ಉತ್ತರಪ್ರಭ ಸುದ್ದಿ

ನರೇಗಲ್: ಸಮೀಪದ ಕಳಕಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಯ ನೀರು 50ಕ್ಕೂ ಹೆಚ್ಚಿನ ಮನೆಗಳಿಗೆ ನುಗ್ಗಿದೆ. ಗ್ರಾಮದಲ್ಲಿ ಗುತ್ತಿಗೆದಾರರು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಚರಂಡಿ ಕಾರಣ ಮಳೆ ನೀರು ಮನೆಗಳಿಗೆ ನುಗ್ಗಿ ಹಾನಿ ಮಾಡಿದೆ ಎಂದು ಸ್ಥಳೀಯರಾದ ರಮಜಾನಬಿ ಗಾಣದ, ಯಲ್ಲಪ್ಪ ಶಿರಗುಂಪಿ, ಪಡಿಯವ್ವ ಮಾದರ, ಬನ್ನೆಪ್ಪ ಕಟ್ಟಿಮನಿ, ಯಮನೂರಸಾಬ ಮಾರನಬಸರಿ ಆರೋಪ ಮಾಡಿದರು.

ಗ್ರಾಮ ಪಂಚಾಯ್ತಿಯ ಸದಸ್ಯರು ಕಮಿಷನ್ ಆಸೆಗೆ ಬೇಕಾಬಿಟ್ಟಿ ಚರಂಡಿ ನಿರ್ಮಾಣ ಮಾಡಿರುವ ಕಾರಣ ಜುಮಾ ಮಸೀದಿ ಯಿಂದ ಕನಕದಾಸರ ಮೂರ್ತಿವರೆಗಿನ ಎಲ್ಲಾ ಮನೆಗಳಿಗೆ ಮಳೆ ನೀರು ನುಗ್ಗಿದೆ. ಚರಂಡಿ ತೆರುವು ಮಾಡುವಂತೆ ಗ್ರಾಮದ ಅರ್ಧಕ್ಕೂ ಹೆಚ್ಚು ಜನರು ಆಗ್ರಹ ಮಾಡಿದ ಕಾರಣ ಸಿಸಿ ರಸ್ತೆ ಇಂದಿಗೂ ನಿರ್ಮಾಣ ಆಗಿಲ್ಲ ಆದರೆ ಚರಂಡಿ ಮರು ನಿರ್ಮಾಣ ಮಾಡಲು ಮುಂದಾಗದೇ ಇರುವ ಕಾರಣಕ್ಕೆ ಗ್ರಾಮಸ್ಥರ ಮನೆಗಳು ಮಳೆ ನೀರಿನಲ್ಲಿ ನಿಂತಿವೆ ಎಂದು ಲಾಡಸಾಬ ತಿಮ್ಮನೆಟ್ಟಿ, ಮುಸ್ತುಸಾಬ ದೊಡ್ಡಮನಿ, ಅಂದಪ್ಪ ಶಿರಹಟ್ಟಿ ಆರೋಪ ಮಾಡಿದರು.

ಮುಂಗಾರು ಬಿತ್ತನೆಗಾಗಿ ತಂದಿದ್ದ ಗೊಬ್ಬರ, ಬೀಜ ಹಾಗೂ ಸಂಗ್ರಹಿಸಿ ಇಡಲಾಗಿದ್ದ ಬಿಳಿ ಜೋಳ, ಗೋಧಿ, ಮನೆಯ ದಿನಿಸಿ, ಬಟ್ಟೆ ಎಲ್ಲವೂ ಮಳೆ ನೀರಿನಲ್ಲಿ ಒದ್ದೆಯಾಗಿ ಹಾನಿಯಾಗಿದೆ ಎಂದು ರೈತ ದೇವಪ್ಪ ಹಳ್ಳಿ, ಕಳಕಪ್ಪ ಬೂದಿಹಾಳ, ಬಾಬುಸಾಬ ದೊಡ್ಡಮನಿ ಹೇಳಿದರು.

Leave a Reply

Your email address will not be published. Required fields are marked *

You May Also Like

ಬಾಲೆಹೊಸೂರು ಗ್ರಾಪಂ ಅಧ್ಯಕ್ಷ ಚುನಾವಣೆ: ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

ಬಾಳೆಹೊಸೂರು ಗ್ರಾಮ ಪಂಚಾಯತಿಗೆ ಇಂದು ನಡೆಯಲಿರುವ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಯಿಂದ ಬಾಲೆಹೊಸೂರು ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

ಪಕ್ಷಾಂತರಿಶಾಸಕರ ವಜಾ: ಸ್ಪೀಕರ್ ಗೆ ಅಧಿಕಾರ ಕೊಡಿ ಎಂದ ಸಿದ್ದು

ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವ ಅಧಿಕಾರ ವಿಧಾನಸಭೆಯ ಅಧ್ಯಕ್ಷರಿಗೆ ಇರಬೇಕು.

ಎಚ್.ಎಸ್.ವೆಂಕಟಾಪೂರದ ನೀರಿನ ಬವಣೆ ನೀಗುವುದು ಯಾವಾಗ..?

ಅದು ಆ ತಾಲೂಕಿನ ಕಟ್ಟಕಡೆಯ ಗ್ರಾಮ. ಆ ತಾಲೂಕಿನಲ್ಲಿ ಆ ಗ್ರಾಮ ಇದ್ರೂ ವಿಧಾನ ಸಭಾ ಕ್ಷೇತ್ರ ಮಾತ್ರ ಬೇರೆಯದೆ. ಎಲ್ಲಿಯ ತಾಲೂಕು, ಎಲ್ಲಿಯ ವಿಧಾನಸಭಾ ಕ್ಷೇತ್ರ, ಎಲ್ಲಿಯ ಆ ಗ್ರಾಮ ಎನ್ನುವಂತಾಗಿದೆ.

ದಯಾಮರಣ ಕೋರಿ ಡಿಸಿಗೆ ಲಕ್ಷ್ಮೇಶ್ವರದ ಮಾಜಿ ಸೈನಿಕ ಮನವಿ

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರು ಗ್ರಾಮದ ಮಾಜಿ ಸೈನಿಕ ಈರಣ್ಣ ಅಣ್ಣಿಗೇರಿ ತಮಗೆ ದಯಾಮರಣ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.