ಉತ್ತರಪ್ರಭ ಸುದ್ದಿ
ನಿಡಗುಂದಿ: ಯಾವುದೇ ಸರಕಾರ ಇರಲಿ ಸದಾ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಿ ರೈತರ ಸಮಸ್ಯೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ರೈತ ಸಂಘ ಇನ್ನಷ್ಟು ರೈತ ಸ್ನೇಹಿ ಕಾರ್ಯ ಮಾಡಲಿ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಾನಂದ ಅವಟಿ ಹೇಳಿದರು. ಪಟ್ಟಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಗರ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ನಿಡಗುಂದಿಯ ರುದ್ರಮುನಿ ಸ್ವಾಮೀಜಿ ಮಾತನಾಡಿ,ರೈತ ಸಂಘಟನೆಯಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುವರು, ಬಸವಣ್ಣನವರ ತತ್ವದಂತೆ ಎಲ್ಲರೂ ಪ್ರಾಮಾಣಿಕರಾಗಿ ನಿಷ್ಠಾವಂತರಾಗಿ ಕೆಲಸ ಮಾಡಬೇಕು ಅದರಲ್ಲಿಯೇ ಕೈಲಾಸ ಕಾಣಬೇಕು ಆಗ ಮಾತ್ರ ದೇಶದ ಬೆನ್ನೆಲುಬಾಗಿರುವ ರೈತ ಸಮಾಜದಲ್ಲಿ ತಲೆ ಎತ್ತಿ ಬಾಳಬಲ್ಲ ಎಂದರು.

ಎಸ್ ಕೆ ಗೌಡರ, ಹೆಚ್.ಎ. ಲಷ್ಕರಿ, ಕೆ.ಎಂ. ಬಿರಾದಾರ, ಆರ್.ಬಿ.ಬಾಣಕರ, ರಂಗಪ್ಪ ಯಳ್ಳಿಗುತ್ತಿ , ಹನುಮಂತ ಬೆನಕಟ್ಟಿ, ಎಸ್.ಎಂ. ಪಟ್ಟಣಶೆಟ್ಟಿ , ಬಿ.ಎಸ್.ಪಠಾಣ , ತಿರುಪತಿ ಬಂಡಿವಡ್ಡರ, ಬಸವರಾಜ ಬಾಗೇವಾಡಿ ಮಾತನಾಡಿದರು.
ಪದಾಧಿಕಾರಿಗಳು:
ನಿಡಗುಂದಿ ನಗರ ಘಟಕದ ಗೌರವಾಧ್ಯಕ್ಷರಾಗಿ ಎ.ಎಂ. ಲಷ್ಕರಿ, ಅಧ್ಯಕ್ಷರಾಗಿ ರಾಜು ನದಾಫ್, ಉಪಾಧ್ಯಕ್ಷರಾಗಿ ಆರ್.ಎಸ್. ಉಕ್ಕಲಿ, ಜಿ.ಎಸ್.ತಳವಾರ, ದಾವಲಮಲ್ಲಿಕ್ ನದಾಫ್, ನೂರ ಅಹಮ್ಮದ ಹೆರಕಲ್, ಪ್ರಧಾನ ಕಾರ್ಯದರ್ಶಿಯಾಗಿ ಶಿವನಗೌಡ ಪಾಟೀಲ , ಕಾರ್ಯದರ್ಶಿ ಮೋತಿಲಾಲ ಉಣ್ಣಿಬಾವಿ, ಸಂಚಾಲಕರಾಗಿ ಅಮೀರ ಹಮ್ಜಾ ನಾಯ್ಕೋಡಿ, ಹಸನ ಡೊಂಗ್ರಿ ನಧಾಫ ಸೇರಿದಂತೆ ಅನೇಕರಿಗೆ ನಿಡಗುಂದಿ ತಾಲ್ಲೂಕು ಅಧ್ಯಕ್ಷರಾದ ಕೆ.ಎಂ.ಬಿರಾದಾರ (ಗುಡ್ನಾಳ) ಅವರು ಪದಾಧಿಕಾರಿಗಳಿಗೆ ಸಂಘದ ನಿಯಮಾವಳಿಗಳನ್ನು ತಿಳಿಸಿ, ಪ್ರಮಾಣವಚನ ಮಾಡಿಸಿ ಆದೇಶ ಪ್ರತಿ ವಿತರಿಸಿದರು.