ಉತ್ತರಪ್ರಭ ಸುದ್ದಿ
ಆಲಮಟ್ಟಿ: ರಾಷ್ಟ್ರಧರ್ಮ ದೃಷ್ಟಾರ, ನೈಷ್ಟಿಕ ಬ್ರಮ್ಮಚಾರಿ, ಸಮಾಜಮುಖಿಯ ಅದಮ್ಯ ಚೇತನ, ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪನವರ ಕರ್ಮಭೂಮಿಯಲ್ಲಿಂದು ಐತಿಹಾಸಿಕ ದೇಶಭಕ್ತಿಯ ನಿನಾದ ಮೊಳಗಿದವು. ಯುವಜನತೆ ತಿರಂಗಾ ಕಲರವದಲ್ಲಿ ಮಿಂದೆದ್ದು ದೇಶಾಭಿಮಾನದ ವಿರಾಟ್ ರೂಪ ಪ್ರದಶಿ೯ಸಿದರು. ಜನಪದ ಸೊಗಡಿನ ಝೇಂಕಾರದ ಸದ್ದು ಮಾರ್ದನಿಸಿದವು. ಆಲಮಟ್ಟಿಯ ಹಡೇ೯ಕರ ಮಂಜಪ್ಪ ಸ್ಮಾರಕದ ಅಂಗಳದಲ್ಲಿ ಶುಕ್ರವಾರ ಕಂಡು ಬಂದ ವೈಭವಯುತ ದೃಶ್ಯಗಳು ನಿಜಕ್ಕೂ ಮೈಮನಗಳು ನಿಬ್ಬೆರಾಗುವಂತೆ ಬೆರಗುಗೊಳಿಸಿದವು. ದೇಶಭಕ್ತಿಯ ಸವಿರುಚಿಯಲ್ಲಿ ಅಪಾರ ಸಂಖ್ಯೆಯ ಯುವಜನ ಸಮೂಹ ಸೇರಿದಂತೆ ಅಸಂಖ್ಯಾತ ಜನತೆ ತೇಲುವಂತೆ ಮಾಡಿದವು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು 75 ನೇ ಸ್ವಾತಂತ್ರ್ಯ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಸದೃಢ ಭಾರತಕ್ಕಾಗಿ ಆಲಮಟ್ಟಿಯಿಂದ ತಾಳಿಕೋಟಿವರೆಗೆ ಸಂಘಟಿಸಿರುವ 8 ದಿನದ ಯುವಜನ ಸಂಕಲ್ಪ ನಡಿಗೆ 75 ಕಿಮೀ ಉದ್ದದ ಪಾದಯಾತ್ರೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಈ ಅಭೂತಪೂರ್ವ ಸವಿಭಾವಗಳು ಮೂಡಿಬಂದವು. ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ಮಹನೀಯರ ಸ್ಮರಣೆ ಯುವ ಮನಗಳಲ್ಲಿ ಹರಿದಾಡಿದವು. ಅವರ ತ್ಯಾಗದ ಕಥಾ ಹಂದರ ಯುವಕರ ಮೊಗದಲ್ಲಿ ನುಸುಳಿ ದೇಶಾಭಿಮಾನದ ಕಿಚ್ಚು ಹುಟ್ಟಿಸಿದವು.


ಸಾವಿರಾರು ಸಂಖ್ಯೆಯಲ್ಲಿ ಯುವಕ,ಯುವತಿಯರು ರಾಷ್ಟ್ರಧ್ವಜದ ವಿಶೇಷ ಉಡುಗೆಯಲ್ಲಿ ತ್ರಿವರ್ಣ ಧ್ವಜದ ಪೇಟಾ ತಲೆಗೆ ಸುತ್ತಿಕೊಂಡು ನಡಿಗೆಯಲ್ಲಿ ಭಾಗಿಯಾದರು. ರಾಷ್ಟ್ರ ನಾಯಕರ ಸ್ತಬ್ಧ ಚಿತ್ರಗಳು, ಕರಾವಳಿ ಭಾಗದ ಜನಾಕರ್ಷಕ ಕೌಂಶಾಳೆ ಸೇರಿದಂತೆ ವಿವಿಧ ಯಕ್ಷಗಾನಗಳ ನೃತ್ಯ, ದೇಶಾಭಿಮಾನದ ಗೀತರಾಗಗಳು ಗಮನ ಸೆಳೆದವು. ಮಂಜಪ್ಪನವರ ಪುತ್ಥಳಿಗೆ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಲಾಯಿತು. ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು, ಶಾಲಾ,ಕಾಲೇಜು ಮಕ್ಕಳು ಮೊದಲು ದಿನದ ಆರಂಭ ನಡಿಗೆಯಲ್ಲಿ ಉತ್ಸಹದಿಂದ ಪಾಲ್ಗೊಂಡಿದ್ದರು. ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಉದ್ಯಮಿ ಭರತಗೌಡ ಪಾಟೀಲ, ಎಸ್.ವಿ.ವಿ.ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟಿ, ನಿಡಗುಂದಿ ಶ್ರೀ ರುದ್ರಮುನಿ ಶಿವಾಚಾರ್ಯ ಸಾಮೀಜಿ, ಮಾಜಿ ಸೈನಿಕರು, ಹಲ ಗಣ್ಯಾತೀತ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಡಿಸಿ ಹಿರೇಮಠ ಎದುರಿಗೊಂದು ಪ್ರಶ್ನೆ?: ಸಾವಿಗೆ ಕಾರಣ ಸೋಂಕೊ? ಶುಗರೋ?

ಬೆಳಗಾವಿ: ರಾಜ್ಯ ಹೆಲ್ತ್ ಬುಲೆಟಿನ್ ಪ್ರಕಾರ, ಗೋಕಾಕ್ ತಾಲೂಕಿನ ಕೊಣ್ಣೂರಿನ 55 ವರ್ಷದ ಮಹಿಳೆಯೊಬ್ಬರು ಕೊವಿಡ್ನಿಂದ ಮೃತರಾಗಿದ್ದಾರೆ. ಈ ಮಾಹಿತಿಯನ್ನು ಜಿಲ್ಲಾಡಳಿತ ರಾಜ್ಯ ಆರೋಗ್ಯ ಇಲಾಖೆಗೆ ಕಳಿಸಿತ್ತು. ಜಿಲ್ಲಾ ವೈದ್ಯಾಧಿಕಾರಿಗಳು ಟೆಸ್ಟ್ ವರದಿ ಬರುವ ಮುನ್ನವೇ ಸಾವು ಕೊವಿಡ್ ಕಾರಣದಿಂದ ನಿರ್ಧರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗದಗ ಜಿಲ್ಲೆಯ 9 ಕಂಟೇನ್‍ಮೆಂಟ್ ಪ್ರದೇಶಗಳ ನಿರ್ಭಂಧ ತೆರವು

ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾದ ಕೆಳಕಂಡ 9 ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿತ್ತು. ಇದೀಗ 9 ಪ್ರದೇಶಗಳ ನಿರ್ಭಂಧವನ್ನು ಜಿಲ್ಲಾಡಳಿತ ತೆರವುಗೊಳಿಸಲಾಗಿದೆ.

ಪುರಾಣ ಕವಿ ರಾಮಣ್ಣ ಬ್ಯಾಟಿ ಇನ್ನಿಲ್ಲ

ಗದಗ: ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಗದುಗಿನ ತೋಂಟದಾರ್ಯ ಲಿಂಗೈಕ್ಯ ಪರಮಪೂಜ್ಯ ಡಾಕ್ಟರ್ ತೋಂಟದ ಸಿದ್ದಲಿಂಗ…

ಶಿರಹಟ್ಟಿ ಕಟ್ಟಿಗೆ ಅಡ್ಡೆಗಳ ವಿಚಾರದಲ್ಲಿ ಪತ್ರಗಳ ತಾಪತ್ರೆಯ ತಪ್ಪೋದು ಯಾವಾಗ?

ಒಂದು ಮಾದ್ಯಮವಾಗಿ ಉತ್ತರಪ್ರಭ ಜನಪರವಾಗಿ ಕಾರ್ಯ ಮಾಡುತ್ತಿರುವಾಗ ಆಡಳಿತ ಯಂತ್ರಕ್ಕೆ ಮಾತ್ರ ಈ ವಿಚಾರದ ಗಂಭೀರತೆಯ ಅರ್ಥವಾಗುತ್ತಿಲ್ಲವೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಕಾರಣ ಈಗಾಗಲೇ ಶಿರಹಟ್ಟಿ ಪಟ್ಟಣದಲ್ಲಿರುವ ಕಟ್ಟಿಗೆ ಅಡ್ಡೆಗಳ ವಿಚಾರವಾಗಿ ಸೂಕ್ತ ಕ್ರಮಕ್ಕಾಗಿ ಶಿರಹಟ್ಟಿ ತಹಶೀಲ್ದಾರ್ ಸ್ಥಳೀಯ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಆದೇಶಿಸಿದ್ದರು.