ಉತ್ತರಪ್ರಭ

ಗಜೇಂದ್ರಗಡ: 14/4/2022 ರಂದು ಬೆಳಿಗ್ಗೆ 11:೦೦ ಗಂಟೆಗೆ ಸಂವಿದಾನ ಶಿಲ್ಪಿ, ಮಹಾನ ಮೇಧಾವಿ ಮಹನಾಯಕ ಭೀಮರಾವ ಅಂಬೇಡ್ಕರ ರವರ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಈಶಪ್ಪ ರಾಠೋಡ ರವರು ಸಂವಿದಾನ ಜಾರಿಗೆ ಬಂದು 72 ವರ್ಷಗಳು ಕಳೆದರೂ ತುಳಿತಕ್ಕೆ ಒಳಪ್ಪಟ್ಟ SC/ST ಹಾಗೂ ಹಿಂದುಳಿದ ಸಮುದಾಯಗಳು ಆರ್ಥಿಕವಾಗಿ ಸಾಮಾಜಿಕ ವಾಗಿ ಅಭಿರುದ್ದಿ ಯಾಗುತ್ತಿಲ್ಲ ಆದ್ದರಿಂದ ನಮ್ಮ ನ್ಯಾಯಕ್ಕಾಗಿ,ಹಕ್ಕಿಗಾಗಿ ಮತ್ತು ಸಮಾನತೆಗಾಗಿ ಹೋರಾಟ ಮಾಡುವುದು ಅನಿವಾರ್ಯವಿದೆ ಎಂದು ಹೇಳಿದರು. ಹಿರಿಯರು ಹಾಗೂ ಮುಖಂಡರಾದ ಪ್ರಶಾಂತ ರಾಠೋಡ ಮಾತನಾಡಿ ಡಾ. B.R ಅಂಬೇಡ್ಕರ ರವರ ಆದರ್ಶಗಳನ್ನು ನಾವು ಪಾಲಿಸಬೇಕು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕಾಗಿದೆ ಶೋಷಣೆಗೆ ಒಳಪಟ್ಟ ಸಮುದಾಯಗಳು ಸರ್ಕಾರದ ವಿವಿಧ ಸೌಲಭ್ಯಗಳಿಂದ ಹಿಂದುಳಿದಿದ್ದು, ಅಮಾಯಕವಿರುವ ಮುಗ್ದ ರಾಗಿರುವ ಈ ಸಮುದಾಯದ ಜನರನ್ನು ರಾಜಕೀಯವಾಗಿ ಬಲಿಪಶು ಮಾಡಲಾಗುತ್ತಿದೆ. ಸಂವಿದಾನ ಇವತ್ತು ಇಲ್ಲದಿದ್ದರೆ ದಲಿತರು ಇಂದು ಬದುಕುವುದು ಕಷ್ಟ ವಾಗುತಿತ್ತು ಮಹಾತ್ಮರು ನೀಡಿದ ಸಂವಿದಾನ ದಿಂದಲೇ ಇವತ್ತು ಭಾರತ ಪ್ರಗತಿಯತ್ತ ಸಾಗುತ್ತಿದೆ. ಶಿಕ್ಷಣ ಪಡೆಯುವುದು ಬಹಳ ಅವಶ್ಯಕತೆ ಇದೆ ಸಂಘಟನೆ ಮತ್ತು ಹೋರಾಟ ಮೂಲಕ ನಾವು ಯೇಚೆತುಕೊಳ್ಳಬೇಕು.ಎಂದು ಹೇಳಿದರು. ಗೊರಸೇನಾ ವಿಭಾಗ ಮಟ್ಟದ ಅಧ್ಯಕ್ಷರಾದ ಶ್ರೀ ಪಾಂಡು ಚವ್ಹಾಣ ರವರು ಮಾತನಾಡಿ ಇವತ್ತು ಈ ದೇಶದಲ್ಲಿ ಅನೇಕ ಜಾತಿಯ ಸಮುದಾಯಗಳು ಮೀಸಲಾತಿಯ ಸೌಲಭ್ಯಗಳನ್ನು ಪಡೆಯುತ್ತಿದ್ದರು, ಕೆಲವು ಸಮುದಾಯಗಳು ಮತ್ತು ರಾಜಕೀಯ ಪಟಭದ್ರ ಹಿತಾಸಕ್ತಿಗಳು SC /ST ಮತ್ತು ಹಿಂದುಳಿದ ಸಮುದಾಗಳಿಗೆ ಮೀಸಲಾತಿ ಕ್ಕಾಗಿ ದುರುತ್ತಿರುವದು ಮತ್ತು ಅವರಿಗೆ ಬದುಕಲಿಕೆ ಸಿಕ್ಕಿರುವ ಸಾಮಾಜಿಕ್ ಹಕ್ಕನ್ನು ಮತ್ತು ಮೀಸಲಾತಿಯನ್ನು ಕಸಿಯಲು ಮಾಡುತ್ತಿರುವುದು ಷಡ್ಯಂತ್ರ ವಾಗಿದೆ. ಈ ದೇಶ ಜಗತ್ತಿನಲ್ಲಿ ಇವತ್ತು ವಿವಿಧ ರಂಗಗಳಲ್ಲಿ ಬೆಳೆಯುತ್ತಿದೆ ಮತ್ತು ಅಭಿರುದ್ದಿಯನ್ನು ಕಾಣುತ್ತಿದೆ ಎಂದರೆ ಅದಕ್ಕೆ ಕಾರಣ ನಮ್ಮ ವಿಶ್ವ ಜ್ಞಾನಿ ಡಾ. B.R ಅಂಬೇಡ್ಕರ ರವರೂ ಬರೆದ ಹೆಮ್ಮೆಯ ಸಂವಿದಾನ ವೆಂದರೆ ತಪ್ಪಾಗಲಿ್ಕಿಲ್ಲ, ಈ ಮಹಾನ್ ಪುರುಷರು ಒಂದೇ ಜಾತಿಗೆ ಒಂದೇ ಧರ್ಮಕ್ಕೇ ಸೀಮಿತವಾಗಿರುವ ಮಹಾನಾಯಕರಲ್ಲ ಸರ್ವರ ಎಳಿಗೆಯನ್ನು ಮತ್ತು ಸಮಾನತೆಯನ್ನು ಬಯ್ಸಿದಂತಃ ನಾಯಕ್ ರಾಗಿರುತ್ತರೆ. ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ಒಕ್ಕಟ್ಟಿನಿಂದ ಜಾತಿ ಬೇಧ ಮರೆತು ಬದುಕುತ್ತಿರುವ SC/ST ಮತ್ತು ಕೆಲವು ಹಿಂದುಳಿದ ಸಮುದಾಯಗಳನ್ನು ತಮ್ಮ ಸ್ವ ಹಿತಾಸಕ್ತಿಗಾಗಿ ಮಿಸಲಾಯತಿಯನ್ನು ಓಡೆಯುತ್ತಿರುವದು ಬಹಳ ಖೆದನಿಯ ವಿಚಾರವಾಗಿದೆ ಮತ್ತು ನಿರ್ಗತಿಕರನ್ನ, ಶೋಷಣೆಗೆ ಒಳಪಟ್ಟಿರುವರನ್ನು ತುಳಿಯುವ ವಿಚಾರವಾಗಿದೆ.

ಶೈಕ್ಷಣಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅನೇಕ ಸಮುದಾಯಗಳು ಇವತ್ತು ಹಿಂದುಳಿದಿದ್ದು, ಸರ್ಕಾರವು ಹಿಂದುಳಿದ ಸಮುದಾಯಗಳ ಅಭೀರುದೀಗೆ ಗಮನ ಹರಿಸಬೇಕೆಂದು ಹೇಳುತ್ತಾ ಅಂಬೇಡ್ಕರ ರವರು ರಚಿಸಿದ ಸಂವಿಧಾನವನ್ನು ಉಳಿಸಿ ಬೆಳೆಸೋಣ ಎಲ್ಲರೂ ಸಂವಿಧಾನಕ್ಕೆ ಮತ್ತು ಈ ದೇಶಕ್ಕೆ ತಲೆಬಾಗಿ ಭಾರತವನ್ನು ವಿಶ್ವ ಗುರು ಮಾಡಲು ಸಂಕಲ್ಪ ತೊಡಬೇಕೆಂದು ಹೇಳಿದರು. ಕರ್ನಾಟಕ ತಾಂಡಾ ಅಭಿರುಡ್ಡಿ ನಿಗಮದ ವತಿಯಿಂದ ಮುದ್ರಿಸಲದ ಅಂಬೇಡ್ಕರ್ ಹಾಗು ಶ್ರಿ ಸೇವಾಲಾಲ ಮಹಾರಾಜರ ಭಾವಚಿತ್ರ ವಿರುವ ಕ್ಯಾಲೆಂಡರ್ ಗಳನ್ನು ತಾಂಡಾದ ಹಿರಿಯರಿಂದ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶ್ರೀ ರುಪ್ಲಪ್ಪ ರಾಠೋಡ, ಗೊರಸೆನ ರಾಜ್ಯ ಖಜಾಂಚಿ ಶ್ರಿ ನೀಲು ರಾಠೋಡ ಮತ್ತು ತಾಂಡಾ ನಿಗಮದ ಶ್ರಿ ಗಿರೀಶ ರಾಠೋಡ, ಪರಶುರಾಮ ರಾಥೋಡ್, ಮುತ್ತಣ್ಣ ರಾಠೋಡ, ಅಂದಪ್ಪ ರಾಠೋಡ, ಪ್ರಕಾಶ್ ರಾಠೋಡ, ಶೇಕಪ್ಪ ರಾಠೋಡ, ದೇವಪ್ಪ ರಾಠೋಡ, ರಾಮು, ಗುರುನಾಥ ರಾಠೋಡ ಮೋಹನ್ ರಾಠೋಡ, ದರ್ಶನ, ರಾಕೇಶ, ಅಭಿಷೇಕ್, ವಿನಾಯಕ, ಗುರು ರಾಠೋಡ ಹಿರಿಯರು ಹಾಗೂ ಯುವಕರು ಸಾಮಾಜಿಕ್ ಕಾರ್ಯಕರ್ತರು ಮತ್ತು ತಾಂಡಾದ ನಾಯಕ್ ಡಾವ್ ಕಾರಭಾರೀ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗಿರೀಶ್ ರಾಠೋಡ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

You May Also Like

ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಉತ್ತರಪ್ರಭ ಕಾರಟಗಿ: ಎಸ್ ಎಸ್ ಕಲಾ ಸಂಗಮ ಟ್ರಸ್ಟ್ ( ರಿ ) ಬೆಂಗಳೂರು ವತಿಯಿಂದ…

ಆಲಮಟ್ಟಿ: ಶ್ರೀಶೈಲ ಪಾದಯಾತ್ರೆ ಭಕ್ತರಿಗೆ ಅನ್ನ ದಾಸೋಹ

ಉತ್ತರಪ್ರಭಆಲಮಟ್ಟಿ: ಶ್ರೀಶೈಲ ಕ್ಷೇತ್ರದ ಶ್ರೀ ಮಲ್ಲಿಕಾರ್ಜುನ ಸನ್ನಿಧಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಭಕ್ತಾದಿಗಳಿಗೆ ಶನಿವಾರ ಇಲ್ಲಿ ಅನ್ನ…

ಭಾವಪೂರ್ಣ ಶ್ರಧ್ಧಾಂಜಲಿ

ಶ್ರೀ ಮಹಾಂತಪ್ಪ ಬಸಪ್ಪ ಬಡ್ನಿಉತ್ತರಪ್ರಭ ಸುದ್ದಿಗದಗ: ಸಹೃದಯಿ, ಸರಳರು, ಬಸವ ಅನುಯಾಯಿಗಳು ಹಾಗೂ ಗಣ್ಯ ಉದ್ಯಮಿಗಳಾದ…