ಆಲಮಟ್ಟಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಕೃಷ್ಣಾ ಭಾಗ್ಯ ಜಲನಿಗಮ ಮುಖ್ಯ ಎಂಜಿನಿಯರ್ ಕಚೇರಿ ಎದುರು ಫೆ.7 ರಿಂದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೈಗೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಭರವಸೆ ಮೇರೆಗೆ ಮಂಗಳವಾರ ಅಂತ್ಯಗೊಂಡಿತು.

ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಭರವಸೆ ಮೇರೆಗೆ ಮಂಗಳವಾರ ಅಂತ್ಯಗೊಂಡಿತು.


ಧರಣಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿ, ಆಲಮಟ್ಟಿ ಪುನರ್ವಸತಿ ಕೇಂದ್ರದ ಬಳಿ ಕಳೆದ 4 ದಶಕಗಳಿಂದ ಕಡುಬಡವರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಎಲ್ಲಾ ಸೇರಿ 20 ಎಕರೆ ಕೆಬಿಜೆಎನ್ ಎಲ್ ಗೆ ಸೇರಿದ ಜಾಗೆಯಲ್ಲಿ ಸುಮಾರು 2000 ಕುಟುಂಬಗಳು ನೆಲೆಸಿವೆ, ತಾವಿರುವ ಸ್ಥಳಕ್ಕೆ ಹಕ್ಕುಪತ್ರ ಕೆಳುತ್ತಿರುವುದು ನ್ಯಾಯೋಚಿತವಾಗಿದೆ ಎಂದರು.


ರಾಜ್ಯದಲ್ಲಿ ಇರುವ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ಕುರುಬರಹಟ್ಟಿ ಸೇರಿದಂತೆ ಸುಮಾರು 59ಸಾವಿರ ನಿವಾಸಿಗಳಿಗೆ ಪ್ರಧಾನಮಂತ್ರಿ ಮೋದಿಯವರು ಹಕ್ಕುಪತ್ರ ವಿತರಿಸಿರುವದು ನಮ್ಮ ಪಕ್ಷದ ಜನಪರ ಕಾಳಜಿಯನ್ನು ತೋರುತ್ತದೆ. ರಾಜ್ಯದಲ್ಲಿರುವ ಗೋಮಾಳ, ಗಾಂವಠಾಣ ಸೇರಿದಂತೆ ಸರ್ಕಾರಿ ಜಾಗೆಯಲ್ಲಿ ಕಡುಬಡವರು ಮನೆ, ಗುಡಿಸಲು, ಛಪ್ಪರಗಳನ್ನು ಹಾಖಿಕೊಂಡಿದ್ದರೆ ಅಂತ ಕುಟುಂಬಗಳನ್ನು ಗುರುತಿಸಿ ಅವರಿಗೆ ಹಕ್ಕು ಪತ್ರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿದ್ದಾರೆ. ಇದರಿಂದ ರಾಜ್ಯದಲ್ಲಿರುವವರೆಲ್ಲರಿಗೂ ಸ್ವಂತ ಸೂರು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಆಲಮಟ್ಟಿಯಲ್ಲಿ ಬಡವರು ಕಟ್ಟಿಕೊಂಡಿರುವ ಮನೆಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳು ಆಲಮಟ್ಟಿ ಜಲಾಶಯಕ್ಕೆ ಗಂಗಾ ಪೂಜೆ ಹಾಗೂ ಬಾಗೀನ ಅರ್ಪಿಸಲು ಆಗಮಿಸಿದ್ದ ವೇಳೆ ತಾವೇ ಸ್ವತಃ ರೈತರನ್ನು ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಬೇಡಿಕೆಯ ಕುರಿತು ಮನವರಿಕೆ ಮಾಡಿಕೊಡಲಾಗಿತ್ತು. ಇದರಿಂದ ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳಿಗೆ ಹಾಗೂ ಇನ್ನಿತರ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದರು, ಆದರೆ ತಾಂತ್ರಿಕ ಕಾರಣಗಳಿಂದ ಹಾಗೂ ಅಧಿಕಾರಿಗಳ ಕೆಲಸದ ಒತ್ತಡದಲ್ಲಿ ಅಗತ್ಯವಾಗಿರುವ ಕಡತಗಳು ಸರ್ಕಾರದ ಮಟ್ಟದಲ್ಲಿ ತಲುಪದೇ ಇರುವದರಿಂದ ವಿಳಂಬವಾಗಿದೆ. ತಾವು ತಹಶೀಲ್ದಾರ, ತಾ.ಪಂ.ಇಓ, ಗ್ರಾ.ಪಂ.ಅಧ್ಯಕ್ಷ ಮತ್ತು ಪಿಡಿಓ ಅವರುಗಳಿಗೆ ಈ ಕುರಿತು ಸಮಗ್ರ ಮಾಹಿತಿ ನೀಡಿದ್ದರೂ ವಿಳಂಬ ಏಕೆ ಆಯಿತು ? ಎನ್ನುವುದು ಅರ್ಥವಾಗದಂತಾಗಿದೆ. ಇನ್ನು ಇಂಥ ಕೆಲಸಗಳನ್ನು ಯಾರೇ ಅಧಿಕಾರದಲ್ಲಿರಲಿ ಸಂಬಂಧಿತ ಶಾಸಕರು ಮುತುವರ್ಜಿ ವಹಿಸಿ ಬಡವರ ಕೆಲಸ ಮಾಡಬೇಕಾಗಿತ್ತು ಎಂದು ಕುಟುಕಿದರು.

ಆಲಮಟ್ಟಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿದ್ದ ಆಹೋರಾತ್ರಿ ಧರಣಿ ಸತ್ಯಾಗ್ರಹ ಮಾಜಿ ಸಚಿವ ಎಸ್.ಕೆ.ಬೆಳ್ಳುಳ್ಳಿ ನೀಡದ ಭರವಸೆ ಮೇರೆಗೆ ಮಂಗಳವಾರ ಅಂತ್ಯಗೊಂಡಿತು. ಈ ಸಂದರ್ಭದಲ್ಲಿ ಧರಣಿ ನಿರತರನ್ನುದ್ದೇಶಿಸಿ ಬೆಳ್ಳುಳ್ಳಿ ಮಾತನಾಡಿದರು.


ಧರಣಿ ಸ್ಥಳಕ್ಕೆ ಉಪ ಮುಖ್ಯ ಎಂಜಿನಿಯರ್ ಸುರೇಶ, ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಮತ್ತು ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲರನ್ನು ಸ್ಥಳಕ್ಕೆ ಕರೆಯಿಸಿ ಸಮಗ್ರ ಮಾಹಿತಿ ಪಡೆದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಿಂಗರಾಜ ಆಲೂರ ಮಾತನಾಡಿ, ಕಳೆದ 15 ದಿನಗಳಿಂದ ನ್ಯಾಯಪರ ಬೇಡಿಕೆ ಈಡೇರಿಕೆಗೆ ಧರಣಿ ನಡೆದಿತ್ತು. ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರು ಸಂಬಂಧಿಸಿದವರೊಂದಿಗೆ ಚರ್ಚಿಸಿದ್ದು, ನಮ್ಮ ಬೇಡಿಕೆಗಳು ಈಡೇರಿಸುವ ಭರವಸೆ ಸಿಕ್ಕಿರುವದರಿಂದ ನಮ್ಮ ಅಹೋರಾತ್ರಿ ಧರಣಿ ಸತ್ಯಾಗ್ರ‍್ರಹವನ್ನು ತಾತ್ಕಾಲಿಕವಾಗಿ ಹಿಂಡೆದುಕೊಳ್ಳಲಾಗಿದೆ ಎಂದು ಘೋಷಿಸಿದರು.
ಬಸವರಾಜ ಬಾಗೇವಾಡಿ, ಪ್ರಶಾಂತ ಪವಾರ, ಸೀತಪ್ಪ ಗಣಿ, ಬ.ಬಾಗೇವಾಡಿ ಬಿಜೆಪಿ ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ, ಕರವೇ ಅಧ್ಯಕ್ಷ ಆನಂದ ಹಡಗಲಿ, ರವಿ ಕೋತಿನ, ಸೈದಮ್ಮಾ ಬೆಣ್ಣಿ, ಶಂಕರ ಜಲ್ಲಿ, ಬಸವರಾಜ ಸಾತಿಹಾಳ, ವೆಂಕಟೇಶ ವಡ್ಡರ, ಮುತ್ತಪ್ಪ ದೇಸಾಯಿ ನೂರಾರು ಜನರು ಇದ್ದರು.

Leave a Reply

Your email address will not be published. Required fields are marked *

You May Also Like

ರಾಜಕೀಯ ಹಗ್ಗ ಜಗ್ಗಾಟ: ಪಾಳುಬಿದ್ದ ಆಶ್ರಯ ಮನೆಗಳ ಪ್ರವೇಶಿಸಿದ ಜನರು

ನರೇಗಲ್ಲ: ರಾಜಕೀಯ ನಾಯಕರ ಹಗ್ಗ ಜಗ್ಗಾಟದಲ್ಲಿ 10 ವರ್ಷಗಳಿಂದ ಪಾಳುಬಿದಿದ್ದ ಆಶ್ರಯ ಮನೆಳಿಗೆ ಜನಸಾಮಾನ್ಯರು ಪ್ರವೇಶ ಪಡೆದಿದ್ದಾರೆ. ಇರುವ ಆಶ್ರಯ ಮನೆಗಳು ತಮ್ಮ ಹೆಸರಿಗೆ ಬಾರದಿದ್ದರೂ ಆಡಳಿತ ಯಂತ್ರದ ನಿರ್ಲಕ್ಷ್ಯ ಹಾಗೂ ತಮ್ಮ ಸಂಕಷ್ಟ ಸಹಿಸಲಾರದೆ ಮನೆಗಳನ್ನು ಸ್ವಚ್ಛಗೊಳಿಸಿಕೊಂಡು ಪ್ರವೇಶಿಸಿದ್ದಾರೆ.

ರೋಣದ ‘ಕೆಜಿ ಬಾಸ್’ಗೆ ಟಿಕೆಟ್ ಬೇಕಾ ಎಂದ ರಾಜಾಹುಲಿ: ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ ಬಂಡಿ, ಯಡ್ಡಿ ಮಾತು..!

ಉತ್ತರಪ್ರಭ ಸುದ್ದಿಗದಗ: ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಿನ್ನೆ ನಡೆದ ಅದ್ಧೂರಿ ಸಮಾವೇಶ ಕೇಸರಿ ಪಾಳೆಯದಲ್ಲಿ ಹೊಸ…

ರಾಜ್ಯದಲ್ಲಿಂದು 1272 ಕೊರೊನಾ ಪಾಸಿಟಿವ್! : ಒಟ್ಟು ಸೋಂಕಿತರ ಸಂಖ್ಯೆ 16514ಕ್ಕೆ ಏರಿಕೆ!

ರಾಜ್ಯದಲ್ಲಿಂದು 1272 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 16514 ಕ್ಕೆ ಏರಿಕೆಯಾದಂತಾಗಿದೆ.