ಗಜೇಂದ್ರಗಡ: ಶಾಲಾ ಮೇಲುಸ್ತುವಾರಿ ಸಮಿತಿ ಆಡಳಿತದಲ್ಲಿ ಶಾಲೆಯ ಅಭಿವೃದ್ಧಿ ಅಡಗಿದೆ ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ಮದ್ಯೆ ಎಸ್‌ಡಿಎಂಸಿ ಸೇತುವೆಯಾಗಿಕಾರ್ಯ ನಿರ್ವಹಿಸಬೇಕಿದೆ ಎಂದು ಸಿಆರ್‌ಪಿ  ಪಿ.ಸಿ.ಜೋಗರೆಡ್ಡಿ ಹೇಳಿದರು.

ಸಮೀಪದ ರಾಮಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ತಲುಪಿಸುವಲ್ಲಿ ಪೋಷಕರ ಮತ್ತು ಶಿಕ್ಷಕರ ನಡುವೆ ಆಧಾರ ಸ್ತಂಭದಂತೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಕಾರ್ಯ ನಿರ್ವಹಿಸಬೇಕು. ಅಲ್ಲದೇ ಶಾಲೆಯ ಸಂಪನ್ಮೂಲ ಕ್ರೂಢಿಕರಿಸುವಲ್ಲಿಯೂ ಸಹಕರಿಸಬೇಕಿದೆ.

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಪೋಷಕರು ಸಾಮಾನ್ಯವಾಗಿ ಬಡವರು, ದಿನವಿಡೀ ದುಡಿಯು ವರ್ಗ ಅವರಿಗೆ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಅಧ್ಯಯನ ಮಾಡಿ, ಅದರ ಕಾಯಕಲ್ಪಕ್ಕೆ ಸಲಹೆ ನೀಡಲು ಸಾಧ್ಯವಾಗುವುದುಕಡಿಮೆ. ಹೀಗಿರುವಾಗ ಒಬ್ಬಿಬ್ಬರು ಆಸಕ್ತಿ ತೋರಿದರೂ ಅದಕ್ಕೆ ವಿರೋಧ ವ್ಯಕ್ತವಾಗಿರುವುದೂ ಉಂಟು. ಹಾಗಾಗಿ ಶಿಕ್ಷಣ ಇಲಾಖೆಯು ಎಸ್‌ಡಿಎಂಸಿಗಳ ಸಬಲೀಕರಣಕ್ಕೆತಕ್ಷಣಕ್ರಮ ಕೈಗೊಳ್ಳಬೇಕಿದೆ ಎಂದರು.

ಶಿಕ್ಷಕ ವಿ.ಡಿ.ಮೋಮಿನ್ ಮಾತನಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲಾಭಿವೃದ್ಧಿ ಯೋಜನೆಯನ್ನು ತಯಾರಿಸುವುದು, ಶಾಲೆಯ ವಾರ್ಷಿಕ ಚಟುವಟಿಕೆ, ನೀಲನಕ್ಷೆ ರೂಪಿಸುವುದು ಹಾಗೂ ಶೈಕ್ಷಣಿಕ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಅನುಪಾಲನೆ ಮಾಡುವಜವಾಬ್ದಾರಿ ಎಸ್‌ಡಿಎಂಸಿ ಮೇಲಿದೆ. ಪ್ರತಿ ತಿಂಗಳು ಸಭೆ ನಡೆಸಿ, ಯೋಜನೆಯಲ್ಲಿ ಆಗಿರುವ ಪ್ರಗತಿ ಪರಿಶೀಲಿಸುವುದು, ಸರ್ಕಾರದಿಂದ ಬರುವ ಅನುದಾನದ ಸದ್ಬಳಕೆ ಹಾಗೂ ಸಾರ್ವಜನಿಕರಿಂದ ಅಗತ್ಯವಾದ ನೆರವು ಪಡೆದು ಶಾಲೆಯನ್ನು ಅಭಿವೃದ್ಧಿಪಡಿಸುವುದು ಪ್ರಮುಖ ಕರ್ತವ್ಯಗಳಾಗಿವೆ. ಇವೆಲ್ಲವನ್ನು ನಿರ್ವಹಿಸುವ ಮೂಲಕ ಸರ್ಕಾರಿ ಶಾಲೆಯನ್ನು ಗುಣಾತ್ಮಕ ಆಡಳಿತ ಕಾರ್ಯರೂಪಕ್ಕೆ ಬರಬೇಕಿದೆ ಎಂದರು.

ತಾಲೂಕಾ ಬಿಆರ್‌ಸಿ ದ್ಯಾಮನಗೌಡರ, ಎಸ್‌ಡಿಎಂಸಿ ಅಧ್ಯಕ್ಷ ಕಲ್ಲೇಶಪ್ಪ ಅಂಗಡಿ, ಉಪಾಧ್ಯಕ್ಷೆ ಲಕ್ಷ್ಮೀ ಮ್ಯಾಗೇರಿ, ಗ್ರಾ.ಪಂ ಅಧ್ಯಕ್ಷ ಶಿವರಾಜ ಗೌಡರ, ಎಸ್.ಕೆ. ಹೊರಪೇಟಿ, ಪಿ.ಎಸ್. ಹಿರೇಮಠ, ಕೆ.ಜಿ. ಸಂಗಟಿ, ಎಸ್.ಎಸ್. ಡೊಳ್ಳಿನ, ವಿಜಯಕುಮಾರಡಿ.ಆರ್, ಎಚ್.ವಾಯ್‌ ಕುರಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಕೆಡಿಇಎಮ್ ನಿಂದ 10 ಲಕ್ಷ ಉದ್ಯೋಗ ಸೃಷ್ಟಿ!

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಮ್) 2025ರ ವೇಳೆಗೆ ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.

ಎರಡು ಯುವಕರ ಗುಂಪುಗಳ ಮದ್ಯೆ ಗಲಾಟೆ..!

ಉತ್ತರಪ್ರಭ ಸುದ್ದಿರೋಣ: ಪಟ್ಟಣದಲ್ಲಿ ಬಿಸಿ ರಕ್ತದ ಯುವಕರ ಗುಂಪುಗಳ ಗಲಾಟೆ ಮಾಡಿಕೊಂಡು, ರೋಣ ಪೊಲೀಸ್ ಠಾಣೆ…

ನಗರಸಭೆ ಚುಣಾವಣೆ:35ನೇ ವಾರ್ಡಿನಲ್ಲಿ ಬಿಜೆಪಿ ಮುಖಂಡ ಅನೀಲ ಮೇಣಸಿಕಾಯಿ ಮತಭೀಕ್ಷೆ

ಉತ್ತರಪ್ರಭ ಸುದ್ದಿ ಗದಗ: ಗದಗ ಬೆಟಗೇರಿ ನಗರಸಭೆ ಚುಣಾವಣೆ  ಹಿನ್ನಲೇ ಬಿಜೆಪಿಯ  ಅಭ್ಯರ್ಥಿಗಳ  ಪಟ್ಟಿಯನ್ನು ಎರಡು…