ಶಿರಹಟ್ಟಿ: ತಾಲೂಕು ಹಾಗೂ ರಾಜ್ಯದಲ್ಲಿ ಕುರಿಗಾಹಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ತಾಲೂಕು ಕುರುಬರ ಸಂಘದ ವತಿಯಿಂದ ಗುರುವಾರ ಸ್ಥಳೀಯ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ದೇವಪ್ಪ ಬಟ್ಟೂರ ಹಾಗೂ ಸಂತೋಷ ಕುರಿ ಮಾತನಾಡಿ, ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿ, ಟೆಂಟ್, ಟಾರ್ಚ್ ಹಾಗೂ ಕುರಿಗಾರರ ಕಿಟ್ ಕೆವಲ ಸೊಸೈಟಿಗಳಿಗೆ ಕೊಡುವದಲ್ಲದೇ ಮುಕ್ತವಾಗಿ ಎಲ್ಲ ಕುರಿಗಾಹಿಗಳಿಗೆ ಕೊಡಬೇಕೆಂದು ಹೇಳಿದರು.

ಹಿಂದಿನ ಸರ್ಕಾರದಲ್ಲಿ ಅಕಾಲಿಕ ಸತ್ತ ಕುರಿಗಳಿಗೆ 5000 ರೂ ಪರಿಹಾರ ಧನ ಸಹಾಯ ಕೊಡುತ್ತಿತ್ತು. ಸದ್ಯ ಪ್ರಸ್ತುತ ಸರ್ಕಾರ ಅದನ್ನು ಸ್ಥಗಿತಗೊಳಿಸಿದ್ದು, ಕೂಡಲೇ ಈ ಯೋಜನೆಯನ್ನು ಪುನಃ ಪ್ರಾರಂಭಿಸಬೇಕು.ಅರಣ್ಯ ಇಲಾಖೆಯವರಿಂದ ಪದೇ ಪದೇ ಕುರಿಗಾಹಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು, ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕುರಿಗಾಹಿಗಳಿಗೆ ರಕ್ಷಣೆ ನೀಡಿ ಗುಡ್ಡಗಾಡು ಹಾಗೂ ಹುಲ್ಲುಗಾವಲು ಪ್ರದೇಶಗಳನ್ನು ಕುರಿಗಳನ್ನು ಮೇಯಿಸಲಿಕ್ಕೆ ಅವಕಾಶ ಕಲ್ಪಿಸಬೇಕು ಎಂದರು.

ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು ಕೂಡಲೇ ವೈದ್ಯರ ನೇಮಕ ಮಾಡಿ ಕುರಿಗಳಿಗೆ ಸಮಯಕ್ಕೆ ಸರಿಯಾಗಿ ಔಷಧಿ ನೀಡಬೇಕು. ಕೂಡಲೇ ನಮ್ಮ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು. ವಿಳಂಬ ನೀತಿ ತೋರಿದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಂಜುನಾಥ ಘಂಟಿ, ಆನಂದ ಮಾಳೇಕೊಪ್ಪ, ಎಫ್ ಆರ್. ಕಲಾದಗಿ, ನಿಂಗಪ್ಪ ಕಮತ, ಯಲ್ಲಪ್ಪ ಹಾಲಪ್ಪನವರ, ಜಗದೀಶ ಇಟ್ಟೆಕಾರ, ನಿಂಗಪ್ಪ ಹಾದಿಮನಿ, ಎಮ್ ಆಯ್. ಬಳೂಟಗಿ, ಗೋಪಾಲಪ್ಪ ಹಾರೋಗೇರಿ, ಹಾಲನಗೌಡ ಪಾಟೀಲ, ಯಲ್ಲವ್ವ ಕೌಜಗೇರಿ, ಭರಮಪ್ಪ ಮುರಾರಿ ಸೇರಿದಂತೆ ಅನೇಕ ಸಮಾಜ ಬಾಂಧವರು ಹಾಜರಿದ್ದರು.

Leave a Reply

Your email address will not be published. Required fields are marked *

You May Also Like

ರೋಣದಲ್ಲಿ ಕಠಿಣ ಲಾಕ್ ಡೌನ್ ಗೆ ಜನರ ಸಾಥ್

ರೋಣ: ಪಟ್ಟಣದಾದ್ಯಂತ ಕಠಿಣ ಲಾಕ್ ದೌನ್ ಹಿನ್ನೆಲೆ ಘೋಷಣೆಯಾಗಿದ್ದು, ಸತತವಾಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಕಠಿಣ ಕ್ರಮಕ್ಕೆ ಜನರು ಸಹಕಾರ ನೀಡಿದ ಪರಿಣಾಮ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅನಗತ್ಯವಾಗಿ ಯಾರೊಬ್ಬರೂ ಹೊರಬರದೆ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ.

ಗೋಗೇರಿಯಲ್ಲಿ ಕರವೇ ಯುವಸೈನ್ಯ ದಿಂದ ಆಹಾರದ ಕಿಟ್ ವಿತರಣೆ

ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯ ಸಂಘಟನೆ ವತಿಯಿಂದ ಬಡವರಿಗೆ ಆಹಾರದ ಕಿಟ್ ವಿತರಿಸಲಾಯಿತು. ಕರವೇ ಯುವ ಸೈನ್ಯ ರಾಜ್ಯಾಧ್ಯಕ್ಷ ಕೆ.ಎಸ್.ಕೊಡತಗೇರಿ ಮಾತನಾಡಿ, ಕೋವಿಡ್ ಎರಡಲೇ ಅಲೆ ಜನಸಾಮಾನ್ಯರನ್ನು ಬೆಂಬಿಡದೇ ಕಾಡುತ್ತಿದೆ.

ರಾಜ್ಯದ ಬೊಕ್ಕಸಕ್ಕೆ ಭಾರಿ ಹೊಡೆತ!

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗಾಗಿ ಇನ್ನೂ ಲಾಕ್ ಡೌನ್ ಮುಂದುವರೆದಿದೆ. ಲಾಕ್ ಡೌನ್ ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ನಷ್ಟವಾಗಿದೆ.

ಸುರೇಶ್ ಕುಟುಂಬಕ್ಕೆ ಪರಿಹಾರ, ಪ್ರಕರಣ ಸಿಬಿಐ ತನಿಖೆಗೆ ಒತ್ತಾಯ

ಕಲಬುರಗಿಯಲ್ಲಿ ನಡದ ಘಟನೆಯಲ್ಲಿ ಗೋಂಧಳಿ ಸಮಾಜದ ಸುರೇಶ್ ಎಂಬ ವ್ಯಕ್ತಿ ಕೊಲೆಯಾಗಿದ್ದು, ಸರ್ಕಾರ ತನ ಕುಟುಂಬಕ್ಕೆ 30 ಲಕ್ಷ ಪರಿಹಾರ ಹಾಗು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಗೋಂಧಳಿ ಸಮಾಜದ ರಾಜ್ಯಾಧ್ಯಕ್ಷ ವಿಠಲ್ ಗಣಾಚಾರಿ ಒತ್ತಾಯಿಸಿದರು.