ಉತ್ತರಪ್ರಭ ಸುದ್ದಿ

ಚಿಟಗುಪ್ಪ: ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಯಾವುದೇ ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಈ ಭಾಗದ ಜನಪ್ರೀಯ ನಾಯಕರೆಂದೇ ಜನಪ್ರೀಯತೆ ಪಡೆದ  ಶ್ರೀ ಸಿದ್ದು ಪಾಟೀಲರ ಸೇವಾ ಕಳಕಳಿಯ ಕಾರ್ಯ ಚಟುವಟಿಕೆಗಳು ಅನನ್ಯವಾಗಿವೆ. ಪ್ರಯುಕ್ತ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುವ ಮೂಲಕ ಸಿದ್ದು ಪಾಟೀಲರು ಪ್ರಸಿದ್ಧಿಯನ್ನು ಪಡೆದಿದ್ದಾರೆ.

ಯಾಕೇ ಈ ಮಾತು ಈಗೇಕೆ ಹೇಳಬೇಕಾಗಿತ್ತು ಎಂದರೆ ಹುಮಾನಾಬಾದ ವಿಧಾನಸಭಾ ಮತಕ್ಷೇತ್ರದ ತಾಳಮಡಗಿ ಗ್ರಾಮದ ಬಡ ರೈತ ಗೊಂಡ ಸಮಾಜದ ಸುಭಾಷ ತಂದೆ ಬೀರಪ್ಪ ಬಾಜೋಳಗಿ ಅವರ ಆಕಳು ಹೊಲದಲ್ಲಿ ಮೇಯುವಾಗ ಹಾವು ಕಡಿದು ಸ್ಥಳದಲ್ಲೇ ಸಾವನಪ್ಪಿತ್ತು. ಆಕಳು ಮನೆಗೆ ಆದಾಯ ತರುವ ಮೂಲವಾಗಿತ್ತು. ಕಾರಣ ಆಕಳು ಸಾವನಪ್ಪಿದ ಸುದ್ದಿ ತಿಳಿದು ಸಿದ್ದು ಪಾಟೀಲರು ರೈತನ ಮೆನೆಗೆ ಬೆಟ್ಟಿ ನೀಡಿ, ಆರ್ಥಿಕ ಸಹಾಯಧನ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಫೋನ್ ಮೂಲಕ ಮಾತನಾಡಿ ಸರ್ಕಾರದ ಸೌಲಭ್ಯ  ರೈತರಿಗೆ ಒದಗಿಸುವಂತೆ ಮನವಿ ಮಾಡಿಕೊಂಡರು. ರೈತರೊಂದಿಗೆ ನಾನು ಸದಾ ಇರುತ್ತೇನೆ, ನೀವೆಲ್ಲರೂ ಧೈರ್ಯವಾಗಿ ಇರಬೇಕೆಂದರು. 

ಈ ಸಂದರ್ಭದಲ್ಲಿ ಅನೇಕ ಗೊಂಡ ಸಮಾಜದ ಮುಖಂಡರು ಗ್ರಾಮ ಪಂಚಾಯತ ಸದ್ಯಸ್ಯರು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಅಖಂಡ ಕರ್ನಾಟಕ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಗಜೇಂದ್ರಗಡ ಹಾಗೂ ರೋಣ ತಾಲೂಕಾ ಗೊಲ್ಲ ಸಮಾಜ ಬಾಂಧವರು ಪಟ್ಟಣದ ತಹಶೀಲ್ದಾರ ಮೂಲಕ ಸೋಮವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹೆಚ್ಚಿನ ಬಸ್ ಓಡಾಟಕ್ಕೆ ಒತ್ತಾಯಿಸಿ ಮನವಿ

ಹುಬ್ಬಳ್ಳಿ ಹಾಗು ಗದಗ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ಸು ಓಡಿಸುವಂತೆ ಆಗ್ರಹಿಸಿ ಶನಿವಾರ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಶೇಖರ ನಾಯಕ ಅವರಿಗೆ ಮನವಿ ಸಲ್ಲಿಸಿದರು.

ಕೋಟೆ ನಾಡಿನಲ್ಲಿ ತುಂತುರು ಮಳೆ

ಗಜೇಂದ್ರಗಡ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಗಜೇಂದ್ರಗಡದಲ್ಲಿ ತುಂತುರು ಮಳೆ ಸುರಿಯಿತು. ಗಜೇಂದ್ರಗಡದಲ್ಲಿ ಬೆಳಿಗ್ಗೆಯಿಂದಲೇ ದಟ್ಟನೆಯ…

ಜನ ಮೈಮರೆಯದೆ ಮಾರ್ಗಸೂಚಿ ಪಾಲಿಸಿ; ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು: ಮೇ 30-ಕೋವಿಡ್ ಪಾಸಿಟೀವ್ ಪ್ರಮಾಣ ಕಡಿಮೆಯಾಗಿದೆ ಎಂದು ಜನರು ಮೈಮರೆಯದೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಲಹೆ ಮಾಡಿದ್ದಾರೆ.