“ಕಲರಮಯ ಬೆಳಕಿನ ಚಿತ್ತಾರದಲ್ಲಿ ಮಿನುಗಿದ ಡ್ಯಾಂ- ಜಲ ಸೌಂದರ್ಯ ಸವಿಯಲು ಅಸಂಖ್ಯ ಪ್ರವಾಸಿಗರ ಲಗ್ಗೆ..!”
ಆಲಮಟ್ಟಿ:
ಆಲಮಟ್ಟಿ ಜಲಾಶಯಕ್ಕೆ ಇದೀಗ ವರ್ಣರಂಜಿತ ಬಣ್ಣಗಳ ಸ್ಪರ್ಶ. ಮುಸ್ಸಂಜೆ ಕತ್ತಲಾದಂತೆ ಕಲರ್ ಫೂಲ್ ಝಗಮಗ.ಈ ಅಪರೂಪದ ಜಲ ನೋಟ ಸೌಂದರ್ಯಕ್ಕೆ ಜನ ಮೂಕುವಿಸ್ಮಿತ. ಹಸಿರು ವಸುಂಧರೆಯ ಅಂಗಳದಲ್ಲಿಗ ರಾತ್ರಿ ಬೆಳಕಿನ ಕಿರಣಗಳ ಚಿತ್ತಾರ… ಸಂಭ್ರಮ…!!! ಇದು ಆಲಮಟ್ಟಿ ಜಲಾಶಯದ ವರ್ಣ ಲೇಪನಕ್ಕೆ ಪ್ರವಾಸಿಗರು ಫಿದಾ ಅದ ಬಗೆ! ನಿನ್ನೆ ವೀಕೆಂಡ್ ಭಾನುವಾರ ಆಲಮಟ್ಟಿ ನಯನ ಮನೋಹರದ ಹಸಿರು ತೋರಣದ ಪರಿಸರದಲ್ಲಿ ಜನ ಜಾತ್ರೆ! ಜಿಟಿಜಿಟಿಯಾಗಿ ಧರೆಗೆ ಉರುಳುತ್ತಿದ್ದ ಮಳೆ ಹನಿಯಲ್ಲೂ ಜನ ಸಾಗರ ಜಮಾವಣೆ. ಎತ್ತ ನೋಡಿದರೂ ಜನರೋ ಜನ ! ಮೇಲಿಂದ ಜಿನುಗುತ್ತಿದ್ದ ನೀರು ಹನಿಗೆ ವಿಚಲೀತರಾಗದೇ ಡ್ಯಾಂ ನಿಂದ ಹೊರ ಚಿಮ್ಮುತ್ತಿದ್ದ ಕಲರ್ ನೀರು ವೈಭವ ಕಣ್ತುಂಬಿಸಿಕೊಳ್ಳಲು ಉತ್ಸಾಹದಿಂದ ಇತ್ತ ಹೆಜ್ಜೆ ಹಾಕಿದರು. ನವ್ಯ ಲೋಕದಲ್ಲಿ ವಿಹರಿಸಿದ ಭಾವ ಮಿಡಿತದಲ್ಲಿ ಅವರೆಲ್ಲ ತೇಲಿ ಹೋದರು! ಪ್ರವಾಸಿಗರ ಕಣ್ಮನ ತಣಿಸಲು ಕೈಬೀಸಿ ಕರೆಯುವಂತಿದೆ ಇಲ್ಲಿನ ಮುಂಗಾರು ಜಲರಸ ಕಾವ್ಯದ ಕಲರ್ ಫೂಲ್ ಹಸಿರು ಪಿಕ್ಚರ್ ! ಈ ಮಧುರ ಹಿತಾನುಭವ ನೀಡುವ ಹಸಿರೆಲೆಗಳ ಭಿನ್ನಾಣ ಜೊತೆಗೆ ವೈವಿಧ್ಯಮಯ ಉದ್ಯಾನಗಳು,ಉತ್ತರ ಕನಾ೯ಟಕದ ಜಲಜೀವ ನಾಡಿ ಶಾಸ್ತ್ರಿ ಜಲಾಶಯದ ವಿಹಂಗಮ ನೋಟಕ್ಕೆ ಮನ ಸೋಲದ ಪ್ರವಾಸಿಗರಿಲ್ಲ ! ಜಂಗಮರ ತಾಣ ಖ್ಯಾತಿಯ ಆಲಮಟ್ಟಿ ಧರೆ ಮೇಲಿನ ಸ್ವರ್ಗವಾಗಿ ಕಂಗೊಳಿಸುತ್ತಿದೆ. ಅಲ್ಲದೇ ಪ್ರವಾಸಿಗರ ಹೃದಯದಲ್ಲಿ ನುಸುಳಿದೆ. ಈಗ ಡ್ಯಾಂ ಗೆ ಸಂಪರ್ಕ ಕಲ್ಪಿಸಿರುವ ಎಲ್.ಇ.ಡಿ ಬಲ್ಪ್ ಗಳಿಂದ ಪ್ರಸರಣಗೊಳ್ಳುತ್ತಿರುವ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿದೆ. ಕಣ್ಣಂಚಿನಲ್ಲಿ ಉಲ್ಲಾಸದ ಚೈತನ್ಯ ನೀಡುತ್ತಿದೆ. ಹೃದಯ ಸ್ತಂಭನದ ಏರಿಳಿತದಲ್ಲಿ ಹೊಸತನದ ಎನಜಿ೯ ಫಸರಿಸಿದೆ. ಜಲೋತ್ಸಾಹದ ಪ್ರಕೃತಿ ನಿಮಿ೯ತ ಟಾನಿಕ್ ಸಹಜವಾಗಿ ನೀಡುತ್ತಿದೆ! ಈಗಂತೂ ವರುಣನ ಅಬ್ಬರ, ಉಬ್ಬರದ ಖದರ್ ಮಹಾ ಕೃಷ್ಣಾ ಕಣಿವೆಯಲ್ಲಿ, ರಾಜ್ಯದ ಕೃಷ್ಣಾ ನದಿ ಅಸುಪಾಸಿನಲ್ಲಿ ಜೋರಾಗಿದ್ದರಿಂದ ಶಾಸ್ತ್ರಿ ಜಲಾಶಯದ ಒಡಲಿನಲ್ಲಿ ಜಲರಾಶಿಯ ಭರಪೂರ ನಿನಾದ ಪರಿಮಳಿಸುತ್ತಿದೆ. ಪ್ರಕೃತಿ ನಿಮಿ೯ತ ಈ ದೃಶ್ಯ ಕಾವ್ಯ ಮನದಲ್ಲಿ ನೇರ ಲೈವ್ ಸೇವ್ ಮಾಡಿಕೊಳ್ಳಲು ಪ್ರವಾಸಿ ಹೃದಯಗಳು ಮಿಟುಕುತ್ತಿವೆ !


ವೀಕೆಂಡ್ ರವಿವಾರ ಇದಕ್ಕೆ ಸಾಕ್ಷಿಯಾಗಿದೆ. ವಿಜಯಪುರ, ಬಾಗಲಕೋಟೆ, ಸೋಲಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಪ್ರವಾಸಿ ಜನಸಾಗರದ ದಂಡವೇ ಆಲಮಟ್ಟಿಗೆ ಹರಿದುಬಂದಿತ್ತು. ಎಡೆಬಿಡದೇ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಲೆಕ್ಕಿಸದೇ ಸಹಸ್ರಾರು ಪ್ರವಾಸಿಗರು ಲಗ್ಗೆಯಿರಿಸಿ ಎಂಜಾಯ್ ಮೂಡಿನಲ್ಲಿ ತೇಲಿದರು. ಭಾನುವಾರ ರಜಾ ದಿನದ ಮೋಜು ಮಸ್ತಿ ಮಜಾಯೊಂದಿಗೆ ಇಲ್ಲಿನ ರಮ್ಯ ಭರಿತ ತಾಣದಲ್ಲಿ ಖುಷಿಯಿಂದ ಹಂಚಿಕೊಂಡು ಕಾಲ ಕಳೆದರು. ಆಲಮಟ್ಟಿ ವೀಕ್ಷಣೆ ಸ್ವರ್ಗದ ಕಲ್ಪನೆ ಎಂಬ ನೂತನ ಕಾನ್ಸೆಪ್ಟ್ ನಲ್ಲಿ ಆಹ್ಲಾದಿಸಿದರು. ವೀಕೆಂಡ್ ದಿಂದ ಕುಟುಂಬ ಸಮೇತವಾಗಿ ತಂಡೋಪತಂಡವಾಗಿ ಸೊಬಗು ವೀಕ್ಷಿಸಲು ಜನ ಧಾವಿಸಿದ್ದರು.
ಆಲಮಟ್ಟಿ ಜಲಾಶಯದ ಎಲ್ಲಾ 26 ಗೇಟ್ಗಳು ಓಪನ್ ಅಗಿದ್ದು ಧುಮುಕ್ಕುತ್ತಿರುವ ನೀರಿಗೆ ಕಲರ್ ಬೆಳಕಿನ ರೂಪ ಸಖತ್ ಸ್ಪಶಿ೯ಸಿದೆ.ಹೀಗಾಗಿ ಜಲಾಶಯದಿಂದ ಬೀಳುವ ನೀರು, ಹಿನ್ನೀರಿನ ಆಕರ್ಷಭರಿತ ದೃಶ್ಯ,ಹೊರ ಹರಿವಿನ ಸದ್ದು ಸಪ್ಪಳ ಮಾಡುತ್ತಿದೆ. ಈ ನೋಟ ವೀಕ್ಷಣೆಗೆಯಿಂದ ಖುಷಿ ವೆಂಬ ನೆಮ್ಮದಿಯ ಸಂತೃಪ್ತಿ ಪಡೆಯಲು ಪ್ರವಾಸಿಗರು ಬೆಳಿಗ್ಗೆಯಿಂದಲೇ ಆಲಮಟ್ಟಿಯತ್ತ ಮುಖ ಮಾಡಿ ಆಗಮಿಸಿದರು.
ಜಡಿ ಮಳೆಯಿಂದ ಈ ಮುನ್ನ ಪ್ರವಾಸಿಗರ ಬರುವಿಕೆ ಸಂಖ್ಯೆ ವಿರಳ, ಗಣನೀಯವಾಗಿ ಕಡಿಮೆ ಇತ್ತು. ಆದರೆ ವೀಕೆಂಡ್ ಫೂಲ್ ಜನರಿಂದ ತುಂಬಿ ತುಳುಕುತ್ತಿತ್ತು. ಜಲಾಶಯದ ಗೇಟ್ ದಿಂದ ಆರ್ಭಟಿಸಿ ಧುಮ್ಮಿಕ್ಕಿ ಹೊರ ಜಿಗಿಯುವ ರಂಗು ರಂಗಿನ ಜಲಧಾರೆ ನೀರು ತಮ್ಮ ನಯನದಲ್ಲಿ ಸೆರೆ ಹಿಡಿಯಲು ಉತ್ಸುಕರಾಗಿ ಪ್ರವಾಸಿಗರು ಅತ್ತಇತ್ತ ಆಲೆದರು. ಭಾಗಶಃ ಜನ ಮೊಘಲ್ ಲೇಸರ್ ಮೌಂಟೇನ್ ಬಳಿಯ ಉದ್ಯಾನದಿಂದಲೇ ಜಲಾಶಯದ ಸವಿಗಾನ ಸವಿಯುತ್ತಾ ಮನ ಪುಳಕಿಸಿಕೊಂಡರು. ಪ್ರವಾಸಿಗರ ಸುರಕ್ಷತಾ ದೃಷ್ಠಿಯಿಂದ ಅಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿತ್ತು. ಅದಾಗ್ಯೂ ವೀಕ್ಷಣೆಗೆ ಕಿರಿಕಿರಿ ಸಮಸ್ಯೆ ಸ್ವಲ್ಪ ಮಟ್ಟಿಗೆ ಉಂಟಾಯಿತು.ಬಗೆಬಗೆ ಬಣ್ಣದ ನೀರು ಚಿಮ್ಮುತ್ತಾ ನದಿಪಾತ್ರಕ್ಕೆ ಹೊರ ಹರಿವಿನ ಮುಖೇನ ಸಾಗುತ್ತಿದ್ದ ಅಪೂರ್ವ ದೃಶ್ಯ ಪ್ರವಾಸಿಗರ ಮನದಲ್ಲಿ ರೋಚಕ ಅನುಭವ ತಂದಿತು. ಹಳೇ ಕೃಷ್ಣಾ ಬ್ರಿಜ್ ಮೇಲೆ ಸಂಜೆ ವೇಳೆ ಜನ ನಿಂತೂ ಕೃಷ್ಣೆಯ ಕಲರ್ ಭರಿತ ನೋಟ ಹಾಗು ಹಗಲಲ್ಲಿ ಹಾಲ್ನೊರೆದಂತೆ ಹರಿಯುತ್ತಿದ್ದ ನೀರು ರಮಣೀಯ ದೃಶ್ಯ ಅಕ್ಕಪಕ್ಕದ ಗ್ರಾಮ ಮತ್ತು ವಾಹನಗಳ ಮೂಲಕ ತೆರಳುತ್ತಿದ್ದ ಬಹುಪಾಲ ಜನತೆ ಕಣ್ಣು ಪೀಳಿಕಿಸದೇ ನೋಡಿ ಅಚ್ಚರಿ ಗೊಂಡರು. ಏನ್ ಛಂದ ಕಾಣ್ತದ ಆಲಮಟ್ಟಿ ಡ್ಯಾಂ ಅಂತ ಖುಷಿಪಟ್ಟು ಸಂಭ್ರಮಿಸಿ ಮನೆಯತ್ತ ತೆರಳಿದರು. ಎಲ್.ಇ.ಡಿ. ಬಲ್ಪ್ ಗಳ ಸಂಪರ್ಕ ಜಲಾಶಯ ಮತ್ತು ಮೊಘಲ ಗಾಡ್೯ನ್ ಮತ್ತಿರೆಡದೆ ಕೆಬಿಜೆಎನ್ಎಲ್ ಅಧಿಕಾರಿಗಳು ಕಲ್ಪಿಸಿದ್ದರಿಂದ ಆಲಮಟ್ಟಿ ನೋಟಕ್ಕೆ ಹೊಸರೂಪ ಲಾವಣ್ಯ ದೊರೆತಿದೆ.ಇಂಥ ಅಮೋಘ ಅತ್ಯಾಕರ್ಷಕ ಸ್ಮರಣೀಯ ಝಲಕ್ ಗಳ ಸೆರೆ ಹಿಡಿದು ಸೆಲ್ಫಿಗಾಗಿಯೂ ನಗೆ ಮೊಗದ ನೋಟ ಬೀರಲು ಜನ ಮುಗಿಬೀಳುತ್ತಿದ್ದರು.
ರಾತ್ರಿ ಸಮಯ ಸಂಗೀತ ಕಾರಂಜಿ ಮತ್ತು ಜಲಾಶಯದ ಗೇಟ್ ಮೂಲಕ ಬೀಳುವ ನೀರಿನ ಸೆಲೆ ಜನತೆಯ ದೂಗುಡು ದುಮ್ಮಾನುಗಳಿಗೆ ರಿಲ್ಯಾಕ್ಸ್ ನೀಡಿತ್ತು. ಸದ್ಯ ಅಳವಡಿಸಿರುವ ಬಣ್ಣ ಬಣ್ಣದ ದೀಪಗಳ ಅಲಂಕಾರ ಇನ್ನಷ್ಟು ನೂತನ ತಂತ್ರಜ್ಞಾನ ಬಳಕೆಯೊಂದಿಗೆ ರಾರಾಜಿಸಬೇಕು ಎಂಬುದು ಹಲ ಪ್ರಕೃತಿ ನೆಚ್ಚಿನ ಪ್ರವಾಸಿಗರ ಅಭಿಮತ. ಈ ನಡುವೆ ಇಂದು ಆಲಮಟ್ಟಿ ಗಾಡ್೯ನ್ ಇಡೀ ಪರಿಸರ ಏಕಾಏಕಿ ಜನಸಂದಣಿ ಪ್ರವಾಸಿಗರ ಜಲಕಳೆ ವೈಭೋಗದಲ್ಲಿ ಮಿಂದಿತು. ವಾಹನಗಳ ಭರಾಟೆಯಲ್ಲಿ ಸಂಪೂರ್ಣ ಭತಿ೯ಯಾಗಿತ್ತು. ವಾಹನಗಳ ದಟ್ಟನೆ ವಿಪರೀತ. ಶೋ ಮುಕ್ತಾಯದ ಬಳಿಕ ಜನಸಮೂಹ ಮನೆಯತ್ತ ಹೊರಡಲು ಕ್ಷಣಕಾಲ ಕಸರತ್ತು ಪಟ್ಟರು. ಭಾನುವಾರ ಹೆಚ್ಚಾದ ಒಳಹರಿವು: ಅಂದಹಾಗೆ ವೀಕೆಂಡ್ ಭಾನುವಾರ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಾಗಿತ್ತು. ಜಲಾಶಯಕ್ಕೆ 1.39,361 ಕ್ಯುಸೆಕ್ ಒಳಹರಿವು ಇತ್ತು. 1.50,000 ಕ್ಯುಸೆಕ್ ನೀರು ಜಲಾಶಯದಿಂದ ಹೊರ ಹರಿವಿನ ಮೂಲಕ ನದಿ ತಳಪಾತ್ರಕ್ಕೆ ಹರಿಯುತ್ತಿತ್ತು. ಒಳಹರಿವಿಗಿಂದ ಹೊರಹರಿವು ಅಧಿಕಗೊಂಡಿದ್ದರಿಂದ ಜಲಾಶಯದ ಮಟ್ಟ ಅಲ್ಪ ಕ್ಷೀಣಿಸಿತ್ತು., 517.14 ಮೀ. ವರೆಗೆ ನೀರು ಸಂಗ್ರಹ ದಾಖಲಾಗಿತ್ತು. ನೇರೆಯಮಹಾರಾಷ್ಟ್ರದಲ್ಲಿ ರವಿವಾರ ಮಳೆಯ ಆರ್ಭಟ್ ಹೆಚ್ಚು ಕಡಿಮೆ ತಣ್ಣಗಾಗಿತ್ತು. ಕೊಯ್ನಾ 9.7 ಸೆಂ.ಮೀ, ನವಜಾ 10 ಸೆಂ.ಮೀ, ಮಹಾಬಳೇಶ್ವರ 12.2 ಸೆಂ.ಮೀ, ರಾಧಾನಗರಿ 13.3 ಸೆಂ.ಮೀ ಮಳೆಯಾಗಿದೆ. ರಾಜಾಪುರ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು 1,01,250 ಕ್ಯುಸೆಕ್ ಇದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.
ಕೋಟ್ (1): ಉದ್ಯಾನವನಗಳಲ್ಲಿ ಸ್ವಚ್ಚತೆಗೆ ಅದ್ಯತೆ ನೀಡಿ ಅಭಿವೃದ್ಧಿ ಪಡಿಸಲಾಗಿದೆ. ಮನರಂಜನಾ ಸ್ಪಾಟ್ ಗಳಿಗೆಲ್ಲ ಕೆಬಿಜೆಎನ್ಎಲ್ ದಿಂದ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ಮೋಘಲ್ ಸಂಗೀತ ಕಾರಂಜಿಗೆ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲಾಗಿದೆ.ಪ್ರವಾಸಿಗರ ಖುಷಿಗಾಗಿ ಇವೆಲ್ಲವೂ ಸಾಗಿದೆ.
ಮಹೇಶ್ ಪಾಟೀಲ, ವಲಯ ಅರಣ್ಯಾಧಿಕಾರಿ,ಆಲಮಟ್ಟಿ
ಕೋಟ್ (2): ಜಿಟಿಜಿಟಿ ಮುಂಗಾರು ಮಳೆಯಲ್ಲಂತೂ ಆಲಮಟ್ಟಿ ಜಲ, ಪ್ರಕೃತಿ ಅರಳಿ ಇಮ್ಮಡಿಗೊಳ್ಳುತ್ತೆ. ಈ ರೋಮಾಂಚನ ದೃಶ್ಯ ಸವಿಯುವ ಧಾವಂತದಲ್ಲಿ ಅಪಾರ ಪ್ರವಾಸಿಗರು ಭೇಟಿ ನೀಡುತ್ತಾರೆ. ವೈಭವೋಪೇತ ನೋಟ ತಮ್ಮ ಕಂಗಳಲ್ಲಿ, ಕ್ಯಾಮರಾ, ಮೊಬೈಲ್ ನಲ್ಲಿ ಸೆರೆ ಹಿಡಿದು ಆನಂದಿಸುತ್ತಾರೆ. ಗಾಡ್೯ನ್ ತುಂಬೆಲ್ಲ ಸೆಲ್ಫಿ ಗುಮ್ಮು.ಆ ಗುಂಗು ಎಷ್ಟೇ ಪೋಟೋ,ಸೆಲ್ಫಿ ಕ್ಲಿಕಿಸಿದರು ಸಹ ದಾಹ ತೀರದು.
ನಾಗರಾಜ ತಳವಾರ, ಸ್ಥಳೀಯ ಫೋಟೋಗ್ರಾಫರ್, ಆಲಮಟ್ಟಿ.
ಕೋಟ್ (3): ಬೆಳಕಿನ ಸಂಭ್ರಮ, ನವ ಥಳುಕು ಕಣ್ಮನ ತಣಿಸಿವೆ. ಅಪೂರ್ವ ಲೈಟಿಂಗ್ ವ್ಯವಸ್ಥೆ ಇನ್ನಿಲ್ಲದ ಸಂತೋಷ ತಂದಿದೆ. ಈ ನಿಸರ್ಗ ಲೋಕ ಹೊಸ ಅನುಭವದಲ್ಲಿ ತೇಲಿಸುವಂತಿದೆ. ಆಲಮಟ್ಟಿ ತಾಣದ ಸವಿರುಚಿ ಹೀರುವುದೇ ಬಲುರುಚಿ. ಆ ಸೌಭಾಗ್ಯ ಒದಗಿಸಿರುವ ಅಧಿಕಾರಿಗಳೆಲ್ಲರ ಪರಿಶ್ರಮ ನಿಜಕ್ಕೂ ಇಲ್ಲಿ ಸಾರ್ಥಕತೆ ಪಡೆದಿದೆ.

Leave a Reply

Your email address will not be published. Required fields are marked *

You May Also Like

ಗ್ರಾಪಂ ಚುನಾವಣೆ : ಮತಗಟ್ಟೆ ಅಧಿಕಾರಿ ನೇಮಕಕ್ಕೆ ನಿಯಮಗಳು

ವಿದ್ಯುತ್ ಸರಬರಾಜು ಕಂಪನಿಗಳ ಖಾಸಗಿಕರಣ ಸಂಬಂಧ ಕೇಂದ್ರ ಇಂಧನ ಮಂತ್ರಾಲಯವು ಹೊರಡಿಸಿರುವ ಕರಡು(Standard bidding Documents) ಅಭಿಪ್ರಾಯ ನೀಡುವ ಕುರಿತು ಈ ಬಗ್ಗೆ ಕುಲಂಕುಶವಾಗಿ ಪರಿಶೀಲಿಸಿ ಈ ವಿಷಯವನ್ನು ಪರಿಗಣಿಸಿ, ಎಲ್ಲ ವಿದ್ಉತ್ ಸರಬರಾಜು ಕಂಪನಿಗಳು ಮತ್ತು ಕೆಪಿಟಿಸಿಎಲ್ ರವರಿಂದ ಅಭಿಪ್ರಾಯವನ್ನು ಪಡೆದು ದಿನಾಂಕ 01-10-2020 ರೊಳಗೆ ಕ್ರೂಢಿಕೃತ ಅಭಿಪ್ರಾಯವನ್ನು ಇಂಧನ ಇಲಾಖೆಗೆ ಸಲ್ಲಿಸುವಂತೆ ಕೋರಲಾಗಿದೆ ಎಂದು ಇಂಧನ ಇಲಾಖೆಯ ಸರ್ಕಾರದ ಅಧಿನ ಕಾರ್ಯದರ್ಶಿ ಎನ್.ಮಂಗಳಗೌರಿ ಸುತ್ತೋಲೆ ಹೊರಡಿಸಿದ್ದಾರೆ.

ಕಿಡಿಗೇಡಿಗಳಿಂದ ವಾಮಾಚಾರ – ಆತಂಕಗೊಂಡ ಗ್ರಾಮಸ್ಥರು!

ಮಡಿಕೇರಿ : ಕಿಡಿಗೇಡಿಗಳ ವಾಮಾಚಾರಕ್ಕೆ ಗ್ರಾಮಸ್ಥರು ಆತಂಕಕ್ಕೊಳಗಾಗಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯದಲ್ಲಿ ನಡೆದಿದೆ.

ನಾನು ಪತ್ರಕರ್ತೆ ಎಂದು ಸಪ್ಲೈಯರ್ ಥಳಿಸಿದ ಮಹಿಳೆ.!

ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಸಪ್ಲೈಯರ್ಗೆ ಅಪರಿಚಿತ ಮಹಿಳೆಯೊಬ್ಬರು ಕಪಾಳಕ್ಕೆ ಹೊಡೆದ ಘಟನೆ ಹಾವೇರಿ ಜಿಲ್ಲೆಯ…

ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರಿಂದಲೇ ಶೆಟ್ಟರ್ ಗೆ ಸಿಎಂ ಮಾಡಲು ಯತ್ನ

ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹೋದವರು ಸಚಿವ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಮಾಡಲು ಯತ್ನಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.