ಆಲಮಟ್ಟಿ:
ಇಲ್ಲಿಯ ಎಂಎಚ್ ಎಂ ಪದವಿ ಪೂರ್ವ ಮಹಾವಿದ್ಯಾಲಯದ ಹಿಂಭಾಗದ ಗುಡ್ಡದಲ್ಲಿರುವ ಅಡಕಲಗುಂಡಪ್ಪ ಜಾತ್ರೆ ಆ.15 ಸೋಮವಾರ ಜರುಗಲಿದೆ.

ಬೃಹತ್ ಕಲ್ಲು ಬಂಡೆಗಳ ಮಧ್ಯೆ ಸ್ಥಿತನಾಗಿರುವ ವೆಂಕಟೇಶ ದೇವರ ಜಾತ್ರೆ ಶೃದ್ಧಾಭಕ್ತಿಯಿಂದ ಜರುಗಲಿದೆ.
ಪ್ರತಿ ವರ್ಷ ಮೂರನೇ ಶ್ರಾವಣ ಸೋಮವಾರದಂದು ಜರಗುವ ಈ ಜಾತ್ರೆಯ ಅಂಗವಾಗಿ ಪಲ್ಲಕ್ಕಿ ಉತ್ಸವ ಯಲಗೂರ ಗ್ರಾಮದ ಕೃಷ್ಣಾ ನದಿ ದಂಡೆಯಿಂದ ಜರುಗುತ್ತದೆ. ಕೃಷ್ಣಾ ನದಿಯಿಂದ ಗೊಂದಿ ಕೆರೆಗೆ ಬಂದು ಅಲ್ಲಿ ಪೂಜೆ ಸಲ್ಲಿಸಿದ ನಂತರ ಅಡಕಲಗುಂಡಪ್ಪನಿಗೆ ಪೂಜೆ ನೇವೇದ್ಯ ಜರುಗಲಿದೆ ಎಂದು ಜಾತ್ರಾ ಕಮಿಟಿಯ ಮುಖಂಡ ಶ್ಯಾಮ ಪಾತರದ ತಿಳಿಸಿದ್ದಾರೆ.
ಇಲ್ಲಿಯ ಅನ್ನಸಂತರ್ಪಣೆ ಸವಿರುಚಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಪ್ರಸಿದ್ಧಿ.