ಉತ್ತರಪ್ರಭ
ನಿಡಗುಂದಿ: ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸ್ಪೂರ್ತಿಯಾಗಿದ್ದು ನಿಣಾ೯ಯಕರು ಬದ್ದತೆಯಿಂದ ಕಾರ್ಯನಿರ್ವಹಿಸಿ ತಾರತಮ್ಯ ತೋರದೇ ಸೂಕ್ತ ಪ್ರತಿಭಾ ಮಕ್ಕಳನ್ನು ಆಯ್ಕೆ ಮಾಡಬೇಕು ಎಂದು ಬಸವನ ಬಾಗೇವಾಡಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಬಳಬಟ್ಟಿ ನುಡಿದರು. ಸಮೀಪದ ಕಮದಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ನಡೆದ ನಿಡಗುಂದಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ಶೈಕ್ಷಣಿಕ ಹಾಗು ಪಠ್ಯೇತರ ಚಟುವಟಿಕೆಗಳನ್ನು ಕರೋನಾ ನುಂಗಿ ಹಾಕಿತ್ತು.ಆದರೆ ಇದೀಗ ಶಾಲಾ ಚಟುವಟಿಕೆಗಳು ಮತ್ತೆ ಮೈದೇಳಿ ಕಲರವ ಮೂಡುಸುತ್ತಿವೆ. ಪಠ್ಯೇತರ ಚಟುವಟಿಕೆಗಳು ಪಠ್ಯಕ್ಕೆ ಪೂರಕವಾಗಿವೆ. ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭಾ ಶಕ್ತಿ ಅರಳಿಸಬೇಕು. ಯಾವ ಕಾರಣಕ್ಕೂ ಅವು ಕಣ್ಮರೆಯಾಗದಂತೆ ಶಿಕ್ಷಕರು ನೋಡಿಕೊಳ್ಳಬೇಕು. ಇಲ್ಲಿ ಬಹು ಸುಂದರವಾಗಿ, ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿರುವುದು ತಮಗೆ ಸಂತಸ ತಂದಿದೆ. ಎಸ್.ಡಿ.ಎಂ.ಸಿ.ಅಧ್ಯಕ್ಷರು,ಸದಸ್ಯರು ಶಿಕ್ಷಣ ಇಲಾಖೆಗೆ ಬಲವಾದ ಶಕ್ತಿ.



ಅವರುಗಳ ಸಹಕಾರದಿಂದ ಇಲಾಖೆಯ ಕಾರ್ಯಕ್ರಮಗಳು ಯಶಸ್ವಿಯಾಗಿ ಶೋಭೆಯಿಂದ ಕಂಗೊಳಿಸುತ್ತಿವೆ. ಬಸವನ ಬಾಗೇವಾಡಿ ತಾಲ್ಲೂಕು ಶೈಕ್ಷಣಿಕ ರಂಗದಲ್ಲಿ ಹೆಸರುವಾಸಿಯಾಗಿ ಮೆರೆಯಬೇಕು. ರಾಜ್ಯ ಮಟ್ಟದಲ್ಲಿ ಮಿನುಗಬೇಕು. ಎಲ್ಲರ ಸಹಕಾರದಿಂದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪಧೆ೯ ಕಾರ್ಯಕ್ರಮಗಳು ಮುಂದಿನ ದಿನಮಾನಗಳಲ್ಲಿ ನಡೆಯಲಿ ಎಂದು ಅವರು ಆಶಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಸಾಕಷ್ಟು ಕೊರತೆಗಳ ಮಧ್ಯೆಯೂ ಈ ಭಾಗದ ಶಿಕ್ಷಕ ಸಮೂಹ ಕ್ರಿಯಾಶೀಲತೆಯಿಂದ ಕಾಯಕ ನಿರ್ವಹಿಸುತ್ತಿದ್ದಾರೆ.
ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ತೋರಿ ಬೆಳೆಸುತ್ತಿದ್ದಾರೆ. ಇಲಾಖೆಯ ಯಾವುದೇ ಕಾರ್ಯಕ್ರಮಗಳನ್ನು ಸಾಂಘಿಕವಾಗಿ ನಿರ್ವಹಿಸಿ ಶ್ರಮಿಸುತ್ತಿದ್ದಾರೆ. ಒಳ್ಳೆಯ, ಉತ್ತಮ ಶಿಕ್ಷಕರ ಬಳಗವೇ ಈ ಭಾಗದಲ್ಲಿದೆ. ಶಿಕ್ಷಕರು ನೆಮ್ಮದಿಯಿಂದ ಕೆಲಸ ಮಾಡುವ ಅವಕಾಶ ಕಲ್ಪಿಸಿಕೊಟ್ಟರೆ ಇನ್ನೂ ಹೆಚ್ಚಿನ ಉತ್ಸಾಹದಿಂದ ಕಾಯಕ ನಿರ್ವಹಿಸಬಲ್ಲರು. ಮೂರು ವರ್ಷದ ಬಳಿಕ ಪುನಃ ಶಾಲಾ ಅಂಗಳದಲ್ಲಿ ಹಿಂದಿನ ಗತವೈಭವ ಸಾರುವ ಶೈಕ್ಷಣಿಕ ಚಟುವಟಿಕೆಗಳು ಸಾಗುತ್ತಿರುವದು ಶಿಕ್ಷಣಾಭಿಮಾನಿಗಳಿಗೆ ಖುಷಿ ಕೊಡುತ್ತಿವೆ ಎಂದರು.
ಈ ಹಿಂದಿನ ಬಿಇಒ ಸಂಗಮೇಶ ಪೂಜಾರಿ, ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಪ್ರತಿಭಾ ಕಾರಂಜಿ ಎಲ್ಲರ ಅಚ್ಚು ಮೆಚ್ಚಿನ ಕಾರ್ಯಕ್ರಮ. ಮಕ್ಕಳ ಜೀವನದಲ್ಲಿ ಈ ವೇಷ ಭೂಷಣದ ರೂಪಕಗಳು ಮುಂದೊಂದು ದಿನ ಹೊಸ ಚೇತನ ನೀಡಬಲ್ಲವು. ಪ್ರತಿಶಾಲಿ, ಪ್ರತಿಭಾ ಸಂಪನ್ನತೆ ಗುರುತಿಸುವುದು ನಮ್ಮೆಲ್ಲರ ಕರ್ತವ್ಯ. ಭಾವ,ಬುದ್ಧಿ ಒಟ್ಟಿಗೆ ಸೇರಿದಾಗ ಪ್ರತಿಭೆ ಹುಟ್ಟುತ್ತದೆ. ವೈವಿಧ್ಯತೆಯಿಂದ ಕೂಡಿರುವ ನಮ್ಮ ದೇಶದಲ್ಲಿ ಭಾಷೆ,ವಿಚಾರ, ಆಲೋಚನೆಗಳೆಲ್ಲ ಭಿನ್ನ. ಈ ದೇಶವನ್ನು ಮುನ್ನಡೆಸಲು ಪ್ರತಿಭಾಶಾಲಿ ಯುವ ಜನತೆ ಬೇಕು. ಜಗತ್ತು ನವ ನಿಮಾ೯ಣದತ್ತ ಕೊಂಡೊಯ್ಯುವರೇ ಇಂದಿನ ಪ್ರತಿಭಾಶಾಲಿ ಮಕ್ಕಳು ಎಂಬುದನ್ನು ಯಾರು ಮರೆಯುವಂತಿಲ್ಲ ಎಂದರು.
ಶಿಕ್ಷಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಬಿ.ಟಿ.ಗೌಡರ, ಆರ್.ಎ.ನದಾಫ್, ಬಿ.ಟಿ.ಗೌಡರ, ಬಿ.ಬಿ.ಉಣ್ಣಿಭಾವಿ, ಗುರುಸಿದ್ದಯ್ಯ ಪರಡಿಕರ ಸೇರಿದಂತೆ ನಿರ್ಗಮಿತ ಹಾಗು ಹಾಲಿ ಬಿಇಒ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಎನ್ ಜಿ ಓ ಕೋಶಾಧ್ಯಕ್ಷ ಜುಬೇರ ಕೆರೂರ,ಬೋಳಸೂರ, ಆರ್.ಎ.ನದಾಫ, ಎಂ.ಎಸ್.ಮುರಾತಿ೯ಹಾಳ, ಎಸ್.ಎಸ್.ನಾಗರಬೆಟ್ಟ, ಸಿ ಆರ್ ಸಿಗಳಾದ ಅಶೋಕ ಹೆಬ್ಬಾಳ, ಎಸ್.ಬಿ.ಹುರಕಡ್ಲಿ, ಕರಿಯಪ್ಪ ಸಿಂದಗಿ, ಬಸವರಾಜ ವಂದಾಲ, ಆರ್.ಸಿ.ಹೊಸಗೌಡರ, ಹನಮಂತ ಮಾಳಗೊಂಡ, ಎಲ್.ಆಯ್.ಪಲ್ಲೇದ, ಭೀಮಣ್ಣ ದಂಡಿನ, ಪ್ರಭು ಮಾಳಗೊಂಡ, ಮಹಾದೇವಪ್ಪ ಮಾದರ, ಮಾನಪ್ಪ ಬಡಿಗೇರ, ತಿಮ್ಮಣ್ಣ ಸಿಂದಗಿ, ಎಸ್.ಎಸ್.ಹೊಸಮನಿ, ಬಸವರಾಜ ಮೇಟಿ, ಎಂ.ಟಿ.ದೊಡಮನಿ, ಬಿ.ಎಸ್.ಅವಟಿ, ಎಂ.ಬಿ.ಮಮದಾಪೂರ, ಯು.ವೈ.ಬಶೆಟ್ಟಿ ಬಿ.ಬಿ.ಉಣ್ಣಿಬಾವಿ ಮೊದಲಾದವರು ಇದ್ದರು. ಸಿಆರ್ ಸಿ ಬಾಷಾಸಾಬ್ ಮನಗೂಳಿ ಸ್ವಾಗತಿಸಿದರು, ರಾಘವೇಂದ್ರ ವಂದಗನೂರ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಹುರಕಡ್ಲಿ ವಂದಿಸಿದರು.