ಉತ್ತರಪ್ರಭ ಸುದ್ದಿ
ಲಕ್ಷ್ಮೇಶ್ವರ: ಪಟ್ಟಣದ ಬಸ್ತಿಕೆರೆಯ ಓಣಿಯ ನಿವಾಸಿ ಬಸವರಾಜ ನಿಂಗಪ್ಪ ಮಡಿವಾಳರ ಎಂಬ ವ್ಯಕ್ತಿಗೆ ಕೊರೋನ ಎಂಬ ಮಹಾಮಾರಿಯಿಂದ ದೃಷ್ಟಿ ಕಸಿದುಕೊಂಡರೆ ಅತಿಯಾದ ಮಳೆ ಬದುಕನ್ನೇ ಕಸಿದುಕೊಂಡಿದೆ. ಇದ್ದ ಒಂದು ಮನೆಯು ಅತಿಯಾದ ಮಳೆಯಿಂದ ಸಂಪೂರ್ಣ ಬಿದ್ದಿದ್ದು ಇದರಿಂದ ಕುಟುಂಬ ಬೀದಿಗೆ ಬಂದಿದೆ.

ಅದೊಂದು ಸುಂದರವಾದ ಕುಟುಂಬ ತಾಯಿ,ಮಗ, ಸೊಸೆ, ಮಕ್ಕಳು ಹೀಗೆ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾಗ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೋರೋನಾ ಮಹಾಮಾರಿ ಬಸವರಾಜ ಮತ್ತು ಅವರ ತಾಯಿಗೆ ವಕ್ಕರಿಸಿತು. ತಾಯಿ ದೇವರ ದಯದಿಂದ ಕೋರೋನದಿಂದ ಪಾರಾದರೆ. ಮನೆಗೆ ಆಧಾರ ಸ್ತಂಭವಾಗಿದ್ದ ಬಸವರಾಜ ಕೋರೋನದಿಂದ ದೃಷ್ಟಿಕಳೆದುಕೊಳ್ಳಬೇಕಾಯಿತು.
ಬಡವರ ಬದುಕನ್ನೇ ಕೋರೋನ ಕಸಿದುಕೊಂಡಿದ್ದು, ಸದ್ಯ ಈ ಕುಟುಂಬದ ರಕ್ತ ಕಣ್ಣೀರು ಕೇಳೊರ್ಯಾರು ಎನ್ನುವಂತ್ತಾಗಿದೆ.
ಬದುಕು ಸಾಗಿಸಲು ಇರುವ ಪುಟ್ಟ ಮನೆಯು ಸತತವಾಗಿ ಸುರಿದ ಮಳೆಗೆ ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಏನೋ ಮನೆಗೆ ಆಧಾರ ಸ್ತಂಭವಾಗಿದ್ದ ಗಂಡ ಕೋರೋನ ಹೊಡೆತದಿಂದ ದೃಷ್ಟಿ ಕಳೆದುಕೊಂಡ ಸಂಪೂರ್ಣ ದೌರ್ಬಲ್ಯವಾಗಿದ್ದು, ಹೆಂಡತಿಯೇ ಕೂಲಿ ಮಾಡಿ ಅವರಿವರ ಮನೆಯ ಕೆಲಸ ಮಾಡಿ ಜೀವನ ಸಾಗಿಸುತ್ತಿವಾಗ ಇದ್ದ ಮನೆಯು ಮಳೆಯಿಂದ ಕುಸಿದು ಬಿದ್ದಿದ್ದು ಬದುಕು ಬೀದಿಗೆ ಬಂದಿದೆ. ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಇವರ ಕುಟುಂಬಕ್ಕೆ ಬಂದಿದ್ದು, ಯಾರಿದ್ದೋ ಮನೆಯ ಮುಂದೆ ಆಶ್ರಯ ಪಡೆದು ಕಣ್ಣು ಕಾಣದ ಗಂಡ ಎರಡು ಪುಟ್ಟ ಮಕ್ಕಳು ವಯಸ್ಸಾದ ಅಜ್ಜಿ ಬಿದ್ದ ಮನೆ ಹೀಗೆ ಬಸವರಾಜ ಪತ್ನಿ ನಿರ್ಮಲಾ ಜೀವನ ಸಾಗಿಸುತ್ತಿದ್ದಾರೆ.
ಕಣ್ಣು ಕಳೆದುಕೊಂಡವನ ಗಂಡ ಒಂದು ಕಡೆ ಆದರೆ ಇನ್ನೊಂದು ಮನೆಯು ಇಲ್ಲ ಇವರ ಕುಟುಂಬದ ಬಾಳು ಈಗ ನರಕ ಸದೃಶ್ಯವಾಗಿದೆ. ಈ ನೊಂದ ಕುಟುಂಬ ನಡುಬೀದಿಗೆ ಬಂದಿದ್ದು, ದಯವಿಟ್ಟು ಸಹಾಯ ಮಾಡಿ ಎಂದು ಅಳಲು ತೊಡಿಕೊಂಡಿದ್ದಾರೆ.
ಕೋರೋನ ಜೀವನ ಹಾಳು ಮಾಡಿದರೆ ಮಳೆ ಬದುಕನ್ನೇ ಕಸಿದುಕೊಂಡಿದೆ. ಇದ್ದ ಒಂದು ಮನೆಯು ಮಳೆಯಿಂದ ಬಿದ್ದಿದ್ದು ನಮ್ಮ ಬದುಕು ಈಗ ಬೀದಿಗೆ ಬಂದಿದೆ ನಮಗೆ ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಿ
ಬಸವರಾಜ ನಿಂಗಪ್ಪ ಮಡಿವಾಳರ
ಈ ನೊಂದ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು
ಗುರುಪುತ್ರ ಮೆಡ್ಲೇರಿ, ಶಿವಶಂಕರ ಬ್ಯಾಡಗಿ, ಸ್ಥಳೀಯ ನಿವಾಸಿ
ದೃಷ್ಟಿ ಕಳೆದುಕೊಂಡ ಬಸವರಾಜ ಮಡಿವಾಳರ ಅವರಿಗೆ ಮಸಾಸನೆ ನೀಡಲಾಗುವದು, ಮನೆ ಕಳೆದುಕೊಂಡ ಇವರಿಗೆ ಸರಕಾರದಿಂದ ಪರಿಹಾರ ನೀಡಲಾಗುವುದು. ತಾತ್ಕಾಲಿಕವಾಗಿ ಪುರಸಭೆಯ ನಿವಾಸದಲ್ಲಿ ಆಶ್ರಯ ಹಾಗೂ ಆಹಾರ ಕಿಟ್ ವಿತರಣೆ ಮಾಡಲಾಗುವುದು
ಪರಶುರಾಮ ಸತ್ತಿಗೇರಿ, ತಹಶೀಲ್ದಾರ ಲಕ್ಷ್ಮೇಶ್ವರ