ಮಕ್ಕಳಲ್ಲಿ ಕಲೆಗಳ ವ್ಯಾಮೋಹ ಮೂಡಿಸಿ: ಉಮೇಶ್ ಶಿರಹಟ್ಟಿಮಠ

ಉತ್ತರಪ್ರಭ

ನಿಡಗುಂದಿ: ಪ್ರತಿಯೊಬ್ಬ ಮಗುವಿನಲ್ಲಿ ಒಂದಿಲ್ಲೊಂದು ರೀತಿಯ ಕಲಾ ಪ್ರತಿಭೆ ಹುದುಗಿರುತ್ತದೆ. ಅಂಥ ಪ್ರತಿಭೆಗಳನ್ನು ಗುರುತಿಸಿ ಹೊರಹಾಕಲು ಶಿಕ್ಷಣ ಇಲಾಖೆ ಕಳೆದ ಹದಿನೈದು ವರ್ಷಗಳಿಂದ ಪ್ರತಿಭಾ ಕಾರಂಜಿ ವಿಶೇಷ ಕಾರ್ಯಕ್ರಮ ನಡೆಯಿಸಿಕೊಂಡು ಬರುತ್ತಿದೆ. ಆ ಕಾರಣ ಮಕ್ಕಳಲ್ಲಿ ಕಲೆಗಳ ಬೀಜ ಬಿತ್ತಿ ಹೆಮ್ಮರವಾಗಿ ಅರುಳುವಂತೆ ಶಿಕ್ಷಕ ಸಮೂಹ ನೋಡಿಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿದೇ೯ಶಕ ಉಮೇಶ್ ಶಿರಹಟ್ಟಿಮಠ ಹೇಳಿದರು.


ಸಮೀಪದ ಕಮದಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಜರುಗಿದ ನಿಡಗುಂದಿ ಕ್ಲಷ್ಟರ ಮಟ್ಟದ ಪ್ರಾಥಮಿಕ ಹಾಗು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸ್ಪಧಾ೯ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಪೂರಕವಾಗಿದೆ ಎಂದರು. ಕಲೆಗಳಿಗೆ ಭಾಷೆ, ಜಾತಿಗಳ ಬಣ್ಣಗಳಿಲ್ಲ. ಅವು ಸರ್ವ ವ್ಯಾಪಿ ಅರಳಬಲ್ಲವು. ಮಕ್ಕಳ ಬಾಲ್ಯಕ್ಕೆ ಸಾರ್ಥಕತೆ ನೀಡಬೇಕಾದರೆ ಪಾಲಕ, ಪೋಷಕರು ಜೊತೆಗೆ ಶಿಕ್ಷಕರು ಕಲಾಸಕ್ತಿಯ ಅಭಿರುಚಿ ಮೂಡಿಸಬೇಕು. ಮಕ್ಕಳ ಸ್ವಂತಿಕೆಯ ಕಲೆಗಳಿಗೆ ಉತ್ತೇಜಿಸಿ ಪ್ರೋತ್ಸಾಹಿಸಬೇಕು ಎಂದರು.


ಪ್ರತಿಭಾ ಕಾರಂಜಿ ವೇದಿಕೆ ಕಲೆಗಳ ಪ್ರದರ್ಶನ ತೋರ್ಪಡಿಸುವ ಆರಂಭದ ಸ್ಟೇಜ್. ಅದನ್ನು ಮಕ್ಕಳು ಸರಿಯಾಗಿ ಕೌಶಲ್ಯದೊಂದಿಗೆ ಸದುಪಯೋಗ ಪಡಿಸಿಕೊಳ್ಳಬೇಕು. ಲಲಿತಕಲೆಗಳ ಆಸಕ್ತಿ ಬೆಳೆಸಿಕೊಂಡು ಮುಂದೆ ಬರಬೇಕು. ಜೀವನ ನಿರ್ವಹಣೆಗೆ ಲಲಿತಕಲೆಗಳು ಸಹಕಾರಿಯಾಗಬಲ್ಲವು. ಕಲೆಗಳಲ್ಲಿ ಬೇಜಾರ ಅನ್ನುವ ಪದಗಳೇ ಇಲ್ಲ. ಹೊಸಹೊಸ ವಿಭಿನ್ನ ರೂಪ ವೇಷಗಳ ಕಲೆಗಳು ಬದುಕಿಗೆ ಹೊಸತನದ ಸ್ಪರ್ಶ ನೀಡುತ್ತವೆ. ಮಕ್ಕಳಲ್ಲಿನ ಪ್ರತಿಭೆಯನ್ನು ನೋಡಿ ಖುಷಿ ಪಡಬೇಕು.ನಗು ಮೊಗವೇ ನೋಬೆಲ್ ಪ್ರಶಸ್ತಿಕ್ಕಿಂತ ಮಿಗಿಲು. ಎಲ್ಲರ ಮುಖದಲ್ಲಿ ಹಸನತೆಯಭಾವ ಮಕ್ಕಳು ತಮ್ಮ ವಿಶಿಷ್ಟ ಪ್ರದರ್ಶನಗಳ ಮೂಲಕ ನೀಡುತ್ತಾರೆ. ಕಲೆಗಳ ಬಗ್ಗೆ ಬೇಜಾರ ಪಡಬೇಡಿ. ತಾವು ಐದನೂರಕ್ಕೂ ಹೆಚ್ಚು ನಾಟಕಗಳನ್ನು ಕಣ್ತುಂಬಿಸಿಕೊಂಡು ನಾಟಕಗಳಲ್ಲಿನ ದೃಶ್ಯ ವೈಭವದ ರಸಘಳಿಗೆ ಸವಿದಿರುವೆ ಎಂದರು.

Exit mobile version