ಬೆಳಗಾವಿ: ಕೋವಿಡ್ ನಿಂದಾದ ಸಾವು ಎಂದು ಆರೋಗ್ಯ ಇಲಾಖೆ ದೃಢಪಡಿಸಿದ ಪ್ರಕರಣ ಈಗ ಜಿಲ್ಲೆಯಲ್ಲಿ ವಿವಾದ, ಗೊಂದಲಗಳಿಗೆ‌ ಕಾರಣವಾಗಿದೆ.

ರಾಜ್ಯ ಹೆಲ್ತ್ ಬುಲೆಟಿನ್ ಪ್ರಕಾರ, ಗೋಕಾಕ್ ತಾಲೂಕಿನ ಕೊಣ್ಣೂರಿನ 55 ವರ್ಷದ ಮಹಿಳೆಯೊಬ್ಬರು ಕೊವಿಡ್ ನಿಂದ ಮೃತರಾಗಿದ್ದಾರೆ. ಈ ಮಾಹಿತಿಯನ್ನು ಜಿಲ್ಲಾಡಳಿತ ರಾಜ್ಯ ಆರೋಗ್ಯ ಇಲಾಖೆಗೆ ಕಳಿಸಿತ್ತು. ಜಿಲ್ಲಾ ವೈದ್ಯಾಧಿಕಾರಿಗಳು ಟೆಸ್ಟ್ ವರದಿ ಬರುವ ಮುನ್ನವೇ ಸಾವು ಕೊವಿಡ್ ನಿಂದ ಸಂಭವಿಸಿದೆ ಎಂದು ನಿರ್ಧರಿಸಿದ ವಿಚಾರವೀಗ ವಿವಾದಕ್ಕೆ ಕಾರಣವಾಗಿದೆ.

ಇದಕ್ಕೆ ಮುಖ್ಯ ಕಾರಣ, ಮೃತ ಮಹಿಳೆಯನ್ನು ಮೊದಲು ಪರೀಕ್ಷಿಸಿದ್ದ ಕೊಣ್ಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಬಾಲುಕುಮಾರ್ ನೀಡಿರುವ ವಿಡಿಯೋ ಹೇಳಿಕೆ. ‘ಮಹಿಳೆಗೆ  ಪಾಸಿಟಿವ್ ಇರಲಿಲ್ಲ. ಸಕ್ಕರೆ ಕಾಯಿಲೆ ಅಧಿಕಗೊಂಡಿತ್ತು.  ಹೆಚ್ಚಿನ ಚಿಕಿತ್ಸೆಗೆಂದು ಬೆಳಗಾವಿ ಆಸ್ಪತ್ರೆಗೆ ಕಳಿಸಲಾಗಿತ್ತು. ಅದ್ಹೇಗೋ ಗೊತ್ತಿಲ್ಲ, ಅಲ್ಲಿ ಅವರನ್ನು ಕೊವಿಡ್ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಮಹಿಳೆಗೆ ಪಾಸಿಟಿವ್ ಇರಲಿಲ್ಲ. ಮಹಿಳೆ ಸಾವು ಸಕ್ಕರೆ ಕಾಯಿಲೆಯಿಂದ ಸಂಭವಿಸಿದೆ. ಕೊಣ್ಣೂರಿನಲ್ಲಿ ಸೋಂಕಿನ ಆತಂಕ ಬೇಡ’ ಎಂದು ಅವರು ಹೇಳಿದ್ದಾರೆ. ಇದರಿಂದ ಕೊಣ್ಣೂರಿನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.

ವಿಡಿಯೋ ಹೇಳಿಕೆ ನೀಡಿದ ವೈದ್ಯರಿಗೆ ಡಿಸಿ ಎಂ.ಜಿ. ಹಿರೇಮಠರು ನೋಟಿಸ್ ನೀಡಿ, ಸಾವು ಯಾವುದರಿಂದ ಸಂಭವಿಸಿತು ಎಂಬುದನ್ನು ನಂತರ ತಿಳಿಸುವೆ ಎಂದಿದ್ದಾರೆ.

ಹಿಂದೆ  ಹಿರೇಮಠರು ಗದಗ ಜಿಲ್ಲಾಧಿಕಾರಿಯಾಗಿದ್ದಾಗಲೂ ಕೊವಿಡ್ ವಿಷಯದಲ್ಲಿ ಕೆಲವು  ಗೊಂದಲ ಸೃಷ್ಟಿಯಾಗಿದ್ದನ್ನು ಇಲ್ಲಿ ನೆನೆಯಬಹುದು.

Leave a Reply

Your email address will not be published. Required fields are marked *

You May Also Like

ಇನ್ನು 5 ದಿನ ಮಳೆ : 7 ಜಿಲ್ಲೆಗಳಲ್ಲಿ ಹೈ ಅಲರ್ಟ್

ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಸತತ ಮಳೆಯಾಗುತ್ತಿದೆ. ಇನ್ನು ಐದು ದಿನಗಳ ಕಾಲ ಇದೇ ಹವಾಮಾನ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನರ‍್ದೇಶಕ ಸಿ.ಎಸ್ ಪಾಟೀಲ್ ಹೇಳಿದ್ದಾರೆ.

ಗದಗ ಜಿಪಂ ಅಧ್ಯಕ್ಷರಾಗಿ ರಾಜೂಗೌಡ ಪಾಟೀಲ್ ಅವಿರೋಧ ಆಯ್ಕೆ

ಗದಗ: ಜಿಲ್ಲಾ ಪಂಚಾಯತಿಯ ಅಧ್ಯಕ್ಷರಾಗಿ ರಾಜೂಗೌಡ ಕೆಂಚನಗೌಡ್ರ (ಪಾಟೀಲ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿ.ಪಂ.…

ಜೆಡಿಎಸ್ ಸ್ಥಾನ ಕಬಳಿಸಲು ಬಿಜೆಪಿ ಹೊಂಚು – ರೇವಣ್ಣ!

ಹಾಸನ : ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿ ಅಂತಿಮಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಶಾಸಕ ಎಚ್.ಡಿ. ರೇವಣ್ಣ ಆಕ್ರೋಶ ಹೊರ ಹಾಕಿದ್ದಾರೆ.

ರೋಣದಲ್ಲಿ ಸ್ವಚ್ಛತಾ ದಿನಾಚರಣೆ ಹಾಗು ಮಾಸ್ಕ್ ವಿತರಣೆ

ರೋಣ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ದಿನಾಚರಣೆ ಹಾಗೂ ಮಾಸ್ಕ ವಿತರಣೆ ಕುರಿತು ಕಾನೂನು ಶಿಬಿರ ಕಾರ್ಯಕ್ರಮ ಜರುಗಿತು.