ಆಲಮಟ್ಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕಾಯಾ೯ಗಾರ
“ಎಲ್ಲ ವ್ಯವಸ್ಥೆಗಳು ಅಮೂಲಾಗ್ರ ಬದಲಾಗಬೇಕು”

ಸಚಿತ್ರ ವರದಿ : ಗುಲಾಬಚಂದ ಜಾಧವ
ಆಲಮಟ್ಟಿ :
ಹೊಸ ಶಿಕ್ಷಣ ನೀತಿಯ ಅವಶ್ಯಕತೆಯಿದೆ. ಅದು ಪ್ರಭಲವಾಗಿ ಮೊಳಗುತ್ತಲ್ಲಿದೆ. ನವ ಶಿಕ್ಷಣ ವ್ಯವಸ್ಥೆ ಪದ್ದತಿಗಳಿಗೆ ಶಿಕ್ಷಕ ಸಮೂಹ ತಲೆಬಾಗಿ ಅಣಿಗೊಳ್ಳಿ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.


ಸ್ಥಳೀಯ ಕೆಬಿಜೆಎನ್ ಎಲ್ ಒಡೆತನದ ಸಮುದಾಯ ಭವನದಲ್ಲಿ ಮಂಗಳವಾರ ಜಿ.ಪಂ ಹಾಗು ಸಾ.ಶಿ.ಇಲಾಖೆ ವಿಜಯಪುರ ಆಶ್ರಯದಲ್ಲಿ ಬಸವನ ಬಾಗೇವಾಡಿ ಹಾಗು ಮುದ್ದೇಬಿಹಾಳ ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕರಿಗಾಗಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯ ಶೈಕ್ಷಣಿಕ (ಎನ್ ಇಪಿ) ಕಾಯಾ೯ಗಾರ ಉದ್ಘಾಟಿಸಿ ಮಾತನಾಡಿದ ಅವರು, ನೈತಿಕ ಮೌಲ್ಯಗಳು ದಿನೆದಿನೆ ಕುಸಿಯುತ್ತಲ್ಲಿದ್ದು ಆ ದಿಸೆಯಲ್ಲಿ ನೈತಿಕತೆಯ ಶಿಕ್ಷಣ ಯುವಜನಾಂಗಕ್ಕಿಂದು ನೀಡುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಿಸಿದರು.


ಅಮೂಲಾಗ್ರವಾಗಿ ಶಿಕ್ಷಣ ಪದ್ದತಿ ತರದೇ ಇದ್ದರೆ ದೇಶಕ್ಕೆ ಭವಿಷ್ಯ ಇಲ್ಲ.ಕಾರಣ ಹಳೆಯ ಶಿಕ್ಷಣ ನೀತಿ,ರೀತಿವುಳ್ಳ ಪದ್ದತಿ ಬದಲಾಗಲೇಬೇಕು ಎಂದು ಪ್ರತಿಪಾದಿಸಿದರು.
ಮುಂದಿನ ಭಾರತದ ಜನಾಂಗ ಸ್ವಾವಲಂಬಿ, ಸ್ವತಂತ್ರವಾಗಿ ಬದುಕು ಕಂಡುಕೊಳ್ಳುವಂಥ ವ್ಯವಸ್ಥೆ ಸೃಷ್ಟಿಸಲು ಶಿಕ್ಷಣ ಇಲಾಖೆ ಮಹತ್ವಪೂರ್ಣ ಹೆಜ್ಜೆಯಿರಿಸಬೇಕಾಗಿದೆ ಜೊತೆಗೆ ಶಿಕ್ಷಕರ ಪಾತ್ರ ಇದರಲ್ಲಿ ಅತ್ಯಂತ ನಿಣಾ೯ಯಕವಾಗಿದೆ.ಪಾಲಕರ,ಸಾರ್ವಜನಿಕರ ಸಹಕಾರ ಧಾರೆಯೂ ಲಭಿಸಬೇಕು ಎಂದರು.


ವಿವೇಕಾನಂದರು,ಸದಾ೯ರ ವಲ್ಲಭಾಯಿ ಪಟೇಲ್,ಅರವಿಂದರು, ವಿನೋದಭಾವೆಯವರು ಸೇರಿದಂತೆ ಅನೇಕ ಮಹನೀಯರು ಅಂದು ಶಿಕ್ಷಣ ಪದ್ದತಿ ಕಾಲಘಟ್ಟಕ್ಕೆ ತಕ್ಕಂತೆ ಬದಲಾವಣೆ ಅಗುತ್ತಿರಬೇಕೆಂದಿದ್ದರು. ಹಿಂದಿನ ಗುರು,ಹಿರಿಯರ ನೈತಿಕ ಉಚ್ಚಾಯ ಮನೋಭಾವದಿಂದ ಮನೆ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸಕ್ತಿ,ಕಳಕಳಿಂದ ಮಾಡುವ ಕಾಯಕದಲ್ಲಿ ಮನುಷ್ಯ ಪರಿಪೂರ್ಣತೆ ಸಾಧಿಸುತ್ತಾನೆ. ಕಲಿಸುವ ವಿಷಯಗಳು ಶ್ರದ್ಧಾ ತಪಸ್ಸಿನಿಂದ ಸಾಗಬೇಕು. ಮೇಷ್ಟ್ರು ಅಗಬೇಕೆನ್ನುವ ಅಪೇಕ್ಷೆಯಿಂದ ವೃತ್ತಿಗೆ ಸೇರುವರು ಸಮಾಜದಲ್ಲಿ ಜನಮನ ನೆನೆಯುವಂತೆ ಶಾಶ್ವತವಾಗಿ ಉಳಿಯುವಂಥ ಕೆಲಸಗಳನ್ನು ಮಾಡಿ. ಇಚ್ಚೆ,ನೆಮ್ಮದಿಗೆ ಖುಷಿ,ತೃಪ್ತಿ ಕೊಡುವ ಕಾಯಕದಿಂದ ಜೀವನ ಸಂತಸ ಎಂದು ಸಚಿವ ನಾಗೇಶ ನುಡಿದರು.


ಬ್ರಿಟಿಷ್‌ ಆಳ್ವಿಕೆಯಲ್ಲಿ ದೊಡ್ಡ ಅನ್ಯಾಯ…! ಬ್ರಿಟಿಷ್ ರ ಅಳ್ವಿಕೆಯಲ್ಲಿ ಭಾರತಕ್ಕೆ ದೊಡ್ಡ ಅನ್ಯಾಯವಾಗಿದೆ. ದೇಶದ ಸ್ವತಂತ್ರ ವ್ಯವಸ್ಥೆಯನ್ನು ಮುಚ್ಚುವಂಥ ಹುನ್ನಾರ ನಡೆದಿತ್ತು. ಪರಾವಲಂಬಿ ಸಮಾಜ ನಿಮಾ೯ಣಕ್ಕೆ ಕೈ ಹಾಕಿದ್ದರು. ಸ್ವಾವಲಂಬಿ ವ್ಯವಸ್ಥೆಯನ್ನು ಪರಾವಲಂಬಿಯಾಗಿ ಮಾರ್ಪಡಿಸಲು ವಿಶೇಷ ಗಮನ ಹರಿಸಿದ್ದರು. ಅದಕ್ಕಾಗಿ ಬ್ರಿಟಿಷ್ ರ ವಿರುದ್ಧ ಹೋರಾಟಕ್ಕಿಳಿಯಬೇಕಾಯಿತು. ನಮ್ಮ ದೇಶದಲ್ಲಿ ಇಂಡಿಪೆಂಡೆಂಟ್ ವ್ಯವಸ್ಥೆ ಉಳಿದಿದ್ದಕ್ಕೆ ಡಿಪೆಂಡೆಂಟ್ ಸೊಸೈಟಿ ಮಾಡುವ ಪ್ರಯತ್ನ ಬ್ರಿಟಿಷ್‌ ರಿಂದ ಸಾಗಿತ್ತು. ಈ ವಿದ್ಯಮಾನದಿಂದಲೇ ಹೋರಾಟದ ಯೋಚನೆ,ಯೋಜನೆ ರೂಪಗೊಂಡಿತ್ತು. ಬ್ರಿಟಿಷ್ ರನ್ನು ಓಡಿಸಿ ಸ್ವಾವಲಂಬಿಯಾಗಿ ಸ್ವಾತಂತ್ರ್ಯವಾಗಿ ನಿಲ್ಲಬೇಕು, ವ್ಯವಸ್ಥೆ ಸರಿದೂಗಿಸಬೇಕೆನ್ನುವ ಅಪೇಕ್ಷೆ ಪ್ರತಿಧ್ವನಿಸಿತು. ಅನಾಹುತಗಳ ಅನುಭವದ ಮೇಲೆ ಹೋರಾಟದಲ್ಲಿ ಅಂದು ಧುಮುಕುಬೇಕಾಯಿತು. 1857 ರಲ್ಲೇ ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭವಾಗಿ ವಿಶೇಷ ರೂಪ ಪಡೆಯಲಾರಂಭಿಲಸಿತ್ತು ಎಂದು ಸಚಿವರು ನುಡಿದರು.


ಸಾವಿರ ವರ್ಷಗಳ ಕಾಲ ನಮ್ಮ ದೇಶ ದಬ್ಬಾಳಿಕೆಗೆ ಒಳಗಾಗಿತ್ತು. ಪ್ರಪಂಚದ ಸಣ್ಣ ಪುಟ್ಟ ರಾಷ್ಟ್ರಗಳು ಸಹ ದೇಶದ ಸಂಪತ್ತಿನ ಮೇಲೆ ಆಕ್ರಮಣ ಮಾಡಿ ಲೂಟಿಗೈದಿವೆ. ನಮ್ಮ ದೇಶದ ಜೀವನ ಪದ್ದತಿಗೆ ಆಕಷಿ೯ತರಾಗಿ ಬಂದು ನಮ್ಮ ಅನ್ನವನ್ನು ತಿಂದು ನಮ್ಮನಾಳಿದ್ದು ದುರಂತ. ಪ್ರೆಂಚರು,ಪ್ರೋಚ್೯ಗ್ರಿಸರು, ಡೆಕ್ಕರು ಹೀಗೆ ಎಲ್ಲರೂ ಅಳಿ ಹೋಗಿದ್ದಾರೆ. ಮೊಗಲರ ಆಕ್ರಮಣದ ಕಾಲದಲ್ಲಿ ಸಂಸ್ಕೃತಿ ಮೇಲೆ ಧಕ್ಕೆ ತಂದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತೆಂದರು.
ಈ ಹಿಂದೆ ಅವಶ್ಯಕತೆಗಳಿಗೆ ತಕ್ಕಂತೆ ವ್ಯವಸ್ಥೆಗಳನ್ನು ಬದಲಿಸಿಕೊಂಡು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲಾಗುತ್ತಿತ್ತು. ಇದರಿಂದ ಜೀವನಾನುಭ ಪದ್ದತಿ ಅನುಭವಿಸುತ್ತಿದ್ದೆವು. ನಮ್ಮ ಊರು,ಕೆರೆ,ಬೆಳೆ ಇತರೆ ಅಭಿವೃದ್ಧಿ ಕೆಲಸ ಕಾರ್ಯಗಳು ಹೇಗಿರಬೇಕೆಂಬುದ್ದನ್ನು ನಾವೇ ನಿರ್ಧರಿಸುತ್ತಿದ್ದ ಕಾಲ ಅದಾಗಿತ್ತು ಎಂದು ಅಂದಿನ ಹಳೆಯ ಮೆಲುಕುಗಳನ್ನು ಸ್ಮರಿಸಿಕೊಂಡ ಸಚಿವ ನಾಗೇಶ, ಸಮಾಜದಲ್ಲಿ ಎಲ್ಲವೂ ಗುರುಬಲದ ವ್ಯವಸ್ಥೆಯಲ್ಲೇ ನೋಡಿಕೊಳ್ಳಲಾಗುತ್ತಿತ್ತು ಎಂದರು.
ಮಾನಸಿಕ ಖಿನ್ನತೆಯಿಂದ ಯಾವುದೇ ಕೆಲಸಗಳ ಅಭಿವೃದ್ಧಿ ಸಾಗದು. ಸ್ವತಂತ್ರ ಬದುಕು ಪ್ರತಿಯೊಬ್ಬರಿಗೂ ಬೇಕು. ಆ ನಿಟ್ಟಿನಲ್ಲಿ ದೇಶದ ಎಲ್ಲ ವ್ಯವಸ್ಥೆಗಳು ಯಥೇಚ್ಛವಾಗಿ ಬದಲಾಗಬೇಕು . ಮನುಷ್ಯ ಸಮಾಧಾನಕರವಾಗಿ ಕೆಲಸ ಮಾಡುವ ವ್ಯವಸ್ಥೆ ರೂಪಗೊಳ್ಳಬೇಕು. ಈ ಮುಂಚೆ ಮನೆಗೊಸ್ಕರ ಬದುಕು ಕಂಡುಕೊಳ್ಳಬೇಕೆಂದಿತ್ತು. ಈಗ ನಮಗೊಸ್ಕರವೇ ಬದುಕಬೇಕ್ಕೆನ್ನುವ ಪರಸ್ಥಿತಿ ಉಂಟಾಗಿದೆ ಎಂದರು.
ಉನ್ನತ ಶಿಕ್ಷಣ ಎಜುಕೇಶನ್ ಹೆಚ್ಚಾಗುತ್ತಿದ್ದಂತೆ ದೇಶದಲ್ಲಿ ವೃದ್ಧಾಪ್ಯದ ಸಮಸ್ಯೆ ಕಾಡುತಿವೆ. ಎಲ್ಲೆಂದರಲ್ಲಿ ವೃದ್ಧಾಶ್ರಮಗಳು ತಲೆಯತ್ತುತ್ತಿವೆ.ಇದು ಕಳವಳಕಾರಿಯಾಗಿದೆ ಎಂದ ಸಚಿವರು, ಅನೇಕ ಗೊಂದಲಗಳಿಗೆ ಮುಕ್ತಿ ಕಾಣಿಸುವಂಥ ಶಕ್ತಿ ಶಿಕ್ಷಣಕ್ಕಿದೆ ಅದಾಗ್ಯೂ ಪ್ರತಿದಿನ ಒಂದಿಲ್ಲೊಂದು ಸಮಸ್ಯೆ, ಗೊಂದಲಗಳು ಸೃಷ್ಟಿವಾಗುತ್ತಿವೆ. ಆಸೆ,ದುರಾಸೆ,ಗೊಂದಲಗಳಿಗೆ ಒಳಗಾಗುತ್ತಲ್ಲಿದ್ದೆವೆ. ಕ್ಷಣಿಕ ತೃಪ್ತಿಗಾಗಿ ಹಾತೋರುತ್ತಿದ್ದೆವೆ. ಇವೆಲ್ಲವನ್ನು ನೋಡಿದರೆ ಶಿಕ್ಷಣ ಏನು ಕೊಡಬೇಕಾಗಿತ್ತೋ ಅದು ಕೊಡುತ್ತಿಲ್ಲ ಎಂಬ ಭಾವ ಸಹಜವಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಬೇರೂರಿದೆ ಎಂದರು.


ಭಗವಂತ ಎಲ್ಲರಿಗೂ ಶಕ್ತಿಯನ್ನು ಕರುಣಿಸಿದ್ದಾನೆ. ಆ ಶಕ್ತಿ ಎಲ್ಲಿ ಹೇಗೆ ಒಳ್ಳೆ ವಿವೇಚನೆಯಿಂದ ಬಳಸುತ್ತೆವೆಯೊ ಅದರಲ್ಲಿ ಯಶಸ್ವಿ ಕಾಣುತ್ತೆವೆ. ಬದುಕು ಭರವಸೆದಾಯಕವಾಗುತ್ತದೆ ಎಂದರು.
ಶಿಕ್ಷಣ ವ್ಯವಸ್ಥೆ ಬಹುದೊಡ್ಡದಿದೆ. ಆದು ಸ್ಪಷ್ಟವಾಗಿ ಗೋಚರಿಸಬೇಕು. ನೈತಿಕ ಹಕ್ಕನ್ನು ನಿಭಾಯಿಸುವ ಸಾಮರ್ಥ್ಯ ಶಿಕ್ಷಣ ವ್ಯವಸ್ಥೆ ಹೊಂದಿದೆ. ಹೊಸ ಶಿಕ್ಷಣ ನೀತಿಯಿಂದ ಮತ್ತೆ ಭಾರತ ಪ್ರಜ್ವಲಿಸಲಿದೆ. ಭಾರತೀಯ ನೈಜ ಶಕ್ತಿ ಅನಾವರಣವಾಗಲಿದೆ. ಅನ್ಯ ದೇಶಗಳಿಗೆ ಭಾರತ ಮಾರ್ಗದರ್ಶಕವಾಗುತ್ತಿದೆ. ಇದೆಲ್ಲವೂ ಶಿಕ್ಷಣದಿಂದ ಸಾಧ್ಯ. ಸಶಕ್ತರನ್ನಾಗಿಸುವ ದಿವ್ಯ ಜ್ಞಾನ ದರ್ಶನ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ಅಡಗಿದೆ. ಈ ದೇಶವನ್ನು ಮತ್ತೊಮ್ಮೆ ಬಲಿಷ್ಠ ರೂಪದಲ್ಲಿ ನಿಮಿ೯ಸಲು ಹಾಗು ಸುಶಿಕ್ಷಿತ ವ್ಯವಸ್ಥೆ ಸೃಷ್ಟಿಗೆ ಎಲ್ಲರೂ ಸಂಕಲ್ಪ ಗೈಯಬೇಕು ಎಂದರು.


ಉತ್ಸಾಹಿ ಶಾಸಕರಾದ ಅರುಣ ಶಹಾಪುರ ಹಾಗು ಹಣಮಂತ ನಿರಾಣಿ ಅವರು ಶಿಕ್ಷಕ ಸಮೂಹದ ಕಣ್ಮಣಿಗಳಾಗಿ ಶಿಕ್ಷಕರ ಹಲವಾರು ಬೇಡಿಕೆಗಳ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಮತ್ತು ಶಿಕ್ಷಕರ ಸೇವೆಗೆ ಅಪಿ೯ತರಾಗಿ ಸದಾ ಮುಂಚೂಣಿಯಲ್ಲಿದ್ದಾರೆ. ಉಭಯ ಯುವ ಜೋಡಿಗಳು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಹೊಸ ಶಿಕ್ಷಣ ನೀತಿವುಳ್ಳ ಪದ್ದತಿ ಹೇಳಿಕೊಡುವ ಶಿಕ್ಷಕರ ಮನಸ್ಥಿತಿಯೂ ಚೆನ್ನಾಗಿರಬೇಕು.ಅಂಥ ವಾತಾವರಣ ನಿಮಾ೯ಣ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಚಿವ ನಾಗೇಶ ಅವರಿಗೆ ಶಿಕ್ಷಕರ ವಿವಿಧ ಸಂಘಟನೆಗಳಿಂದ ಮನವಿಗಳ ಮಹಾಪೂರವೇ ಹರಿದು ಬಂತು.


ಎಂಎಲ್ಸಿ ಅರುಣ ಶಹಾಪುರ,ಹಣಮಂತ ನಿರಾಣಿ ಮಾತನಾಡಿದರು. ನ್ಯಾಷನಲ್ ಪೋಕಸ್ ಗ್ರುಪ್ ಎನ್ಸಿಆರ್ಟಿಯ ಶಿವಾನಂದ ಸಿಂಧನಕೇರಾ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಕುರಿತಾಗಿ ಉಪನ್ಯಾಸ ನೀಡಿದರು. ಶಿಕ್ಷಣ ಸಚಿವರಿಗೆ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಶಾಲು ಹೊದಿಸಿ ಗೌರವಾರ್ಪಣೆ ಮಾಡಿದರು. ಶಿಕ್ಷಕರ ಸಂಘದ ಮುಖ್ಯಸ್ಥರು,ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಚಿವ ನಾಗೇಶರನ್ನು, ಎಂಎಲ್ಸಿ ಶಹಾಪುರ,ನಿರಾಣಿ ಅವರುಗಳನ್ನು ಸತ್ಕರಿಸಿ ಗೌರವಿಸಿದರು.


ಆಡಳಿತ ವಿಭಾಗದ ಡಿಡಿಪಿಐ ಎನ್.ವಿ.ಹೊಸೂರ, ಅಭಿವೃದ್ಧಿ ವಿಭಾಗದ ಎಸ್.ಆರ್.ಬಾಡಗಂಡಿ, ಬಿಇಒ ಮಂಜುನಾಥ್ ಗುಳೇದಗುಡ್ಡ, ಎಸ್.ಜಿ.ಮಿಜಿ೯,ಹತ್ತಳ್ಳಿ, ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದಶಿ೯ ಚಂದ್ರಶೇಖರ ನುಗ್ಗಿ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್.ತುಂಗಳ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ.ಹಂಚನಾಳ ಇತರರು ವೇದಿಕೆಯಲ್ಲಿದ್ದರು.
ವಿ.ಬಿ.ರಾಠೋಡ,ರಮೇಶ ಪೂಜಾರ, ಎಸ್.ಟಿ.ದೊಡಮನಿ, ಎಂ.ಬಿ.ಹೊಕ್ರಾಣಿ, ಎ.ಎಸ್.ಹಂಚಲಿ, ಸಂಗಮೇಶ ಕಮತಗಿ, ಎಸ್.ಎಂ.ತಾವರಖೇಡ, ಕೃಷ್ಣಾ ಬಡಿಗೇರ, ಬಿ.ಎಸ್.ಪಾಟೀಲ, ಎ.ಪಿ.ಹೊನ್ನಕಟ್ಟಿ, ಮೊದಲಾದವರಿದ್ದರು.
ರವಿ ಚಿನಗುಂಡೆ ಪ್ರಾಥಿ೯ಸಿದರು. ಬಿಇಒ ಸಂಗಮೇಶ್ ಪೂಜಾರ ಸ್ವಾಗತಿಸಿದರು. ಅಶೋಕ ಹಂಚಲಿ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಸಚಿವ ನಾಗೇಶ್ ಅವರೊಂದಿಗೆ ಸೆಲ್ಫಿ ಕಿಕ್ಕಿಸಿಕೊಳ್ಳಲು ಗುರು,ಗುರುಮಾತೆಯರ ದೊಡ್ಡ ಬಳಗವೇ ನೆರದಿತ್ತು. ವೇದಿಕೆಯಲ್ಲಿಂದ ಸಚಿವರು ಇಳಿಯುವತ್ತಿದ್ದಂತೆ ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಪೋಟೋ ತೆಗೆಯುತ್ತಿದ್ದ ದೃಶ್ಯ ಕಂಡು ಬಂತು. ಕಾರು ಹತ್ತುವರೆಗೂ ಕ್ಲಿಕ್ ನೋಟ ಸಾಗಿತ್ತು. ಎಲ್ಲರೊಂದಿಗೆ ಹಸನ್ಮುಖ ಭಾವ ಚಹರೆದೊಂದಿಗೆ ಸಚಿವ ನಾಗೇಶ್ ಪೋಟೋ ಶಾಟ್ ನಲ್ಲಿ ಭಾಗಿಯಾಗಿದ್ದು ಅವರ ಸರಳ ,ಸಜ್ಜನಿಕೆಯ ನಡೆ ನುಡಿಗಳಿಗೆ ಸಾಕ್ಷಿಯಾಗಿತ್ತು. ಗುರು ಸಮೂಹ ಸಚಿವರ ಪೇಟಾ ದರ್ಶನ ಸನಿಹದಿಂದ ಕಂಡು ಖುಷ್ ! ಸಂತಸ ಕ್ಷಣ ಮನೆ ಮಾಡಿತ್ತು.

Leave a Reply

Your email address will not be published. Required fields are marked *

You May Also Like

‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ಹುಡುಗಿ :ಟಿವಿ ಶೋ ಮಾಡುತ್ತಲೇ ಶೇ.74 ಸ್ಕೋರ್

ಸದ್ಯ ಜನಪ್ರಿಯವಾಗಿರುವ ಅಲಾದ್ದೀನ್ ಫ್ಯಾಂಟಸಿ ಟಿವಿ ಶೋನಲ್ಲಿ ಪಾತ್ರ ಮಾಡುತ್ತಿರುವ ಈ ಹುಡುಗಿ ಶೂಟಿಂಗ್ ಮತ್ತು ಸ್ಟಡಿ ನಡುವೆ ಬ್ಯಾಲೆನ್ಸ್ ಮಾಡುತ್ತ ಗೆಲ್ಲುತ್ತಿದ್ದಾಳೆ.

ಲಕ್ಕುಂಡಿ ಗ್ರಾಮ ಪಂಚಾಯತಿಗೆ ಆಡಳಿತಾಧಿಕಾರಿ ಯಾರು..?

ಗದಗ: ಅವಧಿ ಮುಗಿದ್ರು ಚೇರಿನ ವ್ಯಾಮೋಹ ಮುಗಿಲ್ಲವೇ..? ಆಡಳಿತಾಧಿಕಾರಿ ನೇಮಕವಾದ್ರು, ಅಧ್ಯಕ್ಷ ಪದವಿಯ ಅವಧಿ ಮುಗಿದಿರೋದು…

ಯಾದಗಿರಿ ಜಿಲ್ಲೆಯ ಜನರ ನಿದ್ದೆ ಕದ್ದ ಕೊರೊನಾ!

ಜಿಲ್ಲೆಯಲ್ಲಿ ಇಂದು ಕೂಡ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ.

ನಾಡಪ್ರಭು ವಿಮಾನ ನಿಲ್ದಾಣದ ಟರ್ಮಿನಲ್‌–2 ಉದ್ಘಾಟಿಸಿದ ಮೋದಿ

ಉತ್ತರಪ್ರಭ ಸುದ್ದಿ ಬೆಂಗಳೂರ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಟರ್ಮಿನಲ್ 2 ಅನ್ನು…