ದೆಹಲಿ: ನಾಲ್ವರು ಯುವಕರ ಜೊತೆ ಓಡಿಹೋಗಿದ್ದ ಹುಡುಗಿಯೊಬ್ಬಳು ಸಿಕ್ಕಿ ಬಿದ್ದ ವೇಳೆ ಯಾರೊಂದಿಗೆ ವಿವಾಹ ಮಾಡಿಸಬೇಕೆಂಬ ಗೊಂದಲಕ್ಕೆ ಸಿಲುಕಿದ ಗ್ರಾಮಸ್ಥರು ಅಂತಿಮವಾಗಿ ನಾಲ್ವರು ಯುವಕರ ಹೆಸರನ್ನು ಚೀಟಿ ಒಂದರಲ್ಲಿ ಬರೆದು ಲಾಟರಿ ಎತ್ತುವ ಮೂಲಕ ಅದರಲ್ಲಿದ್ದ ಹೆಸರಿನವನ ಮದುವೆ ಮಾಡಿಸಿದ್ದಾರೆ.

ಇಂತಹುದೊಂದು ವಿಚಿತ್ರ ಘಟನೆ ಉತ್ತರಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಅಜೀಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, 5 ದಿನವಾದರೂ ಮಗಳು ಪತ್ತೆಯಾಗದಿದ್ದಾಗ ಪೋಷಕರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಪೊಲೀಸರ ಜೊತೆ ಗ್ರಾಮಸ್ಥರು ಸಹ ಹುಡುಕಾಟಕ್ಕೆ ಮುಂದಾಗಿದ್ದು, ಅಂತಿಮವಾಗಿ ಹುಡುಗಿ ನಾಲ್ವರು ಯುವಕರೊಂದಿಗೆ ಸಿಕ್ಕಿಬಿದ್ದಿದ್ದಳು.ಆಗ ಯಾರೊಂದಿಗೆ ವಿವಾಹ ಮಾಡಿಸಬೇಕೆಂಬ ಗೊಂದಲ ಹುಡುಗಿ ಪೋಷಕರು ಹಾಗೂ ಗ್ರಾಮಸ್ಥರನ್ನು ಕಾಡಿತ್ತು. ಯುವಕರನ್ನು ಕೇಳಿದರೆ ಯಾರೊಬ್ಬರೂ ವಿವಾಹವಾಗಲು ಮುಂದೆ ಬರಲಿಲ್ಲ. ಹುಡುಗಿಯೂ ಸಹ ಒಬ್ಬನನ್ನು ಆಯ್ಕೆ ಮಾಡಲಿಲ್ಲ. ಅಂತಿಮವಾಗಿ ನಾಲ್ವರು ಯುವಕರ ಹೆಸರನ್ನು ಚೀಟಿಯಲ್ಲಿ ಬರೆದ ಗ್ರಾಮಸ್ಥರು ಒಂದು ಚೀಟಿಯನ್ನು ಎತ್ತುವ ಮೂಲಕ ಅದರಲ್ಲಿದ್ದ ಹೆಸರಿನವನ ಜೊತೆ ಹುಡುಗಿಯ ಮದುವೆ ಮಾಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸ್ಥಳದಲ್ಲೇ ಪರೀಕ್ಷಿಸಿ ಸೋಂಕಿತರ ಸಂಖ್ಯೆ ಕಡಿಮೆಗೊಳಿಸಲು ಪ್ರಯತ್ನ ನಡೆದಿದೆ

ನರೇಗಲ್‌: ಕೊರೊನಾ ವೈರಸ್ ಪಟ್ಟಣದಿಂದ ಹಳ್ಳಿಯ ಕಡೆಗೆ ಗಣನೀಯವಾಗಿ ಹಬ್ಬಿದ್ದು, ಇದನ್ನು ತಡೆಗಟ್ಟಲು ಸರ್ಕಾರ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಉಪಯೋಗವನ್ನು ಕೊರೊನಾ ಸೋಂಕಿತರು ಪಡೆದುಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ:ಎ,ಡಿ,ಸಾಮುದ್ರಿ ಹೇಳಿದ

ರೈತರು ಬೆಳೆ ಸಮೀಕ್ಷೆ: ಮೊಬೈಲ್ ಆಪ್ ಬಳಸುವ ವಿಧಾನ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಅಗಸ್ಟ 11 ರಿಂದ ಗದಗ ಜಿಲ್ಲೆಯಾದ್ಯಂತ…

80 ವರ್ಷದ ವೃದ್ಧಗ 80 ಕೋಟಿ ಕರೆಂಟ್ ಬಿಲ್ ಬಂದೈತಿ!

ಮನ್ಯಾಕ್ ಕಾಡೋ ಮಕ್ಕಳ್ ಕೈಯಾಗ್ ರೂಪಾಯಿ, ಎರಡ ರೂಪಾಯಿ ಕೊಡಾಕ ನಾವು ಹಿಂದ್-ಮುಂದ್ ನೋಡತಿವಿ. ಅಂಥಾದ್ರಾಗ‌ ಏಕಾಎಕಿ ತಿಂಗಳಿಗೊಮ್ಮೆ ಕಟ್ಟೋ ಬಿಲ್ ಕೋಟಿಗಟ್ಟಲೇ ಬಂದ್ರ ಬಿಲ್ ನೋಡಿದವ್ರ ಸ್ಥಿತಿ ಹ್ಯಾಂಗಾಗಿರಬಾರ್ದು.

ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಆಸ್ಪತ್ರೆಗೆ ದಾಖಲು

ಬೆಳಗಾವಿ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ಸ್ನಾನ ಗೃಹದಲ್ಲಿ ಬಿದ್ದ ಕಾರಣ ಗಾಯಗೊಂಡಿದ್ದು, ಆಸ್ಪತ್ರೆಗೆ…