ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರದ ಬಳಿ ರಾತ್ರಿ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದ ದೇವಪ್ಪ ಕೊಪ್ಪದ (62), ಮೃತರ ಸೊಸೆ ಗಿರಿಜಮ್ಮ(45), ಅಣ್ಣನ ಮಕ್ಕಳಾದ ಶಾಂತಮ್ಮ (35), ಪಾರ್ವತಮ್ಮ (32), ಸಂಬಂಧಿ ಕಸ್ತೂರಮ್ಮ (20) ಸ್ಥಳದಲ್ಲೆ ಸಾವನಪ್ಪಿದ್ದು, ಇದರಲ್ಲಿ ಶಾಂತಮ್ಮ ಹನುಮಪ್ಪ ಗುಡ್ಲಾನೂರ ಇವಳು ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ನಿವಾಸಿಯಾಗಿದ್ದಾಳೆ. ಈ ನಾಲ್ಕು ಜನರನ್ನು ಬಿನ್ನಾಳ ಗ್ರಾಮದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಯಿತು.


ಗ್ರಾಮದಲ್ಲಿ ನೀರವ ಮೌನ ಆವರಿಸಿ ಊರಿಗೆ ಊರೇ ದುಃಖದ ಮಡುವಿನಲ್ಲಿ ಮುಳುಗಿತ್ತು. ಇವರೆಲ್ಲಾ ಕೊಪ್ಪಳದಲ್ಲಿ ಬರ್ತಡೇ ಮುಗಿಸಿಕೊಂಡು ಊರಿಗೆ ಹೊರಟಿದ್ದರು. ಮಾರ್ಗ ಮಧ್ಯೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ಅದರ ರಭಸಕ್ಕೆ ಸ್ಕಾರ್ಪಿಯೋ ಕಾರು ನುಜ್ಜು ನುಜ್ಜಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಅರುಣಾಂಗ್ಷು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾತ್ರವಲ್ಲದೇ ಸ್ಕಾರ್ಪಿಯೋದಲ್ಲಿರುವ ಶವಗಳನ್ನು ಹೊರಗಡೆ ತೆಗೆಯಲು ಬರದ ಪರಿಸ್ಥಿತಿಯಲ್ಲಿದ್ದರೂ ಕಷ್ಟಪಟ್ಟು ಶವಗಳನ್ನು ಸ್ಥಳೀಯರು, ಸಂಬಂಧಿಗಳು ಹಾಗೂ ಪೊಲೀಸರು ಹೊರತೆಗೆದಿದ್ದಾರೆ. ಇನ್ನು ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಪರಿಚಿತ ವಾಹನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.