ನಿಡಗುಂದಿ: ವಚನ ಸಾಹಿತ್ಯ ಸೃಷ್ಟಿಸುವಾಗ ಯಾರಿಗೂ ಮಣಿಯದೇ, ಯಾರ ಹಂಗಿನಲ್ಲಿರದೇ, ಅಂಜಿಕೆಯ ಭೀತಿ ಇಲ್ಲದೇ ರಾಜಾಶ್ರಯವನ್ನು ಕಿತ್ತೆಸೆದು ಸ್ವತಂತ್ರ ವಿಚಾರಗಳನ್ನು ವಚನಗಳ ಮೂಲಕ ಬಿಂಬಿಸಿದ ಅಂದಿನ ಶರಣರ ಧೈರ್ಯ ನಿಜಕ್ಕೂ ಮೆಚ್ಚಲೇ ಬೇಕು.ಮೂಡನಂಬಿಕೆ,ಕಂದಾಚಾರ ಇತರೆ ವಿಷಯಗಳನ್ನು ಮುಲಾಜಿಲ್ಲದೇ ಶರಣರು ಖಂಡಿಸುತ್ತಿದ್ದರು ಎಂದು ಮಕ್ಕಳ ಸಾಹಿತಿ ಡಾ.ಫ.ಗು.ಸಿದ್ದಾಪುರ ಹೇಳಿದರು. ಸಮೀಪದ ಗೊಳಸಂಗಿಯ ಚ.ಚ.ಹೆಬ್ಬಾಳ ಸಕಾ೯ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುರಗೇಶ ಹೆಬ್ಬಾಳ ಸ್ಮರಣಾರ್ಥ ಬಸವನ ಬಾಗೇವಾಡಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಘಟಕದ ಆಶ್ರಯದಲ್ಲಿ ಸಂಘಟಿಸಿದ ದತ್ತಿ ಉಪನ್ಯಾಸ ಹಾಗು ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು,12 ನೇ ಶತಮಾನದಲ್ಲಿ ಶರಣರು ನೀಡಿದ ವಚನಗಳು ಕನ್ನಡ ಸಾಹಿತ್ಯವನ್ನು ಅತ್ಯಂತ ಎತ್ತರಮಟ್ಟಕ್ಕೆ ಕೊಂಡೊಯ್ದು ಶ್ರೀಮಂತಗೊಳಿಸಿವೆ ಎಂದರು ಉಪನ್ಯಾಸಕ, ಸಾಹಿತಿ ಸಿ.ಎಂ.ಜೋಶಿ ಮಾತನಾಡಿ, ಗ್ರಾಮದ ಮುಖಂಡ, ಕೊಡುಗೈ ದಾನಿ, ಗ್ರಾಮದ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದ ದಿವಂಗತ ಮುರಗೇಶ ಹೆಬ್ಬಾಳ ಅವರ ಕೊಡುಗೆ ಅಪಾರ, ಪ್ರತಿಯೊಂದಕ್ಕೂ ಸ್ಪಂದಿಸುವ ಗುಣದ ಕಾರಣ ಡಿಸಿಸಿ ಬ್ಯಾಂಕ್ ನಿರ್ದೇಶಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೇರಿ ನಾನಾ ಹುದ್ದೆಗಳು ಅವರಿಗೆ ಆರಿಸಿ ಬಂದವು ಎಂದರು. ಹಿರಿಯ ಶರಣ ಜೀವಿ ಎಸ್.ಎಸ್. ಝಳಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಬಸವನಬಾಗೇವಾಡಿ ತಾಲ್ಲೂಕು ಘಟಕದ ಅಧ್ಯಕ್ಷ ವೀರಣ್ಣ ಮರ್ತೂರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ ಕಾಳಿಂಗ ಗೊಳಸಂಗಿ, ರಾಜೇಶ್ವರಿ ಹೆಬ್ಬಾಳ, ಕದಳಿ ವೇದಿಕೆಯ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ಎಂ.ಆರ್. ಹೆಬ್ಬಾಳ, ಪ್ರೊ. ಎಸ್.ಎಸ್. ರಾಜಮಾನೆ, ಪ್ರೊ ಚಂದ್ರಶೇಖರ ಹಂಗರಗಿ, ಡಾ ಯುವರಾಜ ಮಾದನಶೆಟ್ಟಿ, ಪ್ರೊ ಸುಭಾಸ, ಕೆ.ಎಸ್. ಹಿರೇಮಠ, ಶರಣು ಬಸ್ತಾಳ, ನೇಹಾ ಕಮತಗಿ, ಆರ್.ಜಿ. ಅಳ್ಳಗಿ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಕೋವಿಡ್ ಲಸಿಕೆ 2021ರಲ್ಲಿ ಲಭ್ಯ ದಿಢೀರ್ ನಿರೀಕ್ಷೆ ಬೇಡ: ಡಬ್ಲೂಎಚ್ಒ ತಜ್ಞ

ಕೋವಿಡ್ ಲಸಿಕೆ ತಯಾರಿಸುತ್ತಿರುವ ಎಲ್ಲ ಪ್ರಯೋಗಗಳು ಈಗ ಯಶಸ್ವಿ ಹಾದಿಯಲ್ಲಿವೆ. ಸುರಕ್ಷತೆ ಮತ್ತು ರೋಗ ನಿರೋಧಕತೆ ಸೃಷ್ಟಿಸುವ ದೃಷ್ಟಿಯಲ್ಲಿ ಈ ಪ್ರಯೋಗಗಳು ಫಲ ನೀಡುತ್ತಿವೆ.

ಅಕ್ಟೋಬರ್ ನಲ್ಲಿ ಗ್ರಾಮ ಪಂಚಾಯತಿ ಚುನಾವಣೆ?

ಬೆಂಗಳೂರು: ಕೊರೊನಾ ಕಾರಣದಿಂದ ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಲಾಗಿತ್ತು. ಇದಕ್ಕೆ ವಿರೋಧ ಪಕ್ಷದಿಂದ ವ್ಯಾಪಕ ವಿರೋಧವು…

ಕೈಗೆ ಸಿಕ್ಕ ಅಧಿಕಾರಿಗೆ ಟ್ರ‍್ಯಾಕ್ಟರ್ ನಲ್ಲಿ ರಸ್ತೆ ದರ್ಶನ: ಕೆಲವು ತಿಂಗಳಕ್ ಕಿತ್ತು ಹೋಗೈತ್ಯಂತ ದೊಡ್ಡೂರು ರಸ್ತೆ!

ಹೇಳಿ, ಹೇಳಿ ಸಾಕಾಗಿ ಹೋಯ್ತು. ಕಾಮಗಾರಿ ಮುಗಿದ್ ಒಂದ್ ತಿಂಗಳದಾಗ ಮಾಡಿದ್ ರೋಡ್ ಹಳ್ಳಾ ಹಿಡಿದೈತಿ. ಬರ್ರಿ.. ನೀವಾರಾ ನೋಡ್ ಬರ್ರಿ.., ಕೆಲ್ಸಾ ಮಾಡಿದ್ ಗುತ್ತಿಗೆದಾರರಾದ್ರು ಯಾರು? ಹಿಂಗೆಲ್ಲ ಹೇಳಿ ಅಧಿಯಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡ ಘಟನೆ ಲಕ್ಷ್ಮೇಶ್ವರದಲ್ಲಿ ನಡೆಯಿತು.

ವೈದ್ಯಾಧಿಕಾರಿ ಆತ್ಮಹತ್ಯೆಗೆ ಕಾರಣರಾದವರನ್ನು ಶಿಕ್ಷಿಸಿ: ಡಿ.ಕೆ.ಶಿವಕುಮಾರ್

ಆತ್ಮಹತ್ಯೆ ಮಾಡಿಕೊಂಡಿರುವ ವೈದ್ಯಾಧಿಕಾರಿ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂಪಾಯಿ ದುಡ್ಡು ನೀಡುವುದರಿಂದ ಅವರಿಗೆ ನ್ಯಾಯ ಸಿಗುವುದಿಲ್ಲ. ಆತ್ಮಹತ್ಯೆಗೆ ಕಾರಣರಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒತ್ತಾಯಿಸಿದರು.