ಉತ್ತರಪ್ರಭ ಸುದ್ದಿ

ನಿಡಗುಂದಿ: ನೇಪಾಳದ ಪೊಖರಾದಲ್ಲಿ ನಡೆದ ಇಂಡೋ-ನೇಪಾಳ ಇಂಟರ್ ನ್ಯಾಷನಲ್ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿಯ ಕ್ರಿಕೆಟ್ ತಂಡ ಚಿನ್ನದ ಪದಕ ಗಳಿಸಿದೆ. ನಿಡಗುಂದಿಯ ಕ್ರಿಕೆಟ್ ತರಬೇತುದಾರ ಪವಾಡೆಪ್ಪ ಗುಂಡಿನಪಾಳ್ಯ ಅವರ ಮಾರ್ಗದರ್ಶನದಲ್ಲಿ ಈ ಕ್ರಿಕೆಟ್ ತಂಡ ಈ ಸಾಧನೆ ಮಾಡಿದೆ. ತಂಡದಲ್ಲಿ ನಿಡಗುಂದಿ ಪಟ್ಟಣದ ಯುವ ಪ್ರತಿಭೆಗಳಾದ ಶಿವಾನಂದ ಮಹಾದೇವಪ್ಪ ಗುಡಿಮನಿ, ಕಿರಣ ಮೋತಿಲಾಲ್ ಚವ್ಹಾಣ, ಸಂಪತ್ ಸಂಗಮೇಶ ಗೂಗಿಹಾಳ, ಪವನ ಕನಕಪ್ಪ ಪೂಜಾರಿ, ಪರಶುರಾಮ ಸುರೇಶ ಭಾಂಡವಳಕರ, ಖಲೀಲ್ ಬಾಬಾಜಾನ್ ಪೀರಜಾದೆ, ಅರವಿಂದ ಜವಾರಾಮ್ ಚೌಧರಿ, ಸುಮಿತ ಪರಶುರಾಮ ಕೇಳವಾಡಿ, ಸಮೀರ್ ಜಾವೀದ್ ಮನ್ನಿಕೇರಿ, ಅಕ್ಷಯಕುಮಾರ ಯಲಗೂರೇಶ, ಕಿರಣ ಚೌಧರಿ ಕ್ರಿಕೆಟ್ ತಂಡದಲ್ಲಿದ್ದರು. ಇವರೆಲ್ಲರ ಸಾಂಘಿಕ ಆಟದ ಪ್ರದರ್ಶನದಿಂದ ನಿಡಗುಂದಿ ಕ್ರಿಕೆಟ್ ತಂಡ ಪಂದ್ಯಾವಳಿಯಲ್ಲಿ ಮಿಂಚಿ ಪ್ರಶಸ್ತಿ ಪಡೆದಿದೆ.

Leave a Reply

Your email address will not be published. Required fields are marked *

You May Also Like

ಕೊರೊನಾ ಖರ್ಚು ವೆಚ್ಚದ ಕುರಿತು ಶ್ವೇತಪತ್ರ ಹೊರಡಿಸಿ: ಸಿದ್ದರಾಮಯ್ಯ

ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ಕರ್ನಾಟಕ ಸಿಎಂ ಬಿ.ಎಸ್.ಯಡಿಯೂರಪ್ಪ ಕೈಗೊಂಡ ಕ್ರಮಗಳು ಮತ್ತು ಮಾಡಿರುವ ಖರ್ಚು-ವೆಚ್ಚಗಳು…

ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ್ದ ಪ್ರಕರಣ ಏಳು ಜನರ ಅಮಾನತ್ತು…!

ಉತ್ತರಪ್ರಭ ಸುದ್ದಿಗದಗ: ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ್ದ ಪ್ರಕರಣ. ಐವರು ಮೇಲ್ವಿಚಾರಕರು, ಇಬ್ಬರು…

ಕೋರೋನಾ ಸಂದರ್ಭದಲ್ಲಿ ಪೌರಕಾರ್ಮಿಕರ ಸೇವೆ ಅನನ್ಯ: ಶ್ರೀಕಾಂತ್ ಕಾಟೇವಾಲೆ

ಲಕ್ಷ್ಮೇಶ್ವರ :ಜಿಲ್ಲಾ ನಗರಾಭಿವೃದ್ಧಿ ಕೋಶ , ಜಿಲ್ಲಾಡಳಿತ ಗದಗವತಿಯಿಂದ ಕಾರ್ಯಲಯ ಲಕ್ಷ್ಮೇಶ್ವರ ಇವರ ಸಹಯೋಗದೊಂದಿಗೆ ಲಕ್ಷ್ಮೇಶ್ವರ…