ಬೆಂಗಳೂರು: ರಾಜ್ಯದ ಬಹುತೇಕ ಗ್ರಾಮ ಪಂಚಾಯತಿಗಳು ಅವಧಿ ಪೂರ್ಣಗೊಂಡಿದ್ದು, ಈಗಾಗಲೇ ಕೊರೊನಾ ಹಿನ್ನೆಲೆ ಸದ್ಯಕ್ಕೆ ಚುನಾವಣೆ ನಡೆಸದೇ ಅವಧಿ ಪೂರ್ಣಗೊಳಿಸಿದ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ನೇಮಕಗೊಂಡ ಆಡಳಿತಾಧಿಕಾರಿಗಳ ಕರ್ತವ್ಯಗಳ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಆದೇಶ ಹೊರಡಿಸಿದ್ದಾರೆ.

ಆಡಳಿತಾಧಿಕಾರಿಗಳ ಅಧಿಕಾರ ಮತ್ತು ಕರ್ತವ್ಯದ ಬಗ್ಗೆ ಮಾರ್ಗಸೂಚಿ

 • ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 8(4) ರನ್ವಯ ಆಡಳಿತಾಧಿಕಾರಿಯನ್ನು ಈ ಅಧಿನಿಯಮದ ಉದ್ದೇಶಕ್ಕಾಗಿ ಕ್ರಮಬದ್ಧವಾಗಿ ರಚಿಸಿದ ಗ್ರಾಮ ಪಂಚಾಯತಿ ಎಂದು ಭಾವಿಸಲಾಗಿದೆ.
 • ಸದರಿ ಅಧಿನಿಯಮದ ಪ್ರಕರಣ 8 (3)ರನ್ವಯ ಆಡಳಿತಾಧಿಕಾರಿಯೂ ಗ್ರಾಮ ಪಂಚಾಯತಿಯ ಎಲ್ಲ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಚಲಾಯಿಸತಕ್ಕದ್ದು. ಮತ್ತು ನೆರವೇರಿಸತಕ್ಕದ್ದಾಗಿದೆ.
 • ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕ ಪತ್ರಗಳು) ನಿಯಮಗಳು, 2006 ಅನ್ವಯ ಗ್ರಾಮ ಪಂಚಾಯತಿಯ ಹಣಕಾಸಿನ ವ್ಯವಹಾರವನ್ನು ಆಡಳಿತಾಧಿಕಾರಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಂಟಿಯಾಗಿ ನಿರ್ವಹಿಸತಕ್ಕದ್ದು.
 • ವಾರ್ಡ ಸಭೆ ಮತ್ತು ಗ್ರಾಮ ಸಭೆಗಳನ್ನು ಕಾಲಕಾಲಕ್ಕೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳತಕ್ಕದ್ದು.
 • ಅಧಿನಿಯಮದ ಪ್ರಕರಣ 58 ರಂತೆ ಗ್ರಾಮ ಪಂಚಾಯತಿ ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು.
 • ಅಧಿನಿಯಮದ ಪ್ರಕರಣ 60 ರಂತೆ ಗ್ರಾಮ ಪಂಚಾಯತಿಯ ಸಾಮಾನ್ಯ ಅಧಿಕಾರಗಳನ್ನು ಚಲಾಯಿಸತಕ್ಕದ್ದು
 • ಅಧಿನಿಯಮದ ಪ್ರಕರಣ 62 ರಂತೆ ಅಧ್ಯಕ್ಷನ ಪ್ರಕಾರ್ಯಗಳು ಮತ್ತು ಅಧಿಕಾರಗಳನ್ನು ಚಲಾಯಿಸತಕ್ಕದ್ದು
 • ಕೋವಿಡ್ 19 ಹರಡದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿ ಮಟ್ಟದ ಕಾರ್ಯಪಡೆಯನ್ನು ಸರ್ಕಾರದ ಸುತ್ತೋಲೆ ಸಂಖ್ಯೆ ಗ್ರಾಅಪ 86 ಉಖಾಯೋ 2019 ದಿನಾಂಕ 27-03-2020 ರಚಿಸಲಾಗಿದ್ದು, ಆಡಳಿತಾಧಿಕಾರಿಯೂ ಅಧ್ಯಕ್ಷರಾಗಿರುವುದುರಿಂದ ಸದರಿ ಕಾರ್ಯಪಡೆಯ ಕರ್ತವ್ಯಗಳನ್ನು ನಿರ್ವಹಸತಕ್ಕದ್ದು
 • ಗ್ರಾಮ ಪಂಚಾಯತಿ ಗ್ರಂಥಾಲಯಗಳ ನಿರ್ವಹಣೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಗ್ರಾಮ ಪಂಚಾಯತಿಗಳಿಗೆ ವರ್ಗಾಯಿಸಲಾಗಿದ್ದು, ಗ್ರಾಮ ಪಂಚಾಯತಿ ಗ್ರಂಥಾಲಯಗಳ ನಿರ್ವಹಣೆ ಮಾಡತಕ್ಕದ್ದು ಮತ್ತು ಗ್ರಂಥಾಲಯ ಮೇಲ್ವೀಚಾರಕರಿಗೆ ಗೌರವ ಧನವನ್ನು ಮಾಸಿಕವಾಗಿ ಪಾವತಿಸತಕ್ಕದ್ದು
 • ಗ್ರಾಮ ಪಂಚಾಯತಿ ನೌಕರರಿಗೆ ಮಾಸಿಕವಾಗಿ ಕನಿಷ್ಟ ವೇತನ ಪಾವತಿಸತಕ್ಕದ್ದ
 • ಸರ್ಕಾರದ ಸುತ್ತೋಲೆ ಸಂಖ್ಯೆ : ಗ್ರಾಅಪ 74 ಗ್ರಾಪಂಸಿ 2017(ಭಾಗ-1) ದಿನಾಂಕ 12-03-2018ರಲ್ಲಿ ಗ್ರಾಮ ಪಂಚಾಯತಿಗಳು ಯಾವುದೇ ಹುದ್ದೆಗಳಿಗೆ ನೇಮಕಾತಿ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಆಡಳಿತಾಧಿಕಾರಿಯೂ ಗ್ರಾಮ ಪಂಚಾಯತಿಗೆ ಯಾವುದೇ ನೌಕರರನ್ನು ನೇಮಕ ಮಾಡಿಕೊಳ್ಳತಕ್ಕದ್ದಲ್ಲ.
Leave a Reply

Your email address will not be published.

You May Also Like

ಮತದಾನ ಬಹಿಸ್ಕಾರ ಮಾಡಿದರೆ ಸಂವಿಧಾನಕ್ಕೆ ಅವಮಾನ ಮಾಡಿದಂತೆ : ಕಳಕಪ್ಪ ಬಂಡಿ

ಉತ್ತರ ಪ್ರಭ ಸುದ್ದಿರೋಣ : ತಾಲೂಕಿನ ಜಿಗಳೂರ ಗ್ರಾಮದಲ್ಲಿ ಸುಮಾರು 20 ಲಕ್ಷ ವೆಚ್ಚದ ಅಂಬೇಡ್ಕರ್…

ಲಾಕ್ ಡೌನ್ ಎಡವಟ್ಟು : ತವರಿಂದ ಬಂದ ಪತ್ನಿಗೆ ಪತಿಯಿಂದ ಲಾಕ್ಔಟ್!

ಬೆಂಗಳೂರು: ಸಂದರ್ಭದ ಬಂಧಿಯಾಗಿ ಆಕೆ 3 ತಿಂಗಳು ಕಾಲ ತವರಲ್ಲೇ ಉಳಿಯಬೇಕಾಯಿತು. ಗಂಡ-ಮಗ ಬೆಂಗಳೂರಿನಲ್ಲಿ, ಆಕೆ…

ಮುಂಬೈನ 800 ಚದರ ಅಡಿ ಜಾಗಕ್ಕೆ ತಿಂಗಳಿಗೆ 1 ರೂಪಾಯಿ!: ಪತ್ನಿಗೆ ಲೀಸ್ ಕೊಟ್ಟ ಬ್ಯಾಂಕ್ ಚೇರ್ಮನ್

ಖಾಸಗಿ ಬ್ಯಾಂಕಿನ ಮುಖ್ಯಸ್ಥರೊಬ್ಬರು ತಮ್ಮ ಪತ್ನಿಯ ಎನ್.ಜಿ.ಒ.ಗೆ ತಮ್ಮ ಬ್ಯಾಂಕಿನ ಪಕ್ಕದ ಜಾಗವನ್ನು ಬಳಸಿಕೊಳ್ಳಲು ನೀಡಿದ್ದ ವಿಷಯ ಈಗ ಬೆಳಕಿಗೆ ಬಂದಿದೆ. ತಿಂಗಳಿಗೆ ನಾಮಕಾವಸ್ಥೆ ಒಂದೇ ಒಂದು ರೂಪಾಯಿ ಬಾಡಿಗೆಯಷ್ಟೇ ಎಂದು ಎನ್.ಡಿ.ಟಿ.ವಿ ವರದಿ ಮಾಡಿದೆ. ಯೆಸ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್ ಗಳು ದಿವಾಳಿ ಹೊಂದಿದ್ದರ ಹಿಂದೆ ಬ್ಯಾಂಕ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರ ಸ್ವಾರ್ಥವಿತ್ತು ಎನ್ನುವುದನ್ನು ನೋಡಿದ್ದೇವೆ.