ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಆಲಮಟ್ಟಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯ ವಿವಿಧ ಸ್ಪಧೆ೯ಗಳಲ್ಲಿ ಸ್ಥಳೀಯ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲಾ ಮಕ್ಕಳು ಮಿಂಚಿ ಸಾಧನೆ ಗೈದಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯತ ವಿಜಯಪುರ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾಯಾ೯ಲಯ ಬಸವನ ಬಾಗೇವಾಡಿ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಆಲಮಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಈಚೆಗೆ ನಡೆದ ಆಲಮಟ್ಟಿ ಕ್ಲಸ್ಟರ್ ಮಟ್ಟದ 2022-23 ನೇ ಸಾಲಿನ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವಿಧ ಸ್ಪಧೆ೯ಗಳಲ್ಲಿ ಇಲ್ಲಿನ ಎಂ.ಎಚ್.ಎಂ.ಆಂಗ್ಲ ಪ್ರಾಥಮಿಕ ಶಾಲಾ ಚಿಣ್ಣರು ತಮ್ಮ ಪ್ರತಿಭಾ ಕೌಶಲ್ಯ ಉತ್ಕಟ ರೀತಿಯಲ್ಲಿ ಪ್ರದಶಿ೯ಸಿ ಸಾಂಸ್ಕೃತಿಕ ಪ್ರಿಯರ ಗಮನ ಸೆಳೆದಿದ್ದಾರೆ.

1ರಿಂದ 4 ನೇ ತರಗತಿ ವಿಭಾಗದ ಕಥೆ ಹೇಳುವ ಸ್ಪಧೆ೯ಯಲ್ಲಿ ಪವನ ಜಾಲಿಬೆಂಚಿ ಪ್ರಥಮ ಸ್ಥಾನ ಪಡೆದರೆ, 1ರಿಂದ 6 ನೇ ತರಗತಿ ವಿಭಾಗದಲ್ಲಿ ಸೃಷ್ಟಿ ಹಿರೇಮಠ ಧಾಮಿ೯ಕ ಪಠಣ (ಸಾಂಸ್ಕೃತಿ) ಸ್ಪಧೆ೯ಯಲ್ಲಿ ಪ್ರಥಮ,ಇಂಗ್ಲಿಷ್ ಕಂಠಪಾಠ ಸ್ಪಧೆ೯ಯಲ್ಲಿ ದ್ವೀತಿಯ ಸ್ಥಾನ ಪಡೆದು ಮಿನುಗಿದ್ದಾಳೆ. ಅದರಂತೆ ಸೋಮಲಿಂಗ ಬಿಂಗಿ ಚಿತ್ರಕಲೆ, ಅಕ್ಷತಾ ತಳವಾರ ಲಘ ಸಂಗೀತ, ಶಂಕರ ರಾಠೋಡ ಕ್ಲೇ ಮಾಡಲಿಂಗ್, ಪವಿತ್ರಾ ಲಮಾಣಿ ಭಕ್ತಿಗೀತೆ, 6 ರಿಂದ 7 ನೇ ತರಗತಿ ವಿಭಾಗದಲ್ಲಿ ಶೃತಿ ಲಮಾಣಿ ಛದ್ಮವೇಷ, ಬಸವರಾಜ ಸಾತಿಹಾಳ ಹಾಸ್ಯ, ವಿಜಯಲಕ್ಷ್ಮಿ ಸೌದಿ ಕನ್ನಡ ಕಂಠಪಾಠ ಸ್ಪಧೆ೯ಗಳಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಚಿಣ್ಣರ ಕಾರಂಜಿಯಲ್ಲಿ ಮಿಂಚಿ ನಲಿದಿದ್ದಾರೆ.


ಪುಟ್ಟ ಮಕ್ಕಳು ತಮ್ಮಲ್ಲಿ ಹುದಗಿರುವ ಸೂಪ್ತ ಪ್ರತಿಭಾ ಕೌಶಲ್ಯ ಹೊರಹಾಕಿ ಶಾಲೆಗೆ ಕೀತಿ೯ ತಂದಿದ್ದಾರೆ. ಪ್ರತಿಭಾ ಕಾರಂಜಿಯಲ್ಲಿ ಮಿಂಚಿ ಸಾಧನೆ ಮಾಡಿರುವ ಪುಟಾಣಿಗಳಿಗೆ ಸಂಸ್ಥೆಯ ಅಧ್ಯಕ್ಷ ತೋಂಟದ ಡಾ. ಸಿದ್ದರಾಮ ಶ್ರೀಗಳು, ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ, ಶಾಲಾ ಉಸ್ತುವಾರಿ ಜಿ.ಎಂ.ಕೋಟ್ಯಾಳ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಮುಖ್ಯ ಶಿಕ್ಷಕಿ ತನುಜಾ ಪೂಜಾರಿ ಮಾರ್ಗದರ್ಶನದಲ್ಲಿ ಗುರುಮಾತೆಯರಾದ ಸಿದ್ದಮ್ಮ ಅಂಗಡಿ, ಕವಿತಾ ಮರಡಿ,ಸರೋಜಾ ಕಬ್ಬೂರ, ಶೈನಾಬಾನು ಬಾಗಲಕೋಟ, ಕಾಂಚನಾ ಕುಂದರಗಿ, ಶಂಕ್ರಮ್ಮ ಗುಳೇದಗುಡ್ಡ, ಸುನೀತಾ ಮಹೇಂದ್ರಕರ, ಮಂಜುಳಾ ಸಂಗಾಪುರ ಮಕ್ಕಳಿಗೆ ಸೂಕ್ತ ತರಬೇತಿ ನೀಡಿ ಪ್ರತಿಭಾ ಕಾರಂಜಿ ಸ್ಪಧೆ೯ಗೆ ಸನ್ನದ್ಧ ಗೊಳಿಸಿದ್ದರು. ಅದರ ಪ್ರತಿಫಲ ಚಿಣ್ಣರು ಸ್ಪಧೆ೯ಗಳಲ್ಲಿ ಜಯಶಾಲಿಗಳಾಗುವ ಮುಖೇನ ತೋರ್ಪಡಿಸಿದ್ದಾರೆ. ಅಲ್ಲದೇ ಶಾಲೆಯ ಕೀತಿ೯ ಹೆಚ್ಚಿಸುವಲ್ಲಿ ಯಶಸ್ವಿಯಾಗಿ ಮೆರೆದಿದ್ದಾರೆ.

Leave a Reply

Your email address will not be published. Required fields are marked *

You May Also Like

ಗೋವಿನ ಪ್ರತಿ ಅಂಗಳದಲ್ಲಿಯೂ ದೇವ- ದೇವತೆಗಳು ನೆಲೆಸಿವೆ- ಸತ್ಯಾರ್ಥತೀರ್ಥ ಶ್ರೀ

“ಯಲಗೂರ ಗೋಶಾಲೆ ಪ್ರೇರಕ ಶಕ್ತಿ ಸುಧಾಮೂತಿ೯ ಕರುನಾಡಿಗೆ ಸ್ಪೂರ್ತಿ” ಉತ್ತರಪ್ರಭ ಆಲಮಟ್ಟಿ: ಗೋವುಗಳನ್ನು ಕಸಾಯಿಕಾನೆಗೆ ಕಳುಹಿಸಲು…

ನಿಡಗುಂದಿ : ಕನಕ ಜಯಂತಿ- ಭವ್ಯ ಮೆರವಣಿಗೆ

ಉತ್ತರಪ್ರಭನಿಡಗುಂದಿ: ನಿಡಗುಂದಿ ಪಟ್ಟಣದಲ್ಲಿ ಹಾಲುಮತ ಸಮಾಜ ವತಿಯಿಂದ ಶುಕ್ರವಾರ ಸಂತ ಶ್ರೇಷ್ಠ ಕನಕದಾಸರ 535 ನೇ…

ತರಕಾರಿಗಳಲ್ಲಿ ಅರಳಿದ ಪೋಷಣೆಯ ಕಲಾಕೃತಿಗಳು..!

ನಿಡಗುಂದಿ: ಪಟ್ಟಣದ ಹೊರವಲಯದ ಕಮದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಯಿಪಲ್ಯೆ ಹಾಗೂ ಧಾನ್ಯಗಳಲ್ಲಿ ಪೋಷಣೆಯ…

ಸಿದ್ದನಾಥ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಉತ್ತರಪ್ರಭ ಸದ್ದಿಆಲಮಟ್ಟಿ: ಇಲ್ಲಿಗೆ ಸಮೀಪದ ಸಿದ್ದನಾಥ ಸಕಾ೯ರಿ ಪ್ರೌಢಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ಅಮೃತೋತ್ಸವ ಸೋಮವಾರ…