ಧಾರವಾಡ: ಜಿಲ್ಲೆಯಲ್ಲಿ ಮುಖ್ಯ ಬೆಳೆಯೇ ಮೆಣಸಿನ ಕಾಯಿ ಬೆಳೆ. ಆದರೆ ಮೆಣಸಿನಕಾಯಿ ಬೆಳೆದ ರೈತರಿಗೆ ಈ ಭಾರಿ ಮೆಣಸಿನಕಾಯಿ ಖಾರವಾಗಿ ಮಾರ್ಪಟ್ಟಿದೆ. ಈ ಕಾರಣದಿಂದ ಬೆಲೆ ಇಲ್ಲದ ಕಾರಣ ಬೆಳೆದ ಬೆಳೆಯನ್ನು ಅನ್ನದಾತ ನಾಶಪಡಿಸುತ್ತಿದ್ದಾನೆ.

ಲಾಕಡೌನ್ ಹಿನ್ನೆಲೆಯಲ್ಲಿ ಮೆಣಸಿನಕಾಯಿ ದರ ಕುಸಿತಗೊಂಡಿದ್ದು, ಅದನ್ನು ಬೆಳೆದ ರೈತ ಇದೀಗ ಕಣ್ಣೀರು ಹಾಕುವಂತಾಗಿದೆ.

ಮೆಣಸಿನಕಾಯಿಗೆ ಬೆಲೆ ಇಲ್ಲದ ಕಾರಣ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ರೈತನೋರ್ವ ತಾನು ಬೆಳೆದ ಮೆಣಸಿನಕಾಯಿ ಬೆಳೆಯನ್ನೇ ನಾಶಪಡಿಸಿದ್ದಾನೆ.

ರೈತ ಅಜ್ಜಪ್ಪ, ತನ್ನ 3 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದರು. ಆದರೆ, ಪ್ರಸಕ್ತ ಕೊರೊನಾದಿಂದಾಗಿ ಲಾಕಡೌನ್ ಆಗಿದ್ದು, ಪ್ರತಿ ಕೆಜಿ ಮೆಣಸಿನಕಾಯಿಗೆ 5 ರೂಪಾಯಿ ಮಾತ್ರ ಬೆಲೆ ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಮೆಣಸಿನಕಾಯಿಯನ್ನು ಯಾರೂ ಕೇಳದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸುಮಾರು 25 ಸಾವಿರಕ್ಕಿಂತಲೂ ಹೆಚ್ಚು ಖರ್ಚು ಮಾಡಿದ ರೈತ, ತನಗೆ ಲಾಭ ಬರದೇ ಇರುವುದರಿಂದ ಇಡೀ ಹೊಲದಲ್ಲಿನ ಮೆಣಸಿನಕಾಯಿ ಬೆಳೆಯನ್ನು ನಾಶಪಡಿಸಿದ್ದಾನೆ.

ತೋಟಗಾರಿಕಾ ಬೆಳೆಗಳಿಗೆ ಬೆಲೆ ಸಿಗದೇ ಅನಿವಾರ್ಯವಾಗಿ ಅವುಗಳನ್ನು ನಾಶಪಡಿಸುತ್ತಿದ್ದಾರೆ. ಅಮ್ಮಿನಬಾವಿ ಗ್ರಾಮದಲ್ಲಿ ಸುಮಾರು 10 ಕ್ಕೂ ಹೆಚ್ಚು ರೈತರು ತೋಟಗಾರಿಕಾ ಬೆಳೆಯನ್ನು ನಾಶಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಏನೇ ಆಗಲಿ ಕೊರೊನಾ ಕರಿ ನೆರಳು ಬೆಳೆ ಬೆಳೆದು ಜಗತ್ತಿಗೆ ಅನ್ನ ಕೊಡುವ ಸ್ವಾಭಿಮಾನಿ ರೈತರ ನೆಮ್ಮದಿಗೂ ಭಂಗ ತಂದಿದೆ.

Leave a Reply

Your email address will not be published. Required fields are marked *

You May Also Like

ಲಾರಿಯಲ್ಲಿದ್ದ ಮಶೀನ್ ಗೆ ಬೆಂಕಿ

ಚಲಿಸುತ್ತಿದ್ದ ಲಾರಿಯಲ್ಲಿದ್ದ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಅರಣ್ಯ ಸಂರಕ್ಷಣಾಧಿಕಾರಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ನಡೆಸಲಿರುವ ಕರ್ನಾಟಕ  ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿನ ಸಹಾಯಕ ಅರಣ್ಯ…

ಸಿದ್ದರಾಮಯ್ಯ ಸ್ವಾರ್ಥ ರಾಜಕಾರಣವೇ ಪಕ್ಷ ಬಿಡಲು ಕಾರಣ: ಸಚಿವ ಬಿ.ಸಿ ಪಾಟೀಲ್…!

ಕೊಪ್ಪಳ: ಕಾಂಗ್ರೆಸ್ ನವರು ಶಾಸಕರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದೆ ಅವರಿಗೆ ಮೋಸ ಮಾಡಿದರು. ಇದಲ್ಲದೆ ಮುಖ್ಯಮಂತ್ರಿಯಾಗಿ…

ಬೀದಿ ಬದಿ ವ್ಯಾಪಾರಸ್ಥರು ಕಡ್ಡಾಯವಾಗಿ ಲಸಿಕೆ ಪಡೆಯಲು ಮುಂದಾಗಬೇಕು : ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ

ಮಹಾಮಾರಿ ಕೊರೊನಾ ಹೊಡೆದೊಡಿಸುವ ಉದ್ದೇಶದಿಂದ ಬೀದಿ ಬದಿ ವ್ಯಾಪಾರಸ್ಥರು ಕಡ್ಡಾಯವಾಗಿ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.