ಗುಲಾಬಚಂದ ಜಾಧವ
ಆಲಮಟ್ಟಿ :(ವಿಜಯಪುರ ಜಿಲ್ಲೆ) ಸಂಪನ್ಮೂಲ ಭರಿತ ನಮ್ಮ ದೇಶದಲ್ಲಿ ಪರಿಸರ ಸಂರಕ್ಷಣೆ ಅಷ್ಟೊಂದು ಪರಿಣಾಕಾರಿಯಾಗಿ ಸಾಗುತ್ತಿಲ್ಲ.ಅದಾಗ್ಯೂ ಶತಪ್ರಯತ್ನಗಳು ಸಾಗುತ್ತಿದೆ. ಶಿಕ್ಷಣದಲ್ಲಿ ಎಲ್ಲವೂ ಸರಿದೂಗಿಸುವ ಶಕ್ತಿ ಅಡಗಿದೆ. ಭವಿಷ್ಯತ್ತಿನ ದಿನಗಳಲ್ಲಿ ಒಳ್ಳೆಯ ಪ್ರಜೆಗಳಾಗಿ ನಮ್ಮ ಮಕ್ಕಳು ಮಿನುಗಿ ಪ್ರಜ್ವಲಿಸುವ ಅವಕಾಶ ಹೊಸ ಶಿಕ್ಷಣ ನೀತಿಯಲ್ಲಿ ಕಲ್ಪಿಸಲಾಗಿದೆ ಎಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ನ್ಯಾಷನಲ್ ಫೋಕಸ್ ಗ್ರುಪ್ ಎನ್.ಸಿ.ಆರ್.ಟಿ, ಮೈಸೂರು ಮಹಾರಾಜಾ ಕಾಲೇಜಿನ ಶಿವಾನಂದ ಸಿಂಧನಕೇರಾ ಹೇಳಿದರು.


ಸ್ಥಳೀಯ ಸಮೂದಾಯ ಭವನದಲ್ಲಿ ಜರುಗಿದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಶೈಕ್ಷಣಿಕ ಕಾಯಾ೯ಗಾರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಾರಿಗೆ ಬಂದಿರುವ ಹೊಸ ಶಿಕ್ಷಣ ನೀತಿಯು ಭವಿಷ್ಯದ ಮುಂದಿನ ಮೂರು ದಶಕಗಳ ಕಾಲ ಜಾರಿಯಲ್ಲಿರುತ್ತದೆ ಎಂದರು.
ಭಾರತ ಹಿಂದೊಮ್ಮೆ ಜಗತ್ತಿನ ಗುರುವಾಗಿತ್ತು.17 ನೇ ಶತಮಾನದ ಮಧ್ಯ ಭಾಗದವರೆಗೂ ಪ್ರಪಂಚಕ್ಕೆ ಗುರುವಾಗಿ ಮಾರ್ಗದರ್ಶನ ನೀಡಿದೆ. ಆದರೆ ನಮ್ಮ ಮಧ್ಯದ ಇನ್ನೂರು,ಇನ್ನೂರಾ ಐವತ್ತು ವರ್ಷಗಳಲ್ಲಿ ಅಂತಃಸತ್ವವನ್ನು ಕಳೆದುಕೊಂಡಿದೆ ಭಾರತ. ಮತ್ತೆ ಭವಿಷ್ಯದಲ್ಲಿ ಪುನಃ ಜಗತ್ತಿನಲ್ಲಿ ಗುರುವಾಗುವ ಆಸೆ ಚಿಗುರುತ್ತಿದೆ.ಇಂಥ ಅಪೇಕ ಹೊತ್ತು ತರಲಾಗಿರುವ ಈ ಹೊಸ ಶಿಕ್ಷಣ ನೀತಿ ಜಾರಿಯಿಂದ ಸಾಕಷ್ಟು ಅನುಕೂಲವಾಗಲ್ಲಿದೆ ಎಂದರು.
ಶಿಕ್ಷಣ ನೀತಿ ಕೇವಲ ಮಕ್ಕಳಿಗೆ ವಿಷಯ ಕೊಡುವುದಕ್ಕಲ್ಲ.ಅದು ಜೀವನಕ್ಕೆ ಬೇಕಾದ ಶಿಕ್ಷಣ ಮತ್ತು ಮಾಹಿತಿ ಶಿಕ್ಷಣವಾಗಿದೆ. ಈಗ ಲಭಿಸುತ್ತಿರುವುದು ಕೇವಲ ಮಾಹಿತಿ ಶಿಕ್ಷಣವಾಗಿದೆ. ಬದುಕಿಗೆ ಬೇಕಾದ ಶಿಕ್ಷಣ ಸಿಗುತ್ತಿಲ್ಲ. ವ್ಯಕ್ತಿಯ ಜೀವನದಲ್ಲಿ ಶಿಕ್ಷಣ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಣದಿಂದ ಮಾತ್ರ ಬದಲಾವಣೆ ತರಲು ಸಾಧ್ಯ. ಮನುಷ್ಯನಲ್ಲಿ ಹುದುಗಿರುವ ಅಂತಃಶಕ್ತಿಯ ಸಾಮಥ್ರ್ಯ ಹೊರ ಹಾಕುವಂಥದ್ದೇ ಶಿಕ್ಷಣ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಆ ದಾರಿಯಲ್ಲಿ ಬೆಳಕು ಹರಿಸಲಿದೆ ಎಂದರು.


ಮನುಷ್ಯನ ಒಳ್ಳೆಯ ವ್ಯಕ್ತಿತ್ವ ಸ್ವಾವಲಂಬಿಯಾಗಿ ರೂಪಗೊಳ್ಳಬೇಕು. ವಿಮಶಿ೯ಸುವ,ಪರಮಶಿ೯ಸುವ, ಯೋಚಿಸುವ, ಅನುಕಂಪನ್ನುಂಟು ಮಾಡುವ,ದಯೆ ತೋರುವ, ಧೈರ್ಯದಿಂದ ಸವಾಲುಗಳನ್ನು ಎದುರಿಸುವಂಥ, ಹೊಸತನ ರಚಿಸುವಂಥ,ದೂರದೃಷ್ಟಿ ಬೆಳೆಸುವಂಥ,ಶಾಶ್ವತ ಜೀವನ ಮೌಲ್ಯಗಳನ್ನು ಉಳಿಸುವಂಥ ಸಂಗತಿಗಳೆಲ್ಲ ಹೊಸ ಶಿಕ್ಷಣ ನೀತಿಯಲ್ಲಿ ಅಡಗಿದೆ. ಪ್ರಮುಖ ನಾಲ್ಕು ಭಾಗಗಳಲ್ಲಿರುವ ಈ ನೀತಿ ಪರಿಪಕ್ವವಾದರೆ ಮಕ್ಕಳು ಭವಿಷ್ಯದ ರತ್ನಗಳಾಗಿ ತಯಾರಾಗುತ್ತಾರೆ. ಇದು ಬಹು ಮುಖ್ಯ ಎಂದರು.
ಈ ಹಿಂದೆ 1986 ರಲ್ಲಿ ದೇಶದಲ್ಲಿ ಜಾರಿಯಾದ ಶಿಕ್ಷಣ ನೀತಿ ಪರಿಪೂರ್ಣತೆ ನೀತಿಯಾಗಿರಲಿಲ್ಲ. ಈಗ ಭವಿಷ್ಯತ್ತಿನ ಭವ್ಯ ಭಾರತ ನಿಮಾ೯ಣಗೊಸ್ಕರ ಉತ್ಕ್ರಷ್ಟ ಪರಿಕಲ್ಪನೆಯ ಭದ್ರ ಸುಭದ್ರ ಶಿಕ್ಷಣ ಹೊಸ ನೀತಿ ಪ್ರಧಾನಿ ಮೋದಿಯವರು ನೀಡಿದ್ದಾರೆ ಎಂದರು.


ಹಲವಾರು ತಜ್ಞರೊಳಗೊಂಡು ಸುಧೀರ್ಘ ಚಚೆ೯ನಡೆಸಲಾಗಿದೆ.ಕಳೆದ ಮೂರು ನಾಲ್ಕು ವರ್ಷದಿಂದ ಸತತ ಪ್ರಯತ್ನದ ಫಲವಾಗಿ,ಲಕ್ಷಾಂತರ ಸಂಖ್ಯೆಯಲ್ಲಿ ಬಂದ ಎಲ್ವ ಸಲಹೆಗಳನ್ನು ಕ್ರೋಡೀಕರಿಸಿ 2020 ಜುಲೈ 27 ರಂದು ನಮ್ಮ ದೇಶ ಹೊಸ ದಿಕ್ಕಿನ ಪಥದತ್ತ ಮುನ್ನುಗ್ಗಲು ಹಾಗು ನವ ಭಾರತ ನಿಮಾ೯ಣಕ್ಕೆ ಪೂರಕವಾಗಿರುವಂಥ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.
ಸಾಮಾಜಿಕ ಪರಿವರ್ತನೆ ಕೇಂದ್ರಗಳೇ ಶಾಲೆಗಳು. ಪ್ರತಿಯೊಂದರ ಏಳ್ಗೆ ನೀತಿ, ನಿಯಮಗಳು ಶಿಕ್ಷಣ ನೀತಿ ಯಲ್ಲಿದೆ. ಇದೊಂದು ಬಹು ದೊಡ್ಡ ಕೆಲಸವಾಗಿದೆ. ಆ ಕಾರಣ ಪರಿವರ್ತನೆಯ ಹಾದಿಯಲ್ಲಿ ಕರೆದುಕೊಂಡು ಹೋಗುವ ಕಾಯಕ ಶಿಕ್ಷಕ ಬಂದುಗಳ ಮೇಲಿದೆ. ದೇಶದ 1.59 ಕೋಟಿಗೂ ಅಧಿಕ ಗುರುಬಳಗ ಸುಮಾರು 30 ಕೋಟಿಗೂ ಹೆಚ್ಚು ಶಿಷ್ಯಬಳಗವನ್ನು ಸರಿಯಾದ ದಾರಿ,ಮಾರ್ಗದಲ್ಲಿ ಕೊಂಡೊಯ್ಯುವ ಗುರುತರ ಜವಾಬ್ದಾರಿ ಇದೆ. ಭಾಷಾಜ್ಞಾನ ಖುಷಿಯಿಂದ ಮಕ್ಕಳು ಸ್ವೀಕರಿಸಬೇಕು. ದೇಶದ ಸಾರ್ವಭೌಮತ್ವದ ಜ್ಞಾನ ಪ್ರಶಂಸೆಯು ಎಲ್ಲೆಡೆ ಹರಡಬೇಕು ಎಂದರು.
ವೃತ್ತಿಪರತೆ ಕೌಶಲ್ಯ ಹೆಚ್ಚಾಗಬೇಕು. ಮಕ್ಕಳಿಗೆ ಆಸಕ್ತಿ ವಿಷಯ ಕಲಿಕೆಗೆ ಅನುವು ಮಾಡಿಕೊಡಲಾಗಿದೆ. ಶಿಕ್ಷಕರಿಗಾಗಿ ಈ ಶಿಕ್ಷಣ ನೀತಿಯಲ್ಲಿ ವಿಶೇಷ ಗಮನ ನೀಡಲಾಗಿದೆ. ಹೊಸ ಶಿಕ್ಷಣ ನೀತಿ ಒಪ್ಪಿಕೊಂಡು ಬದಲಾವಣೆ ಕಂಡುಕೊಂಡರೆ ಖಂಡಿತ ಭಾರತ ಮತ್ತೆ ಭವಿಷ್ಯದಲ್ಲಿ ಮಿನುಗಲಿದೆ ಎಂದು ಶಿವಾನಂದ ಸಿಂಧನಕೇರಾ ತಮ್ಮ ಉಪನ್ಯಾಸದಲ್ಲಿ ಅಭಿಪ್ರಾಪಟ್ಟರು.

Leave a Reply

Your email address will not be published. Required fields are marked *

You May Also Like

ಗೋವಾದಿಂದ ಬಂದ ಕೂಲಿ ಕಾರ್ಮಿಕ: ಕೊರೊನಾ ಸೋಂಕಿನಿಂದ ಸಾವು!

ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ. ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಹಾನಾಪೂರ ಎಲ್.ಟಿ ತಾಂಡಾ ಗ್ರಾಮದ…

ಪತ್ನಿ ಮತ್ತು ಮಗುವನ್ನು ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ

ಉತ್ತರಪ್ರಭ ಸುದ್ದಿ ಗೋನಾಳ ಗ್ರಾಮದಲ್ಲಿ ಆರೋಪಿ ರಮೇಶ ದುಂಡಪ್ಪ ತೇಲಿ ಇವನು ಹೆಂಡತಿ ಮೇಲೆ ಸಂಶಯ…

ಸಂಪತ್ ರಾಜ್ ನನ್ನು ಪಕ್ಷದಿಂದ ಉಚ್ಛಾಟಿಸಬೇಕು – ಅಖಂಡ ಶ್ರೀನಿವಾಸಮೂರ್ತಿ

ಬೆಂಗಳೂರು : ಮಾಜಿ ಮೇಯರ್ ಸಂಪತ್ ರಾಜ್ ರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನವಿ ಮಾಡಿದ್ದಾರೆ.