ಉತ್ತರಪ್ರಭ
ಆಲಮಟ್ಟಿ: ಶ್ರೀಶೈಲ ಕ್ಷೇತ್ರದ ಶ್ರೀ ಮಲ್ಲಿಕಾರ್ಜುನ ಸನ್ನಿಧಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಭಕ್ತಾದಿಗಳಿಗೆ ಶನಿವಾರ ಇಲ್ಲಿ ಅನ್ನ ಸಂತರ್ಪಪಣೆ ಸೇವೆ ನಡೆಯಿತು.
ಆಲಮಟ್ಟಿಯ ಈಶ್ವರಲಿಂಗ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಅನ್ನ ದಾಸೋಹ ಸೇವಾ ಕಾರ್ಯಕ್ರಮದಲ್ಲಿ ನಿಡಗುಂದಿ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಭಾಗವಹಿಸಿದ್ದರು. ಗ್ರಾಮಸ್ಥರಾದ ಸುಭಾಸ ಪಾಟೀಲ, ರೇವಣಸಿದ್ದಪ್ಪ ಹುಂಡೇಕಾರ, ಶಿವಾನಂದ ಪಾಟೀಲ, ಚಿಮ್ಮಲಗಿ ಅಡಿಯಪ್ಪ, ಸುರೇಶ ಹುರಕಡ್ಲಿ ಮೊದಲಾದವರ ನೇತೃತ್ವದಲ್ಲಿ ಶ್ರೀಶೈಲ ಪಾದಯಾತ್ರೆ ಭಕ್ತರಿಗೆ ಮೊದಲ ಬಾರಿಗೆ ಅನ್ನ ದಾಸೋಹ ಸೇವಾ ಕೈಂಕರ್ಯ ಕೈಗೊಂಡಿದ್ದರು. ಪಾದಯಾತ್ರಿಗಳು ಆಗಮಿಸುತ್ತಿದ್ದಂತೆ ದೇಗುಲದಲ್ಲಿ ಭಕ್ತಿಭಾವದ ಪರಾಕಾಷ್ಠೆಯ ಮೊಳಗಿತು. ಮಲ್ಲಿಕಾರ್ಜುನ ಕಂಬಿಗೆ ಶೃದ್ಧಾಪೂರ್ವಕ ಭಕ್ತಿಯಿಂದ ಗ್ರಾಮಸ್ಥರು ಪೂಜಿಸಿ ನಮಿಸಿದರು. ಧನ್ಯತೆಯಲಿ ಮಿಂದರು.


