ಉತ್ತರಪ್ರಭ
ಮುಂಡರಗಿ: ಗದಗ ಪೊಲೀಸರು ಅಂದರ್ ಬಾಹರ್ ಅಡ್ಡೆ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಕ್ಷಾಂತರ ರೂಪಾಯಿ ಜೂಜಾಟದಲ್ಲಿ ಅಂದರೆ ಅಂದರ್ ಬಾಹರ್ ಆಡುತ್ತಿದ್ದ ಸರ್ಕಾರಿ ನೌಕರ ಸೇರಿದಂತರ 17 ಜನರು ಮೇಲೆ ಪ್ರಕರಣ ದಾಖಲಾಗಿದೆ.


ಹೌದು ಇದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿದರಹಳ್ಳಿ ಬಳಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರು ಬೇರೆ ಬೇರೆ ಜಿಲ್ಲೆಯ ಜೂಜುಕೋರರ ಮೇಲೆ ಪೋಲಿಸರು ಕಾರಯಾಚರಣೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ಡಿ ದೇವರಾಜು ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಪಂಡ್ ಅಡ್ಡೆಯ ಮೇಲೆ ದಾಳಿ ನಡೆಸಿ 17 ಆರೋಪಿಗಳಿಂದ ಒಟ್ಟು 14.83 ಲಕ್ಷ ರೂ. ಹೆಚ್ಚಿನ ಹಣ, 04 ಕಾರು ಹಾಗೂ 18 ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ.
ಇದರಲ್ಲಿ ಅಚ್ಚರಿಯೆಂದರೆ ಸರ್ಕಾರಿ ನೌಕರನು ಭಾಗಿ ಆಗಿದ್ದು, ಬೇರೆ ಬೇರೆ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ . ಗದಗ ಮೂಲದವರು ಪರಾರಿಯಾಗಿದ್ದು ಬೇರೆ ಜಿಲ್ಲೆಗಳಾದ ಚಿತ್ರದುರ್ಗ, ಹಾವೇರಿ, ದಾವಣಗೆರೆ, ವಿಜಯನಗರ, ಬಳ್ಳಾರಿಯ ಆರೋಪಿಗಳು ಸೆರೆ ಸಿಕ್ಕದ್ದಾರೆ. ಆರೋಪಿಗಳ ಮೇಲೆ ಕೆ.ಪಿ ಆ್ಯಕ್ಟ್ 87 ಕಲಂನಡಿ ಜೂಜಾಟದ ಕೇಸ್ ದಾಖಲಿಸಲಾಗಿದೆ.
ಫಂಡ್ ಗೇಮ್ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ವಿಜಯ ಬಿರಾದಾರ, ಇನ್ಸ್‌ಪೆಕ್ಟರ್ ಮಹಾಂತೇಶ್ ಟಿ. ಹಾಗೂ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.