ಆಲಮಟ್ಟಿ : ರಾಷ್ಟ್ರಧರ್ಮ ದೃಷ್ಟಾರ,ನೈಷ್ಟಿಕ ಬ್ರಮ್ಮಚಾರಿ,ಸಮಾಜಮುಖಿಯ ಅದಮ್ಯ ಚೇತನ, ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪನವರ ಕರ್ಮಭೂಮಿಯಲ್ಲಿಂದು ಐತಿಹಾಸಿಕ ದೇಶಭಕ್ತಿಯ ನಿನಾದ ಮೊಳಗಿದವು. ಯುವಜನತೆ ತಿರಂಗಾ ಕಲರವದಲ್ಲಿ ಮಿಂದೆದ್ದು ದೇಶಾಭಿಮಾನದ ವಿರಾಟ್ ರೂಪ ಪ್ರದಶಿ೯ಸಿದರು. ಜನಪದ ಸೊಗಡಿನ ಝೇಂಕಾರದ ಸದ್ದು ಮಾರ್ದನಿಸಿದವು.


ಆಲಮಟ್ಟಿಯ ಹಡೇ೯ಕರ ಮಂಜಪ್ಪ ಸ್ಮಾರಕದ ಅಂಗಳದಲ್ಲಿ ಶುಕ್ರವಾರ ಕಂಡು ಬಂದ ವೈಭವಯುತ ದೃಶ್ಯಗಳು ನಿಜಕ್ಕೂ ಮೈಮನಗಳು ನಿಬ್ಬೆರಾಗುವಂತೆ ಬೆರಗುಗೊಳಿಸಿದವು. ದೇಶಭಕ್ತಿಯ ಸವಿರುಚಿಯಲ್ಲಿ ಅಪಾರ ಸಂಖ್ಯೆಯ ಯುವಜನ ಸಮೂಹ ಸೇರಿದಂತೆ ಅಸಂಖ್ಯಾತ ಜನತೆ ತೇಲುವಂತೆ ಮಾಡಿದವು.
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು 75 ನೇ ಸ್ವಾತಂತ್ರ್ಯ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಸದೃಢ ಭಾರತಕ್ಕಾಗಿ ಆಲಮಟ್ಟಿಯಿಂದ ತಾಳಿಕೋಟಿವರೆಗೆ ಸಂಘಟಿಸಿರುವ 8 ದಿನದ ಯುವಜನ ಸಂಕಲ್ಪ ನಡಿಗೆ 75 ಕಿಮೀ ಉದ್ದದ ಪಾದಯಾತ್ರೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಈ ಅಭೂತಪೂರ್ವ ಸವಿಭಾವಗಳು ಮೂಡಿಬಂದವು.
ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ಮಹನೀಯರ ಸ್ಮರಣೆ ಯುವ ಮನಗಳಲ್ಲಿ ಹರಿದಾಡಿದವು. ಅವರ ತ್ಯಾಗದ ಕಥಾ ಹಂದರ ಯುವಕರ ಮೊಗದಲ್ಲಿ ನುಸುಳಿ ದೇಶಾಭಿಮಾನದ ಕಿಚ್ಚು ಹುಟ್ಟಿಸಿದವು.


ಸಾವಿರಾರು ಸಂಖ್ಯೆಯಲ್ಲಿ ಯುವಕ,ಯುವತಿಯರು ರಾಷ್ಟ್ರಧ್ವಜದ ವಿಶೇಷ ಉಡುಗೆಯಲ್ಲಿ ತ್ರಿವರ್ಣ ಧ್ವಜದ ಪೇಟಾ ತಲೆಗೆ ಸುತ್ತಿಕೊಂಡು ನಡಿಗೆಯಲ್ಲಿ ಭಾಗಿಯಾದರು. ರಾಷ್ಟ್ರ ನಾಯಕರ ಸ್ತಬ್ಧ ಚಿತ್ರಗಳು, ಕರಾವಳಿ ಭಾಗದ ಜನಾಕರ್ಷಕ ಕೌಂಶಾಳೆ ಸೇರಿದಂತೆ ವಿವಿಧ ಯಕ್ಷಗಾನಗಳ ನೃತ್ಯ, ದೇಶಾಭಿಮಾನದ ಗೀತರಾಗಗಳು ಗಮನ ಸೆಳೆದವು. ಮಂಜಪ್ಪನವರ ಪುತ್ಥಳಿಗೆ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಲಾಯಿತು. ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು, ಶಾಲಾ,ಕಾಲೇಜು ಮಕ್ಕಳು ಮೊದಲು ದಿನದ ಆರಂಭ ನಡಿಗೆಯಲ್ಲಿ ಉತ್ಸಹದಿಂದ ಪಾಲ್ಗೊಂಡಿದ್ದರು.


ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಉದ್ಯಮಿ ಭರತಗೌಡ ಪಾಟೀಲ, ಎಸ್.ವಿ.ವಿ.ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟಿ, ನಿಡಗುಂದಿ ಶ್ರೀ ರುದ್ರಮುನಿ ಶಿವಾಚಾರ್ಯ ಸಾಮೀಜಿ, ಮಾಜಿ ಸೈನಿಕರು, ಹಲ ಗಣ್ಯಾತೀತ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಪೋಷಣಾಂಶ ಆಹಾರವೇ ಆರೋಗ್ಯಕ್ಕೆ ಶೋಭಿತ – ಜಿ.ಎಂ.ಕೋಟ್ಯಾಳ

ಆಲಮಟ್ಟಿ : ಜೀವಸತ್ವವುಳ್ಳ ಪೋಷಕಾಂಶಗಳ ಆಹಾರ ಸೇವನೆಯಿಂದ ನಮ್ಮ ಶರೀರವನ್ನು ಸ್ವಸ್ಥವಾಗಿ,ಆರೋಗ್ಯಯುತವಾಗಿ ಕಾಪಾಡಿಕೊಳ್ಳಬಹುದು. ಇದುವೇ ಆರೋಗ್ಯ…

ಹೊಗಳಿದ್ದು ಸಾಕು; ಸಾಮರ್ಥ್ಯ ತೋರುವ ಅವಕಾಶ ನೀಡಿ

ಅರಣ್ಯ ಪ್ರದೇಶ ಹಾಗೂ ಗುಡ್ಡಗಾಡಿನ ಹಳ್ಳಿಗಳ ಶಾಲೆಗೆ ಹೋಗುವ ಶಿಕ್ಷಕಿಯರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಇದೆ. ಬಹಳಷ್ಟು ಹಳ್ಳಿಗಳಲ್ಲಿಯೂ ರಕ್ಷಣೆ ಅಗತ್ಯವಾಗಿದೆ. ಆದ್ದರಿಂದ ಶಿಕ್ಷಕಿಯರಿಗಾಗಿ ಗ್ರಾಮೀಣ ಪ್ರದೇಶದಲ್ಲಿ ವಸತಿ ಸೌಕರ್ಯ ಕಲ್ಪಿಸಬೇಕು’ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಡಾ.ಲತಾ ಮುಳ್ಳೂರ ಒತ್ತಾಯಿಸಿದರು.

ನ.30ಕ್ಕೆ ಗಾಣಿಗ ಸಮುದಾಯ ಭವನದ ಲೋಕಾರ್ಪಣೆ

ಹಾತಲಗೇರಿ ನಾಕಾ ಬಳಿ ವಿವೇಕಾನಂದ ನಗರದಲ್ಲಿ ನೂತನವಾಗಿ ನಿರ್ಮಿಸಿದ ಗಾನಿಗ ಸಮಾಜದ ಸಮುದಾಯ ಭವನ ನ.30 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಗಾಣಿಗ ಸಮುದಾಯ ಭವನ ಕಟ್ಟಡ ಕಾರ್ಯಕಾರಣಿ ಸಮಿತಿ ಅಧ್ಯಕ್ಷ ನಿಂಗಪ್ಪ ಕೆಂಗಾರ ಹೇಳಿದರು.

ವಿಕ್ಯಾಂಡ ಕರ್ಪ್ಯೂಗೆ ರೋಣದಲ್ಲಿ ಬೆಂಬಲ

ನಗರಾದ್ಯಂತ ವಿಕೆಂಡ್ ಕರ್ಪ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಯಾರೊಬ್ಬರೂ ಅನಗತ್ಯವಾಗಿ ಹೊರಗಡೆ ಬರದೇ ಮನೆಯಲ್ಲಿಯೇ ಕುಳಿತಿರುವುದು ಕಂಡು ಬಂದಿತು.