ಉತ್ತರಪ್ರಭ ಸುದ್ದಿ

ಗದಗ: ಅವರೊಬ್ಬ ಅಪ್ಪಟ ಕನ್ನಡಿಗರು. ಕರುನಾಡು,ದೇಶ ಕಂಡ ಅಪರೂಪದ ಮಹಾನ ಕಾವಿಧಾರಿ ಸಂತರು. ಅಂಥ ಮಹಾನ ಚೇತನ ಸ್ಪೂರ್ತಿಯ ಜೀವ ನಾನೆಂದೂ ಇನ್ನುಮುಂದೆ ನೋಡಲಾರೆ ಎಂಬ ಕೊರಗು ಕಾಡುತಿದೆ. ಅವರೊಂದಿಗಿನ ಒಡನಾಟದ ಪ್ರತಿ ಕ್ಷಣವೂ ಕಣ್ಣಂಚಿನಲ್ಲಿ,ಹೃದಯದಲ್ಲಿ ತುಂಬಿ ಸುಳಿದಾಡುತಿವೆ. ನಿತ್ಯವೂ ನೆನೆಯುತ್ತಿರುವೆ. ಇಂಥ ವ್ಯಕ್ತಿಗಳು ಮತ್ತೆ ಹುಟ್ಟಿ ಬರಲು ಸಾಧ್ಯವೇ ? ಮೌಲ್ಯಧಾರಿತ ವಿಚಾರ,ನಡೆ,ನುಡಿ ಪರಿಶುದ್ಧ ವ್ಯಕ್ತಿತ್ವ ಇವೆಲ್ಲವೂ ದೂರ ಬಲು ದೂರ ! ನನ್ನ ಅಂತರಾತ್ಮದಲ್ಲಿ ನುಸುಳಿರುವ ಇಂಥ ನೂರಾರು ಚಿಂತನಾ ಪ್ರಶ್ನೆಗಳಿಗೆ ಉತ್ತರ ಕಾಣದಾಗಿದೆ. ನಿಶಬ್ದವಾಗಿವೆ…! ಹೀಗೆ ತಮ್ಮ ಮನದಾಳದಲ್ಲಿ ಲಿಂ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ ಬಗೆಗೆ ತುಂಬಿಕೊಂಡಿರುವ ಅಭಿಮಾನ ಪೂರ್ವಕವಾದ ಭಾವನಾತ್ಮಕ ಮಾತುಗಳನ್ನು ಹೊರಗೆ ಹಾಕಿದರು ಗದುಗಿನ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ,ನಿವೃತ್ತ ಪ್ರಾಚಾರ್ಯರಾದ ಶಿವಾನಂದ ಪಟ್ಟಣಶೆಟ್ಟರ.

ಸಂದರ್ಭ: ಗದುಗಿನ ಬಸವೇಶ್ವರ ಪ್ರಥಮ ದಜೆ೯ ಕಾಲೇಜಿನಲ್ಲಿ ಭಾನುವಾರ ನಡೆದ ಜ.ತೋ.ಶಿ.ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘದ 21 ನೇ ವಾಷಿ೯ಕ ಮಹಾಸಭೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಘಳಿಗೆ! ಕಾವಿಧಾರಿ ಸ್ವಾಮೀತ್ವ ಪದಕ್ಕೆ ಪವಿತ್ರ ಭಾವಧಾರಣೆಯ ಸಿಂಚನ ಗೈದಿರು ಲಿಂಗೈಕ್ಯ ತೋಂಟದ ಸಿದ್ದಲಿಂಗ ಶ್ರೀಗಳು ಹಿಮಾಲಯ ಸದೃಶ ವ್ಯಕ್ತಿತ್ವ ಹೊಂದಿದ್ದರು. ತಮ್ಮ ಜೀವಮಾನದ ಆಯುಷ್ಯನಲ್ಲಿ ಬಹಳ ಪಾರದರ್ಶಕ, ಸೌಮ್ಯ ಶ್ರೇಷ್ಠ ಬದುಕು ಸಾಗಿಸಿ ಕಳೆದು ಹೋದರು. ಈ ಭೂವಿಯ ಮೇಲೆ ಮರಣವೇ ಮಹಾನವಮಿ ಎಂದು ಬಸವಣ್ಣ ಹೇಳಿದ್ದರು.ಅಂಥ ದಿನವೇ ಲಿಂ,ತೋಂಟದ ಸಿದ್ದಲಿಂಗ ಪೂಜ್ಯರು ಬಸವಣ್ಣನವರ ಮರಣವೇ ಮಹಾನವಮಿಯ ವ್ಯಾಖ್ಯಾನದ ಮಾತುಗಳನ್ನಾಡಿ, ಅಂದು ಮರಣದ ಬಗ್ಗೆಯೇ ತಮ್ಮ ಭಾಷಣದಲ್ಲಿ ಹೆಚ್ಚು ಒತ್ತು ಕೊಟ್ಟು ನಿರರ್ಗಳವಾಗಿ ಮಾತನಾಡಿ ಭಕ್ತರಿಗೆ ತಡರಾತ್ರಿವರೆಗೂ ದರ್ಶನ ತೋರಿದರು, ಕೃಪಾಶೀವಾ೯ದ ದಯಪಾಲಿಸಿ ಈ ಭರತ ಖಂಡದ ಭೂಮಿ ಮೇಲೆ ತೀರಿಕೊಂಡು ಉಸಿರು ಚೆಲ್ಲಿರುವಂಥ ಸ್ವಾಮೀಜಿ ಅವರೊಬ್ಬರೇ! ಆ ವೇಳೆ ಎಲ್ಲಿಯೂ ಆಸ್ಪತ್ರೆಗೆ ತಡಕಾಡಲಿಲ್ಲ. ಮೆಲ್ಲಗೆ ಉಸಿರು ನಿಲ್ಲಿಸಿ ಮರೆಯಾಗಿದ್ದರು. ಅವರ ಸಮಾಧಿ ಇಲ್ಲಿಗ ಜೀವಂತವಾಗಿದೆ ಎಂದು ಭಾವಪರಶರಾಗಿ ಮನದಲ್ಲಿ ಹುದುಗಿ ಮನೆ ಮಾಡಿ ಹೆಪ್ಪುಗಟ್ಟಿರುವ ಭಾವನಾತ್ಮಕ ಮಾತುಗಳು ಭಾರ ಮನದಿಂದಲೇ ಶಿವಾನಂದ ಪಟ್ಟಣಶೆಟ್ಟರ ಹೇಳಿದರು.

ಪೂಜ್ಯರೊಂದಿಗಿನ ಬಹುಕಾಲದ ಅನನ್ಯತೆಯಿಂದ ಬೆರೆತ ತಮ್ಮ ಒಡನಾಟ ಪ್ರಾಂಜಲ್ಯ ಮನಸ್ಸಿನಿಂದ ಸ್ಮರಿಸಿಕೊಂಡರು. ಸಾಮಾನ್ಯರಲ್ಲೇ ಅತ್ಯಂತ ಸಾಮಾನ್ಯ ಇಂಥ ಸ್ವಾಮೀಜಿಯವರು ನಮಗೆಲ್ಲ ಸಿಗಲು ಸಾಧ್ಯವೇ ? ಎಂದು ಸದಾ ಕಲ್ಪಿಸಿಕೊಳ್ಳುತ್ತಿರುವೆ. ತಾವು ಕಂಡಂತೆ ಸಿದ್ದಲಿಂಗ ಶ್ರೀಗಳು ಬಹಳ ದೂರದೃಷ್ಟಿವುಳ್ಳವರು. ಸ್ವಾಮೀಜಿಯವರು ಸಮಾಜಕ್ಕೆ ಆದರ್ಶವಾಗಿರಬೇಕು. ಗರತಿಯರ ಹಾಗೆ ಇರಬೇಕು ಎಂಬುದಕ್ಕೆ ನಿರ್ದಶನವಾಗಿದ್ದಾರೆ ಎಂದರು. ಬಹು ವರ್ಷಗಳ ಹಿಂದೆ ತಾವು ಬುದ್ದಿ ಗದುಗಿನಲ್ಲಿ ಮಹಿಳಾ ಕಾಲೇಜುಗಳಿಲ್ಲ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇಲ್ಲೊಂದು ಮಹಿಳಾ ಕಾಲೇಜು ಸಂಸ್ಥೆಯಿಂದ ತೆರೆದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಪ್ರಸ್ತಾಪಿಸಿದಾಗ ಬೇಡವೇ ಬೇಡ ಎಂದು ಪೂಜ್ಯರು ಖಡಾ ತುಂಡವಾಗಿ ನಿರಾಕರಿಸಿದರು. ‌ಒಂದೂದಿನ ಲೇಡೀಸ್ ಹಾಸ್ಟೆಲ್ಗಳಿಗಾಗಲಿ, ಬಾಯ್ಸ್ ಹಾಸ್ಟೆಲ್ ಗಳಿಗೆ ಭೇಟಿ ನೀಡಲಿಲ್ಲ. ಅತ್ತ ಹೆಜ್ಜೆಯೂ ಹಾಕಲಿಲ್ಲ. ಹಣವನ್ನು ತೀರ್ಥದಂತೆ ಬಳಿಸಬೇಕು. ಹಣ ಸ್ಲೋ ಪಾಯಿಜನ್ ಇದ್ದ ಹಾಗೆ. ನನ್ನನ್ನು ಕೂಡಾ ಗುಮಾನಿನಿಂದ ನೋಡು ಎಂದಿದ್ದರು. ಕೀಸೆ,ಕಪಾಟುಗಳಿಗೆ ವ್ಯಾಮೋಹಸಲಿಲ್ಲ. ರೊಕ್ಕಾ ಮುಟ್ಟಲಿಲ್ಲ. ಎಫ್.ಡಿ.ಸಹ ನೋಡಲಿಲ್ಲ.

ಬರೀ ಪರಿಸರ ನೋಡಲು ಹಾಗು ಕಾರ್ಯಕ್ರಮಗಳಿಗೆ ತೆರಳತ್ತಿದ್ದರು. ಗಿಡ ಮರ ಹಚ್ಚಲು ಪ್ರೇರಿಪಿಸುತ್ತಿದ್ದರು. ಪಶು ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಲು ಹವಣಿಸುತ್ತಿದ್ದರು. ವಿರೋಧಿಸುತ್ತಿದ್ದರು. ಯಾವುದೇ ರೀತಿಯ ಅಪವಾದಗಳಿಗೆ ಅವಕಾಶ ಕಲ್ಪಿಸಲಿಲ್ಲ.‌ ಉಸುರಿಸಿದ ಜೀವನ್ನುದ್ದಕ್ಕೂ ಪಾಲಿಸಿದ ಆದರ್ಶತನದ ಶುಭ್ರತನದ ಗಟ್ಟಿ ಗುಣಗಳು ಭಕ್ತರ ಮನೆ,ಮನೆಗಳಲ್ಲಿ ಸ್ಮರಣೀಯವಾಗಿ ನೆಲೆಸಿವೆ. ಮಾಜಿ ಪ್ರಧಾನಿ ದೇವೇಗೌಡರು ಪೂಜ್ಯರ ಮೇಲೆ ಅಪಾರ ಪ್ರೀತಿ,ಅಭಿಮಾನವುಳ್ಳವರು. ಇಂಥ ಸ್ವಾಮೀಜಿಯವ ಸೇವಾಭಾವ ನಿಜಕ್ಕೂ ಸ್ಮರಣೀಯ. ತೋಂಟದ ಸಿದ್ದಲಿಂಗ ಶ್ರೀ ಅಂತರಾಷ್ಟ್ರೀಯ ಸಂತ ಎಂದು ಸ್ವತಃ ಅಂದು ದೇವೇಗೌಡರು ಬಣ್ಣಿಸಿ ಹೇಳಿದ್ದರು ಎಂದು ನೆನಪಿಸಿಕೊಂಡರು ಶಿವಾನಂದ ಪಟ್ಟಣಶೆಟ್ಟರ.

ಪರಿಸರ ಪ್ರೇಮಿ,ಪುಸ್ತಕ ಪ್ರಕಟಣೆ ಒಲವು,ಬಸವ ತತ್ವದ ಮಹಾದಂಡ ನಾಯಕರಾಗಿದ್ದ ಕಾಯಕಯೋಗಿ ಸಿದ್ದಲಿಂಗ ಶ್ರೀಗಳು ಕನ್ನಡದ ಬಗ್ಗೆ ಹೋರಾಟ, ಕಪ್ಪತಗುಡ್ಡ ಸಂರಕ್ಷಣೆ ಬಗ್ಗೆ ಕಾಳಜಿ, ಪ್ರೀತಿಪೂರ್ವಕವಾಗಿ ಗ್ರಾಮೀಣ ಮಕ್ಕಳಿಗೆ ವಿದ್ಯಾದಾನ,ಶ್ರೀಮಠದಲ್ಲಿ ಅನ್ನ ದಾಸೋಹ ಕೈಂಕರ್ಯ, ಮೌಢ್ಯ ಚಟುವಟಿಕೆ ಬಗ್ಗೆ ನೇರಾ ನೇರ ಮಾತಿನೊಂದಿಗೆ ಖಂಡಿಸಿ ವಿರೋಧಿಸುತ್ತಿದ್ದ ಆ ರೋಚಕ ಮೆಲುಕು ನೆನೆದರೆ ಮೈ ಜುಮ್ಮಎನಿಸುತ್ತದೆ ಎಂದರು.

ಶಿಕ್ಷಕರ ತ್ಯಾಗ,ಸೇವೆ ಮೇಲೆ ಮಕ್ಕಳ ಹಾಗು ಶಾಲೆಗಳ ಮತ್ತು ಸಮಾಜದ ಭವಿಷ್ಯ ನಿಂತಿದೆ. ಒಳ್ಳೆಯ ಭಾವನೆಯಿಂದ ಶಿಕ್ಷಕ ವೃತ್ತಿ ಕಾಯಕ ನಿರ್ವಹಿಸಿ. ಆದರ್ಶ ಶಿಕ್ಷಕ ಯೋಗ್ಯ, ಪ್ರತಿಭಾವಂತ ಮಕ್ಕಳನ್ನು ರೂಪಿಸಬಲ್ಲರು. ಅಂಥ ಮಹತ್ವಾಕಾಂಕ್ಷೆಯನ್ನು ಶಿಕ್ಷಕರು ಜೀವನದಲ್ಲಿ ಇರಿಸಿಕೊಳ್ಳಲು ಮನಸ್ಸು ಮಾಡಬೇಕು. ಸ್ಪಷ್ಟ ಗುರಿ, ಛಲ ಮಕ್ಕಳೊಂದಿಗೆ ಗುರು ಬಳಗವೂ ಹೊಂದಬೇಕು. ಘನತೆ, ಗೌರವ ಕಾಯ್ದುಕೊಂಡು ವೃತ್ತಿ ಶ್ರೇಷ್ಠತೆ ಮೆರೆಯಬೇಕು. ಮಕ್ಕಳ ಬಾಳಿಗೆ ಬೆಳಕು ಹಾಗು ಸಮಾಜಕ್ಕೆ ನವದಿಸೆ ತೋರಬೇಕು. ಪರಿಸರ ನಾಶದಿಂದ ಸಂಸ್ಕೃತಿ, ಬದುಕಿಗೆ ಧಕ್ಕೆ ಬರುತ್ತಿದೆ. ಶಾಲಾ ಅಂಗಳದಲ್ಲಿ ಹೆಚ್ಚೆಚ್ಚು ಸಸ್ಯಗಳನ್ನು ಬೆಳೆಸಬೇಕು. ಆ ಮೂಲಕ ತೋಂಟದ ಸಿದ್ದಲಿಂಗ ಶ್ರೀಗಳು ಕಂಡ “ಸಸ್ಯ ನಾಟಿ” ಕನಸು ಪೂರೈಸಬೇಕು ಎಂದು ಶಿವಾನಂದ ಪಟ್ಟಣಶೆಟ್ಟರ ಸಂಸ್ಥೆಯ ಗುರು ಸಮೂಹದಲ್ಲಿ ಭಿನ್ನಯಿಸಿಕೊಂಡರು.

ಈ ಸಂದರ್ಭದಲ್ಲಿ ಹಿರಿಯರಾದ ಎಂ.ಎಸ್.ಅಂಗಡಿ, ಪಿ.ಎ.ಹೇಮಗಿರಿಮಠ, ಜಿ.ಎಂ.ಕೋಟ್ಯಾಳ, ಎಚ್.ಎನ್.ಕೆಲೂರ,ಕೋಟ್ರೇಶ ಮೆಣಸಿನಕಾಯಿ, ಎಸ್.ಎಂ.ಶಿವರಾಚಯ್ಯ, ವಿಜಯಕುಮಾರ ಮಾಲಗಿತ್ತಿ, ಜಿ.ಎಸ್.ಸಾಲಿಮಠ, ಅನ್ನಪೂರ್ಣ ಬೇವಿನಮಟ್ಟಿ, ದೊಡ್ಡಬಸಪ್ಪ ಚಿತ್ರಗಾರ, ಮಹೇಶ ಉಪ್ಪಿನ, ಕಳಕಪ್ಪ ಕುರ್ತಕೋಟಿ, ಶ್ರೀಶೈಲ ಮಗಿ, ಕೆ.ಸಿ.ಪಟ್ಟಣಶೆಟ್ಟಿ, ವೀರನಗೌಡ ಮರಿಗೌಡರ, ಟಿ.ಬಿ.ಕರದಾನಿ, ಶುಭಾಂಗಿನಿ ಹಿರೇಮಠ, ರಮೇಶ ಕೊರ್ಲಹಳ್ಳಿ ಉಪಸ್ಥಿತರಿದ್ದರು. ವಿವಿಧ ಶಾಲಾ, ಕಾಲೇಜುಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ವಿಶೇಷ ಬರಹ : ಗುಲಾಬಚಂದ ಜಾಧವ

Leave a Reply

Your email address will not be published. Required fields are marked *

You May Also Like

ಗದಗ – ಬೇಟಗೆರಿ ನಗರಸಭೆಯಲ್ಲಿ ಯಾರಿಗೆ ಎಷ್ಟು ಮತದಾನದ ಪಟ್ಟಿ ಪ್ರಕಟ

ಉತ್ತರಪ್ರಭ ಗದಗ: ಇಂದು ಗದಗ-ಬೇಟಗೆರಿ ಮತ ಏಣಿಕೆಯಲ್ಲಿ ಮುಗಿದಿದ್ದು, ಯಾವ ಅಭ್ಯರ್ಥಿಗೆ ಎಷ್ಟು ಮತ ಎಂದು…

ನಗರಸಭೆ ಅಧ್ಯಕ್ಷರಾಗಿ ಉಷಾ ದಾಸರ ಹಾಗೂ ಉಪಾಧ್ಯಕ್ಷರಾಗಿ ಸುನಂದಾ ಬಾಕಳೆ ಆಯ್ಕೆ

ಉತ್ತರಪ್ರಭ ಗದಗ: ಇಂದು ಗದಗ-ಬೇಟಗೆರಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಬಿಜೆಪಿಯು ಈ…

ಮಾ.11 ರಿಂದ ದ್ವಾದಶ ಜ್ಯೋತಿರ್ಲಿಂಗ ದರ್ಶನ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಹಯೋಗದಲ್ಲಿ ಮಾ.11 ರಿಂದ 13ರ ವರೆಗೆ ಸಂಜೆ 4 ರಿಂದ ರಾತ್ರಿ 10ರ ವರೆಗೆ ನಗರದ ಮುನ್ಸಿಪಲ್ ಪದವಿ ಪೂರ್ವ ಕಾಲೇಜ ಮೈದಾನದಲ್ಲಿ ದಿನಗಳಲ್ಲಿ ವಿಶ್ವದಲ್ಲಿ ಅವತರಿಸಿದ ವಿಶ್ವೇಶ್ವರನ ದರ್ಶನ, ಸಹಸ್ರಲಿಂಗ ದರ್ಶನ ಮತ್ತು ದ್ವಾದಶ ಜ್ಯೋತಿರ್ಲಿಂಗ ದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಕುಮಾರಿ ಬಿ.ಕೆ.ಜಯಂತಿಅಕ್ಕ ಹೇಳಿದರು.

ಕರ್ನಾಟಕದಲ್ಲಿ ದೀಪಾವಳಿ ಆಚರಣೆಗೆ ಸರ್ಕಾರದ ಕೊವಿಡ್-19 ಮಾರ್ಗಸೂಚಿ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 3ನೇ ಅಲೆ ಮತ್ತು ರೂಪಾಂತರ ವೈರಸ್ ಭೀತಿ ನಡುವೆ…