ಕೊಪ್ಪಳ: ಕರ್ನಾಟಕ ಪತ್ರಿಕಾ ದಿನಾಚರಣೆಯನ್ನು ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಜು. 1ರಂದು ಬೆಳಿಗ್ಗೆ 10.30ಕ್ಕೆ ತೋಟಗಾರಿಕೆ ಇಲಾಖೆಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಜ್ಜನವರು ಪೀಠಾಧಿಪತಿ ಕಾರ್ಯಕ್ರಮ ಉದ್ಘಾಟಿಸುವರು. ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಉಪನ್ಯಾಸ ನೀಡುವರು.

ಮೀಡಿಯಾ ಕ್ಲಬ್ ಅಧ್ಯಕ್ಷ ಶರಣಪ್ಪ ಬಾಚಲಾಪುರ ಅಧ್ಯಕ್ಷತೆ ವಹಿಸುವರು. ವಾರ್ತಾಧಿಕಾರಿ ಬಿ.ವಿ. ತುಕರಾಮರಾವ್, ಪತ್ರಕರ್ತ ವಿನಾಯಕ ಶ್ರೀವಾಸ್ತವ್ ಪಾಲ್ಗೊಳ್ಳುವರು.

ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಶಿವಕುಮಾರ ಪತ್ತಾರ, ಛಾಯಗ್ರಾಹಕರಾದ ಪ್ರಕಾಶ ಕಂದಕೂರು, ಭರತ್ ಕಂದಕೂರ, ಪತ್ರಕರ್ತರಾದ ಹುಸೇನ ಪಾಷಾ, ದೇವು ನಾಗನೂರು ಹಾಗೂ ಮೌಲಾಹುಸೇನ ಅವರಿಗೆ ಬುಲ್ಡಿಯಾರ ಸನ್ಮಾನ ನಡೆಯಲಿದೆ ಎಂದು ಮೀಡಿಯಾ ಕ್ಲಬ್ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ಯಶಶ್ವಿನಿ ಯೋಜನೆ ರೈತರಿಗೆ ಮಾಸಿಕ ವೇತನ ಜಾರಿಗೊಳಿಸಿ

ಲಕ್ಷ್ಮೇಶ್ವರ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರವೇ ಸ್ವಾಭಿಮಾನಿ ಬಣದಿಂದ ಉಪ ತಹಸೀಲ್ದಾರ್ ಮಂಜುನಾಥ ದಾಸಪ್ಪನವರಿಗೆ ಮನವಿ…

ರೈತರಿಗೆ ಖಾರವಾಯ್ತು ಮೆಣಸಿನಕಾಯಿ: ಕಂಗಾಲದ ಬೆಳೆಗಾರರು

ಜಿಲ್ಲೆಯಲ್ಲಿ ಮುಖ್ಯ ಬೆಳೆಯೇ ಮೆಣಸಿನ ಕಾಯಿ ಬೆಳೆ. ಆದರೆ ಮೆಣಸಿನಕಾಯಿ ಬೆಳೆದ ರೈತರಿಗೆ ಈ ಭಾರಿ ಮೆಣಸಿನಕಾಯಿ ಖಾರವಾಗಿ ಮಾರ್ಪಟ್ಟಿದೆ. ಈ ಕಾರಣದಿಂದ ಬೆಲೆ ಇಲ್ಲದ ಕಾರಣ ಬೆಳೆದ ಬೆಳೆಯನ್ನು ಅನ್ನದಾತ ನಾಶಪಡಿಸುತ್ತಿದ್ದಾನೆ.

ನದಿ ಪಾತ್ರದ ಜನರ ಬದುಕು ಮೂರುಬಟ್ಟೆ ಮಾಡಿದ ವರುಣ!

ರಾಯಚೂರು : ಮಳೆರಾಯನ ಅಟ್ಟಹಾಸಕ್ಕೆ ಇಡೀ ಉತ್ತರ ಕರ್ನಾಟಕವೇ ನಲುಗಿ ಹೋಗುತ್ತಿದೆ.

ಮುತ್ತಪ್ಪ ರೈ ಗನ್ ಮ್ಯಾನ್ ಗಳನ್ನು ಬಂಧಿಸಿದ್ದೇಕೆ?

ಬೆಂಗಳೂರು: ಮಾಜಿ ಡಾನ್, ಉದ್ಯಮಿ ಮುತ್ತಪ್ಪ ರೈ ಅಂತ್ಯ ಸಂಸ್ಕಾರವು ಅವರ ನಿವಾಸ ಬಿಡದಿಯ ತೋಟದಲ್ಲಿ…