ಉತ್ತರಪ್ರಭ
ನಿಡಗುಂದಿ:
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಜನಪದ ಸಾಹಿತಿ ಕಾಸೀಮಸಾಹೇಬ್ ಹುಸೇನಸಾಹೇಬ ಬಿಜಾಪುರ (87) ಶುಕ್ರವಾರ ರಾತ್ರಿ ಇಲ್ಲಿಗೆ ಸಮೀಪದ ಅವರ ಸ್ವಗ್ರಾಮ ಗೊಳಸಂಗಿಯಲ್ಲಿ ನಿಧನರಾದರು.ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಅನಾರೋಗ್ಯ ಪೀಡಿತರಾಗಿದ್ದರು‌.ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.


ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ ವಿಜೇತರಾಗಿದ್ದರು. ಗೊಳಸಂಗಿ ಗ್ರಾಮದಲ್ಲಿ ನಾಲ್ಕು ದಶಕದ ಹಿಂದೆ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾವರ್ಧಕ ಸಂಘವನ್ನು ಕಟ್ಟಿ ಶ್ರೀ ರಾಮಸ್ವಾಮಿ ಅಪ್ಪಣ್ಣಪ್ಪ ದಳವಾಯಿ ಪ್ರೌಢಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಆಗಿದ್ದರು. ಮುಸ್ಲಿಂ ಜನಾಂಗದಲ್ಲಿ ಹುಟ್ಟಿ ಬೆಳೆದಿದ್ದರೂ ಸಕಲ ಧರ್ಮಿಯರನ್ನು ಉದಾತ್ತ ಭಾವದಿಂದ ಪ್ರೀತಿಸುವ ಹೃದಯ ವೈಶಾಲಿಯಾಗಿದ್ದರು. ಪ್ರಗತಿಪರ ರೈತರಾಗಿಯೂ ಇತರರಿಗೆ ಮಾದರಿಯಾಗಿದ್ದರು.
ಜನಪದ ಸಾಹಿತಿಗಳಾಗಿದ್ದ ಇವರು ಅನೇಕ‌ ಜನಪದ ಪುಸ್ತಕಗಳನ್ನು ರಚಿಸಿದ್ದಾರೆ. ಹಲವಾರು ‌ಜನಪದ ಗೀತೆಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಶನಿವಾರ ಮಧ್ಯಾಹ್ನ 2 ಕ್ಕೆ ಗೊಳಸಂಗಿ ಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

You May Also Like

ರೈತರ ಹೋರಾಟಕ್ಕೆ ಸ್ಪಂದಿಸಿ ಶೀರ್ಘದಲ್ಲೆ ರೈತರ ಬೇಡಿಕೆಗಳನ್ನ ಈಡೇರಿಸಲು ಭರವಸೆ

ಉತ್ತರಪ್ರಭ ಸುದ್ದಿ ಗದಗ: ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ರೈತರು ಶಿಂಗಟಾಲೂರ ಏತ ನೀರಾವರಿ ಎಡದಂಡೆ…

ಆಲಮಟ್ಟಿ: 15 ರಂದು ಹಳಕಟ್ಟಿ ಶಾಲೆಯ 64 ನೇ ವಾಷಿ೯ಕ ಸ್ನೇಹ ಸಮ್ಮೇಳನ

ಗುಲಾಬಚಂದ ಆರ್. ಜಾಧವಆಲಮಟ್ಟಿ : ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ರಾವಬಹದ್ದೂರ ಡಾ. ಫ.ಗು.(ಆರ್.ಬಿ.ಪಿ.ಜಿ) ಹಳಕಟ್ಟಿ ಪ್ರೌಢಶಾಲೆಯ 2021-22…

ಡ್ರೈವರ್ ಕಂಡಕ್ಟರ್ ಗಳ ನಿತ್ಯ ಶೋಷಣೆಗೆ ಮುಕ್ತಿ ಎಂದು?

ಕೆಎಸ್ಆರ್ಟಿಸಿ ಚಾಲಕ ಹಾಗೂ ನಿರ್ವಾಹಕರು ಕೊರೋನಾ ವಾರಿಯರ್ಸ್ ಎಂದು ಬಾಯಿ ಮಾತಿಂದ ಹೇಳಿದರೆ ಸಾಲದು. ಪಾಪ..!, ಅವರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸುವ ಅವಶ್ಯಕತೆ ಇದೆ.

ಲಾಕ್ ಡೌನ್ ಸಡಿಲಿಕೆಗೆ ಹಾವೇರಿ ಜನ ಡೋಂಟ್ ಕೇರ್

ಹಸಿರು ವಲಯದಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟುಕೆಗಳಿಗೆ ಸಡಿಲಿಕೆ ನೀಡಲಾಗಿದೆ. ಆದ್ರೆ ಗ್ರೀನ್ ಝೋನ್ ಸಡಿಲಿಕೆಗೂ ಕೆಲವೊಂದು ನಿಯಮಗಳಿಗೆ ಹಾವೇರಿ ಜನ ಕ್ಯಾರೆ ಎನ್ನುತ್ತಿಲ್ಲ.