ಉತ್ತರಪ್ರಭ ಸುದ್ದಿ
ನಾನು ದಿನಾಂಕ 08-11-2022ರಂದು ಶಿರಹಟ್ಟಿಯಲ್ಲಿ ಜನಸಂಪರ್ಕ ಯಾತ್ರೆಯನ್ನು ಮುಗಿಸಿಕೊಂಡು ಬರುತ್ತಿರುವ ಸಂಧರ್ಭದಲ್ಲಿ ರೋಣ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿಯವರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಿರುವಾಗ “ಸ್ಪರ್ಧೆ ಮಾಡುತ್ತೀಯಾ ಅಂತಾ ಕೇಳಿದಾಗ ನನ್ನ ಮೇಲೆ ಜವಾಬ್ದಾರಿ ಹಾಕಿದ್ದರು, ಅದಕ್ಕೆ ನಾನು ಜನ ಈಗಾಗಲೇ ನೀನು ನಿಲ್ಲುವುದು ಬೇಡ ಅಂತಾ ಹೇಳುತ್ತಿದ್ದಾರೆ ಅಂತಾ ನಗೆ ಚಟಾಕಿ ಹಾರಿಸಿದ್ದ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರುಗಳು ಕೂಡಾ ಇದ್ದರು. ಇದೊಂದು ಅನೌಪಚಾರಿಕ ತಮಾಷೆಯ ಸಂಭಾಷಣೆಯಾಗಿದ್ದು, ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು. ನನಗೆ ಆಪ್ತರಾದವರೊಂದಿಗೆ ಈ ರೀತಿಯಲ್ಲಿ ಆಪ್ತತೆಯಿಂದ ತಮಾಷೆಗಾಗಿ ಮಾತನಾಡುತ್ತೇನೆ. ಅದೇ ರೀತಿಯಲ್ಲಿ ಕಳಕಪ್ಪ ಬಂಡಿಯವರೊಂದಿಗೆ ತಮಾಷೆಯಾಗಿ ಮಾತನಾಡಿದ್ದೇನೆಯೆ ಹೊರತು ಇನ್ನಾವುದೇ ಉದ್ದೇಶವಿರಲಿಲ್ಲ. ಜಾಲತಾಣಗಳಲ್ಲಿ ಬೇರೆ ಅರ್ಥದಲ್ಲಿ ಪ್ರಚಾರಗೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಇದನ್ನು ಯಾರು ಅಪಪ್ರಚಾರ ಮಾಡಬಾರದೆಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಶಾಸಕ ಕಳಕಪ್ಪ ಬಂಡಿಯವರು ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು ಜನಪ್ರಿಯರಾಗಿದ್ದಾರೆ. ಚುನಾವಣೆ ಇನ್ನೂ ದೂರದಲ್ಲಿದೆ. ಕ್ಷೇತ್ರದ ಜನರು ಇದಾವುದರ ಬಗ್ಗೆಯೂ ತಲೆ ಕೆಡೆಸಿಕೊಳ್ಳದೇ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಯಡಿಯೂರಪ್ಪ ಅವರು ಮನವಿ ಮಾಡಿದ್ದಾರೆ.