದನ್ನು 5 ಕೋಟಿಗೆ ಹೆಚ್ಚಿಸಲಾಗುವುದು. ಸದ್ಯ 1646 ಜನ ಸದಸ್ಯರನ್ನು ಹೊಂದಿರುವ ಈ ಸಹಕಾರಿ ಸಂಘ 422.78 ಲಕ್ಷ ಶೇರು ಬಂಡವಾಳ ಹೊಂದಿದೆ. 5.72 ಲಕ್ಷ ಠೇವು ಜಮಾವಾಗಿದ್ದು ಕಾಯ್ದಿಟ್ಟ ಎಲ್ಲ ನಿಧಿಗಳಿಂದ 103.36 ಲಕ್ಷ ಜಮಾ ಇದೆ. ಸಂಘ ಯಾವುದೇ ಲೋಪ ದೋಷಗಳಿಲ್ಲದೇ ಅಂದಿನಿಂದ ಇಂದಿನವರೆಗೂ ಪ್ರತಿ ಹಂತದಲ್ಲಿ ಪಾರದರ್ಶಕವಾಗಿ ಬೆಳವಣಿಗೆ ಹೊಂದುತ್ತಿದೆ. ಲೆಕ್ಕಪರಿಶೋಧಕರು “ಎ” ವಗೀ೯ಕರಣ ಕೊಟ್ಟಿದ್ದಾರೆ. ಎಲ್ಲರಿಗೂ ಸಂತಸದ ಅನುಭೂತಿ ತಮ್ಮ ಸಹಕಾರಿ ಸಂಘ ನೀಡುತ್ತಿದೆ ಎಂದು ಶಿವಾನಂದ ಪಟ್ಟಣಶೆಟ್ಟರ ಸಂಘದ ಏಳಿಗೆ ಹಾಗು ಪ್ರಗತಿಯ ದಾರಿ ಬಿಚ್ಚಿಟ್ಟರು.


ಸಹಕಾರ ಮನೋಭಾವದಿಂದ ಕ್ರಿಯಾತ್ಮಕ ಹಾಗು ರಚನಾತ್ಮಕವಾಗಿ ತಮ್ಮ ಸಹಕಾರಿ ಸಂಘ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಲಿಂ,ತೋಂಟದ ಸಿದ್ದಲಿಂಗ ಶ್ರೀಗಳವರು ಕಂಡ ಕನಸ್ಸಿನಂತೆ ಸರ್ವಧರ್ಮ,ಸಮಭವದ ಶಾಂತಿ ತೋಟದಂಥ ಸಮಾಜ ನಿಮಾ೯ಣದಲ್ಲಿ ಹೆಜ್ಜೆಯಿರಿಸುತ್ತಿದೆ. ನೌಕರರ ಹಿತ ಕಾಯುವ ಮೂಲಕ ನಿಯಮಾನುಸಾರವಾಗಿ ಸಂಘ ಸಾಗುತ್ತಿದೆ. ಕಳೆದ 21 ವರ್ಷಗಳಿಂದ ಸದಸ್ಯ ನೌಕರರ ಬೇಕು ಬೇಡಿಕೆಗಳಿಗೆ ಸ್ಪಂದಿಸುತ್ತಾ ಬಂದಿದ್ದು ವೇತನಾಧಾರಿತ ಸಾಲ,ಸೌಲಭ್ಯಗಳನ್ನು ನೀಡುತ್ತಾ ಸದಸ್ಯರ ನಂಬಿಕೆ ಹಾಗು ವಿಶ್ವಾಸಾರ್ಹತೆಗೆ ಪ್ರೀತಿ ಪಾತ್ರವಾಗಿದೆ ಎಂದರು.
ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿ ನೋಟ ದಾಖಲಿಸಿರುವ ಈ ಸಹಕಾರಿ ಸಂಘಕ್ಕೆ ನೌಕರರ ಸಹಕಾರ ದೊಡ್ಡದಿದೆ. ಸದಸ್ಯ,ಷೇರುದಾರರೇ ಮೂಲ ಜೀವಾಳವಾಗಿದ್ದಾರೆ. ಸಿಬ್ಬಂದಿಗಳ ಕಾಯಕ ನಿಷ್ಟೆಯಿಂದ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ನೌಕರರ ಸಹಕಾರ ಸಂಘವೆಂಬ ಹೆಗ್ಗಳಿಕೆ ಪಡೆದಿದೆ. ಸಂಘದ ಶ್ರೇಯೋಭಿವೃದ್ಧಿಗೆ ಎಲ್ಲ ಸಿಬ್ಬಂದಿ ಶ್ರಮ ಅತ್ಯಂತ ಮಹತ್ವದಾಗಿದೆ.ಮುಂದಿನ ದಿನಮಾನದಲ್ಲಿ ನೌಕರರ ಸಹಕಾರಿ ಪತ್ತಿನ ಸಂಘದ ಕ್ಷೇತ್ರದಲ್ಲಿ ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಭರವಸೆಯ ಆಶಾವಾದ ಪಟ್ಟಣಶೆಟ್ಟರ ವ್ಯಕ್ತಪಡಿಸಿದರು.
ಸಂಘದ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಅವರ ಆಥಿ೯ಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಯತ್ನಿಸುತ್ತಾ ಆಥಿ೯ಕ ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವುದು ಸಂಘದ ಪ್ರಗತಿ ಮುನ್ನೋಟ ಬಿಂಬಿಸುತ್ತಿದೆ ಎಂದರು.
ರಾಜ್ಯದ ಕಾರ್ಯವ್ಯಾಪ್ತಿ ಹೊಂದಿರುವ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶಿಕ್ಷಣ ಸಂಸ್ಥೆಗಳು ಹಾಗು ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರ ,ಆಲಮಟ್ಟಿ ಎಸ್.ವಿ.ವಿ. ಅಸೋಸಿಯೇಷನ್ ಹಾಗು ಜೆ.ಟಿ.ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಶಿಕ್ಷಣ ಸಂಸ್ಥೆಗಳು ಹಾಗು ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ,ಹಂಗಾಮಿ, ತಾತ್ಕಾಲಿಕ ನೌಕರರು ಸಂಘದ ಸದಸ್ಯರಾಗಿದ್ದಾರೆ. ವೇತನಾಧಾರಿತ ತುತು೯ಸಾಲ ಸೌಲಭ್ಯ ನೀಡುವುದು ತಮ್ಮ ಸಂಘದ ವಿಶೇಷ. ಅಲ್ಪಾವಧಿ, ಮಧ್ಯಮಾವಧಿ, ದೀಘಾ೯ವಧಿ ಸಾಲ ನೀಡಲಾಗುತ್ತಿದ್ದು ಸದಸ್ಯರು ಸಕಾರಾತ್ಮಕ ಸಹಕಾರ ನೀಡಿರುವದರಿಂದ ಹಾಗು ದುಡಿಯುವ ಬಂಡವಾಳವೂ ವೃದ್ಧಿಯಾಗುತ್ತಿದ್ದು ಸಂಘದ ಪ್ರಗತಿಯ ಮುನ್ನೋಟಕ್ಕೆ ಸಾಕ್ಷಿಯಾಗಿದೆ. ಸ್ವಸಾಮರ್ಥ್ಯದ ಜೊತೆಗೆ ಸ್ವಂತ ಬಂಡವಾಳ ಕ್ರೋಡೀಕರಿಸಿ ವಹಿವಾಟು ನಡೆಸಿರುವುದು ಸಂಘದ ಪ್ರಗತಿ ದ್ಯೋತಕವಾಗಿದೆ ಎಂದರು.
ಅನ್ನಪೂರ್ಣ ಬೇವಿನಮರದ, ಸಹಕಾರ ಸಿದ್ಧಾಂತದ ಮೇಲೆ ಅತ್ಯುತ್ತಮ ಸೇವೆ ನೀಡುತ್ತಿರುವ ಈ ಸಂಘ ನೌಕರರ ಪಾಲಿನ ಅಮೃತಧಾರೆಯಾಗಿದೆ. ಇಲ್ಲಿ ಸಾಲ ಸೌಲಭ್ಯಕ್ಕೆ ವೇಗದ ಸ್ಪರ್ಶ ನೀಡಲಾಗಿದೆ. ನೂರಾರು ಕಾಗದ ಪತ್ರಗಳ ಗೊಜಿಲ್ಲ,ಓಡಾಟ, ತಾಪತ್ರಯಗಳಿಲ್ಲ. ಆಥಿ೯ಕ ಧನ ಸಹಾಯ ಪಡೆಯಲು ನೋ ಟೆನ್ಷನ್. ತುತು೯ ಸಮಯದಲ್ಲಿ ಕೇವಲ ಮಾಹಿತಿ ನೀಡಿದರೆ ಸಾಕು.ನೈಪ್ಟ್, ಆರ್.ಟಿ.ಜಿ.ಎಸ್ ಹಾಗು ಟಾನ್ಸ್ಫರ್ ಆದೇಶಗಳಮೂಲಕ ತತ್ ಕ್ಷಣವೇ ಸಿಬ್ಬಂದಿಗಳು ಹೊಂದಿರುವ ಬ್ಯಾಂಕ್ ಎಸ್.ಬಿ, ಸಿಡಿ ಖಾತೆಗಳಿಗೆ ವಗಾ೯ಯಿಸಿ ಕೊಡುವಂಥ ಸೌಲಭ್ಯ ಅತಿ ಸರಳವಾಗಿ ಇಲ್ಲಿ ಸೇವಾದಾಯಕವಾಗಿ ಕಲ್ಪಿಸಿರುವುದು ರಾಜ್ಯದಲ್ಲೇ ಬಹುಶಃ ಮೊದಲು.ಈ ಸೇವೆಯಂತೂ ತೃಪ್ತಿದಾಯಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಕಾ೯ರದ ಕೌಶಲ್ಯ ವಿಭಾಗದ ಎನ್.ಸಿ.ವಿ.ಟಿ. ನವದೆಹಲಿ ಕೊಡಮಾಡುವ ಕೌಶಲ್ಯಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ಮೋರಟಗಿ ಎಸ್.ಎಸ್.ಪಿ.ಐಟಿಐ ಕಾಲೇಜಿನ ಶ್ರೀಶೈಲ ಮಗಿ ಹಾಗು ಧಾರವಾಡ ಜಿಲ್ಲಾ ಪ್ರೌಢಶಾಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಇಂಗಳಹಳ್ಳಿ ಮೃತ್ಯುಂಜಯ ಪ್ರೌಢಶಾಲೆಯ ಮುಖ್ಯ ಗುರು ಕೆ.ಸಿ.ಪಟ್ಟಣಶೆಟ್ಟಿ ಅವರನ್ನು ಜೆಟಿವಿಪಿ ಗದಗ ಹಾಗು ಆಲಮಟ್ಟಿ ಎಸ್.ವಿ.ವಿ.ಸಂಸ್ಥೆ ಶಾಲಾ,ಕಾಲೇಜುಗಳ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಪಿ.ಎ.ಹೇಮಗಿರಿಮಠ, ಜಿ.ಎಸ್.ಸಾಲಿಮಠ, ರಮೇಶ ಕೊರ್ಲಹಳ್ಳಿ, ಜಿ.ಎಂ.ಕೋಟ್ಯಾಳ, ಶ್ರೀಮತಿ ಶುಭಾಂಗಿನಿ ಹಿರೇಮಠ ಅನಿಸಿಕೆ ವ್ಯಕ್ತಪಡಿಸಿದರು.
ಗಣ್ಯರಾದ ಎಂ.ಎಸ್. ಅಂಗಡಿ, ಶಿವರಾಚಯ್ಯ ಎಸ್.ಎಂ, ಗುರುರಾಜ ಕೋಟ್ಯಾಳ, ವಿಜಯಕುಮಾರ ಮಾಲಗಿತ್ತಿ, ಕೊಟ್ರಪ್ಪ ಮೆಣಸಿನಕಾಯಿ, ಮಂಜುನಾಥ್ ಉತ್ತರಕರ, ಪಿ.ಎ.ಹೇಮಗಿರಿಮಠ, ಎಚ್.ಎನ್.ಕೆಲೂರ, ಮಹೇಶ ಉಪ್ಪಿನ ಇತರರು ವೇದಿಕೆಯಲ್ಲಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೊಡ್ಡಬಸಪ್ಪ ಚಿತ್ರಗಾರ ವರದಿ ವಾಚನ ಮಾಡಿದರು. ಮೃತ್ಯುಂಜಯ ಹಾಗು ಅಣಪ್ಪ ಸುತಾರ ಪ್ರಾರ್ಥನೆ ಹೇಳಿದರು.
ಕಳಕಪ್ಪ ಕುರ್ತಕೊಟೆ ಸ್ವಾಗತಿಸಿದರು. ವೀರನಗೌಡ ಮಾರಿಗೌಡರ ನಿರೂಪಿಸಿದರು. ಟಿ.ಬಿ.ಕರದಾನಿ ವಂದಿಸಿದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೊರೊನಾ ಪಾಸಿಟಿವ್..!

ಗದಗ: ಜಿಲ್ಲೆಯಲ್ಲಿಂದು ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ…

ಲಾರಿ ಬೈಕ್ ಅಪಘಾತ ವ್ಯಕ್ತಿ ಸಾವು ಅಪಘಾತಕ್ಕೆ ಪೋಲಿಸ್ ಪೆದೆ ಕಾರಣ, ಗ್ರಾಮಸ್ಥರ ಆರೋಪ

ಮುಳಗುಂದ : ಲಕ್ಷ್ಮೇಶ್ವರ ಕಡೆಯಿಂದ ಮುಳಗುಂದಕ್ಕೆ ಬರುತ್ತಿದ್ದ ಮರಳು ತುಂಬಿದ್ದ ಲಾರಿ ಹಿಂದಕ್ಕೆ ಚಲಿಸಿದ ಪರಿಣಾಮ…

ದೇಶ ಸೇವೆಗೆ ಮುಂದಾದ ಯುವ ಪಡೆಗೆ ತರಬೇತಿ ಅತ್ಯಾವಶ್ಯ :ಜಿ ಎಸ್ ಪಾಟೀಲ

ಉತ್ತರ ಪ್ರಭ ಸುದ್ದಿರೋಣ : ತಾಲೂಕಿನ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಪುರ ಸಭೆ ಉಪಾಧ್ಯಕ್ಷ ಮಿಥುನ್ ಜಿ…

ಮುಂಡರಗಿ: ಬೈಕ್ ಅಪಘಾತ ಸವಾರ ಸ್ಥಳದಲ್ಲೆ ಸಾವು

ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನಲ್ಲಿ ನಡೆದಿದೆ. ಮುಂಡರಗಿ-ಬೂದಿಹಾಳ ರಸ್ತೆ ಮದ್ಯೆದಲ್ಲಿ ಅಪಘಾತ ಸಂಭವಿಸಿದ್ದು ರಾಮಚಂದ್ರ ಕಮ್ಮಾರ(36) ಸ್ಥಳದಲ್ಲಿಯೇ ಸಾವನ್ನಪ್ಪಿದ ಬೈಕ್ ಸವಾರ. ಮುಂಡರಗಿ ಪೊಲೀಸ್ ಟಾಣಾ ವ್ಯಾಪಿಯಲ್ಲಿ ಘಟನೆ ನಡೆದಿದೆ.