ನಿಂಗಪ್ಪ ಹಮ್ಮಿಗಿ

ಶಿರಹಟ್ಟಿ: ಪಟ್ಟಣದಲ್ಲಿ ಮಾಗಡಿ ಹಾಗೂ ಬೆಳ್ಳಟ್ಟಿ ರಸ್ತೆಗೆ ಅಳವಡಿಸಲಾದ ಹೈಮಾಸ್ಟ್ ದೀಪಗಳು ಸಾರ್ವಜನಿಕರಿಗೆ ಬೆಳಕಾಗದೆ ಅವರ ಸಂಚಾರಕ್ಕೆ ಸಂಚಕಾರ ತರುತ್ತಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಹೌದು ನಾಗರಿಕರಿಗೆ ಒದಗಿಸಬಹುದಾದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಹೈಮಾಸ್ಟ್‌ ದೀಪಗಳ ನಿರ್ವಹಣೆ ಇಲ್ಲದೆ  ಕತ್ತಲಲ್ಲಿ ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ. ಕೇವಲ ಕಂಬಗಳು ಮಾತ್ರ ಇದ್ದು, ದೀಪಗಳು ಮಾತ್ರ ಸಮರ್ಪಕವಾಗಿ ಬೆಳಗಿಲ್ಲ. ದೀಪಾವಳಿಗೊಮ್ಮೆ ಬೆಳಗುವ ದೀಪಗಳಂತೆ ಹೈಮಾಸ್ಟ್ ದೀಪಗಳು ಬೆಳಗುತ್ತಿದ್ದು, ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಲಕ್ಷಾಂತರ ರೂ. ಖರ್ಚು ಮಾಡಿ ಸ್ಥಾಪಿಸಿದ ಹೈಮಾಸ್ಟ್ ದೀಪಗಳನ್ನು ಬೆಳಕು ಚಲ್ಲದೇ ನಿರುಪಯುಕ್ತವಾಗಿ ನಿಂತಿವೆ. ರಾತ್ರಿ ಸಮಯದಲ್ಲಿ ಸಂಚರಿಸುವ ಸೈಕಲ್ ಸವಾರರು, ಪಾದಾಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ದುಸ್ಥಿತಿ ಎದುರಾಗಿದೆ. ಅಲ್ಲದೆ ಈಗಾಗಲೇ ಅದೆಷ್ಟೋ ಸಣ್ಣ ಅಪಘಾತಗಳು ಸಂಭವಿಸಿದರೂ ಅಧಿಕಾರಿಗಳು ಮಾತ್ರ ಸಾರ್ವಜನಿಕರ ಕ್ಯಾರೆ ಎನ್ನುತ್ತಿಲ್ಲ.

ಈಗಾಗಲೇ ಹೈಮಾಸ್ಟ್‌ ದೀಪಗಳನ್ನು ನಿರ್ವಹಣೆಗೆ ಅಂದಾಜುಪ್ರತಿ(estimate) ತಯಾರಿಸಲು ಇಂಜಿನಿಯರ್ ಅವರಿಗೆ ತಿಳಿಸಿದ್ದು, ಒಂದು ವಾರದಲ್ಲಿ ಸಮಸ್ಯೆ ನಿವಾರಿಸಲಾಗುತ್ತದೆ.

-ಮಲ್ಲೇಶ, ಪಪಂ ಮುಖ್ಯಾಧಿಕಾರಿ

ವಿದ್ಯುತ್‌ ದೀಪಗಳು ಬೆಳಗದ ಕಾರಣ ಅಕ್ರಮ ಅವ್ಯವಹಾರ, ಅನೈತಿಕ ಚಟುವಟಿಕೆಗಳಿಗೆ ಪಟ್ಟಣ ಪಂಚಾಯ್ತಿಯೇ ಅವಕಾಶ ಮಾಡಿಕೊಟ್ಟಂತಾಗುತ್ತಿದೆ ಎಂಬುದು ಸಾರ್ವಜನಿಕರ ದೂರು. ತಾಲ್ಲೂಕು ಕೇಂದ್ರವಾಗಿ ದಶಕಗಳೇ ಕಳೆದರೂ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಆಡಳಿತ ಮಾತ್ರ ಸಂಪೂರ್ಣವಾಗಿ ವಿಫಲವಾಗಿದೆ. ಈ ಕುರಿತು ಪಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಯಾವುದೆ ಮನ್ನಣೆ ದೊರೆಯದೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಸ್‌ ನಿಲ್ದಾಣದಿಂದ ಅಂಚೆ ಕಚೇರಿವರೆಗಿನ ಹೈ ಮಾಸ್ಟ್‌ ದೀಪಗಳಿದ್ದರೂ ಎರೆಡೂ ವರ್ಷಗಳಿಂದ ಉರಿದಿಲ್ಲ,  ಅಧಿಕಾರಿಗಳು ಮಾತ್ರ ಅನುದಾನ ಬರೋವರೆಗೂ ಇತ್ತ ಕಡೆ ಗಮನ ಹರಿಸೊದಿಲ್ಲ ಅಂತಾ ಹೇಳ್ತಾ ಇದಾರೆ. ಅಲ್ಲಿವರೆಗೂ ಇಲ್ಲಿ ಬಿದ್ದು ಯಾರ ಸತ್ರೆ ಅವರಿಗೇನು ಕೇಳೊರೇ ಇಲ್ಲ.

-ಶಶಿಧರ ದೇಗಾವಿ, ಸ್ಥಳೀಯ ನಿವಾಸಿ

ಕೂಡಲೇ ಸಂಬಂದಪಟ್ಟ ಅಧಿಕಾರಿಗಳು  ಸಮಸ್ಯೆಯನ್ನು ಪರಿಹರಿಸಿ ಸಾರವ್ಜನಿಕರ ಸಂಚಾರಕ್ಕೆ ಬೆಳಕು ಆಗುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ಸ್ಟೋನ್ ಕ್ರಷರ್ ನಿಂದಾಗುತ್ತಿರುವ ತೊಂದರೆ ತಪ್ಪಿಸಿ: ಲಕ್ಷ್ಮೇಶ್ವರದಲ್ಲಿ ರೈತರ ಮನವಿ

ಲಕ್ಷ್ಮೇಶ್ವರ: ತಾಲೂಕಿನ ಆದರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋಗಿಹಾಳ ಗ್ರಾಮದಲ್ಲಿ ನಡೆಯುತ್ತಿರುವ ವನಶ್ರೀ ಸ್ಟೋನ್ ಕ್ರಷರ್‌ನಿಂದ…

ಗದಗ ಜಿಲ್ಲೆಯಲ್ಲಿ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಿದರೆ ಪರವಾನಿಗೆ ರದ್ದಾಗುತ್ತಂತೆ!

ರಸಗೊಬ್ಬರ ದಾಸ್ತಾನನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ರಸಗೊಬ್ಬರ ಪರವಾನಿಗೆಯನ್ನು ರದ್ದುಗೊಳಿಸಿ, ಕಾನೂನು ಕ್ರಮ ಜರುಗಿಸಲಾಗುವುದು. ರಸಗೊಬ್ಬರ ಮಾರಾಟಗಾರರು ಮುದ್ರಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ರೈತ ಬಾಂಧವರು ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಈ ಕೆಳಗಿನ ದೂರವಾಣಿಗಳನ್ನು ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ತಿಳಿಸಿದ್ದಾರೆ.

ವಿವಿಧ ಸಂಘಟನೆಗಳಿಂದ 916ನೇ ಬಸವ ಜಯಂತಿ ಆಚರಣೆ

ಬಸವಣ್ಣನವರ ತತ್ವಗಳು ಸರ್ವಕಾಲಿ ಸತ್ಯಗಳಾಗಿವೆ ಉತ್ತರಪ್ರಭ ಸುದ್ದಿ ಗದಗ : ಶ್ರೀ ತೋಂಟದಾರ್ಯ ಮಠದ ಪೂಜ್ಯ…

ಕೋವಿಡ್ ಲಸಿಕೆ 2021ರಲ್ಲಿ ಲಭ್ಯ ದಿಢೀರ್ ನಿರೀಕ್ಷೆ ಬೇಡ: ಡಬ್ಲೂಎಚ್ಒ ತಜ್ಞ

ಕೋವಿಡ್ ಲಸಿಕೆ ತಯಾರಿಸುತ್ತಿರುವ ಎಲ್ಲ ಪ್ರಯೋಗಗಳು ಈಗ ಯಶಸ್ವಿ ಹಾದಿಯಲ್ಲಿವೆ. ಸುರಕ್ಷತೆ ಮತ್ತು ರೋಗ ನಿರೋಧಕತೆ ಸೃಷ್ಟಿಸುವ ದೃಷ್ಟಿಯಲ್ಲಿ ಈ ಪ್ರಯೋಗಗಳು ಫಲ ನೀಡುತ್ತಿವೆ.