ಗದಗ: ಒಂದು ಮಾದ್ಯಮವಾಗಿ ಉತ್ತರಪ್ರಭ ಜನಪರವಾಗಿ ಕಾರ್ಯ ಮಾಡುತ್ತಿರುವಾಗ ಆಡಳಿತ ಯಂತ್ರಕ್ಕೆ ಮಾತ್ರ ಈ ವಿಚಾರದ ಗಂಭೀರತೆಯ ಅರ್ಥವಾಗುತ್ತಿಲ್ಲವೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಕಾರಣ ಈಗಾಗಲೇ ಶಿರಹಟ್ಟಿ ಪಟ್ಟಣದಲ್ಲಿರುವ ಕಟ್ಟಿಗೆ ಅಡ್ಡೆಗಳ ವಿಚಾರವಾಗಿ ಸೂಕ್ತ ಕ್ರಮಕ್ಕಾಗಿ ಶಿರಹಟ್ಟಿ ತಹಶೀಲ್ದಾರ್ ಸ್ಥಳೀಯ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಆದೇಶಿಸಿದ್ದರು. ಆದರೆ 18 ದಿನಗಳಾದರೂ ಮುಖ್ಯಾಧಿಕಾರಿಗಳು ಮಾತ್ರ ಮೌನ. ಇದರಿಂದಾಗಿ ಈ ವಿಚಾರವಾಗಿ ಮೇಲಧಿಕಾರಿಗಳು ಆದೇಶಿಸಿದರೂ ಅದಕ್ಕೆ ಕಿಮ್ಮತ್ತೆ ಇಲ್ಲದಂತಾಗಿದ್ದು, ಕಳೆದ ಒಂದುವರೆ ವರ್ಷದಿಂದ ಇದೇ ಆಗಿದೆ.

ಜಿಲ್ಲಾಧಿಕಾರಿಗಳ ಆದೇಶ, ತಹಶೀಲ್ದಾರರು, ತಹಶೀಲ್ದಾರರ ಆದೇಶ ಮುಖ್ಯಾಧಿಕಾರಿ ಹೀಗೆ ಮೇಲಧಿಕಾರಿಗಳ ಆದೇಶ ಆದೇಶಗಳಾಗಿ ಉಳಿಯುತ್ತಿವೆ. ಆದರೆ ಪಾಲನೆ ಆಗುವುದು ಯಾವಾಗ? ಎನ್ನುವುದು ಸಾರ್ವಜನಿಕ ವಲಯದ ಪ್ರಶ್ನೆ.

ಉತ್ತರಪ್ರಭ ಸರಣಿ ವರದಿಗಳ ನಂತರ ಎಚ್ಚೆತ್ತುಕೊಂಡ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ್ ಸ್ಥಳೀಯ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಈ ಬಗ್ಗೆ ಪರಿಶೀಲನೆ ನಡೆಸಿ ಮೂರು ದಿನದೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದರು. ಆದರೆ ಇಂದಿಗೆ 22 ದಿನಗಳಾದರೂ ಮುಖ್ಯಾಧಿಕಾರಿಗಳು ಏನು ಕ್ರಮ ತೆಗೆದುಕೊಂಡರು? ಏನು ಪರಿಶೀಲನೆ ನಡೆಸಿದರು ಎನ್ನುವುದು ಕೂಡ ಗೌಣ.

ವಾಸ್ತವದಲ್ಲಿ ಕಟ್ಟಿಗೆ ಅಡ್ಡೆಗಳ ಮಾಲಿಕರು ಪ್ರಭಾವಿಗಳಾಗಿರುವುದರಿಂದ ಅವರ ಗೋಜಿಗೆ ಹೋಗಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತುಗಳು ಕೇಳಲಾರಂಭಿಸಿವೆ. ತಹಶೀಲ್ದಾರರು ನೀಡಿದ ಮೂರು ದಿನದ ಅವಧಿ ಮುಗಿದಾಗ್ಯೂ ಮುಖ್ಯಾಧಿಕಾರಿಯಿಂದ ಯಾವುದೇ ಪ್ರತಿಕ್ರಿಯೇ ಬಾರದೇ ಇರುವ ಕಾರಣ ಮತ್ತೆ ಫೆ.15 ಕ್ಕೆ ತಹಶೀಲ್ದಾರ್ ಮುಖ್ಯಾಧಿಕಾರಿಗಳ ವಿಳಂಭ ಧೋರಣೆಗೆ ವಿಷಾಧ ವ್ಯಕ್ತಪಡಿಸಿ ಮತ್ತೆ 3 ದಿನಗಳ ಕಾಲಾವಕಾಶ ನೀಡಿ, ಸೂಚನೆ ನೀಡಿದ್ದಾರೆ.

ಮಾನವ ಹಕ್ಕು ಆಯೋಗಕ್ಕೆ:

ಇಷ್ಟಾದಾಗ್ಯೂ ಕ್ರಮಕ್ಕೆ ಆಡಳಿತ ವ್ಯವಸ್ಥೆ ಕೇವಲ ದಾಖಲೆ ಮೂಲಕ ಕಾಲ ಕಳೆಯುತ್ತಿದ್ದು ಈ ಬಗ್ಗೆ ಕ್ರಮಕ್ಕೆ  ಮುಂದಾಗದಿದ್ದರೆ ಸಾರ್ವಜನಿಕ ಹಿತಾಸಕ್ತಿ ಹಾಗು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಈ ಪ್ರಕರಣವನ್ನು ಕೊಂಡೊಯ್ಯಲು ಕೆಲವು ಸಾಮಾಜಿಕ ಕಾರ್ಯಕರ್ತರು ಹಾಗು ಕೆಲವು ಸಂಘಟನೆಗಳು  ಮುಂದಾಗಿವೆ.

ಆದರೆ ಈ ಆದೇಶ, ಸೂಚನೆ, ಪತ್ರ ಈ ಎಲ್ಲ ತಾಪತ್ರೆಯಗಳು ಹಲವು ಗೊಂದಲ ಸೃಷ್ಟಿಸುತ್ತವೆ. ತಹಶೀಲ್ದಾರರು ಆದೇಶಿಸಿದಾಗಲೂ ಮುಖ್ಯಾಧಿಕಾರಿಗಳು ಏಕೆ ಕ್ರಮ ಕೈಗೊಳ್ಳಲಿಲ್ಲ? ಅಥವಾ ಕಡತ ಪರಿಶೀಲನೆಗೆ ಹೆಚ್ಚಿನ ಸಮಯವನ್ನು ಮುಖ್ಯಾಧಿಕಾರಿಗಳು ಕೇಳಿದರಾ? ಇಲ್ಲವೆ ತಹಶೀಲ್ದಾರರ ಆದೇಶಕ್ಕೆ ಪ್ರತಿಕ್ರಿಯಿಸಿದ್ದರಾ? ಈ ಎಲ್ಲ ಪ್ರಶ್ನೆಗಳು ಉದ್ಭವವಾಗಿವೆ. ಇನ್ನು ಮುಖ್ಯವಾಗಿ ಪಟ್ಟಣ ಪಂಚಾಯತಿಯೇ ಅಡ್ಡೆಗಳ ಅನುಮತಿ ರದ್ದುಗೊಳಿಸಿ ವಿದ್ಯುತ್ ಸಂಪರ್ಕ ಕಡಿತಕ್ಕೆ ಆದೇಶ ನೀಡಿದೆ. ಮೇಲ್ನೋಟಕ್ಕೆ ಹೀಗಿದ್ದಾಗಲೂ ಮುಖ್ಯಾಧಿಕಾರಿಗಳೇಕೆ ಕ್ರಮ ಕೈಗೊಳ್ಳಲಿಲ್ಲ? ಅಥವಾ ಕಾಣದ ಕೈಗಳು ಮುಖ್ಯಾಧಿಕಾರಿಗಳ ಕೈ ಕಟ್ಟಿ ಹಾಕಿವೆಯಾ? ಎಂದು ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದಾರೆ.

ಮಾಹಿತಿ ಪಡೆದು ಮೌನವೇಕೆ?

ಇನ್ನು ಅನವಶ್ಯವಾಗಿ ಕಟ್ಟಿಗೆ ಅಡ್ಡೆಗಳ ವಿಚಾರದಲ್ಲಿ ಉತ್ತರಪ್ರಭ ಪತ್ರಿಕೆ ನನ್ನ ಹೆಸರು ತೆಗೆದುಕೊಳ್ಳುತ್ತಿದೆ ಎಂದು ಹೇಳುವ ತಹಶೀಲ್ದಾರರು ಜಿಲ್ಲಾಧಿಕಾರಿಗಳ ಆದೇಶ ಪಾಲಿಸಿ ಕ್ರಮ ಕೈಗೊಳ್ಳಲಿಲ್ಲ ಏಕೆ? ಇನ್ನು ಈಗಾಗಲೇ 2020 ರಲ್ಲಿ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ್ ಕೈಗಾರಿಕೆ ಹಾಗು ಪರಿಸರ ಮಾಲಿನ್ಯ ಮಂಡಳಿಯಿಂದ ಶಿರಹಟ್ಟಿಯಲ್ಲಿನ ಕಟ್ಟಿಗೆ ಅಡ್ಡೆಗಳ ಅನುಮತಿಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಸಂಬಂಧಿಸಿದ ಇಲಾಖೆಗಳು ಇಲ್ಲಿನ ಕಟ್ಟಿಗೆ ಅಡ್ಡೆಗಳಿಗೆ ಅನುನತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದಾಗಲೂ ತಹಶೀಲ್ದಾರರಿಗೆ ಏಕೆ ಈ ಮೀನಾಮೇಷ.

ತಹಶೀಲ್ದಾರ್ ತಾಲೂಕು ಮೆಜೇಸ್ಟ್ರೇಟ್ ಅಲ್ಲವೇ?

ಸಾರ್ವಜನಿಕ ಉಪದ್ರವ 133 ನೇ ಕಲಂ ಸಿಆರ್ಪಿಸಿಯಲ್ಲಿ ಈ ಪ್ರಕರಣ  ಬರುವುದರಿಂದ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ಆದರೆ ಜಿಲ್ಲಾಧಿಕಾರಿ ಕೇವಲ ಜಿಲ್ಲೆಯ ದಂಡಾಧಿಕಾರಿ ಅಷ್ಟೆ ಅಲ್ಲ. ಡಿಸ್ಟ್ರಿಕ್ಟ್ ಮೆಜೇಸ್ಟ್ರೇಟ್ ಕೂಡ ಹೌದು. ಇನ್ನು ತಾಲೂಕು ವ್ಯಾಪ್ತಿಯಲ್ಲಿ ತಹಶೀಲ್ದಾರ ತಾಲೂಕು ದಂಡಾಧಿಕಾರಿ ಅಲ್ಲ. ತಾಲೂಕು ಮೆಜೆಸ್ಟ್ರೇಟ್. ಹೀಗಿದ್ದಾಗ್ಯೂ ತಹಶೀಲ್ದಾರರು ಏಕೆ ಈ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇನ್ನು ಸಾರ್ವಜನಿಕರಿಂದ ಬಾಂಡ್ ಮೇಲೆ ಒಪ್ಪಿಗೆ ಪತ್ರ ಬರೆಸಿಕೊಳ್ಳುವ ಹಕ್ಕು ತಹಶೀಲ್ದಾರಿಗೆ ನೀಡಿದವರು ಯಾರು? ಈ ಎಲ್ಲ ಸಾಮಾನ್ಯ ಸಂಗತಿ ಶಿರಹಟ್ಟಿ ಪಟ್ಟಣದ ಮಹಾಜನತೆಗೆ ಗೊತ್ತಿದೆ. ಕಣ್ಣೆದುರಿಗೆ ಆಡಳಿಯ ಯಂತ್ರವೇ ಬೇಲಿಯೇ ಎದ್ದು ಹೊಲ ಮೇಯುತ್ತಿದ್ದರು ಇನ್ನು ಮೌನವಾಗಿದ್ದಾರೆ. ಆದರೆ ಪಟ್ಟಣದ ಜನರ ತಾಳ್ಮೆಯನ್ನು ಅಧಿಕಾರಿಗಳು ಪರೀಕ್ಷಿಸುತ್ತಿದ್ದಾರೆಯೇ? ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಪ್ರಜ್ಞಾವಂತರ ಆಕ್ರೋಶ

ರಾಜ್ಯದಲ್ಲಿ ಜಿಲ್ಲಾಧಿಕಾರಿಗಳು ಹಾಗು ತಾಲೂಕು ವ್ಯಾಪ್ತಿಯಲ್ಲಿ ತಹಶೀಲ್ದಾರರು ಜನರ ಅಹವಾಲು ಸ್ವೀಕರಿಸಲು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಆದರೆ ಶಿರಹಟ್ಟಿ ತಹಶೀಲ್ದಾರರು ಮಾತ್ರ ಪಟ್ಟಣದಲ್ಲಿ ಕಣ್ಣೆದುರಿಗೆ ಈ ಅಕ್ರಮ ನಡೆಯುತ್ತಿದ್ದರು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಇನ್ನ ಹಳ್ಳಿ ಜನರ ಸಮಸ್ಯೆ ಹೇಗೆ ಪರಿಹರಿಸುತ್ತಾರೆ? ಎನ್ನುವುದು ಶಿರಹಟ್ಟಿ ಪ್ರಜ್ಞಾವಂತರ ಆಕ್ರೋಶವಾಗಿದೆ.

Leave a Reply

Your email address will not be published. Required fields are marked *

You May Also Like

ನಟ ಜಗ್ಗೇಶ್ ವಿರುದ್ಧ ದೂರು ದಾಖಲಿಸಿದ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ಸಂದೀಪ್

ಬೆಂಗಳೂರು: ಜಗ್ಗೇಶ್ ವಿರುದ್ಧ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ಸಂದೀಪ್ ಅಣಬೇರು ಸೈಬರ್ ಕ್ರೈಂ ಕೇಂದ್ರದಲ್ಲಿ…

ವಿಜ್ಞಾನ ವ್ಯವಸ್ಥೆಯನ್ನು ಬದಲಿಸುವ ಶಕ್ತಿ ಮಹಿಳೆಯಲ್ಲಿದೆ : ತಹಶೀಲ್ದಾರ ಭ್ರಮರಾಂಭ

ಮಹಿಳೆಯರಿಗೆ ಎಲ್ಲಾಕ್ಷೇತ್ರದಲ್ಲಿ ಸಮಾನ ಅವಕಾಶ ನೀಡಿ ಅವಳನ್ನು ಸಂಪೂರ್ಣವಾಗಿ ತೊಡಗಿಸಿದ್ದೇ ಆದರೆ ದೇಶದ ಅರ್ಥ ವ್ಯವಸ್ಥೆಯ ಜತೆಗೆ ವಿಜ್ಞಾನ ವ್ಯವಸ್ಥೆಯನ್ನು ಬದಲಿಸುವ ಶಕ್ತಿ ಅವಳಲ್ಲಿದೆ ಎಂದು ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿ ಹೇಳಿದರು.

ಕಮಿಶನ್ ಗೆ ಒಳಗಾಗಿ ಗಣಿಗಾರಿಕೆಗೆ ಅವಕಾಶ ಬೇಡ: ತೋಂಟದ ಶ್ರೀಗಳು

ಗದಗ: ಕಪ್ಪತ್ತಗುಡ್ಡ ನಾಶವಾದರೆ ಈ ಭಾಗ ಮರಭೂಮಿಯಾಗುತ್ತದೆ. ಬಲ್ದೋಟದಂತಹ ಕಂಪನಿ ಸರ್ಕಾರದ ಮೇಲೆ ಪ್ರಭಾವ ಬೀರುತ್ತವೆ.…

ವಿಕೆಂಡ್ ಕರ್ಪ್ಯೂಗೆ ವಾಣಿಜ್ಯ ನಗರಿ ಸ್ಥಬ್ಧ

ಕೊರೋನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂ ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.