ಉತ್ತರಪ್ರಭ
ಆಲಮಟ್ಟಿ:
ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಕೆಲಸ ಕಾರ್ಯ ಕಾಮಗಾರಿಗಳು ಸಮರ್ಪಕವಾಗಿ, ನಿದಿ೯ಷ್ಟವಾಗಿ ನಡೆಯುತ್ತಿಲ್ಲ. ಅದರಲ್ಲೂ ಕೃಷ್ಣಾ ಯೋಜನೆಗೆ ಜೆಡಿಎಸ್ ಪಕ್ಷದಿಂದ ಇಲ್ಲಿಯವರೆಗೂ ತೀವ್ರ ಅನ್ಯಾಯವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಗಂಭೀರ ಆರೋಪ ಮಾಡಿದರು.
ಆಲಮಟ್ಟಿಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೃಷ್ಣಾ ಯೋಜನೆಯಲ್ಲಿ ಜೆಡಿಎಸ್ ಪಕ್ಷದ ಕೊಡುಗೆ ಸಂಪೂರ್ಣ ಜೀರೋ ಎಂದು ಆಪಾದಿಸಿದರು.
ಉತ್ತರ ಕರ್ನಾಟಕ ಭಾಗದ ಜನರ ಜೀವನಾಡಿಯಾಗಿರುವ ಕೃಷ್ಣಾ ಯೋಜನೆಗೆ ಅನ್ಯಾಯ ಎಸಗಿದ್ದೇ ಜೆಡಿಎಸ್. ದೇವೇಗೌಡರು ಪ್ರಧಾನಿಯಾಗಿದ್ದಾಗ ಚಂದ್ರಬಾಬು ನಾಯ್ಡು ಅವರ ಮಾತು ಕೇಳಿ ಕೃಷ್ಣೆಯ ಗೇಟ್ ಕತ್ತರಿಸಿದ್ದು ಅವರೇ. ಈ ಕಾರಣದಿಂದಲ್ಲೇ ಇನ್ನೂ ಗೇಟ್ ಎತ್ತರಿಸುವ ಕಾರ್ಯಕ್ಕೆ ಅಡ್ಡಿ,ಅತಂಕಗಳು ಎದುರಾಗುತ್ತಲೇ ಇವೆ. ಇಂದಿನವರೆಗೂ ಸುಧಾರಿಸಿಕೊಳ್ಳಲಾಗುತ್ತಿಲ್ಲ. ಆದ್ದರಿಂದ ಕೃಷ್ಣೆಯಲ್ಲಿ ಜೆಡಿಎಸ್ ಪಾಲು,ಪಾತ್ರ ನೋಡಿದಾಗ ನೆಗೆಟಿವ್ ಅಗಿದೆ. ಪಾಸಿಟಿವ್ ಕಂಡು ಬರುತ್ತಿಲ್ಲ ಎಂದು ಮೊಯ್ಲಿ ವ್ಯಂಗ್ಯವಾಡಿ ದೂರಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗಳ ನಿರ್ವಹಣೆ ಮಾಡುವಲ್ಲಿ ನಾವೀಗ ಎಡವಿದ್ದೆವೆ. ಈ ಯೋಜನೆಗಾಗಿ ದೊಡ್ಡ ಜವಾಬ್ದಾರಿ ಹೊರವಂಥ ಗಟ್ಟಿಯಾದ ಶೋಲ್ಡರ್ಸ್ ಇರಬೇಕು. ಡ್ಯಾಂ ನೀರು ಗರಿಷ್ಠ ಮಟ್ಟದಲ್ಲಿ ರೈತರ ಜಮೀನುಗಳಿಗೆ ತಲುಪಿಸುವ ಮೂಲಕ ಅನ್ನದಾತರ ಬದುಕು ನೆಮ್ಮದಿಯಾಗಿ ಎತ್ತರ ಮಟ್ಟಕ್ಕೆ ಕೊಂಡೊಯ್ಯಲು ಮನಸ್ಸೋ ಇಚ್ಛೆ ತೋರಬೇಕು. ಈ ಇಚ್ಛಾಶಕ್ತಿ ಅನುಸರಣೆಗೆ ಆಡಳಿತಗಾರರು ಮುಂದಾಗಬೇಕಾಗಿರುವುದು ಇಂದಿನ ಅಗತ್ಯವಿದೆ ಎಂದು ಮೊಯ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
123 ಟಿಎಂಸಿ ವರೆಗೆ ನೀರು ಸಂಗ್ರಹಿಸಿದಾಗ್ಯೂ ಜಲ ಬಳಿಕೆ ಸರಿಯಾಗಿ ಅಗುತ್ತಿಲ್ಲ. ಗರಿಷ್ಠ ಮಟ್ಟದ ಸ್ಟೋರೇಜ್ ನೀರು ನಮ್ಮಪಾಲು ಅಗುತ್ತಿಲ್ಲ. ಕನಿಷ್ಟ ಅರ್ಧದಷ್ಟು ಪಾಲು ನೀರು ಉಪಯೋಗ ಮಾಡಲು ನಮಗಾಗುತ್ತಿಲ್ಲ. ಕೃಷ್ಣೆ ನೀರು ಕೃಷಿಗೆ ಉಪಯೋಗಿಸುವಲ್ಲಿ ವಿಫಲರಾಗಿದ್ದೆವೆ. ಇದು ಅತ್ಯಂತ ದುರಂತದ ಸಂಗತಿ. ಇಂದಿಗೂ ಕೃಷ್ಣಾ ದರ್ಪಣ ನೀರು ಕೃಷ್ಣಾರ್ಪಣಂ ಅಗುತ್ತಲ್ಲೇ ವ್ಯರ್ಥವಾಗಿ ಹರಿಯುತ್ತಿದೆ. ಅನ್ಯ ರಾಜ್ಯದ ಪಾಲಾಗುತ್ತಲ್ಲಿದೆ. ಕೃಷ್ಣೆ ನೀರು ನಮಲ್ಲಿಯೇ ಹೆಚ್ಚು ಸದ್ಬಳಿಕೆವಾಗಬೇಕು.123 ಟಿಎಂಸಿ ನೀರಲ್ಲಿ ನೂರು ಟಿಎಂಸಿ ನೀರನ್ನಾದರು ನಾವು ಉಪಯೋಗ ಮಾಡಲೇ ಬೇಕು. ಇದರಿಂದ 5.56 ಲಕ್ಷ ಹೆಕ್ಟೇರ್ ಜಮೀನಿಗೆ ಅನುಕೂಲವಾಗಲ್ಲಿದೆ ಎಂದರು.
ಜಲಾಶಯದ ಎತ್ತರಕ್ಕಾಗಿ
ಭೂ ಸ್ವಾಧೀನ ಕೆಲಸ ಅಮೆಗತಿಯಿಂದ ಸಾಗುತ್ತಿದೆ.ಅದಕ್ಕೆ ಸುಮಾರು 48 ಸಾವಿರ ಕೋಟಿ ಹಣ ಬೇಕು. ಈ ಯೋಜನೆಯಿಂದ 7 ಜಿಲ್ಲೆಗಳಿಗೆ ಉಪಯೋಗವಾಗಲಿದೆ. ಡ್ಯಾಂ ಎತ್ತರಿಸಿ ಗರಿಷ್ಟ ಪ್ರಮಾಣದಲ್ಲಿ ನೀರು ಸಂಗ್ರಹಿಸಿ ರೈತರ ಭೂಮಿಗಳಿಗೆ ಒದಗಿಸುವುದರಿಂದ ಕೃಷಿ ಕ್ಷೇತ್ರ ರಂಗೇರಲಿದೆ. ಬಹುಶಃ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿವಾಗಲ್ಲಿಕೆ ಹಾಗು ಇಡೀ ರಾಷ್ಟ್ರದ ಕೃಷಿ ಕಣಜ ಅಂತ ಈ ಭಾಗ ಹೊಂದಲು ಸಾಧ್ಯವಿದೆ ಎಂದರು. ಅಷ್ಟೊಂದು ಶಕ್ತಿಯುತವಾದ ಈ ಯೋಜನೆಗೆ ಇಂದು ರಾಜ್ಯ,ಕೇಂದ್ರ ಸರಕಾರ ನಿರ್ಲಕ್ಷ್ಯ ಮಾಡುತ್ತಿವೆ. ಸಮರೋಪಾದಿಯಲ್ಲಿ ಹಣಕಾಸು ಒದಗಿಸಿ ಡ್ಯಾಂ ಎತ್ತರದ ಕೆಲಸ ಪೂರ್ಣಗೊಳಿಸಬೇಕು. ರಾಷ್ಟ್ರೀಯ ಹಿತಾಸಕ್ತಿಯಿಂದ ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಬೇಕು. ಕೇವಲ ರಾಜ್ಯ ಸರಕಾರ ಸಂಪನ್ಮೂಲ ಒದಗಿಸಿದರೆ. ಕೇಂದ್ರ ಸರ್ಕಾರವೂ ಕೈಜೋಡಿಸಬೇಕು. ಕೃಷಿ ಕಣಜದ ಯೋಜನೆಗೆ ಆದ್ಯತೆ ನೀಡಬೇಕು ಎಂದರು.


ರಾಜಧರ್ಮ ಪಾಲಿಸಲಿ: ಹಿಂದುಗಳ ಮೇಲೆ ದೌರ್ಜನ್ಯ, ಕೊಲೆಯಾದಾಗ ರಾಜ್ಯ ಬಿಜೆಪಿ ಸರಕಾರ ಪರಿಹಾರ ನೀಡುತ್ತದೆ ಆದರೆ ಮುಸ್ಲಿಂ ಸಮುದಾಯದ ವ್ಯಕ್ತಿಗಳು ಹೀಗೆ ಬಲಿಪಶುವಾದರೆ ಪರಿಹಾರ ಬಿಡಿ ಕನಿಷ್ಠ ಸಾಂತ್ವನ ಹೇಳುವ ಕೆಲಸ ಮಾಡುತ್ತಿಲ್ಲ ಎಂಬುದು ಜನತೆಯ ದೂರಾಗಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮೊಯ್ಲಿ ಉತ್ತರಿಸಿದ್ದು ಹೀಗೆ ! ಕಾನೂನು ಸುವ್ಯವಸ್ಥೆಯಿಂದ ಎಲ್ಲರಿಗೂ ಸಮನಾಗಿ ನೋಡಿಕೊಳ್ಳಲು ರಾಜ್ಯ ಧರ್ಮವೊಂದಿದೆ. ಅದು ಎಲ್ಲರಿಗೂ ಒಂದೇ ತೆರನಾಗಿ ನೋಡುತ್ತದೆ. ಇದು ನಾನು ಹೇಳುತ್ತಿಲ್ಲ. ಈ ಹಿಂದೆ ಗುಜರಾತಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಸುಮಾರು ಅಮಾಯಕ ಎರಡು ಸಾವಿರ ಜನರು ಹತ್ಯೆಗೀಡಾಗಿದ್ದರು.‌ ನರಮೇಧ ಗೋದ್ರಾ ಹತ್ಯಾಕಾಂಡದ ಸಮಯದಲ್ಲಿ ನರೇಂದ್ರ ಮೋದಿಯವರಿಗೆ ಅಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ನೀವು ರಾಜಧರ್ಮ ಪಾಲಿಸಬೇಕು ಎಂದು ಸೂಚಿಸಿದ್ದರು. ಮೋದಿಯವರ ರಾಜೀನಾಮೆ ಪಡೆಯಲು ಭಾಜಪ ಹೈಕಮಾಂಡ್ ಮುಂದಾಗಿದ್ದರು. ಆದರೆ ಅಡ್ವಾನಿಯವರು ಅದನ್ನು ನಿಲ್ಲಿಸಿದರು ಎಂದು ಅಂದಿನ ನೆನಪು ಮೊಯ್ಲಿ ಬಿಚ್ಚಿದರು.
ಸರಿಯಾದ ನ್ಯಾಯ ಎಲ್ಲ ಪ್ರಜೆಗಳಿಗೂ ಲಭಿಸಬೇಕು. ಮುಖ್ಯ ಮಂತ್ರಿಗಳಾದವರು ತಾಯಿಯ ಪಾತ್ರ ವಹಿಸಬೇಕು. ಒಬ್ಬ ಮಗನಿಗೆ ಒಂದು ರೀತಿಯ ಅಕ್ಕರೆ ಟ್ರೇಟ್ಮೆಂಟ್ ಇನ್ನೊಬ್ಬ ಮಗನಿಗೆ ಬೇರೆ ರೀತಿಯಲ್ಲಿ ಟ್ರೇಟ್ಮೆಂಟ್ ಕೊಟ್ಟು ನೋಡಬಾರದು. ಆದರೆ ಈ ವ್ಯತ್ಯಾಸ ರಾಜ್ಯದಲ್ಲಿಂದು ಕಾಣುತ್ತಲ್ಲಿರುವುದು ದುರದೃಷ್ಟಕರ. ಮುಖ್ಯ ಮಂತ್ರಿ ಎಚ್ಚೆತ್ತುಕೊಂಡು ರಾಜ್ಯದ ಎಲ್ಲ ಪ್ರಜೆಗಳಿಗಬ ಒಂದೇ ಸಮಾನ ದೃಷ್ಟಿಯಿಂದ ನೋಡಬೇಕು. ಇದು ಮಾಡದಿದ್ದರೆ ಕರಾವಳಿಯಲ್ಲಿನಂಥ ಕೊಲೆ, ಗೊಂದಲ,ಗಲಭೆಗಳು ಹೆಚ್ಚಾಗುತ್ತವೆ. ಅದಕ್ಕೆಲ್ಲ ಸರಕಾರವೇ ನೇರ ಹೊಣೆಯಾಗುತ್ತದೆ. ರಾಜಧರ್ಮ ಪಾಲಿಸಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿರಿಸಿ. ಎಲ್ಲರಿಗೂ ಸಮಾನಭಾವ ತೋರಿ. ರಾಜಧರ್ಮದಡಿಯಲ್ಲಿ ಕರ್ತವ್ಯ ನಿರ್ವಹಿಸಲು ಮುಂದಾಗಿ. ಇದರಲ್ಲಿ ಹಿಂದು,ಮುಸ್ಲಿಂ ತಾರತಮ್ಯ ಬೇಡ ಎಂದು ಸಿಎಂ ಬೊಮ್ಮಾಯಿ ಅವರಿಗೆ ಸೂಚ್ಯವಾಗಿ ತಿಳಿಸಿದರು.
ಬಸವಣ್ಣನವರು ಎಲ್ಲರಿಗೂ ಬೇಕಾದವರು. ಈ ಮಹಾನ ನಾಯಕನ ಹೆಸರಿನಲ್ಲಿ ರಾಜಕೀಯ ಮಾಡಬಾರದು. ಅಲ್ಲಿಇಲ್ಲಿ ಅಂತ ಪ್ರಾಧಿಕಾರ ರಚಿಸಲು ಒತ್ತಾಯಿಸಿ ಕೇಳುವುದು ಸಮಂಜಸವಲ್ಲ. ಅಭಿವೃದ್ಧಿ ಏನೇ ಇರಲಿ ಒಂದೇ ಪ್ರಾಧಿಕಾರದಿಂದ ನಡೆಯಬೇಕು ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.
ಸಿದ್ದರಾಮೋತ್ಸವ ಹಿತೈಷಿಗಳದ್ದು : ಸಿದ್ದರಾಮೋತ್ಸವ ಅವರ ಅಭಿಮಾನಿ, ಹಿತೈಷಿಗಳಿಂದ ನಡೆಯುತ್ತಿದೆ. ಹಿತೈಷಿಗಳ ಅಪೇಕ್ಷೆಯಿಂದ ಸಿದ್ದರಾಮಯ್ಯ ಅವರು ತಮ್ಮ ಹುಟ್ಟು ಹಬ್ಬವನ್ನು ಅಮೃತ ಮಹೋತ್ಸವನ್ನಾಗಿ ಆಚರಿಸಿಕೊಳ್ಳತ್ತಲ್ಲಿದ್ದಾರೆ. ಇದರಲ್ಲಿ ತಪ್ಪೆನಿಲ್ಲ. ಸಿದ್ದರಾಮಯ್ಯನವರ ಈ ವಿಶೇಷ ಬತ್೯ಡೇ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಪೂರಕವಾಗಲಿ, ಹಿತ ಕಾಪಾಡಲಿ, ಪಕ್ಷದ ಘನತೆ, ಪ್ರಗತಿ ಇದರಿಂದ ಸಾಧನೆವಾಗುವದಿದ್ದರೆ ಇಂಥ ಬತ್೯ಡೇಗಳನ್ನು ಮಾಡಬಹುದು. ಏನು ತೊಂದರೆ ಇಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆ ಮೊಯ್ಲಿ ಉತ್ತರಿಸಿದರು.
ಸಿದ್ದರಾಮಯ್ಯ ಮತ್ತು ಡಿಕೆಸಿ ಮಧ್ಯೆ ಎರಡು ಬಣಗಳಿವೆ. ಸಿಎಂ.ಹುದ್ದೆಗೆ ಅವು ಪೈಪೋಟಿ ನಡೆಸುತ್ತಿವೆ ಎಂದಾಗ ಮುಖ್ಯ ಮಂತ್ರಿಗಳಾಗುವರು ರಾಜ್ಯದಲ್ಲಿ ಬಹಳಷ್ಟು ಜನರಿದ್ದಾರೆ ಎಂದರು. ಸಧ್ಯ ಸಿಎಂ ರೇಶಿನ ಪೈಪೋಟಿ ಅಪ್ರಸ್ತುತ. ಇಬ್ಬರು ನಾಯಕರ ಆಕಾಂಕ್ಷೆ ಅದು ಯಾಗಿರಬಹುದು. ಈ ರೀತಿಯ ಪೈಪೋಟಿ ನಡೆಯುವುದರಿಂದ ಪಕ್ಷಕ್ಕೆ ಮುಜಗುರ, ಅಘಾತವಾಗುತ್ತದೆ ಎಂಬುದು ಕಾರ್ಯಕರ್ತರ ಅಭಿಪ್ರಾಯ. ಪೈಪೋಟಿಯಿಂದ ಪಕ್ಷಕ್ಕೆ ಹಿತವಾಗದು ಬದಲಿಗೆ ಹಾನಿವಾಗುತ್ತದೆ. ಅದ್ದರಿಂದ ಇಂಥ ಪೈಪೋಟಿ ಸಿಎಂ ಆಕಾಂಕ್ಷೆ ಹೊಂದಿರುವ ನಾಯಕರು ಪೈಪೋಟಿ ನಿಲ್ಲಿಸಬೇಕು ಎಂದರು. ಮೊದಲು ಚುನಾವಣೆ ಎದುರಿಸಿ ಬಹುಮತ ಪಡೆಯಲು ಶ್ರಮಿಸೋಣ. ಬಳಿಕ ಶಾಸಕರ ಅಭಿಪ್ರಾಯದೊಂದಿಗೆಮಸಿಎಂ ಯಾರು ಎಂದು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಈಗಲೇ ಈ ರೀತಿ ಕಚ್ಚಾಡಿದರೆ ಪಕ್ಷಕ್ಕೆ ತೊಂದರೆವಾಗುತ್ತದೆ. ಹೈಕಮಾಂಡ್ ಹಾಗು ಈ ಪ್ರಮುಖ ನಾಯಕರು ಎಚ್ಚರಿಕೆ ವಹಿಸಿ ಕಾಂಗೈ ಬಲವರ್ಧನೆಗೆ ಮೊದಲು ಪ್ರಾಶಸ್ತ್ಯ ದೊರಕಿಸಿ ಕೊಡಲು ಮುಂದಾಗಬೇಕು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ: ಡಾ. ಕೆ. ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ, ಸೋಂಕಿತರು ಹೆಚ್ಚಿನ…

ಸಿದ್ಧರಾಮಯ್ಯ ಗೆ ಅಹಿಂದ ಮತದಾರರ ಬೆಂಬಲ

ಉತ್ತರಪ್ರಭ ಸುದ್ದಿ ಬಸವನಬಾಗೇವಾಡಿ: ಶಿವಾನಂದ ಪಾಟೀಲ ಎರಡೂ ಬಾರಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಎರಡೂ ಬಾರಿ…

ಆಲಮಟ್ಟಿ : ಕೋಟಿ ಕಂಠ ಗೀತ ಗಾಯನ ಸಂಭ್ರಮ

ಆಲಮಟ್ಟಿ:  ಇಲ್ಲಿನ ಶಾಲಾ,ಕಾಲೇಜುಗಳಲ್ಲಿ ಶುಕ್ರವಾರ ಕನ್ನಡ ಸಿರಿತನದ ಗೀತೆಗಳು ಮೊಳಗಿದವು. ಕನ್ನಡಮ್ಮನ ಜ್ಞಾನ ದೀಪದ ಗೀತಗಾನ…

ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬುಡಮೇಲು ಸಮೇತ ಜನರೇ ಕಿತ್ತೆಸೆಯುತ್ತಾರೆ – ಸಿ.ಟಿ.ರವಿ ವಾಗ್ದಾಳಿ

ಕುಕ್ಕರ್ ಬಾಂಬರ್ ಗಳಿಗೆ ಬಿರಿಯಾನಿ ತಿನ್ನಿಸುವವರು ಅಧಿಕಾರಕ್ಕೆ ಬಂದರೆ ಭದ್ರತೆಗೆ ಅಪಾಯ !ನಿಡಗುಂದಿ: ರಾಜ್ಯದಲ್ಲಿ ಕುಕ್ಕರ್…