ಉತ್ತರಪ್ರಭ
ಆಲಮಟ್ಟಿ:
ಬೆಳ್ಳಂ ಬೆಳಿಗ್ಗೆ ಜಿಟಿಜಿಟಿ ಮಳೆ. ಧಾರಾಕಾರವಾಗಿ ಜಿನುಗುತ್ತಿದ್ದ ವರ್ಷಧಾರೆಯ ಹಿತಕರ ಹನಿಯ ಸಿಂಚನದಲ್ಲಿ ನಾಗರ ಪಂಚಮಿ ಹಬ್ಬ ಮಂಗಳವಾರ ಆಲಮಟ್ಟಿ ಸುತ್ತ ಮುತ್ತ ಸಂಭ್ರಮದಿಂದ ಆಚರಿಸಲಾಯಿತು. ಮುಂಜಾವಿನಿಂದಲೇ ರಭಸದಿಂದ ಶುರು ಹಚ್ಚಿಕೊಂಡಿದ್ದ ಮಳೆರಾಯನಿಂದ ಬೆಳಿಗ್ಗೆ ನಾಗ ಪೂಜೆ,ಹಾಲೆರೆಯುವ ಕಾರ್ಯಕ್ರಮ ಬಹುತೇಕ ಇಲ್ಲಿ ಎಲ್ಲಡೆ ವಿಳಂಬವಾಯಿತು. ಮನೆಯಿಂದ ಹೊರ ಬಾರದಂತೆ ಮಳೆ ಹನಿಗಳು ಜೋರಾಗಿ ಸುರಿಯುತ್ತಿತ್ತು. ಮಳೆ ನಿಲ್ಲುವ ಲಕ್ಷಣಗಳು ಕಾಣದಿದ್ದಾಗ ಹಲವರು ಮನೆಯಲ್ಲಿನ ಬೆಳ್ಳಿ ನಾಗ ಮೂತಿ೯ಗಳಿಗೆ ಹಾಲೆರೆದು ಪೂಜಿಸಿದರು. ಎರಡು ದಿನಗಳಕಾಲ ಉಪವಾಸ ವೃತ ದಲ್ಲಿದ್ದವರು ಮನೆಯಲ್ಲೇ ನಾಗ ದೇವತೆಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಭಕ್ತಿ ಮೆರೆದರು. ಮಧ್ಯಾಹ್ನದ ನಂತರ ಮಳೆ ಸ್ವಲ್ಪ ಬಿಡುವು ಕೊಟ್ಟ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳತ್ತ, ನಾಗ ಮೂತಿ೯ ಪ್ರತಿಷ್ಠಾನಗಳತ್ ಗಡಿಬಿಡಿಯಲ್ಲಿ ತೆರಳಿ ಹಾಲೆರೆದು ಪೂಜೆ ಗೈದರು.
ಪಂಚಮಿ ಹಬ್ಬವೆಂದರೆ ನಾರಿಲೋಕವೇ ನವೋತ್ಸಾಹದಿಂದ ಪುಳಕಿ ನೀರಾಗುತ್ತದೆ. ಈ ಬಾರಿ ಮಳೆರಾಯ ಸ್ವಲ್ಪ ಅಡಚಣೆ ಮಾಡಿದ. ಆದಾಗ್ಯೂ ಹಬ್ಬಕ್ಕೆ ಇಲ್ಲಿ ವಿಶೇಷ ತಂಪು ಕಂಪು ತಂದು ಸಾಥ್ ನೀಡಿದ. ಥಂಢಾ ಕೂಲ್ ಆಹ್ಲಾದಕರ ವಾತಾವರಣ ಕಲ್ಪಿಸಿದ ಪರಿಣಾಮ ನಾಗ ಹಬ್ಬ ಕೂಲ್ ಕಳೆಯಲ್ಲಿ ತೇಲಿತು. ಇನ್ನಷ್ಟು ಜೋಶ್ ಮನೆ ಮನಗಳಲ್ಲಿ ಮೂಡಿಸಿತ್ತು. ಎಲ್ಲಿಲ್ಲದ ಖುಷಿ,ಸಂಭ್ರಮ,ಸಡಗರ ಮೊಗಮೊಗಗಳಲ್ಲಿ ಮೊಳಗಿತ್ತು.
ಮಹಿಳೆಯರು ಸೇರಿದಂತೆ ಪುರುಷರು ಸಹ ಶ್ರದ್ಧಾ,ಭಕ್ತಿಯಿಂದ ನಾಗ ಪಂಚಮಿಯಲ್ಲಿ ಮಿಂದೆದ್ದರು. ಗ್ರಾಮದ ವಿವಿಧೆಡೆ ದೇಗುಲ, ನಾಗರ ಮೂತಿ೯ ಹಾಗು ಹುತ್ತುಗಳ ಹತ್ತಿರ ತೆರಳಿ ಭಕ್ತಿಭಾವದಿಂದ ಹಾಲೆರೆದು ಪೂಜಿಸಿದರು. ಚಿಕ್ಕ ಮಕ್ಕಳು ಕೂಡಾ ಪಂಚಮಿ ಹಬ್ಬದ ಸವಿರುಚಿ ಕಂಡು ನಲಿದರು. ಮನೆಯಲ್ಲಿ ತಯಾರಿಸಿದ ಬಗೆಬಗೆಯ ಸಿಹಿ ತಿಂಡಿ ತಿನಿಸುಗಳು ಪರಸ್ಪರ ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಅಲ್ಲಲ್ಲಿ ಜೋಕಾಲಿ ದೃಶ್ಯ ಕಲರವ ಮೂಡಿತ್ತು.
ಚಿಮ್ಮಲಗಿ ಭಾಗ -1 ಬಿ ದಲ್ಲಿ ಪುರುಷರು ನಾಗ ದೇವತೆ ಆರಾಧನೆ ಜೋರಾಗಿತ್ತು.ಭಕ್ತಿಯಿಂದ ನಾಗ ಮೂತಿ೯ಗೆ ಹಾಲೆರೆದು ಪೂಜಿಸಿದರು. ಮಾಜಿ ಗ್ರಾಪಂ ಸದಸ್ಯ ಎಚ್.ಎಫ್.ಕಟ್ಟಿಮನಿ, ಹರಿಪ್ವರ ಹಿರೇಮಠ, ನಿವೃತ್ತ ಇಂಜಿನಿಯರ ಅಯ್ಯಪ್ಪ ಬಿಲ್ವಾಡ, ಈ.ಟಿ.ಮೂತಿ೯ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
ಪೋಟೋ : ಆಲಮಟ್ಟಿ ಸಮೀಪದ ಚಿಮ್ಮಲಗಿ ಭಾಗ- ೧ ಬಿ ಯಲ್ಲಿ ಮಂಗಳವಾರ ನಾಗರ ಪಂಚಮಿ ನಿಮಿತ್ಯ ನಾಗ ಮೂತಿ೯ಗೆ ಹಾಲೆರೆದು ಪೂಜಿಲಾಯಿತು.

Leave a Reply

Your email address will not be published. Required fields are marked *

You May Also Like

ವಿಧಾನ ಮಂಡಲದಲ್ಲಿ ಶಿಕ್ಷಕರ ವರ್ಗಾವಣೆ ವಿಧೇಯಕ ಮಂಡನೆ-ಶಿಕ್ಷಕರ ಸಂಘ ಹರ್ಷ

ಉತ್ತರಪ್ರಭ ಸುದ್ದಿಆಲಮಟ್ಟಿ: ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕವು ವಿಧಾನಮಂಡಲದಲ್ಲಿ ಮಂಡನೆಯಾಗಿದ್ದು, ಇದರಿಂದ ರಾಜ್ಯದ ಶಿಕ್ಷಕರ…

ನೌಕರರ ವಲಯದಲ್ಲಿ ನಿರಾಸೆ ಕಾಮೋ೯ಡ ಮೂಡಿಸಿದ ಬಜೆಟ್-ಚಂದ್ರಶೇಖರ ನುಗ್ಲಿ

ಆಲಮಟ್ಟಿ : ಮುಖ್ಯ ಮಂತ್ರಿಗಳು ಇಂದು ಮಂಡಿಸಿದ ಬಜೆಟ್ ರಾಜ್ಯದ ನೌಕರರಿಗೆ ಹಾಗೂ ಶಿಕ್ಷಕರ ಸಮೂಹಕ್ಕೆ…

ಆಚಾರ ವಿಚಾರ ಶ್ರೇಷ್ಠತೆಯ ಸ್ವಾಮೀಜಿ ನೀಲಕಂಠ ಶ್ರೀ ಪ್ರಕೃತಿ ಮಡಿಲಿನಲ್ಲಿ ಲೀನ

ಪಲ್ಲಕ್ಕಿಯಲ್ಲಿ ಸಾಗಿದ ಪ್ರಾಥಿ೯ವ ಶರೀರದ ಭವ್ಯ ಮೆರವಣಿಗೆ- ರಸ್ತೆಯ ಇಕ್ಕೆಲಗಳಲ್ಲೂ ನಿಂತು ಅಗಲಿದ ಪೂಜ್ಯರಿಗೆ ನಮಿಸಿದ…